Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕ್ಯಾನ್ಸರ್ ವಿರುದ್ಧ ಹೋರಾಟಕ್ಕಿಳಿದ ಪುಟ್ಟ ಕಂದಮ್ಮ..! ತಂದೆಯ ಭಾವನಾತ್ಮಕ ವಿಡಿಯೋ..!
ಕ್ಯಾನ್ಸರ್ ಎನ್ನುವ ಈ ಹೆಸರು ಕೇಳಿದ್ರೆ ನಿಮಗೆ ಭಯ ಕಾಡುತ್ತೆ. ಯಾಕಂದ್ರೆ ಬೇರೆ ಯಾವುದೇ ಕಾಯಿಲೆ ಬಂದರು ಅದಕ್ಕೆ ಪರಿಹಾರದ ಜೊತೆಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆಯೂ ಮುಗಿಯುತ್ತದೆ. ಆದರೆ ಕ್ಯಾನ್ಸರ್ ಅಂದರೆ ಎಲ್ಲರಲ್ಲೂ ಭಯ ಹುಟ್ಟಿಸುತ್ತೆ. ಕ್ಯಾನ್ಸರ್‌ಗೆ ಚಿಕಿತ್ಸೆ ಇದ್ದರೂ ಕೂಡ ಇದರಲ್ಲಿ ಜೀವ ಕಳೆದುಕೊಳ್ಳುವವರೆ ಹೆಚ್ಚಾಗಿದ್ದಾರೆ.
ಹೀಗಾಗಿ ಕ್ಯಾನ್ಸರ್ ಎಂದರೆ ಜನರಿಗೆ ಈಗಲೂ ಭಯ. ಅದರಲ್ಲೂ ಅಮೆರಿಕ ಹಾಗೂ ಭಾರತದಲ್ಲಿ ಈ ಕ್ಯಾನ್ಸರ್ ಸಮಸ್ಯೆ ಎಷ್ಟು ಅಪಾಯಕಾರಿ ಮಟ್ಟಕ್ಕೆ ತಲುಪಿದೆ ಅಂದ್ರೆ ಬೇರೆಲ್ಲಾ ಕಾಯಿಲೆಗಳಿಗಿಂತ ಕ್ಯಾನ್ಸರ್‌ನಿಂದಲೇ ಸಾವಿನ ಪ್ರಮಾಣ ಹೆಚ್ಚಾಗಿದೆ. ಭಾರತದ ಕ್ಯಾನ್ಸರ್ ರಾಜಧಾನಿಯಾಗಿ ಬದಲಾಗುತ್ತಿದೆ ಎಂಬ ವರದಿಯು ಇತ್ತೀಚಿಗಷ್ಟೆ ಹೊರಬಿದ್ದು ಜನರ ನಿದ್ದೆ ಕೆಡಿಸಿತ್ತು.

ಇದೀಗ ಪುಟ್ಟ ಹುಡುಗಿಯೊಬ್ಬಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಲೋಲಾ ಎಂಬ ಪುಟ್ಟ ಕಂದಮ್ಮ ಕ್ಯಾನ್ಸರ್‌ಗೆ ಒಳಗಾಗಿದ್ದು, ಆಕೆ ಚಿಕಿತ್ಸೆಯ ನಡುವೆ ಆಸ್ಪತ್ರೆಯಲ್ಲಿ ಆಕೆ ಕಳೆದ ದಿನಗಳನ್ನು ತೆರೆದಿಡುತ್ತಿದೆ.
ಜನರು ಸಾಮಾನ್ಯವಾಗಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ, ಅದರಲ್ಲೂ ಕ್ಯಾನ್ಸರ್ ವಿರುದ್ಧ ಹೋರಾಡುವುದು ಕಠಿಣ ಆರೋಗ್ಯ ಸವಾಲುಗಳಲ್ಲಿ ಒಂದಾಗಿದೆ. ರೋಗಿಯು ವಿವಿಧ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದು ಎಷ್ಟು ನೋವು ನೀಡುತ್ತೆ ಅಂದ್ರೆ ಚಿಕಿತ್ಸೆಗಿಂತಲೂ ಹಾಗೆ ಇರುವುದು ಒಳಿತು ಎನಿಸುವಂತಿರುತ್ತದೆ. ಅದರಲ್ಲೂ ಮಕ್ಕಳಿಗೆ ಇದೊಂದು ಕಷ್ಟದ ದಿನಗಳ ಕಳೆಯಬೇಕಾದ ಅನಿವಾರ್ಯತೆ ತರುತ್ತದೆ.
ಇಲ್ಲಿ ಲೋಲಾ ತನ್ನ ಕ್ಯಾನ್ಸರ್ ವಿರುದ್ಧ ಮೊದಲ ದಿನದಿಂದ ಹೋರಾಟ ನಡೆಸಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಕಂಟೆಂಟ್ ಕ್ರಿಯೇಟರ್ ಕ್ರಿಸ್ಟಿನ್ ಕ್ಸಿಯಾಂಗ್ ತಮ್ಮ Instagram ಖಾತೆಯಲ್ಲಿ ತನ್ನ ಕಿರಿಯ ಮಗಳು ಲೋಲಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಕಂಟೆಂಟ್ ಕ್ರಿಯೇಟರ್ ತನ್ನ ಮಗಳು ಕ್ಯಾನ್ಸರ್ ಮೊದಲು ಮತ್ತು ರೋಗನಿರ್ಣಯದ ನಂತರ ಹೇಗಿದ್ದಳು ಎಂಬುದನ್ನು ತೋರಿಸುವ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ನೀವು ಭಗವಂತನ ಕೃಪೆ ಮತ್ತು ಕರುಣೆಯ ಜೀವಂತ ಸಾಕ್ಷಿಯಾಗಬೇಕು. ಪವಾಡಗಳು ಸಂಭವಿಸುತ್ತವೆ ಎಂದು ಜಗತ್ತಿಗೆ ತೋರಿಸಲು ನೀವು ಉದ್ದೇಶಿಸಿದ್ದೀರಿ. ನಾನು ಈ ವಿಡಿಯೋ ಮಾಡುವಾಗ ಕಣ್ಣಲ್ಲಿ ನೀರು ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ನನ್ನ ಪುಟ್ಟ ಲೋಲಾಳ ಈ ವೀಡಿಯೋವನ್ನು ಮಾಡುವಾಗ ನನಗೆ ಅಳು ತಡೆಯಲಾಗಲಿಲ್ಲ. ನನ್ನ ಸುಂದರ ಹುಡುಗಿ...ನೀನು ತುಂಬಾ ಬಲಶಾಲಿ, ತುಂಬಾ ಅಮೂಲ್ಯ, ತುಂಬಾ ಮುಗ್ಧ, ತುಂಬಾ ತುಂಟಿ ಎಲ್ಲವು ಒಳ್ಳೆಯದಕ್ಕೆ, ನೀನು ಇದಕ್ಕೆ ಅರ್ಹರಲ್ಲ !! ನಿನಗಾಗಿ ಅಪ್ಪ-ಅಮ್ಮ ಗಟ್ಟಿಯಾಗಿ ಇರಬೇಕಾದರೂ, ನೀನು ನರಳುವುದನ್ನು ನೋಡಿದಾಗಲೆಲ್ಲ ನಾವು ಸ್ವಲ್ಪ ಹೆಚ್ಚು ಸಾಯುತ್ತೇವೆ. ನಾವು ಪ್ರತಿದಿನ ನಿನ್ನ ಕಾಯಿಲೆ ನನಗೆ ಬರಲಿ, ನಿನ್ನ ನೋವು ನನಗೆ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.
'ನಿನ್ನನ್ನು ಪ್ರೀತಿಸುವ ಅನೇಕ ಜನರಿದ್ದಾರೆ! ನೀನು ಕ್ಯಾನ್ಸರ್ ಮುಕ್ತರಾಗಿದ್ದೀರಿ ಎಂದು ನಾವು ಅಂತಿಮವಾಗಿ ಹೇಳುವ ದಿನಕ್ಕಾಗಿ ಕಾಯಲು ಸಾಧ್ಯವಾಗದ ಅನೇಕ ಜನರಿದ್ದಾರೆ! ಇದು ಸಂಭವಿಸಲಿದೆ! ನಾವು ಈ ಯುದ್ಧದಲ್ಲಿ 125 ದಿನಗಳ ಕಳೆದಿದ್ದೇವೆ ಮತ್ತು ಇನ್ನೂ 693 ದಿನಗಳ ಹೋರಾಟ ಬಾಕಿ ಇದೆ! ಎಂದು ತಂದೆ ಆ ಪೋಸ್ಟ್‌ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆದ ಬಳಿಕ ಜನರು ಲೋಲಾಳ ಆರೋಗ್ಯಕ್ಕೆ ಪ್ರಾರ್ಥಿಸಿದ್ದಾರೆ. ಆದಷ್ಟು ಬೇಗೆ ಕ್ಯಾನ್ಸರ್‌ನಿಂದ ಗುಣಮುಖಳಾಗಿ ಮನೆಗೆ ಬರಲಿ ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ ಆಕೆಯ ಕ್ಯಾನ್ಸರ್ ವಿರುದ್ಧದ ಹೋರಾಟ ಸಾವಿರಾರು ಮಂದಿಗೆ ಸ್ಫರ್ತಿಯಾಗಲಿ ಎಂದಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
