Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಲಗಿದ ತಕ್ಷಣ ಮಗುವಿನಂತೆ ನಿದ್ರೆ ಬರಬೇಕಾ? ಸುಲಭದ ಈ 2 ಟ್ರಿಕ್ಸ್ ಟ್ರೈ ಮಾಡಿ!
ನೀವು ಬೆಳಗ್ಗೆಯಿಂದ ಸಂಜೆಯವರೆಗೂ ಹಲವು ರೀತಿಯ ಆರೋಗ್ಯ ಅಡೆತಡೆಗಳ ಎದುರಿಸಿರಬಹುದು. ಕೆಲಸ ಮಾಡುವಾಗ ಒಂದಲ್ಲಾ ಒಂದು ರೀತಿ ಸಮಸ್ಯೆಗಳು ಬರಬಹುದು. ಶೀತ, ಕೆಮ್ಮು, ಜ್ವರ, ಕೈ ಕಾಲು ನೋವು, ಆಯಾಸ ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರು ಎದುರಿಸುತ್ತಾರೆ. ಆದ್ರೆ ಇದೆಲ್ಲದಕ್ಕೂ ಪರಿಹಾರ ಪಡೆಯುವ ಮಾರ್ಗ ಸುಲಭವಾಗಿದ್ದರೂ ರಾತ್ರಿ ನಿದ್ರೆ ಮಾಡಿ ಎದ್ದಾಗ ಈ ಎಲ್ಲಾ ಸಮಸ್ಯೆಗಳು ಒಂದಷ್ಟು ಕಡಿಮೆಯಾಗುವ ನಿರೀಕ್ಷೆಯಂತೂ ಇದ್ದೇ ಇರಲಿದೆ.
ಆದ್ರೆ ರಾತ್ರಿ ಸಮಯದಲ್ಲಿ ನಿಮಗೆ ನಿದ್ರೆ ಬಾರದೆ ಇದ್ದರೆ ಅದೇ ದೊಡ್ಡ ಸಮಸ್ಯೆಯಾಗಲಿದೆ. ನಿದ್ರಾಹೀನತೆ ಇತ್ತೀಚಿಗೆ ಹಲವರಿಗೆ ಕಾಡುವ ಸಮಸ್ಯೆ. ಮಲಗಿ ಗಂಟೆಗಳು ಕಳೆದರು ನಿದ್ರೆ ಬರುವುದಿಲ್ಲ ಎಂಬುದು ಹಲವರ ದೂರಾಗಿರುತ್ತದೆ. ಹಾಗೆ ಇದರಿಂದ ಅವರು ದಿನವೆಲ್ಲಾ ಸಮಸ್ಯೆಗಳ ಎದುರಿಸುತ್ತಾರೆ. ಕಣ್ಣು ಉರಿಯುವುದು, ಹಗಲಿನಲ್ಲಿ ನಿದ್ರೆ ಬರುವುದು, ಆಯಾಸ ಹೀಗೆ ಹಲವು ರೀತಿ ಸಮಸ್ಯೆ ಎದುರಿಸುತ್ತಾರೆ.

ಮತ್ತೆ ಕೆಲವರು ಮಲಗುವ ಸಮಯ ತಡವಾಗುವುದರಿಂದ ಅವರಲ್ಲಿ ನಿದ್ರೆ ಬರುವ ಸಮಯವೂ ಸಹ ತಡವಾಗಿರುತ್ತದೆ. 12 ಗಂಟೆಯ ನಂತರ ಮಲಗುವವರ ಸಂಖ್ಯೆಯೂ ಹೆಚ್ಛಾಗಿಯೇ ಇದೆ. ಹೀಗಾಗಿ ಅವರು ಬೇಗ ಮಲಗಿದರೂ ಸಹ ನಿದ್ರೆ ಬರುವ ಸಮಯ ತಡವಾಗಿರುತ್ತದೆ. ಇಂತಹ ಸಮಯದಲ್ಲಿ ನಿದ್ರೆ ಬರುವಂತೆ ಮಾಡಲು ನೀವು ಹಲವು ರೀತಿಯ ಟ್ರಿಕ್ಸ್ ಮಾಡಿರಬಹುದು.
ಬೇಗ ನಿದ್ರೆ ಬರುವಂತೆ ಮಾಡಲು ಒಂದಿಷ್ಟು ಉಪಾಯಗಳಿದ್ದರೂ ಅದ್ಯಾವುದೂ ನಿಮಗೆ ಉತ್ತಮ ಫಲಿತಾಂಶ ನೀಡದೆ ಇರಬಹುದು. ಹೀಗಾಗಿ ನಾವಿಂದು ಸುಲಭವಾಗಿ ಮಲಗಿದ ತಕ್ಷಣ ನಿದ್ರೆ ಬರುವಂತೆ ಮಾಡುವ ಟ್ರಿಕ್ ತಿಳಿಸಲಿದ್ದೇವೆ. ಇದರಿಂದ ನೀವು ಮಗುವಿನಂತೆ ಮಲಗಿ ನಿದ್ರೆ ಮಾಡುವ ಸುಲಭದ ಟ್ರಿಕ್ಸ್ ಏನು ಎಂಬುದನ್ನು ತಿಳಿದುಕೊಳ್ಳಿ.
ಪುದಿನ ಟೀ
ಮೊದಲು ಪುದಿನ ಎಲೆಗಳನ್ನು ಬಿಡಿಸಿಕೊಂಡು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಗ್ಲಾಸ್ ನೀರು ಹಾಕಿ ಬಿಸಿಯಾಗಲು ಬಿಡಿ. ಹೀಗೆ ನೀರು ಬಿಸಿಯಾಗಲು ಆರಂಭಿಸಿ ಕುದಿಬರಲು ಆರಂಭವಾದಾಗ ಇದಕ್ಕೆ ಬಿಡಿಸಿಕೊಂಡಿದ್ದ ಪುದಿನ ಎಲೆಗಳನ್ನು ಹಾಕಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಕುದಿಬರಲು ಬಿಡಬೇಕು. ಇದು ಕುದಿಬಂದು 2 ಗ್ಲಾಸ್ ನೀರು 1 ಗ್ಲಾಸ್‌ಗೆ ಕಡಿಮೆಯಾಗಬೇಕು.
ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಸಲ್ಪ ತಣ್ಣಗಾದಾಗ ಜರಡಿ ಹಿಡಿದು ಅದರ ನೀರನ್ನು ಮಾತ್ರ ತೆಗೆದುಕೊಳ್ಳಿ. ಈಗ ಈ ನೀರಿಗೆ 1 ಸ್ಪೂನ್ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಪ್ರತಿ ದಿನ ಮಲಗುವ ಮುನ್ನ ಕುಡಿಯಬೇಕು. ನಿತ್ಯವೂ ಈ ಪುದಿನ ಟೀ ಮಾಡಿ ಕುಡಿಯುವುದರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗಲಿದೆ. ಹಾಗೆ ನೀವು ಮಲಗಿದ ತಕ್ಷಣ ನಿದ್ರೆ ಮಾಡಬಹುದು.
ಸೋಂಪುಕಾಳಿನ ನೀರು ಅಥವಾ ಜೀರಿಗೆ ನೀರು
ಇನ್ನು ಮಲಗಿದ ತಕ್ಷಣ ನಿದ್ರೆ ಬರುತ್ತಿಲ್ಲ ಎಂದಾದರೆ ನೀವು ಸಂಜೆಯ ಸಮಯದಲ್ಲಿ ಜೀರಿಗೆ ಅಥವಾ ಸೋಂಪುಕಾಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ನೆನೆಸಿಡಬೇಕು. ನಂತರ ಆ ನೀರನ್ನು ಜರಡಿ ಹಿಡಿದು ಬಳಿಕ ಗ್ಯಾಸ್ ಮೇಲಿಟ್ಟು ಕುದಿಸಿಕೊಳ್ಳಬೇಕು. ನೀರು ಕುದಿಬರುವಾಗ ಒಂದು ಚಿಟಿಕೆ ಅಷ್ಟು ಶುಂಠಿ, ಲವಂಗ ಸೇರಿಸಿ ನಂತರ ಒಲೆಯಿಂದ ಇಳಿಸಿಕೊಂಡು ಬಿಸಿ ಬಿಸಿಯಾಗಿದ್ದಾಗ ಅದನ್ನು ಕುಡಿಯಬೇಕು. ಹೀಗೆ ನಿತ್ಯ ಮಾಡುವುದರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆ ಕೊನೆಯಾಗಲಿದೆ. ಮಲಗಿದ ತಕ್ಷಣ ನಿಮಗೆ ನಿದ್ರೆ ಬರಲಿದೆ.



Click it and Unblock the Notifications
