Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
5 ವರ್ಷ ಸ್ನಾನ ಮಾಡದ ವೈದ್ಯ.! ದೇಹದಲ್ಲಾದ ಬದಲಾವಣೆ ಏನು ಗೊತ್ತಾ?
ನಾವು ನಿತ್ಯ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಅದರಲ್ಲೂ ಕೆಲವರು ದಿನದಲ್ಲಿ 2 ಅಥವಾ 3 ಬಾರಿ ಸ್ನಾನ ಮಾಡುವವರು ಕೂಡ ಇದ್ದಾರೆ. ಕೆಲವೊಮ್ಮೆ ಅನಿವಾರ್ಯಗಳಿಂದಾಗಿ ಸ್ನಾನ ಮಾಡಲು ಆಗದಿದ್ದಾಗ ನಿದ್ರೆ ಮಾಡಲು ಕೂಡ ಪರದಾಡುವ ಸ್ಥಿತಿ ನಿರ್ಮಾಣ ಆಗುತ್ತೆ. ಸ್ನಾನದಿಂದ ನಮ್ಮ ದೇಹ ಸ್ವಚ್ಛವಾಗುವುದು ಮಾತ್ರವಲ್ಲ, ಬ್ಯಾಕ್ಟೀರಿಯಾ ಮುಕ್ತವಾಗಬಹುದು.
ಇನ್ನು ನಿತ್ಯ ಸ್ನಾನ ಮಾಡುವ ಅಗತ್ಯವಿದೆಯೇ ಎಂದು ಕೇಳಿದ್ರೆ ಎಲ್ಲರು ಹೌದು ಎಂದೇ ಉತ್ತರಿಸುತ್ತಾರೆ. ಹಾಗೆ ಸ್ನಾನದ ಉದ್ದೇಶಕ್ಕಾಗಿ ಅದೆಷ್ಟೋ ಉತ್ಪನ್ನಗಳು ಈಗ ಮಾರುಕಟ್ಟೆಯಲ್ಲಿವೆ. ವಿಶ್ವದಾದ್ಯಂತ ಸಾವಿರಾರು ಕೋಟಿ ವಹಿವಾಟು ನಡೆಸುವ ಒಂದು ವಲಯವೂ ಹೌದು. ಸೋಪು, ಶಾಂಪು, ಪರ್ಪ್ಯೂಮ್ ಹಾಗೆ ಇತ್ಯಾದಿ ಉತ್ಪನ್ನಗಳು ಸ್ನಾನಕ್ಕೆ ಸಂಬಂಧಿಸಿದೆ.

ಆದ್ರೆ ಅಮೆರಿಕನ್ ವೈದ್ಯರೊಬ್ಬರು ನಿತ್ಯ ಸ್ನಾನ ಮಾಡುವುದು ವ್ಯರ್ಥ ಎಂದು ಸಾಬೀತು ಮಾಡಿದ್ದಾರೆ. ಹೌದು ಡಾ. ಜೇಮ್ಸ್ ಹ್ಯಾಂಬ್ಲಿನ್ ಎಂಬಾತ ನಿತ್ಯ ಸ್ನಾನ ಮಾಡುವುದರಿಂದ ಯಾವ ಪ್ರಯೋಜನವಿಲ್ಲ, ಸ್ನಾನದ ಅಗತ್ಯತೆ ನಮ್ಮ ದೇಹಕ್ಕೆ ಇಲ್ಲವೇ ಇಲ್ಲ ಎಂದು ಅವರು ಹೇಳಿದ್ದಾರೆ. ಇದನ್ನು ಅವರು ಸುಮ್ಮನೆ ಹೇಳಿರುವುದಲ್ಲ, ಬದಲಿಗೆ ಅವರು ಬರೋಬ್ಬರಿ 5 ವರ್ಷಗಳ ಸ್ನಾನವನ್ನೇ ಮಾಡದೆ ಈ ಮಾತು ಹೇಳಿದ್ದಾರೆ.
ಈ ಕುರಿತಂತೆ ಅವರ 2020 ಪುಸ್ತಕದಲ್ಲೂ ಉಲ್ಲೇಖಿಸಿದ್ದು, ನಿತ್ಯ ಸ್ನಾನ ಮಾಡುವುದರಿಂದ ಆಗುವ ಲಾಭವೇನು ಎಂಬುದನ್ನು ಪ್ರಶ್ನಿಸಿದ್ದಾರೆ. ಹಾಗೆ ಸ್ನಾನ ಎಂಬುದು ದೈಹಿಕ ಸ್ವಚ್ಛತೆಗಿಂತಲೂ ಹೆಚ್ಚಾಗಿ ದೇಹದ ಸೌಂದರ್ಯ, ಪರಿಮಳ, ಬೇರೆಯವರ ಮೆಚ್ಚಿಸುವ ದೃಷ್ಟಿಯಿಂದ ಸುಗಂಧ ದ್ರವ್ಯ ಬಳಸುವ ಉದ್ದೇಶದಿಂದ ಮಾಡುತ್ತಾರೆ ಎಂಬುದನ್ನು ಕಂಡುಕೊಂಡರು. ಇಲ್ಲಿ ವೈಯಕ್ತಿಕ ಆರೈಕೆ ಅನ್ನುವುದು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಹ್ಯಾಂಬ್ಲಿನ್ ಪ್ರಕಾರ ಸ್ನಾನ ಮಾಡುವುದು ವಿಶೇಷವಾಗಿ ಬಿಸಿನೀರು ಮತ್ತು ಸೋಪಿನಿಂದ ಚರ್ಮದ ನೈಸರ್ಗಿಕ ಎಣ್ಣೆಗಳು, ರಾಸಾಯನಿಕಗಳು ಸೂಕ್ಷ್ಮಜೀವಿಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಚರ್ಮದ ಮೇಲಿನ ಈ ಸೂಕ್ಷ್ಮ ಜೀವಿಗಳು ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾದಂತೆಯೇ. ಇವು ನಮ್ಮ ಚರ್ಮದ ಆರೈಕೆಗೆ ಬಹಳ ಉತ್ತಮ. ಆದ್ರೆ ನಾವು ಕೆಮಿಕಲ್ ಮೂಲಕ ಮತ್ತು ಬಿಸಿ ನೀರಿನ ಮೂಲಕ ಈ ಸೂಕ್ಷ್ಮಾಣುಗಳ ನಾಶಕ್ಕೆ ಕಾರಣವಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಅತೀಯಾದ ಸ್ನಾನ ಎಂದರೆ ಅಥವಾ ಬಿಸಿ ನೀರಿನ ಸ್ನಾನ ಎಂದರೆ ಕಾಡು ಕತ್ತರಿಸಿದಂತೆ ಎಂದು ಅವರು ಹೇಳಿದ್ದಾರೆ. ಕಾಡು ಕತ್ತರಿಸಿದರೆ ಆ ಜಾಗ ಸ್ವಚ್ಛವಾಗಿ ಕಾಣಬಹುದು, ಆದ್ರೆ ಪರಿಸರಕ್ಕೆ ಭೂಮಿಗೆ ಇದು ಹಾನಿಕಾರಕ ಎಂದು ಅವರು ಹೇಳಿದ್ದಾರೆ. ನೈರ್ಮಲ್ಯ ಎಂದರೆ ಸೀನುವಾಗ, ಶೌಚಾಲಯ ಬಳಸುವಾಗ ಕೈಗೆ ಸೋಪು ಅಥವಾ ಹ್ಯಾಂಡ್ ವಾಶ್ ಮೂಲಕ ಸ್ವಚ್ಛ ಮಾಡಿಕೊಳ್ಳುವುದು ಅತ್ಯುತ್ತಮ ಸ್ವಚ್ಛತಾ ವಿಧಾನವಾಗಿದೆ. ಆದರೆ ಸ್ನಾನ ಎಂಬುದು ಕೇವಲ ದೇಹದ ಆರೈಕೆಯಾಗಿರದೆ ಈಗ ಸೌಂದರ್ಯ ಕಾರಕ ಆಗಿ ಬದಲಾಗಿದೆ ಎಂದಿದ್ದಾರೆ.
ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸ್ನಾನ ಮಾಡುತ್ತಿರುವುದ ವ್ಯರ್ಥ. ನಮ್ಮ ದೇಹವೇ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತದೆ. ನಾವು ಪ್ರತಿ ದಿನ ಸ್ನಾನ ಮಾಡಬೇಕೆ ಅಥವಾ ಇದು ರೂಢಿಗತವಾಗಿ ಬಂದಿದೆಯೇ? ಇಲ್ಲದೆ ಇದೊಂದು ಮಾರ್ಕೆಟಿಂಗ್ ತಂತ್ರವೇ ಎಂಬುದು ಇನ್ನು ಪ್ರಶ್ನೆಯಾಗಿ ಉಳಿದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
