Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ಪಾ ಹೋಗುವ ಮುನ್ನ ಎಚ್ಚರ..! ಮಹಿಳೆಯರಿಗೆ ಹರಡಿದೆ ಹೆಚ್‌ಐವಿ ಸೋಂಕು..!
ಇತ್ತೀಚಿನ ದಿನಗಳಲ್ಲಿ ಕಾಸ್ಮೆಟಿಕ್ ವಸ್ತುಗಳು ಕಾಯಿಲೆ ಹರಡುವ ವಸ್ತುಗಳಾಗಿ ಬದಲಾಗುತ್ತಿವೆ. ಇಂದು ಮೇಕಪ್ ಕಿಟ್‌ಗಳು, ಫೇಶಿಯಲ್ ಥೆರಪಿಗಳು, ವೈದ್ಯಕೀಯ ಹಾಗೂ ಸ್ಪಾಗಳಲ್ಲಿ ಮಾಡಲಾಗುತ್ತಿರುವ ಕೆಲವು ಟ್ರೀಟ್‌ಮೆಂಟ್‌ಗಳು ಈಗ ಕಾಯಿಲೆಯ ಆಗರಗಳಾಗುತ್ತಿವೆ. ಇತ್ತೀಚಿಗೆ ಮುಖ ಸುಂದರವಾಗಿ ಕಾಣಿಸಲಿ ಎಂದು ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಹಲವು ರೀತಿ ಸಮಸ್ಯೆ ಉದ್ಭವಿಸಿದ ಉದಾಹಣೆ ನಾವು ನೋಡಿದ್ದೇವೆ.
ಆದರೆ ಇಲ್ಲೊಂದು ಕಡೆ ಸ್ಪಾದಲ್ಲಿ ಕಾಸ್ಮೆಟಿಕ್ ಇಂಜೆಕ್ಷನ್‌ಗೆ ಒಳಗಾಗಿದ್ದ ಮೂವರು ಮಹಿಳೆಯರಿಗೆ ಹೆಚ್‌ಐವಿ ಪಾಸಿಟಿವ್ ದಾಖಲಾಗಿರುವ ವಿಚಿತ್ರ ಮತ್ತು ಆತಂಕಕಾರಿ ಘಟನೆ ನಡೆದಿದೆ. ಅಮೆರಿಕದಲ್ಲಿ ಈ ರೀತಿ ಮೂವರು ಮಹಿಳೆಯರು ಈಗ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ನ್ಯೂ ಮೆಕ್ಸಿಕೋದ ಕನಿಷ್ಠ ಮೂವರು ಮಹಿಳೆಯರು ಸ್ಪಾಗೆ ಹೋಗಿ ಬಂದ ಬಳಿಕ ಹೆಚ್‌ಐವಿಗೆ ಒಳಗಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ವಿವರಿಸಿದ್ದಾರೆ.

(ಫೋಟೋ ಕೃಪೆ-Freepik)
ಇವರಷ್ಟೆ ಅಲ್ಲ ಇನ್ನೂ ಹಲವರಿಗೆ ಈ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಸ್ಪಾದಿಂದ ಹೆಚ್‌ಐವಿ ಸೋಂಕು ಹರಡಿದ್ದು ಹೇಗೆ? ಈ ಸೋಂಕಿಗೆ ಕಾರಣವಾಗಿದ್ದೇನು ಗೊತ್ತಾ?
ಸೋಂಕು ಹರಡಿತು ವ್ಯಾಂಪೈರ್ ಫೇಶಿಯಲ್
ನೀವು ಯಾವಾಗಲು ಸ್ಪಾ ಅಥವಾ ಬ್ಯೂಟಿ ಪಾರ್ಲರ್ ಹೋಗುವವರು ಆಗಿದ್ದರೆ ಈ ಫೇಶಿಯಲ್‌ಗಳ ಹಲವು ವಿಧಗಳ ಕುರಿತು ನೀಡು ಅರಿತುಕೊಂಡಿರುತ್ತೀರಿ. ಈ ಫೇಶಿಯಲ್‌ಗಳಲ್ಲಿ ಹತ್ತಾರು ವಿಧಗಳಿವೆ ಅದರಲ್ಲಿ ವ್ಯಾಂಪೈರ್ ಫೇಶಿಯಲ್ ತುಂಬಾನೆ ಬಳಕೆಯಲ್ಲಿರುವ ವಿಧಾನವಾಗಿದೆ. ಬಹುತೇಕ ಸ್ಪಾಗಳು ಈ ಫೇಶಿಯಲ್ ಮಾಡಿಸಲು ಶಿಫಾರಸ್ಸು ಮಾಡುತ್ತವೆ.
ಆದರೆ ಅಮೆರಿಕದಲ್ಲಿ ಮಹಿಳೆಯರಿಗೆ ಹೆಚ್‌ಐವಿ ಸೋಂಕು ಹರಡಲು ಈ ಫೇಶಿಯಲ್ ಕಾರಣವಾಗಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಈ ಫೇಶಿಯಲ್ ಹೇಗೆ ಮಾಡುತ್ತಾರೆ? ಈ ವ್ಯಾಂಪೈರ್ ಫೇಶಿಯಲ್ ಅಂದರೆ ನಿಮ್ಮ ಮುಖ ಮತ್ತಷ್ಟು ಕಾಂತಿಯುತವಾಗಿ ಹೊಳೆಯಬೇಕಾದರೆ ನಿಮ್ಮ ರಕ್ತವನ್ನು ಹೊರತೆಗೆದು ಅದರಲ್ಲಿ ಬಿಳಿ ರಕ್ತ ಕಣಗಳ ವಿಂಗಡಿಸಿ ಮತ್ತೆ ನಿಮ್ಮ ಮುಖಕ್ಕೆ ಸೇರಿಸುವು ಒಂದು ಪ್ರಕ್ರಿಯೆ.
ನಿಮ್ಮ ಚರ್ಮವು ಸೂರ್ಯ ಕಿರಣಗಳಿಂದ ಹಾನಿಯಾಗಿದ್ದರೆ, ವಯಸ್ಸಾದಂತೆ ಕಂಡರೆ, ಸುಕ್ಕುಗಟ್ಟಿದ್ದರೆ ಅಥವಾ ಕಲೆಗಳಾದರೆ ಈ ರೀತಿ ಚಿಕಿತ್ಸೆಯ ಮೂಲಕ ಪರಿಣಾಮಕಾರಿಯಾಗಿ ಮತ್ತೆ ಕಾಂತಿ, ಹೊಳಪು ಪಡೆಯಬಹುದು. ಈ ಪ್ರಕ್ರಿಯೆಯಲ್ಲಿ ನಿಮ್ಮ ದೇಹದಲ್ಲಿ ಮೊದಲು ರಕ್ತವನ್ನು ತೆಗೆದು ರಕ್ತದಲ್ಲಿ ಬಿಳಿ ರಕ್ತ ಕಣಗಳ ವಿಂಗಡಿಸಿ ಮತ್ತೆ ಅದನ್ನು ಸಿರಿಂಜ್ ಮೂಲಕ ನಿಮ್ಮ ಮುಖಕ್ಕೆ ಸೇರಿಸಲಾಗುತ್ತದೆ. ಇದನ್ನು ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ (PRP) ಅಂತಲೂ ಕರೆಯುತ್ತಾರೆ.
ಇದರಿಂದ ಹೆಚ್‌ಐವಿ ಹರಡಿದ್ದು ಹೇಗೆ?
ಈ ಚಿಕಿತ್ಸೆಗೆ ಒಳಗಾದವರಿಗೆಲ್ಲಾ ಹೆಚ್‌ಐವಿ ಹರಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಈ ಸ್ಪಾದಲ್ಲಿ ವ್ಯಾಂಪೈರ್ ಚಿಕಿತ್ಸೆಗೆ ಬಂದವರಲ್ಲಿ ಒಬ್ಬರಿಗೆ ಹೆಚ್‌ಐವಿ ಇದ್ದಿರಬಹುದು. ಸ್ಪಾದಲ್ಲಿ ಒಂದೇ ಸಿರಿಂಜ್ ಅಥವಾ ರಕ್ತ ಅದಲು ಬದಲಾಗಿ ಈ ರೀತಿಯ ಘಟನೆ ಸಂಭವಿಸಿರುವ ಸಂಭವವಿದೆ ಎಂದು ಶಂಕಿಸಲಾಗಿದೆ.
ಇನ್ನು ಈ ಸ್ಪಾದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವ ಅಂಶವು ಕಂಡುಬಂದಿಲ್ಲ. ರಕ್ತವನ್ನು ಹೊರತೆಗೆಯುವ ಹಾಗೂ ಇಂಪ್ಲೆಂಟ್ ಮಾಡಲು ಬಳಸುವ ವಸ್ತುಗಳು ಯಾವಾಗಲು ಫ್ರೀಜರ್ ಹಾಗೂ ಅತ್ಯಂತ ಸುರಕ್ಷಿತ ಸ್ಥಳದಲ್ಲಿರಬೇಕು. ಆದರೆ ಸ್ಪಾದಲ್ಲಿ ಇದ್ಯಾವುದನ್ನೂ ಅವರು ಪಾಲಿಸಿರಲಿಲ್ಲ. ಜೊತೆಗೆ ಅಲ್ಲಿ ಓಪನ್ ಸಿರಿಂಜ್‌ಗಳು ಬಳಕೆಯಾದ ಸಿರಿಂಜ್‌ಗಳು, ಎಲ್ಲಾ ಕಡೆಗಳಲ್ಲು ರಕ್ತದ ಕಲೆಗಳು, ಶುಚಿಯಾಗಿರದ ಬಟ್ಟೆಗಳು ಕಂಡುಬಂದವು. ಹೀಗಾಗಿ ಅಲ್ಲಿ ಬಳಸಲಾಗಿದ್ದ ಪ್ರತಿಯೊಂದು ವಸ್ತುಗಳೂ ಅಸುರಕ್ಷಿತ ಮಾದರಿಯಾಗಿದ್ದವು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
