Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ತುಂಬಾ ತೆಳ್ಳಗಿದ್ದೀರಾ? ಮೈ ತೂಕ ಹೆಚ್ಚಿಸಲು,ಸದೃಢ ಮೈಕಟ್ಟು ಪಡೆಯಲು ತಿನ್ನಬೇಕಾದ ಆಹಾರಗಳು
ಕೆಲವರಿಗೆ ಸಣ್ಣಗಾಗಬೇಕೆಂಬ ಚಿಂತೆ,ಇನ್ನು ಕೆಲವರಿಗೆ ದಪ್ಪಗಾಗಬೇಕೆಂಬ ಆಸೆ, ಎಷ್ಟೇ ಪ್ರಯತ್ನ ಮಾಡಿದರೂ ದಪ್ಪಗಾಗಲ್ಲ ಎಂಬ ಚಿಂತೆ, ಆದರೆ ಕೆಲವೊಂದು ಆಹಾರ ಸೇವನೆ ಆರೋಗ್ಯಕರವಾಗಿ ಮೈ ತೂಕ ಹೆಚ್ಚು ಮಾಡಲು ಸಹಕಾರಿಯಾಗಿದೆ. ಎಷ್ಟೇ ಪ್ರಯತ್ನ ಮಾಡಿದರೂ ಮೈ ಊಕ ಹೆಚ್ಚಾಗುತ್ತಿಲ್ಲ ಎನ್ನುವವರು ಬಾಡಿ ಬಿಲ್ಡಿಂಗ್ ವ್ಯಾಯಾಮದ ಜೊತೆಗೆ ಈ ಆಹಾರಕ್ರಮ ಸೇರಿಸಿ, ಇದು ನಿಮ್ಮ ಸ್ನಾಯುಗಳು ಗಟ್ಟಿಮುಟ್ಟಾಗಲು, ಸದೃಢವಾದ ಮೈ ಕಟ್ಟು ಪಡೆಯಲು ಸಹಾಯ ಮಾಡುತ್ತದೆ:

ಓಟ್ಸ್
ಓಟ್ಸ್ ತೂಕ ಇಳಿಕೆಗೆ ಮಾತ್ರವಲ್ಲ ತೂಕ ಹೆಚ್ಚು ಮಾಡಲು ಸಹಕಾರಿ. ಓಟ್ಸ್ ಸೇವನೆಯಿಂದ ದೇಹಕ್ಕೆ ಪ್ರೊಟೀನ್ ಸಿಗಲಿದೆ, ಬಾಡಿ ಬಿಲ್ಡಿಂಗ್ ವ್ಯಾಯಾಮ ಮಾಡುವ ಶಕ್ತಿ ದೊರೆಯಲಿದೆ, ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ನಾರಿನಂಶ ಅಧಿಕವಾಗಿರುವುದರಿಂದ ಹೊಟ್ಟೆ ಬೇಗನೆ ತುಂಬುವುದು, ಸ್ನಾಯುಗಳು ಬಲವಾಗಲು ಸಹಕಾರಿ.
ಗ್ರೀಕ್ ಯೋಗರ್ಟ್
ಗ್ರೀಕ್ ಯೋಗರ್ಟ್‌ನಲ್ಲಿ ಪ್ರೊಟೀನ್ ಅಧಿಕವಿದೆ, ಅಲ್ಲದೆ ಇದರಲ್ಲಿರುವ ಅಮೈನೋಆಮ್ಲ ಸ್ನಾಯುಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಇದರಲ್ಲಿರುವ ಪ್ರೊಬಯೋಟಿಕ್ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅಲ್ಲದೆ ಇದರಲ್ಲಿರುವ ಪೋಷಕಾಂಶ ದೇಹವು ಹೀರಿಕೊಳ್ಳುತ್ತದೆ.
ಮೊಟ್ಟೆ
ಮೊಟ್ಟೆ ಕೂಡ ಸ್ನಾಯುಗಳು ಬಲವಾಗಲು ಸಹಕಾರಿಯಾಗಿದೆ. ಮೊಟ್ಟೆ ತಿನ್ನುವಾಗ ಅದರ ಹಳದಿ ಸಹಿತ ಸೇವಿಸಿ, ಮೊಟ್ಟೆಯ ಬಿಳಿಯಲ್ಲಿ ಪ್ರೊಟೀನ್ ಇದೆ, ಮೊಟ್ಟೆಯ ಹಳದಿಯಲ್ಲಿ ಕೊಬ್ಬಿನಂಶ ಮತ್ತು ವಿಟಮಿನ್ಸ್ ಇದೆ.
ಅನ್ನ
ಅನ್ನದಲ್ಲಿ ಕಾರ್ಬ್ಸ್ ಇದೆ, ಕಾರ್ಬ್ಸ್ ಮೈ ತೂಕ ಹೆಚ್ಚಿಸಲು ಸಹಕಾರಿಯಾಗಿದೆ. ನಿಮ್ಮ ಆಹಾರಕ್ರಮದಲ್ಲಿಅನ್ನವನ್ನು ಸೇರಿಸಿ, ಅನ್ನದಲ್ಲಿ ಕೆಂಪಕ್ಕಿ ಅನ್ನವನ್ನು ಸೇವಿಸುವುದು ಒಳ್ಳೆಯದು.
ಮೀನು
ತೂಕ ಹೆಚ್ಚು ಮಾಡುವ ಡಯಟ್‌ನಲ್ಲಿ ಮೀನು ಸೇರಿಸಿದರೆ ಒಳ್ಳೆಯದು, ಒಮೆಗಾ 3 ಕೊಬ್ಬಿನಂಶ ಶರೀರಕ್ಕೆ ತುಂಬಾನೇ ಒಳ್ಳೆಯದು. ಮೀನು ಫ್ರೈ ಮಾಡಿ ತಿನ್ನುವುದಕ್ಕಿಂತ ಸಾರು ಮಾಡಿ ಅಥವಾ ಗ್ರಿಲ್ಡ್ ಮಾಡಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಇವುಗಳನ್ನು ನಿಮ್ಮ ಆಹಾರಕ್ರಮದ ಕಡೆಗೆ ಗಮನಹರಿಸಿ
ನಟ್ಸ್
ನಟ್ ಬಟರ್
ಡ್ರೈ ಫ್ರೂಟ್ಸ್
ಚಿಯಾ ಸೀಡ್ಸ್
ಜೇನು
ಹಣ್ಣುಗಳು ಇವುಗಳನ್ನು ಸೇವಿಸಿ.
ಚೀಸ್ ಸೇವಿಸಿ
ಮೈ ತೂಕ ಆರೋಗ್ಯಕರವಾಗಿ ಹೆಚ್ಚು ಮಾಡಲು ಚೀಸ್ ಕೂಡ ಸಹಕಾರಿ, ನಿಮ್ಮ ಆಹಾರದಲ್ಲಿ ಚೀಸ್ ಬಳಸುವುದರಿಂದ ಮೈ ತೂಕವನ್ನು ಆರೋಗ್ಯಕರವಾಗಿ ತೂಕ ಹೆಚ್ಚಿಸಬಹುದು.
ಡಾರ್ಕ್ ಚಾಕೋಲೆಟ್
ಡಾರ್ಕ್ ಚಾಕೋಲೆಟ್ ಆರೋಗ್ಯಕರವಾಗಿ ತುಂಬಾ ಒಳ್ಳೆಯದು, ಡಾರ್ಕ್ ಚಾಕೋಲೆಟ್ ಹೃದಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ವ್ಯಾಯಾಮ ಮಾಡಿ: ತೂಕ ಇಳಿಕೆಗೆ ನಾವು ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋನ ಅದೇ ರೀತಿ ತೂಕ ಹೆಚ್ಚಾಗಲು, ಫಿಟ್ನೆಸ್ ಪಡೆಯಲು ವ್ಯಾಯಾಮ ಅವಶ್ಯ, ಹಾಗಾಗಿ ಜಿಮ್ ಟ್ರೈನರ್ ಬಳಿ ಮಾತನಾಡಿ ಸೂಕ್ತ ಟ್ರೈನಿಂಗ್ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications