Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಡೆಂಗ್ಯೂ, ಜಿಕಾ ಹರಡುವಿಕೆ ತಡೆಯಲು ಸೊಳ್ಳೆಗಳನ್ನೇ ಸೃಷ್ಟಿಸಿದ ಅಮೆರಿಕ..!!
ಇತ್ತೀಚಿಗೆ ಸೊಳ್ಳೆಗಳಿಂದ ಹರಡುವ ವೈರಲ್ ಸೋಂಕುಗಳ ಸಂಖ್ಯೆ ಏರಿಕೆಯಾಗಿರುವುದನ್ನು ನಾವು ಗಮನಿಸಿರಬಹುದು. ಅದರಲ್ಲೂ ಡೆಂಗ್ಯೂ ನಗರವಾಸಿಗಳ ಆತಂಕಕ್ಕೆ ಕಾರಣವಾಗಿದ್ದು ಸುಳ್ಳಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಡೆಂಗ್ಯೂ ಮಹಾಮಾರಿ ಎಲ್ಲರ ಭಯಕ್ಕೆ ಕಾರಣವಾಗಿತ್ತು. ಹಾಗೆ ಸೊಳ್ಳೆಗಳಿದ ಮಲೇರಿಯಾ, ಚಿಕುನ್ ಗುನ್ಯಾ ದಂತಹ ಭೀಕರ ಕಾಯಿಲೆಗಳು ಹರಡುವುದು ಕೂಡ ನೋಡಬಹುದು. ಚಿಕ್ಕ ಗಾತ್ರದ ಸೊಳ್ಳೆ ಮಾನವರ ಜೀವಕ್ಕೆ ಹಾನಿ ಮಾಡಿರುವುದಲ್ಲದೆ ಪ್ರಾಣಹಾನಿಗೂ ಕಾರಣವಾಗುತ್ತಿವೆ.
ಈಗ ಅಮೆರಿಕದಲ್ಲಿ ಸೊಳ್ಳೆಗಳಿಂದ ಹರಡುತ್ತಿದ್ದ ಅನಾರೋಗ್ಯ ಸಮಸ್ಯೆಗಳು ಏರಿಕೆಯಾಗಿದ್ದ ಪರಿಣಾಮ ಅಲ್ಲಿನ ಸಾವು ನೋವಿನ ಪ್ರಮಾಣ ಕೂಡ ಏರಿಕೆಯಾಗಿತ್ತು. ಡೆಂಗ್ಯೂ ಹಾಗೂ ಜಿಕಾ ವೈರಸ್ ಅಮೆರಿಕನ್ನರ ನಿದ್ದೆ ಕೆಡಿಸಿತ್ತು. ಡೆಂಗ್ಯೂ ಹರಡುವಿಕೆಯಿಂದ ಪಾರಾಗಲು ಹಲವು ರೀತಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅವರು ಹುಡುಕಬೇಕಾಯಿತು.

ಆದ್ರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಗಾದೆ ಮಾತಿನಂತೆ ಅಮೆರಿಕ ಇಂತಹ ವೈರಲ್ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಅದಕ್ಕೆ ಕಡಿವಾಣ ಹಾಕಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಸೊಳ್ಳೆಗಳಿಂದ ಹರಡುತ್ತಿರುವ ಹಲವು ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಸೊಳ್ಳೆಗಳನ್ನೇ ಬಳಸಲು ಮುಂದಾಗಿದೆ. ಮುಖ್ಯವಾಗಿ ಡೆಂಗ್ಯೂ ಹಾಗೂ ಜಿಕಾ ವೈರಸ್ ವಿರುದ್ಧ ಹೋರಾಡಲು ಕೃತಕ ಸೃಷ್ಠಿ ಅಥವಾ ತಳೀಯವಾಗಿ ಮಾರ್ಪಡಿಸಿದ ಸೊಳ್ಳೆಗಳನ್ನು ಬಿಡುಗಡೆ ಮಾಡಿದೆ. ಈ ಸೊಳ್ಳೆಗಳು ಪರಿಸರದಲ್ಲಿ ಹರಡಿರುವ ರೋಗ ಹರಡುವ ಎಲ್ಲಾ ಸೊಳ್ಳೆಗಳನ್ನು ನಿಯಂತ್ರಿಸಲಿದೆ ಎಂದು ತಜ್ಞರು ಹೇಳಿದ್ದಾರೆ.
ಫ್ಲೋರಿಡಾದಲ್ಲಿ ಈ ರೀತಿ ಲ್ಯಾಬ್‌ನಲ್ಲಿ ಅಭಿವೃದ್ಧಿ ಪಡಿಸಿರುವ ಸೊಳ್ಳೆಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಬ್ರೆಜಿಲ್, ಕೇಮನ್ ದ್ವೀಪಗಳು, ಪನಾಮ ಮತ್ತು ಮಲೇಷ್ಯಾದಲ್ಲಿ ಯಶಸ್ವಿ ಪ್ರಯೋಗಗಳನ್ನು ನಡೆಸಲಾಗಿದೆ. ಅಲ್ಲಿ ಯಶಸ್ವಿಯಾಗಿ ಸೊಳ್ಳೆಗಳಿಂದ ಹಾನಿ ತಡೆಯಲಾಗಿದೆ. ಚಿಕುನ್ ಗುನ್ಯಾ, ಹಳದಿ ಜ್ವರ, ಸೇರಿ ಹಲವು ರೋಗ ಹರಡುತ್ತಿದ್ದ ಈಡಿಸ್ ಈಜಿಪ್ಟಿಯ ಸೊಳ್ಳೆಯ ಸಂಖ್ಯೆಯು ಶೇ 90ರಷ್ಟು ಕಡಿಮೆ ಮಾಡುವಲ್ಲಿ ಈ ಸೊಳ್ಳೆಗಳ ಕಾರ್ಯ ಯಶಸ್ವಿಯಾಗಿದೆ. ಈ ಈಡಿಸ್ ಈಹಿಪ್ಟಿ ಹೆಣ್ಣು ಸೊಳ್ಳೆಯು ಮಾರಕ ಕಾಯಿಲೆ ಹರಡುತ್ತಿದ್ದ ಪ್ರಬೇಧವಾಗಿತ್ತು. ಹೀಗಾಗಿ ಅದರ ಸಂಖ್ಯೆ ಕಡಿಮೆ ಮಾಡಲು ಈ ಹೊಸ ಪ್ರಯೋಗ ಮಾಡಲಾಗಿ ಯಶಸ್ವಿಯಾಗಲಾಗಿತ್ತು.
ಹೆಣ್ಣು ಸೊಳ್ಳೆಗಳು ತಮ್ಮ ಮೊಟ್ಟೆಗಳನ್ನು ಇಡಬೇಕಾದರೆ ಮಾನವ ರಕ್ತ ಅಥವಾ ಪ್ರಾಣಿಗಳ ರಕ್ತದ ಅಗತ್ಯವಿರಲಿದೆ. ಹೀಗಾಗಿ ಅವು ರಕ್ತ ಹೀರಲು ಮುಂದಾಗುತ್ತವೆ. ಇನ್ನು ಸಂತಾನೋತ್ಪತ್ತಿ ಕಾರ್ಯದಲ್ಲಿ ಗಂಡು ಸೊಳ್ಳೆಗಳು ಪಾಲ್ಗೊಳ್ಳುವ ಕಾರಣ. ಈ ಗಂಡು ಸೊಳ್ಳೆಗಳ ಜೀನ್ ಅನ್ನು ಪ್ರಯೋಗಾಲಯದ ಮೂಲಕ ಬದಲಾಯಿಸಿ ಹೆಣ್ಣು ಸೊಳ್ಳೆಗಳು ಇನ್ನೆಂದು ಸಂತಾನೋತ್ಪತ್ತಿ ಕ್ರಿಯೆ ನಡೆಸಲಾಗದೆ ಮೃತಪಡುವ ಪ್ರಕ್ರಿಯೆ ಇದಾಗಿದೆ. ಹಾಗೆ ಈ ಜೀನ್ ಭವಿಷ್ಯದ ಜೀನ್‌ಗೂ ವರ್ಗಾವಣೆಗೊಳ್ಳುವುದರಿಂದ ಸೊಳ್ಳೆಗಳು ಕ್ರಮೇಣವಾಗಿ ತಮ್ಮ ಸಂತಾನೋತ್ಪತ್ತಿ ಶಕ್ತಿ ಕಳೆದುಕೊಳ್ಳುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಗಂಡು ಸೊಳ್ಳೆಗಳು ರಕ್ತವನ್ನು ಸೇವಿಸುವುದಿಲ್ಲ. ಅವು ಚಿಟ್ಟೆಗಳಂತೆ ಬದುಕುತ್ತವೆ. ವಿಶೇಷ ಅಂದರೆ ಸೊಳ್ಳೆಗಳು ರಕ್ತ ಹೀರಲು ಇರುವ ವಿಶೇಷ ಅಂಗವಾದ ಪ್ರೋಬೊಸಿಸ್ ಎಂಬ ಸೂಜಿಯಂತಹ ಅಂಗ ಇರುವುದಿಲ್ಲ. ಹೀಗಾಗಿ ಗಂಡು ಸೊಳ್ಳೆಗಳು ಕಚ್ಚುವುದಿಲ್ಲ. ಸಂಶೋದಕರು ಈ ಸೊಳ್ಳೆಗಳ ಇಟ್ಟಿದ್ದ ಮೊಟ್ಟಗಳ ಸಂಗ್ರಹಿಸಿ ಲ್ಯಾಬ್‌ನಲ್ಲಿ ಜೀನ್ ಬದಲಾಯಿಸಿದ್ದಾರೆ. ಈ ಸೊಳ್ಳೆಗಳು ಹೆಣ್ಣು ಸೊಳ್ಳೆಗಳೊಂದಿಗೆ ಬೆರೆತಾಗ ಸಂತಾನೋತ್ಪತ್ತಿ ಕ್ರಿಯೆ ಉಂಟಾಗುವುದಿಲ್ಲ. ಹೀಗಾಗಿ ಹೆಣ್ಣು ಸೊಳ್ಳೆಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಹೆಣ್ಣು ಸೊಳ್ಳೆಗಳು ಇಲ್ಲ ಎಂದರೆ ಮಾನವರು ಸೇರಿ ಪ್ರಾಣಿಗಳಿಗೂ ಕೂಡ ಕಚ್ಚುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications