Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶೀತ ಸಮಸ್ಯೆಗೆ ಮನೆಮದ್ದು ಮಾಡಿದ ಪೋಷಕರು: ಪ್ರಾಣ ಕಳೆದುಕೊಂಡ 8 ತಿಂಗಳ ಮಗು!!
ಮಳೆಗಾಲದ ಸಮಯದಲ್ಲಿ ಚಿಕ್ಕ ಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ಸಾಮಾನ್ಯ. ಅದ್ರಲ್ಲೂ ಮಕ್ಕಳು ಬಹುಬೇಗ ಅನಾರೋಗ್ಯಕ್ಕೆ ಒಳಗಾಗುವುದು ನೊಡಬಹುದು. ಆದ್ರೆ ಎಲ್ಲಾ ಸಮಯದಲ್ಲೂ ನಾವು ಶೀತ, ಕೆಮ್ಮು, ಜ್ವರ ಇದ್ದಾಗ ಆಸ್ಪತ್ರೆಗೆ ತೆರಳುವುದು ಇಲ್ಲವೆ ತಕ್ಷಣ ಮೆಡಿಕಲ್‌ನಿಂದ ಮಾತ್ರೆಗಳ ತಂದು ಸೇವಿಸುವುದಿಲ್ಲ. ಬದಲಿಗೆ ಮನೆ ಮದ್ದಿನ ಮೊರೆ ಹೋಗುವುದು ನೋಡಬಹುದು.
ಶೀತ, ಕೆಮ್ಮಿನಂತಹ ಸಣ್ಣ ಪುಟ್ಟ ಸಮಸ್ಯೆಗಳ ಬಗೆಹರಿಸಲು ನಾವು ಮನೆಯಲ್ಲೇ ಮದ್ದು ಮಾಡುತ್ತೇವೆ. ಅದು ಪರಿಣಾಮಕಾರಿಯೂ ಹೌದು. ಹಾಗೆ ಈ ಮನೆ ಮದ್ದುಗಳು ಕೆಲವೊಮ್ಮೆ ಅಡ್ಡಪರಿಣಾಮ ಉಂಟು ಮಾಡುವುದು ಸಹ ನೋಡಬಹುದು. ಅದ್ರಲ್ಲೂ ಇಲ್ಲೊಂದು ಘಟನೆಯಲ್ಲಿ 8 ತಿಂಗಳ ಮಗುವೊಂದು ಮನೆಮದ್ದಿನ ಪರಿಣಾಮ ಪ್ರಾಣ ಕಳೆದುಕೊಂಡಿದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂತಹದೊಂದು ಘಟನೆ ವರದಿಯಾಗಿದೆ ಉಸಿರಾಟ ಸಮಸ್ಯೆಗೆ ತುತ್ತಾಗಿದ್ದ 8 ತಿಂಗಳ ಮಗುವಿಗೆ ಮನೆಮದ್ದು ನೀಡಿದ ಬಳಿಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಚೆನ್ನೈನ ವಲ್ಲವಬ್ ನಗರದಲ್ಲಿ 8 ತಿಂಗಳ ಮಗುವಿಗೆ ಶೀತ ಹಾಗೂ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ ಮನೆಯಲ್ಲಿದ್ದ ಮೆಂಥಾಲ್ ಮಿಶ್ರತ ಬಾಮ್, ಕರ್ಪೂರದ ನೀರಿನ ಮಿಶ್ರಣ ತಯಾರಿಸಲಾಗಿತ್ತು.
ಇದು ಬಹಳ ಘಾಟು ಮತ್ತು ರಾಸಾಯನಿಕ ಕ್ರಿಯೆಗೆ ಒಳಗಾಗಿ ಮತ್ತಷ್ಟು ಸುವಾಸೆ ತರಿಸುತ್ತದೆ. ಇದನ್ನು ಮಗುವಿನ ಮೂಗಿನ ಬಳಿ ಹಚ್ಚಲಾಗಿತ್ತು. ಈ ಗಾಳಿ ಉಸಿರಾಡಿದರೆ ಕಟ್ಟಿರುವ ಮೂಗು ಸರಿಯಾಗಲಿದೆ, ಹಾಗೆ ಶೀತ ಕಡಿಮೆಯಾಗಲಿದೆ ಎಂದು ಭಾವಿಸಿದ್ದರು, ಆದ್ರೆ ಉಸಿರಾಟ ಸಮಸ್ಯೆ ತೀವ್ರಗೊಂಡಿತ್ತು. ತಕ್ಷಣ ಮಗುವನ್ನು ಹತ್ತಿರದ ಎಗ್ಮೋರ್ ಮಕ್ಕಳ ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೆ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ಹೇಳೋದೇನು?
ಈ ಘಟನೆ ಸಂಬಂಧವಾಗಿ ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ. ಆದ್ರೆ ಆಸ್ಪತ್ರೆಯ ಮಕ್ಕಳ ತಜ್ಞರಾಗಿರುವ ಡಾ. ವಿಜಯ್ ಪ್ರಕಾರ, ಮಕ್ಕಳಿಗೆ ಈ ರೀತಿಯ ಉತ್ಪನ್ನಗಳನ್ನು ರೆಕಮೆಂಡ್ ಮಾಡುವುದಿಲ್ಲವಂತೆ. ಈ ಉತ್ಪನ್ನಗಳು ರೋಗ ಲಕ್ಷಣಗಳಿಗೆ ಪರಿಹಾರ ನೀಡಬಹುದಷ್ಟೇ ಆದರೆ ರೋಗವನ್ನು ಪರಿಹರಿಸುವುದಿಲ್ಲ. ಅವು ಶಿಶುಗಳಿಗೆ ಸೂಕ್ತವಲ್ಲ. ಕರ್ಪೂರ, ವಿಕ್ಸ್ ಸಂಬಂಧಿ ಸಾವುಗಳ ಬಹಳ ಅಪರೂಪ ಎಂದು ಅವರು ಹೇಳಿದ್ದಾರೆ.
ಚಿಕ್ಕ ಮಕ್ಕಳಲ್ಲಿ ವಿಶೇಷವಾಗಿ ಶಿಶುಗಳಲ್ಲಿ, ಹಠಾತ್ ಸಾವುಗಳು ಹೆಚ್ಚಾಗಿ ತೀವ್ರವಾದ ಸೋಂಕುಗಳ ಸಮಯದಲ್ಲಿ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿರಲಿದೆ. ಮಗುವಿನಲ್ಲಿ ಉಸಿರಾಟ ಸಂಬಂಧಿ ಸಮಸ್ಯೆ ಇದ್ದಿರಬಹುದು. ಈ ಸಮಯದಲ್ಲಿ ಮನೆಮದ್ದು ನೀಡುವುದು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಹಾಗೆ ಮೂರು ವರ್ಷದೊಳಗಿನ ಮಕ್ಕಳಿಗೆ ಈ ರೀತಿ ಯಾವುದೇ ಮನೆಮದ್ದುಗಳ ಶಿಫಾರಸು ಮಾಡುವುದಿಲ್ಲ. ಕೆಲವು ತೀವ್ರ ವಾಸನೆ ಮಕ್ಕಳಲ್ಲಿನ ಕಿರಿದಾದ ವಾಯುಮಾರ್ಗಗಳ ಕೆರಳಿಸಬಹುದು. ಇದು ಉಸಿರಾಟ ಸಮಸ್ಯೆ ಹೆಚ್ಚಾಗಲು ಕಾರಣವಾಗಬಹುದು ಎಂದು ಡಾ ವಿಜಯ್ ಹೇಳಿದ್ದಾರೆ.
ಮನೆ ಮದ್ದು ಬದಲಿಗೆ ಬೇರೇನು ಮಾಡಬೇಕು?
ಮಕ್ಕಳಲ್ಲಿ ಈ ರೀತಿಯ ಅನಾರೋಗ್ಯ ಸಮಸ್ಯೆಗಳು ಎದುರಾದಾಗ ಮನೆಮದ್ದು ನೀಡುವುದನ್ನು ತಪ್ಪಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಹಾಗೆ ಓವರ್ ದಿ ಕೌಂಟರ್ ಔಷಧಿ ಕೂಡ ಬಳಸಬೇಡಿ ಎನ್ನುತ್ತಾರೆ. ಶಿಶುಗಳು ಹಾಗೆ ಮಕ್ಕಳಲ್ಲಿ ಈ ರೀತಿ ಸಮಸ್ಯೆಗಳಿದ್ದರೆ ನೇರವಾಗಿ ವೈದ್ಯರ ಬಳಿ ಕರೆದುಕೊಂಡು ಬರಬೇಕು ಎಂದು ಸಲಹೆ ನೀಡಲಾಗುತ್ತದೆ. ವೈದ್ಯರ ಶಿಫಾರಸಿನ ಮೇರೆಗೆ ಮನೆಯಲ್ಲಿ ಯಾವ ರೀತಿ ಮದ್ದುಗಳ ಬಳಸಬೇಕು ಎಂದು ಅರಿತುಕೊಳ್ಳಿ. ಶಿಶುಗಳ ದೇಹ ಮನೆಮದ್ದುಗಳ ಪರಿಣಾಮಗಳ ಎದುರಿಸುವಷ್ಟು ಶಕ್ತಿ ಪಡೆದಿರುವುದಿಲ್ಲ ಎಂದು ಡಾ. ವಿಜಯ್ ಹೇಳಿದ್ದಾರೆ.



Click it and Unblock the Notifications