ಮಕ್ಕಳು ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡ್ತಾರಾ? ಇದಕ್ಕೇನು ಕಾರಣ?

ಮಕ್ಕಳಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ. ಆದ್ರೆ 3 ಅಥವಾ 5 ವರ್ಷದ ಒಳಗೆ ಮಕ್ಕಳಲ್ಲಿ ಹಾಸಿಗೆಯಲ್ಲೆ ಮೂತ್ರ ವಿಸರ್ಜನೆ ಮಾಡುವಂತಹ ಅಭ್ಯಾಸ ನಿಂತಿರುತ್ತದೆ. ಈ ವೇಳೆಗಾಗಲೆ ಅವರು ಮಲ ಮೂತ್ರ ವಿಸರ್ಜನೆಯ ಮೇಲೆ ಹತೋಟಿ ಸಾಧಿಸಿರುತ್ತಾರೆ. ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಅವರೇ ಹೇಳುತ್ತಾರೆ. ಆದ್ರೆ ಅಪರೂಪಕ್ಕೆ ಎಂದಾದರು ಹಾಸಿಗೆಯಲ್ಲಿ ಮೂತ್ರ ಮಾಡಬಹುದು.

ಆದ್ರೆ ಶಾಲೆಗೆ ತೆರಳುವ ವಯಸ್ಸಿನಲ್ಲೂ ಕೆಲವು ಮಕ್ಕಳು ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಇದು ಸಾಮಾನ್ಯ ಪ್ರಕ್ರಿಯೆ ಆಗಿರುವುದಿಲ್ಲ. ಇದು ವೈದ್ಯಕೀಯ ಸಲಗಹೆ ಪಡೆಯಬೇಕಾದ ಸ್ಥಿತಿ ಆಗಿದೆ. ಮಕ್ಕಳು 5ಅಥವಾ 6 ವರ್ಷ ಕಳೆದರು ಆಗಾಗ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅದು ಸಾಮಾನ್ಯ ಕ್ರಿಯೆ ಆಗಿರುವುದಿಲ್ಲ.

Understanding Bedwetting In Teens What Are The Underlying Causes
Photo Credit:

ಈ ರೀತಿ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ನಿಲ್ಲಿಸಲು ನೀವು ಹಲವು ರೀತಿಯ ಪ್ರಯತ್ನ ಮಾಡಿರಬಹುದು ಆದ್ರೆ ಇದ್ಯಾವುರಿಂದಲೂ ಅವರು ಮೂತ್ರ ವಿಸರ್ಜನೆಯ ಅಭ್ಯಾಸ ಬಿಡದೆ ಇರಬಹುದು. ಹಾಗೆ ಕೆಲವು ಅವರಿಗೆ ಕಿರಿಕಿರಿ ತರಬಹುದು, ಆದ್ರೆ ನಾವಿಂದು ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದರ ಕುರಿತಾಗಿ ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಅವರ ಬಳಿ ಮತ್ತಷ್ಟು ತಿಳಿದುಕೊಳ್ಳೋಣ.

ನಿದ್ರಿಸುವಾಗ ವ್ಯಕ್ತಿಯು ತಮ್ಮ ಅರಿವಿಲ್ಲದಂತೆಯೇ ಮೂತ್ರವನ್ನು ಹೊರಹಾಕುವ ಸ್ಥಿತಿ ಇದಾಗಿದೆ, ಇದನ್ನು ನಾವು ನೈಟ್ ಎನ್ಯೂರೆಸಿಸ್ ಎಂದು ಕರೆಯುತ್ತೇವೆ ಎಂದು ಅರುಣ್ ಅವರು ವಿವರಿಸಿದ್ದಾರೆ. ಈ ಎನ್ಯೂರೆಸಿಸ್ ಪ್ರಕ್ರಿಯೆಯಲ್ಲಿ ಎರಡು ವಿಧಗಳಿವೆ. ಪ್ರಾಥಮಿಕ ಮತ್ತು ದ್ವಿತೀಯ ಎನ್ಯುರೆಸಿಸ್ ಎಂದು ಕರೆಯಲಾಗುತ್ತದೆ.

ಪ್ರಾಥಮಿಕ ಎನ್ಯುರೆಸಿಸ್ನಲ್ಲಿ ಮಕ್ಕಳು ಯಾವುದೇ ನಿಯಂತ್ರಣವಿಲ್ಲದೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ. ಸಕೆಂಡರಿ ಎನ್ಯುರೆಸಿಸ್‌ನಲ್ಲಿ ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವ ಅಂತರ ಅಧಿಕವಾಗಿರುತ್ತದೆ. ಅಂದರೆ 3 ತಿಂಗಳು ಇಲ್ಲವೆ 6 ತಿಂಗಳಿಗೆ ಒಮ್ಮೆ ಈ ರೀತಿ ಮಾಡಿಕೊಳ್ಳಬಹುದು.

ಈ ಎರಡೂ ಬಗೆಯ ವಿಧಗಳು ಕೂಡ ಸಾಮಾನ್ಯ ಎನ್ನಬಹುದು. ಆದ್ರೆ ಎರಡೂ ಮಕ್ಕಳ ಮೌಲ್ಯಮಾಪನವನ್ನು ಸಮರ್ಥಿಸುತ್ತದೆ ಏಕೆಂದರೆ ಇದು ಆಧಾರವಾಗಿರುವ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಇದು ಸೂಕ್ತ ಸಲಹೆ, ಚಿಕಿತ್ಸೆಯ ಹೊರತಾಗಿ ತಾವಾಗಿಯೇ ಈ ಅಭ್ಯಾಸ ಬಿಡುವುದು ಕಷ್ಟವಾಗಿರುತ್ತದೆ.

ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಲು ಕಾರಣವೇನು?

ತಡವಾದ ಮೆಚ್ಯೂರಿಟಿ: ಮಲ ಮೂತ್ರ ವಿಸರ್ಜನೆಯು ಸಂಪೂರ್ಣವಾಗಿ ಮೆದುಳಿನ ಕಾರ್ಯಕ್ಕೆ ಸಂಬಂಧಿಸಿದ್ದು, ನಮ್ಮ ಮೆದುಳಿನ ಪರಿಪಕ್ವತೆ ಎಷ್ಟರ ಮಟ್ಟಿಗೆ ಬೆಳವಣಿಗೆ ಆಗಿದೆ ಎಂಬುದನ್ನು ಕೂಡ ಇದು ಸೂಚಿಸುತ್ತದೆ. ಸುಮಾರು 90 ಪ್ರತಿಶತದಷ್ಟು ಮಕ್ಕಳು 7ನೇ ವಯಸ್ಸಿನಲ್ಲಿ ಈ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಾರೆ. ಆದರೆ ಕೆಲವು ಮಕ್ಕಳಲ್ಲಿ ಈ ಪ್ರಕ್ರಿತೆ ಇನ್ನೂ ತಡವಾಗಬಹುದು. ಈ ಕೆಲವು ಮಕ್ಕಳಲ್ಲಿ ಸಣ್ಣ ಮೂತ್ರಕೋಶಗಳ ಹೊಂದಿರಬಹುದು. ಇದು ರಾತ್ರಿ ಹೊತ್ತು ಮೂತ್ರವನ್ನು ಸಂಗ್ರಹಿಸಲು ಸಾಧ್ಯವಾಗದೆ ಈ ರೀತಿ ಹಾಸಿಗೆಯಲ್ಲೇ ವಿಸರ್ಜನೆಗೆ ಕಾರಣವಾಗಬಹುದು.

ಗಾಢ ನಿದ್ರೆ ಮತ್ತು ಹಾರ್ಮೋನ್: ಕೆಲವು ಮಕ್ಕಳು ಗಾಢ ನಿದ್ರೆಯಲ್ಲಿದ್ದಾಗ ತಮ್ಮ ಅರಿವಿಲ್ಲದೆ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಆಂಟಿಡಿಯುರೆಟಿಕ್ ಹಾರ್ಮೋನ್ (ವಾಸೊಪ್ರೆಸ್ಸಿನ್ ಅಥವಾ ಎಡಿಹೆಚ್) ರಾತ್ರಿಯಲ್ಲಿ ಕಡಿಮೆ ಮೂತ್ರವನ್ನು ಮಾಡಲು ದೇಹವನ್ನು ಸಂಕೇತಿಸುತ್ತದೆ. ಕೆಲವು ಮಕ್ಕಳಲ್ಲಿ ಈ ಹಾರ್ಮೋನ್ ಪ್ರಮಾಣ ಕಡಿಮೆಯಾಗಿದ್ದರೆ ರಾತ್ರಿ ಸಮಯದಲ್ಲಿ ಅವರು ಮೂತ್ರದ ಮೇಲೆ ಕಡಿವಾಣ ಹಾಕಲಾಗುವುದಿಲ್ಲ.

ಈ ಸಮಸ್ಯೆಗೆ ಚಿಕಿತ್ಸೆ ಏನು?

ದೈಹಿಕ ಪರೀಕ್ಷೆ: ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಮಕ್ಕಳ ಕುಟುಂಸ್ಥರಲ್ಲಿ ಈ ರೀತಿ ಸಮಸ್ಯೆ ಇತ್ತಾ ಎಂಬುದನ್ನು ಅವರು ಪತ್ತೆ ಮಾಡಬೇಕು. ಮೂತ್ರ ವಿಸರ್ಜನೆಯ ಸಮಯದಲ್ಲಿ ಎಚ್ಚರವಾಗಿರುತ್ತಾರೋ ಅಥವಾ ಉರಿ, ಸುಡುವ ಅನುಭವಾಗಿದೆಯೇ ಎಂಬುದು ಸೇರಿ ಕೇಸ್ ಸ್ಟಡಿ ಮುಖ್ಯವಾಗುತ್ತದೆ.

ಮೂತ್ರ ಪರೀಕ್ಷೆ: ಮೂತ್ರ ಪರೀಕ್ಷೆಯೂ ದೇಹದಲ್ಲಿನ ಸಮಸ್ಯೆಗಳ ವಿಶ್ಲೇಷಿಸಲು ಸಹಾಯ ಮಾಡಲಿದೆ. ಹಾಗೆ ಮೂತ್ರಪಿಂಡದ ಅಲ್ಟ್ರಾಸೌಂಡ್ ಪರೀಕ್ಷೆಯಿಂದಲೂ ಸಮಸ್ಯೆ ಪತ್ತೆ ಮಾಡಬಹುದು.

ಸಮಾಲೋಚನೆ: ಇಂತಹ ಸಮಸ್ಯೆ ಹೊಂದಿರುವ ಮಕ್ಕಳಲ್ಲಿ ಆಪ್ತ ಸಮಾಲೋಚನೆ ಕೂಡ ಚಿಕಿತ್ಸೆಯಾಗಿ ನೆರವಾಗುತ್ತದೆ. ಮೊದಲೇ ಹೇಳಿದಂತೆ ಇದು ಮೆದುಳಿನ ಪ್ರಕ್ರಿಯೆಗೆ ಸಂಬಂಧಿಸಿದ ಕ್ರಿಯೆ ಆಗಿದೆ. ಹೀಗಾಗಿ ಅವರ ಬಳಿ ಸಮಾಲೋಚನೆ ಕೂಡ ಮುಖ್ಯವಾಗುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Understanding Bedwetting In Teens: What Are The Underlying Causes

Children experiencing secondary enuresis may wet the bed more frequently, with episodes occurring as often as every 3-6 months, whereas primary enuresis involves involuntary bedwetting.
Story first published: Sunday, January 5, 2025, 21:34 [IST]
X
Desktop Bottom Promotion