Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಬಿಳಿ ಕೂದಲು ಕಪ್ಪಾಗಿಸಲು 7 ದಿನ ಸಾಕು..! ಇಲ್ಲಿದೆ ಟಿಪ್ಸ್!
ನೀವು ಈ ಇತ್ತೀಚಿನ ಕಾಲದಲ್ಲಿ ಯುವಕ ಹಾಗೂ ಯುವತಿಯರು ಹಲವರು ರೀತಿಯ ಸಮಸ್ಯೆ ಎದುರಿಸುತ್ತಿರುವು ನೋಡಿರಬಹುದು. ಒಂದಲ್ಲಾ ಒಂದು ರೀತಿಯ ಅನಾರೋಗ್ಯ ಸಮಸ್ಯೆಗೆ ಅವರು ಒಳಗಾಗಿರುತ್ತಾರೆ. ಇದಕ್ಕೆ ಹತ್ತು ಹಲವು ಕಾರಣಗಳು ಸಹ ಇರುತ್ತವೆ. ಅದ್ರಲ್ಲೂ ಯುವಕ ಯುವತಿಯರ ಇಂದಿನ ಸಮಸ್ಯೆಗಳಲ್ಲಿ ಈ ತಲೆಕೂದಲು ಬೆಳ್ಳಗಾಗುವುದು ಸಹ ಒಂದಾಗಿದೆ.
ಅವಧಿ ಮುನ್ನವೇ ತಲೆ ಕೂದಲು ಬಿಳಿಯಾಗುವುದು ಮಾನಸಿಕವಾಗಿ ಯುವ ಸಮುದಾಯವನ್ನು ಮತ್ತಷ್ಟು ಕುಗ್ಗಿವಂತೆ ಮಾಡುತ್ತದೆ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲೇ ಕೆಲವರಿಗೆ ಈ ಸಮಸ್ಯೆ ಎದುರಾಗುತ್ತದೆ. ಈ ಬಿಳಿ ಕೂದಲು ತಡೆಗಟ್ಟಲು ಅವರು ವೈದ್ಯರ ಮೊರೆ ಹೋಗಿರುತ್ತಾರೆ. ಇಲ್ಲವೆ ಮಾರುಕಟ್ಟೆಯಲ್ಲಿ ಸಿಗುವ ಹತ್ತಾರು ರೀತಿಯ ಉತ್ಪನ್ನಗಳ ಬಳಸಲು ಮುಂದಾಗಿರುತ್ತಾರೆ.

ಆದರೆ ನಾವು ಮನೆಮದ್ದು ಬಳಸೋ ಮೂಲಕ ಬಿಳಿ ಕೂದಲನ್ನು ಕಪ್ಪಗಾಗಿಸಬಹುದು. ಹಾಗಾದ್ರೆ ಬಿಳಿ ಕೂದಲು ಕಪ್ಪಗಾಗಿಸಲು ಏನುಮಾಡಬೇಕು ಅನ್ನೋದನ್ನ ನಾವಿಂದು ತಿಳಿದುಕೊಳ್ಳೋಣ.
ಸೀಬೆ ಎಲೆಯ ಪೇಸ್ಟ್
ಸೀಬೆ ಹಣ್ಣೂ ಅಥವಾ ಪೇರಲೆ ಹಣ್ಣಿನ ಗಿಡ ನೀವು ನೋಡಿರುತ್ತೀರಿ. ಈ ಗಿಡದ ಎಲೆಗಳು ಹಾಗೂ ಮೆಹಂದಿ ಪೌಡರ್ ಪೇಸ್ಟ್ ಮಾಡಿ ಬಿಳಿ ಕೂದಲು ಸಮಸ್ಯೆ ಬಗೆಹರಿಸಬಹುದು. ಈ ಮನೆಮದ್ದು ಹಚ್ಚಿದರೆ ನೀವು ಮುಂದೆ 50 ವರ್ಷವಾದರು ಬಿಳಿ ಕೂದಲು ಬರಲು ಸಾಧ್ಯವಿಲ್ಲ. ಎಲೆಯನ್ನು ಪೇಸ್ಟ್ ಮಾಡಿ ಅದಕ್ಕೆ ಅಷ್ಟೇ ಪ್ರಮಾಣದ ಮೆಹಂದಿ ಪುಡಿ ಹಾಕಬೇಕು. ಬಳಿಕ ಇದಕ್ಕೆ 50 ಎಂಎಲ್ ನಿಂಬೆ ಹಣ್ಣಿನ ರಸ ಸೇರಿಸಿ ಅದನ್ನು ಕಬ್ಬಿಣದ ಪಾತ್ರೆಗೆ ಹಾಕಿ ಇಡಬೇಕು. ಇದು 10 ದಿನಗಳ ಕಾಲ ಹಾಗೆಯೆ ಇಡಬೇಕು. ಬಳಿಕ ಅದನ್ನು ನಿಮ್ಮ ತಲೆ ಕೂದಲಿಗೆ ಹಚ್ಚಬೇಕು. ರಾತ್ರಿ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಬೇಕು. ಬೆಳಗ್ಗೆ ಎದ್ದು ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ತಲೆ ಸ್ನಾನ ಮಾಡಬೇಕು.
ಬಳಿಕ ಮಧ್ಯಾಹ್ನದ ಹೊತ್ತಿಗೆ ಅಂಟುವಾಳ ಅಥವಾ ಮುಲ್ತಾನಿ ಮುಟ್ಟಿ ಹಾಕಿಕೊಂಡು ತಲೆ ಸ್ನಾನ ಮಾಡಬೇಕು. ಇಷ್ಟಾದರೆ ಇಮ್ಮ ಕೂದಲು ಕಪ್ಪಾಗುತ್ತದೆ. ಇದು ಬಹಳ ವರ್ಷಗಳ ಕಾಲ ನಿಮಗೆ ಬಿಳಿ ಕೂದಲಿನಿಂದ ಪಾರು ಮಾಡಲಿದೆ.
ಪಾಲಕ್ ಮೆಂತ್ಯೆ ಸೊಪ್ಪು
ಆರಂಭದಲ್ಲಿ ನಿಮಗೆ ಅವಧಿ ಮುನ್ನವೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ ಎಂದು ಅನಿಸಿದರೆ ತಡಮಾಡಬಾದರದು. ಇದಕ್ಕೆ ಆರಂಭದಲ್ಲೇ ಮನೆಮದ್ದುಗಳ ಆರೈಕೆ ಮಾಡುತ್ತಾ ಹೋಗಿ. ಅದರ ಭಾಗವಾಗಿ ಕಬ್ಬಿಣಾಂಶ ಅಧಿಕವಿರುವ ಆಹಾರ ಪದಾರ್ಥಗಳ ಸೇವಿಸಿ. ಅದರಲ್ಲೂ ಪಾಲಕ್ ಸೊಪ್ಪು ಹಾಗೂ ಮೆಂತ್ಯೆ ಸೊಪ್ಪು ಹೆಚ್ಚಾಗಿ ನಿಮ್ಮ ಆಹಾರದ ಪಾಲಿನಲ್ಲಿ ಇರುವಂತೆ ನೋಡಿಕೊಳ್ಳಿ.
ಮೊಟ್ಟೆ
ಮೊಟ್ಟೆಯಲ್ಲಿ ಕೂದಲು ಕಪ್ಪಾಗಲು ಬೇಕಾದ ವಿಟಮಿನ್ ಇದೆ. ಹೀಗಾಗಿ ಮೊಟ್ಟೆಯ ಬಿಳಿಯ ಭಾಗವನ್ನು ತಲೆಗೆ ಹಚ್ಚಿಕೊಳ್ಳಬೇಕು. 2 ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತೆಗೆದುಕೊಂಡು, ನಿಂಬೆ ರಸ ಸೇರಿಸಿ ಕೂದಲಿಗೆ ಹಚ್ಚಿ ತೊಳೆಯುವುದರಿಂದ ಬಿಳಿ ಕೂದಲು ಹಾಗೂ ಕೂದಲು ಹೆಚ್ಚು ಶೈನ್ ಆಗಲಿದೆ.
ಬೆಟ್ಟದ ನೆಲ್ಲಿ
ಬೆಟ್ಟದ ನೆಲ್ಲಿಯ ಪೌಡರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯುವುದು ಹಾಗೂ ಅದರ ಪೇಸ್ಟ್ ಅನ್ನು ಇಲ್ಲವೆ ನೆಲ್ಲಿಕಾಯಿಯನ್ನು ಸೇರವಾಗಿ ಸೇವಿಸುವುದರಿಂದಲೂ ಬಿಳಿ ಕೂದಲು ಆಗುವುದನ್ನು ತಡೆಯಬಹುದು.
ಮೆಹಂದಿ ಪ್ಯಾಕ್
ನೀವು ತಲೆ ಕೂದಲು ಕಪ್ಪಾಗಲು ಮೆಹಂದಿ ಬಳಸೋದು ನೋಡಿರುತ್ತೀರಿ, ಆದ್ರೆ ಎಲ್ಲಾ ಮೆಹಂದಿ ಅಲ್ಲ ಬದಲಿಗೆ ದುಬಾರಿ ಬೆಲೆಯ ಒಳ್ಳೆಯ ಮೆಹಂದಿ ಮಾತ್ರವೇ ಇದಕ್ಕೆ ಬಳಸಿ. ಮೆಹಂದಿ ಪೌಡರ್ ತೆಗೆದುಕೊಂಡು ಅದಕ್ಕೆ ನೀಲಗಿರಿ ಎಣ್ಣೆಯನ್ನ 2 ಡ್ರಾಪ್ ಹಾಕಿ ಬಳಿಕ ಅದಕ್ಕೆ ಲವಂಗ ಎಣ್ಣೆ 2 ಹನಿ ಹಾಕಿ ಚೆನ್ನಾಗಿ ಕಲಸಿಕೊಂಡು ಅದನ್ನು ಮುಚ್ಚಿಡಿ. ಇದಕ್ಕೆ ಸ್ವಲ್ಪ ನೀರು ಹಾಕಿ ಬಿಡಿ. ಬೆಳಗ್ಗೆ ಎದ್ದು ತಲೆಗೆ ಹಚ್ಚಿಕೊಳ್ಳಿ. ಬಳಿಕ ಬರಿ ನೀರಿನಿಂದ ತೊಳೆಯಬೇಕು. ತೊಳೆಯುವಾಗ ಸೋಪು ಶಾಂಪು ಹಾಕಬಾರದು. ಈ ರೀತಿ ವಾರದಲ್ಲಿ 2 ಬಾರಿ ಮಾಡಿ ಫಲಿತಾಂಶ ನಿಮ್ಮ ಮುಂದೆ ಇರಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

