Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಲಗುವಾಗಲೂ ಇಯರ್‌ಫೋನ್ ಬಳಸುತ್ತೀರಾ..? ನೆಕ್ರೋಸಿಸ್ ಪಿಡುಗು ಕಾಡಬಹುದು..!
ಸಂಗೀತ ಕೇಳುವುದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ ಕೆಲವರು ಎಷ್ಟು ದಾಸರಾಗುತ್ತಾರೆ ಎಂದರೆ ಯಾವಾಗಲು ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡಿರುತ್ತಾರೆ. ಜೊತೆಗೆ ಮಲಗುವಾಗಲು ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಲೇ ಮಲಗುತ್ತಾರೆ. ನಿದ್ರೆ ಬಂದ ಬಳಿಕ ಇಲ್ಲವೆ ಎಚ್ಚರಗೊಂಡಾಗ ಕೆಲವರು ಇಯರ್ ಫೋನ್ ತೆಗೆದಿಟ್ಟು ಮಲಗುತ್ತಾರೆ. ಮತ್ತೆ ಕೆಲವರು ಬೆಳಗ್ಗೆಯೇ ತೆಗೆಯುವುದು.
ಸಂಗೀತವನ್ನು ಕೇಳುತ್ತಾ ನಿದ್ರಿಸುವುದು ಒತ್ತಡವನ್ನು ನಿವಾರಿಸಲು ಅಥವಾ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ದುರದೃಷ್ಟವಶಾತ್, ನಮ್ಮಲ್ಲಿ ಅನೇಕರು ದೇಹದ ಆರೋಗ್ಯಕ್ಕಾಗಿ ಇಯರ್‌ಫೋನ್‌ಗಳನ್ನು ಬಳಸಿ ಮಲಗುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ತಿಳಿದಿರುವುದಿಲ್ಲ. ಆದರೆ ಈ ರೀತಿ ಮಲಗುವಾಗಲೂ ಇಯರ್ ಫೋನ್ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಲ್ಲವಂತೆ. ಹೀಗೆ ಮಾಡುವುದರಿಂದ ನಮಗೆ ಯಾವೆಲ್ಲಾ ಸಮಸ್ಯೆ ಉಂಟಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕಿವಿಯ ವ್ಯಾಕ್ಸ್ ತಳ್ಳಲ್ಪಡುತ್ತದೆ
ರಾತ್ರಿಯಲ್ಲಿ ಅಥವಾ ದೀರ್ಘಾವಧಿಯವರೆಗೆ ಬಳಸುವ ಇಯರ್‌ಫೋನ್‌ಗಳು ಇಯರ್‌ವಾಕ್ಸ್ ಅನ್ನು ಮತ್ತಷ್ಟು ಮುಂದಕ್ಕೆ ತಳ್ಳುತ್ತದೆ. ಇದರಿಂದ ಕಿವಿಯಲ್ಲಿ ಟೆನ್ನಿಟ್ ಅಥವಾ ರಿಂಗಿಂಗ್‌ಗೆ ಕಾರಣವಾಗುತ್ತದೆ. ಅಲ್ಲದೆ ಕಿವಿಯ ವ್ಯಾಕ್ಸ್ ಅನ್ನು ನಿಯಮಿತವಾಗಿ ತೆಗೆಯದೆ ಇದ್ದಾಗ ಕಿವಿ ನೋವು, ಇಲ್ಲವೆ ಸರಿಯಾಗಿ ಕೇಳಿಸದೆ ಇರಬಹುದು. ನೀವು ಸದಾ ಇಯರ್ ಫೋನ್ ಬಳಸುವುದರಿಂದ ಈ ವ್ಯಾಕ್ಸ್ ಮುಂದಕ್ಕೆ ತಳ್ಳಲ್ಪಡುತ್ತದೆ. ಹೀಗಾಗಿ ವ್ಯಾಕ್ಸ್ ಅನ್ನು ಕಿವಿಯಿಂದ ತೆಗೆಯುವುದು ಕಷ್ಟಕರವಾಗುತ್ತದೆ.
ಕಿವಿ ಸೋಂಕಿಗೆ ಕಾರಣವಾಗಬಹುದು
ಇಯರ್‌ಫೋನ್‌ಗಳನ್ನು ಹೆಚ್ಚು ಸಮಯ ಮತ್ತು ದೀರ್ಘಕಾಲದವರೆಗೆ ಬಳಸುವುದರಿಂದ ಕಿವಿಯ ಸೋಂಕುಗಳು ಉಂಟಾಗಬಹುದು ಮತ್ತು ನೋವನ್ನು ಉಂಟುಮಾಡಬಹುದು. ಜೊತೆಗೆ ಇಯರ್‌ಫೋನ್‌ಗಳನ್ನು ಹೆಚ್ಚು ಹೊತ್ತು ಬಳಸುವುದರಿಂದ ಕಿವಿಯ ತೇವಾಂಶ ಮತ್ತು ಕೊಳೆಗೆ ಉಳಿದುಬಿಡುತ್ತದೆ. ಕಿವಿಯೊಳಗೆ ಬೆವರುವುದರಿಂದ ಅಲ್ಲಿ ಕೊಳೆ ಹೆಚ್ಚಾಗಿ ಬ್ಯಾಕ್ಟೀರಿಯಲ್ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಶ್ರವಣ ದೋಷಕ್ಕೆ ಕಾರಣವಾಗಬಹುದು
ನಿತ್ಯವು ಇಯರ್‌ಫೋನ್ ಅನ್ನು ಬಳಸುವುದರಿಂದಾಗಿ ಶ್ರವಣ ದೋಷಕ್ಕೆ ಕಾರಣವಾಗಬಹುದು. ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ವಿಶ್ರಾಂತಿಯ ಅಗತ್ಯವಿರುತ್ತದೆ. ಅದರಂತೆ ಕಿವಿಗೂ ಸಹ ವಿಶ್ರಾಂತಿ ನೀಡಬೇಕು. ಆದರೆ ನಾವು ಹೆಚ್ಚು ಕಾಲ ಇಯರ್ ಫೋನ್ ಬಳಸಿದರೆ ಕಿವಿಯ ಮೇಲಿನ ಒತ್ತಡ ಹೆಚ್ಚಾಗುತ್ತದೆ ಇದು ಶ್ರವಣ ದೋಷಕ್ಕೆ ಕಾರಣವಾಗಬಹುದು. ಹೆಚ್ಚಿನ ಇಯರ್‌ಫೋನ್‌ಗಳು 95 ರಿಂದ 108 ಡಿಬಿ (ಡೆಸಿಬಲ್) ಶಬ್ದ ಉತ್ಪಾದಿಸುತ್ತವೆ ಮತ್ತು ಮಾನವ ಕಿವಿಯಿಂದ ಕೇಳಬಹುದಾದ ಸುರಕ್ಷಿತ ಧ್ವನಿ ಮಿತಿ 85 ಡಿಬಿ ಆಗಿದೆ. ಇದರ ಪರಿಣಾಮವೆಂದರೆ ಕಿವಿಯಲ್ಲಿನ ನರಗಳ ಹಾನಿಯುಂಟಾಗುತ್ತದೆ.
ಮೆದುಳಿನ ಹಾನಿ
ನಿದ್ರೆಯ ಸಮಯದಲ್ಲಿ, ಎಲ್ಲಾ ಅಂಗಗಳು ವಿಶ್ರಾಂತಿ ಪಡೆಯುತ್ತವೆ. ದುರದೃಷ್ಟವಶಾತ್ ಇದನ್ನು ಮೆದುಳಿಗೆ ಅನುಭವಿಸಲಾಗುವುದಿಲ್ಲ ಏಕೆಂದರೆ ನೀವು ಸಂಗೀತವನ್ನು ಕೇಳುತ್ತಾ ಮಲಗಿದರೆ, ಮೆದುಳು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವುದಿಲ್ಲ. ಇದರ ಜೊತೆ ಇಯರ್‌ಫೋನ್‌ನಲ್ಲಿರುವ ವಿದ್ಯುತ್ಕಾಂತೀಯ ವಹನವು ಮೆದುಳಿನ ಕೋಶಗಳನ್ನು ಹಾನಿಗೊಳಿಸುತ್ತದೆ.
ನೆಕ್ರೋಸಿಸ್ ಭೀತಿ
ಮಲಗುವಾಗ ನೀವು ಇಯರ್‌ಫೋನ್ ಬಳಸಿದಾಗ ಉಂಟಾಗುವ ಸಾಮಾನ್ಯ ಭಯವೆಂದರೆ ಈ ನೆಕ್ರೋಸಿಸ್, ಕಿವಿ ಮೇಲಿರುವ ಇಯರ್‌ಫೋನ್‌ಗಳು ಒಂದು ಕಡೆ ಒತ್ತಿದಾಗ ಕಿವಿಯ ನಿರ್ಧಿಷ್ಟ ಭಾಗಕ್ಕೆ ರಕ್ತ ಸಂಚಲನವಾಗುವುದಲ್ಲಿ ಅಡೆತಡೆ ಉಂಟಾಗಬಹುದು. ಇದು ಕಿವಿಯ ಅಂಗದಲ್ಲಿರುವ ಜೀವ ಕೋಶಗಳ ಹಾನಿಗೆ ಕಾರಣವಾಗುತ್ತದೆ.
ಇಯರ್‌ಫೋನ್‌ಗಳ ಬಳಕೆಯು ನಮ್ಮ ಜೀವನದಲ್ಲಿ ಸಹಜವಾಗಿ ತುಂಬಾ ಸಹಾಯಕವಾಗಿದೆ, ಆದರೆ ಅದರ ಬಳಕೆಯ ಭಾಗವು ಮಿತಿಯನ್ನು ಮೀರಿದರೆ ಮತ್ತು ನಿದ್ರೆಯ ಸಮಯದಲ್ಲಿ ಸಹ ಬಳಸಿದರೆ ಅದು ಮೇಲಿನಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಾವು 60-60 ನಿಯಮವನ್ನು ಗಮನಿಸಬೇಕು, ಅಂದರೆ ವಾಲ್ಯೂಮ್ ಅನ್ನು ಗರಿಷ್ಠ ಪರಿಮಾಣದ 60 ಪ್ರತಿಶತಕ್ಕೆ ಮಿತಿಗೊಳಿಸಿ ಮತ್ತು ಗರಿಷ್ಠ 60 ನಿಮಿಷಗಳವರೆಗೆ ಮಾತ್ರ ಕಿವಿಗೆ ಹಾಕಿಕೊಳ್ಳುವ ನಿಯಮ ರೂಪಿಸಿಕೊಳ್ಳಬೇಕು. ಅದರಲ್ಲೂ ಇತ್ತೀಚಿಗೆ ಮಕ್ಕಳ ಇಯರ್‌ಫೋನ್ ಬಳಸಿ ವಿಡಿಯೋ ನೋಡುವುದು ಹಾಡು ಕೇಳುವುದು ಹೆಚ್ಚಾಗಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications