Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೆಂಗಳೂರಲ್ಲಿ ಹರಡುತ್ತಿದೆ ನ್ಯುಮೋನಿಯಾ: ವೈರಸ್ ಹರಡೋಕೆ ಕಾರಣವೇನು?
ಬೆಂಗಳೂರಿನಲ್ಲಿ ತಾಪಮಾನ ಇಳಿಕೆಯಾಗುತ್ತಿರುವಾಗ ವೈರಸ್‌ಗಳ ಹರಡುವಿಕೆ ಹೆಚ್ಚಾಗ ತೊಡಗಿದೆ. ಬೆಂಗಳೂರು ವೈರಸ್ ಹರಡುವಿಕೆಯಿಂದಲೇ ಸುದ್ದಿಯಾಗುವುದು ನಾವು ನೋಡಬಹುದು. ಇತ್ತೀಚಿನ ದಿನಗಳಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ನಿತ್ಯ ಈ ನ್ಯೂಮೋನಿಯಾ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ.
ಬ್ಯಾಕ್ಟೀರಿಯಾ ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಉಂಟಾಗುತ್ತದೆ, ಇದು ಶ್ವಾಸಕೋಶದ ವಾಯುಮಾರ್ಗಗಳು ಊದಿಕೊಳ್ಳಲು ಮತ್ತು ಲೋಳೆಯ ರಚನೆಗೆ ಕಾರಣವಾಗುತ್ತದೆ. ಇತ್ತೀಚೆಗೆ ಜ್ವರ ಪ್ರಕರಣಗಳು ಮತ್ತು ಇತರ ವೈರಲ್ ಕಾಯಿಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹೆಚ್ಚುವರಿಯಾಗಿ ಬ್ಯಾಕ್ಟೀರಿಯಾದ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕ ಹುಟ್ಟಿಸುವಂತೆ ಮಾಡಿದೆ.

ಈ ವೈರಸ್ ಪ್ರಕರಣವನ್ನು ಈಗ ವಾಕಿಂಗ್ ನ್ಯುಮೋನಿಯಾ ಎಂದು ಕರೆಯಲಾಗುತ್ತದೆ ಏಕೆಂದರೆ ರೋಗಿಗಳಲ್ಲಿ ಸಾಮಾನ್ಯವಾಗಿ ಈ ರೋಗದ ಲಕ್ಷಣಗಳು ಗೋಚರವಾಗುವುದಿಲ್ಲ. ಈ ಕಾರಣದಿಂದಾಗಿಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ವಾಕಿಂಗ್ ನ್ಯುಮೋನಿಯಾವು ಮಕ್ಕಳು, ಯುವ ವಯಸ್ಕರು, ವಯಸ್ಸಾದ ವ್ಯಕ್ತಿಗಳು ಮತ್ತು ಆಸ್ತಮಾ ಅಥವಾ ದೀರ್ಘಕಾಲದ ಶ್ವಾಸಕೋಶದ ಕಾಯಿಲೆ (COPD) ಯಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆ ಹೊಂದಿರುವವರಲ್ಲಿ ಹೆಚ್ಚಾಗಿ ಕಂಡುಬರಬಹುದು. ಹಾಗೆ ಇದು ಸ್ಟೆರಾಯ್ಡ್‌ಗಳು, ಇಮ್ಯುನೊಸಪ್ರೆಸಿವ್ ಇಂಜೆಕ್ಷನ್‌ಗಳು ಅಥವಾ ತಂಬಾಕು ಬಳಕೆ ಅಥವಾ ಧೂಮಪಾನ ಮಾಡುವಂತವರಲ್ಲಿಯೂ ಹೆಚ್ಚಾಗಿ ಕಾಣಿಸಬಹುದು.
ವಾಕಿಂಗ್ ನ್ಯುಮೋನಿಯಾವನ್ನು ಸೈಲೆಂಟ್ ನ್ಯುಮೋನಿಯಾ ಅಥವಾ ಸಾಮಾನ್ಯ ಶೀತ ಎಂದು ಕರೆಯಲ್ಪಡುವ ಸಣ್ಣ ಉಸಿರಾಟದ ಸೋಂಕು ಎಂದು ತಪ್ಪಾಗಿ ಗ್ರಹಿಸಬಹುದು. ಏಕೆಂದರೆ ಇದರ ಲಕ್ಷಣಗಳೇ ಹಾಗಿವೆ. ಹೆಚ್ಚಾಗಿ ಯಾರಿಗೂ ಇದರಿಂದ ಏಕಾಏಕಿ ಅನಾರೋಗ್ಯ ಸಮಸ್ಯೆ ಕಾಣಿಸುವುದಿಲ್ಲ. ನ್ಯುಮೋನಿಯಾವನ್ನು ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ರೋಗಲಕ್ಷಣಗಳು ವಾರಗಳವರೆಗೆ ಇರುತ್ತದೆ. ಇದು ಹರಡದಿದ್ದರೂ ಸಹ, ಉಸಿರಾಟದ ಹನಿಗಳ ಮೂಲಕ ಹರಡುವ ಸಾಧ್ಯತೆಯಿದೆ. ಅದರಲ್ಲೂ 14 ವರ್ಷದೊಳಗಿನ ಮಕ್ಕಳು ಬಹುಬೇಗ ಈ ವೈರಸ್‌ಗೆ ತುತ್ತಾಗುವ ಅಪಾಯ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾಕಿಂಗ್ ನ್ಯುಮೋನಿಯಾ ಹರಡಲು ಕಾರಣವೇನು?
ಸಾಮಾನ್ಯವಾಗಿ ಈ ನ್ಯುಮೋನಿಯಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಎಂದು ನಂಬಲಾಗಿದೆ, ಹಾಗೆ ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಗಳು, ಹೆಚ್ಚಿದ ಮಾಲಿನ್ಯಕಾರಕಗಳು ಮತ್ತು ಹಠಾತ್ ಹವಾಮಾನ ಬದಲಾವಣೆಗಳು ನ್ಯುಮೋನಿಯಾಕ್ಕೆ ಕಾರಣವಾಗುತ್ತಿದೆ. ಹಾಗೆ ಈ ವಾಕಿಂಗ್ ನ್ಯುಮೋನಿಯಾ ಹೊಂದಿರುವ ರೋಗಿಗಳಿಗೆ ಕ್ಲಾರಿಥೋಮೈಸಿನ್ ಅಥವಾ ಅಜಿಥ್ರೊಮೈಸಿನ್ ಮತ್ತು ಸಾಂದರ್ಭಿಕವಾಗಿ ಡಾಕ್ಸಿಸೈಕ್ಲಿನ್‌ನಂತಹ ಆಂಟಿಮೈಕ್ರೊಬಿಯಲ್ ಚಿಕಿತ್ಸೆಯ ಅಗತ್ಯವಿರುತ್ತದೆ.
ಈ ವೈರಸ್ ಪತ್ತೆಗೆ ಸ್ವ್ಯಾಬ್ಸ್ ಅಥವಾ ರಕ್ತ ಪರೀಕ್ಷೆ ಎಕ್ಸ್ ರೇ ಮೂಲಕವು ಪರೀಕ್ಷೆ ಮಾಡಲಾಗುತ್ತದೆ. ಇದು ಹರಡದಂತೆ ಎಚ್ಚರಿಕೆ ವಹಿಸಲು ಮಾಸ್ಕ್ ಬಳಸುವುದು ಹಾಗೆ ಕೆಮ್ಮುವಾಗ, ಸೀನುವಾಗ ಬಾಯಿಗೆ ಅಡ್ಡಲಾಗಿ ಕೈ ಹಿಡಿಯುವುದು ಅಥವಾ ಕರವಸ್ತ್ರ ಬಳಸುವುದು ಮುಖ್ಯ. ಕನಿಷ್ಠ 10 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ತೊಳೆಯುವುದು ಮುಂತಾದ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ತಡೆಗಟ್ಟುವುದು ಒಳಗೊಂಡಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
