Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಿಲನಕ್ರಿಯೆ ಬಳಿಕ ಕಂದು ಮಿಶ್ರಿತ ಬಿಳುಪು ಹೋದರೆ ನಿರ್ಲಕ್ಷ್ಯ ಮಾಡಲೇಬಾರದು ಏಕೆ?
ಮಹಿಳೆಯರ ಆರೋಗ್ಯದಲ್ಲಿ ಬದಲಾವಣೆಯಾದರೆ ಅದು ಜನನೇಂದ್ರೀಯದಲ್ಲಾದ ಬದಲಾವಣೆ ಮುಖಾಂತರ ತಿಳಿಯುತ್ತದೆ. ಪ್ರತಿಯೊಬ್ಬ ಮಹಿಳೆಗೆ ಬಿಳುಪು ಹೋಗುವುದು ಸಹಜ, ಆದರೆ ಬಿಳುಪಿನಲ್ಲಿ ವ್ಯತ್ಯಾಸ ಕಂಡು ಬಂದರೆ ಇದೆಯೆಲ್ಲಾ ಅದು ಸಹಜವಲ್ಲ.
ಅದರಲ್ಲೂ ಗಂಡು-ಹೆಣ್ಣು ಸೇರಿದಾಗ ಬಿಳುಪು ಹೋಗುವುದು ಸ್ವಲ್ಪ ಅಧಿಕ. ಬಿಳುಪು ಹೋಗುವುದರಿಂದ ಜನನೇಂದ್ರೀಯ ಡ್ರೈಯಾಗುವುದಿಲ್ಲ, ಇದರಿಂದ ಲೈಂಗಿಕ ತೃಪ್ತಿ ಮತ್ತಷ್ಟು ಸಿಗುವುದು. ಅದೇ ನಿಮ್ಮ ಪುರುಷನೊಂದಿಗೆ ಸೇರಿದ ಬಳಿಕ ರಕ್ತ ಮಿಶ್ರಿತ ಬಿಳುಪು ಹೋದರೆ ಅದು ಸಹಜ ಅಲ್ವೇ ಅಲ್ಲ. ಈ ರೀತಿಯ ಲಕ್ಷಣವನ್ನು ನಿರ್ಲಕ್ಷ್ಯ ಮಾಡಲೇಬಾರದು, ಏಕೆ ಎಂದು ನೋಡೋಣ ಬನ್ನಿ:

ಸ್ತ್ರೀರೋಗ ತಜ್ಞರ ಪ್ರಕಾರ ಮಹಿಳೆಗೆ ಏನಾದರೂ ಆರೋಗ್ಯ ಸಮಸ್ಯೆವಿದ್ದಾಗ ಮಾತ್ರ ಈ ರೀತಿ ಕಂಡು ಬರುವುದು. ಸಾಮಾನ್ಯವಾಗಿ ಈ ಕಾರಣಗಳಿಂದಾಗಿ ಮಿಲನಕ್ರಿಯೆ ಬಳಿಕ ಬಿಳುಪು ಹೋಗುವಾಗ ರಕ್ತದ ಕಲೆಯೂ ಕಂಡು ಬರುವುದು ಎಂದು ಹೇಳಲಾಗುವುದು:
ಅನಿಯಮಿತ ಮುಟ್ಟಿನ ಸಮಸ್ಯೆ: ಅನಿಯಮಿತ ಮುಟ್ಟಿನ ಸಮಸ್ಯೆ ಇದ್ದರೆ ಲೈಂಗಿಕ ಕ್ರಿಯೆ ಬಳಿಕ ಕಂದು ಬಣ್ಣದ ಬಿಳುಪು ಕಂಡು ಬರುವುದು. ಆದರೆ ಈ ರೀತಿ ತುಂಬಾ ಸಮಯದಿಂದ ಕಂಡು ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.
ಎಮರ್ಜೆನ್ಸಿ ಗರ್ಭನಿರೋಧಕ ತೆಗೆದುಕೊಂಡರೆ: ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಾಗ ಕಂದು ಬಣ್ಣದ ಬಿಳುಪು ಹೋಗುವುದು.
ಐಯುಡಿ: ಗರ್ಭನಿರೋಧಕವಾಗಿ ಐಯುಡಿ ಹಾಕಿದಾಗ ಕೂಡ ಕೆಲವರಿಗೆ ಲೈಂಗಿಕಕ್ರಿಯೆ ಬಳಿಕ ರಕ್ತಸ್ರಾವವಾಗುವುದು. ಈ ರೀತಿಯಾದಾಗ ನಿಮ್ಮ ವೈದ್ಯರನ್ನು ಭೇಟಿಯಾಗಿ ಅವರಿಂದ ಸೂಕ್ತ ಸಲಹೆ ಸೂಚನೆ ಪಡೆಯಿರಿ.
ಯೂಟ್ರೈಮ್ ಪಾಲಿಪ್ಸ್: ಇದರಲ್ಲಿ ಬಿಳುಪು ಕಂದು ಬಣ್ಣದಲ್ಲಿರುವುದು, ತುಂಬಾ ಕೆಟ್ಟ ವಾಸನೆ ಬೀರುವುದು. ಅಲ್ಲದೆ ಮುಟ್ಟಿನ ಸಮಯದಲ್ಲಿ ಆದಂತೆ ರಕ್ತಸ್ರಾವ ಕೂಡ ಕಂಡು ಬರುವುದು.
ವೆಜೈನೆಟಿಸ್: ಈ ಬಗೆಯ ಸಮಸ್ಯೆ ಇದ್ದಾಗ ಕಂದು ಅಥವಾ ಹಳದಿ ಬಣ್ಣದಲ್ಲಿ ಬಿಳುಪು ಹೋಗುವುದು, ಅಲ್ಲದೆ ಬಿಳುಪು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಜನನೇಂದ್ರೀಯಕ್ಕೆ ಏನಾದರೂ ಸೋಂಕು ಉಂಟಾದಾಗ ಈ ರೀತಿಯಾಗುವುದು.
ಈ ರೀತಿಯಾದಾಗ ಈ ಲಕ್ಷಣಗಳೂ ಕಂಡು ಬರುವುದು:
* ಬಿಳಿ(ಚೀಸ್ ರೀತಿ) ಅಥವಾ ಕಂದು ಬಣ್ಣದಲ್ಲಿ ಬಿಳುಪು ಹೋಗುವುದು
* ತುರಿಕೆ
* ಉರಿಯಾಗುವುದು
* ಕೆಟ್ಟವಾಸನೆ
* ಊತ
ಈ ಬಗೆಯ ಲಕ್ಷಣಗಳು ಬಂದರೆ ಸೋಂಕು ಅಥವಾ ಬ್ಯಾಕ್ಟಿರಿಯಾ ತಗುಲಿರಬಹುದು.
ಯೂಟ್ರೈನ್ ಫೈಟ್ರಾಯ್ಡ್
ಫೈಬ್ರಾಯ್ಡ್ ಎಂದರೆ ಕ್ಯಾನ್ಸರ್‌ಗಡ್ಡೆಗಳಲ್ಲ, ಇದು ಸಾಮಾನ್ಯವಾಗಿ ಗರ್ಭಾಶಯ ಗೋಡೆಯ ಹೊರಭಾಗದಲ್ಲಿ ಕಂಡು ಬರುವುದು, ಆದರೆ ಗರ್ಭಾಶಯ ಒಳಗಡೆ ಸ್ವಲ್ಪ ಅಥವಾ ಸಂಪೂರ್ಣ ಇದ್ದಾಗ ರಕ್ತಸ್ರಾವವಾಗುವುದು. ಈ ಸಮಸ್ಯೆ ಇರುವವರು ಲೈಂಗಿಕಕ್ರಿಯೆ ನಡೆಸಿದಾಗ ರಕ್ತಸ್ರಾವ ಉಂಟಾಗುವುದು. ಫೈಬ್ರಾಯ್ಡ್ ಸಮಸ್ಯೆಯಿದ್ದರೆ ಪಲ್ವಿಕ್ ಭಾಗದಲ್ಲಿ ಕಂಡು ಬರುವುದು. ಶೇ. 75ರಷ್ಟು ಮಹಿಳೆಯರಲ್ಲಿ ಫೈಬ್ರಾಯ್ಡ್ ಅವರ ಸಂತಾನೋತ್ಪತ್ತಿ ಸಮಯದಲ್ಲಿ ಅಂದರೆ 16-50 ವರ್ಷದೊಳಗಡೆ ಕಂಡು ಬರುವುದು.
ಹದಿಹರೆಯದ ಪ್ರಾಯಕ್ಕಿಂತ 30-40ರ ಯೌವನ ಪ್ರಾಯದಲ್ಲಿ ಹೆಚ್ಚಾಗಿ ಕಂಡು ಬರುವುದು.
ತುಂಬಾ ಜನರಿಗೆ ತಮಗೆ ಫೈಬ್ರಾಯ್ಡ್ ಇದೆ ಎಂಬುವುದೇ ಗೊತ್ತಿರುವುದಿಲ್ಲ. ಅವರಲ್ಲಿ ಪತ್ತೆಯಾದರೂ ಫೈಬ್ರಾಯ್ಡ್ ಗಾತ್ರ ದೊಡ್ಡದಾಗಿರದಿದ್ದರೆ ಚಿಕಿತ್ಸೆ ಅವಶ್ಯಕತೆ ಇರುವುದಿಲ್ಲ. ಫೈಬ್ರಾಯ್ಡ್ ಗಾತ್ರ ಹೆಚ್ಚಿದರೆ ವೈದ್ಯರು ನಿಮಗೆ ಸೂಕ್ತವಾದ ಚಿಕಿತ್ಸೆ ಯಾವುದೆಂದು ಹೇಳುತ್ತಾರೆ.
ಸರ್ವಿಕಲ್ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್ ಇದ್ದಾಗಲೂ ಲೈಂಗಿಕಕ್ರಿಯೆ ಬಳಿಕ ರಕ್ತಸ್ರಾವ ಕಂಡು ಬರುವುದು. ಈ ರಕ್ತಸ್ರಾವ ತೆಳುವಾಗಿರುತ್ತದೆ, ಯಾವುದೇ ನೋವು ಇರುವುದಿಲ್ಲ. ಈ ರೀತಿ ಲೈಂಗಿಕ ಕ್ರಿಯೆ ನಡೆಸದಾಗ ಮಾತ್ರವಲ್ಲ ಹಾಗೆಯೂ ಆಗಾಗ ರಕ್ತಸ್ರಾವ ಕಂಡು ಬರುವುದು. ಈ ರೀತಿಯ ಲಕ್ಷಣ ನಿರ್ಲಕ್ಷ್ಯ ಮಾಡಲೇಬಾರದು, ಬೇಗನೆ ಪತ್ತೆ ಹಚ್ಚಿದರೆ ಚಿಕಿತ್ಸೆ ಫಲ ನೀಡುವುದು ಅಧಿಕ.
ತುಂಬಾ ಮಹಿಳೆಯರಲ್ಲಿ ಮುಜುಗರ ಸ್ವಭಾವದಿಂದಾಗಿ ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆ ಪ್ರಾರಂಭದಲ್ಲಿ ಗೊತ್ತಾಗುವುದೇ ಇಲ್ಲ. ನಿಮ್ಮ ಆರೋಗ್ಯದಲ್ಲಿ ಒಂದಿಷ್ಟು ಬದಲಾವಣೆ ಕಂಡ ಮುಜುಗರ ಬೇಡ, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿದೆ ಅವರಿಂದ ಸೂಕ್ತ ಸಲಹೆ ಸೂಚನೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
