Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರುಳಿನ ಆರೋಗ್ಯ ಕಾಪಾಡೋದು ಹೇಗೆ? ಈ 7 ಪ್ರಿಬಯಾಟಿಕ್ ಫುಡ್ ತಿನ್ನಿ.. ಹೊಟ್ಟೆ ಫುಲ್ ಕ್ಲೀನ್
ಮಳೆಗಾಲವು (Monsoon) ಹಲವು ಆರೋಗ್ಯ ಸಮಸ್ಯೆಗಳನ್ನು ತರಬಹುದು. ಆದರೆ, ಇವೆಲ್ಲವನ್ನೂ ಎದುರಿಸಲು ಉತ್ತಮ ಕರುಳಿನ ಆರೋಗ್ಯ ಅತ್ಯಗತ್ಯ. ಹೌದು, ನಾವು ಪ್ರತಿದಿನ ತಿನ್ನುವ ಆಹಾರವು ನಮ್ಮ ಕರುಳಿನ ಆರೋಗ್ಯದ (Gut Health) ಮೇಲೆ ಪರಿಣಾಮ ಬೀರುತ್ತದೆ. ಯಾವುದರಲ್ಲಿ ಹೆಚ್ಚು ಪ್ರೋಟೀನ್ (Protein-Rich food) ಇದೆ? ತಿನ್ನುವುದಕ್ಕೂ ಮುನ್ನ ಇದನ್ನು ತಿಳಿದುಕೊಳ್ಳಿ. ನಾವು ಕರುಳಿನ ಆರೋಗ್ಯಕ್ಕೆ ಟಾಪ್ 7 ಅದ್ಭುತ ಪ್ರಿಬಯಾಟಿಕ್ (Prebiotics) ಆಹಾರಗಳ ಬಗ್ಗೆ ತಿಳಿಸಲಿದ್ದೇವೆ. ತಕ್ಷಣವೇ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಅದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.
ಕೆಲವು ಆಹಾರಗಳಲ್ಲಿನ ನೈಸರ್ಗಿಕ ಪದಾರ್ಥಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆರೋಗ್ಯಕರ ಆಹಾರಗಳಿಗಿಂತ ಬೇಗನೆ ಸಿಗುವ ಫಾಸ್ಟ್‌ಫುಡ್‌ಗಳನ್ನು ಅವಲಂಬಿಸುತ್ತಿದ್ದಾರೆ. ಇದರಿಂದ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಕಡಿಮೆಯಾದರೆ ಜೀರ್ಣಶಕ್ತಿ ಕುಂದಿ ಆರೋಗ್ಯ ಸಮಸ್ಯೆಗಳು ಬರುತ್ತವೆ. ಈ ಪರಿಸ್ಥಿತಿಯನ್ನು ಸುಧಾರಿಸಲು, ನಮ್ಮ ಅಡುಗೆಯಲ್ಲಿ ಬಳಸುವ ನೈಸರ್ಗಿಕ ಪದಾರ್ಥಗಳು ಪ್ರಿಬಯಾಟಿಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಕರುಳಿನ ಆರೋಗ್ಯಕ್ಕೆ ಸಹಕರಿಸುವ ಆಹಾರಗಳು
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಫ್ರಕ್ಟೂಲಿಗೋಸ್ಯಾಕರೈಡ್ಸ್ ಎಂಬ ಅಂಶವಿದೆ. ಇದು ದೊಡ್ಡ ಕರುಳಿನಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಮೂಳೆಗಳು ಬಲವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ಹೀಗಾಗಿ, ಪ್ರತಿದಿನ ಬಾಳೆಹಣ್ಣು ತಿನ್ನುವುದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ.
ಆಲೂಗಡ್ಡೆ
ಬೇಯಿಸಿದ ಆಲೂಗಡ್ಡೆ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ, ಹೆಚ್ಚು ನಿರೋಧಕ ಶಕ್ತಿಯನ್ನು ನೀಡುವ ಪಿಷ್ಟ ಪದಾರ್ಥ (resistant starch) ದೊರೆಯುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು, ಹಸಿವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಒಂದು ಪ್ರಿಬಯಾಟಿಕ್ ಆಗಿದೆ. ಅಷ್ಟೇ ಅಲ್ಲ ಆಲೂಗಡ್ಡೆಯಲ್ಲಿರುವ ಈ ಪಿಷ್ಟ ಪದಾರ್ಥವು ನಿಮ್ಮ ಕರುಳಿನಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾವನ್ನು ನಿಯಂತ್ರಿಸಿ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಸೇಬು
ಆಪಲ್ ಅಥವಾ ಸೇಬಿನಲ್ಲಿ ಕರಗುವ ನಾರಿನಂಶ ಪೆಕ್ಟಿನ್ ಹೆಚ್ಚಾಗಿರುತ್ತದೆ. ಇದು ಕರುಳಿನ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಉತ್ತಮ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಬೆಂಬಲ ನೀಡುತ್ತದೆ. ಆಪಲ್ ತಿನ್ನುವುದರಿಂದ ಕರುಳು ಸರಿಯಾಗಿ ಕೆಲಸ ನಿರ್ವಹಿಸುತ್ತದೆ.
ಓಟ್ಸ್
ಓಟ್ಸ್‌ನಲ್ಲಿ ಬೀಟಾ ಗ್ಲೂಕಾನ್ ಎಂಬ ಕರಗುವ ನಾರಿನಂಶ ಇದೆ. ಇದು ಕರುಳಿನಲ್ಲಿನ ಕೊಬ್ಬನ್ನು ಕಡಿಮೆ ಮಾಡಿ, ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಒಳ್ಳೆಯ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಕಾರಿ.
ಕಡಲೆಕಾಳು
ಕಡಲೆಯಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಇದು ಜೀರ್ಣಕ್ರಿಯೆಗೆ, ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆಗಾಗ ಬೇಯಿಸಿದ ಕಡಲೆಕಾಳು ತಿನ್ನುವುದರಿಂದ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗೆ ಪೋಷಣೆ ಸಿಗುತ್ತದೆ. ಇದು ಕರುಳಿನಲ್ಲಿ ಲ್ಯಾಕ್ಟೋಬಾಸಿಲ್ಲಸ್‌ನಂತಹ ಒಳ್ಳೆಯ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ. ಇದು ಸಹ ಕರುಳಿನ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದನ್ನು ಆಗಾಗ ಅಡುಗೆಯಲ್ಲಿ ಸೇರಿಸುವುದರಿಂದ ಡಬಲ್ ಪ್ರಿಬಯಾಟಿಕ್ ಫೈಬರ್ಸ್ ರೂಪದಲ್ಲಿ ಒಳ್ಳೆಯ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ಕೂಡ ಸುಧಾರಿಸುತ್ತದೆ.
ಸೂರ್ಯಕಾಂತಿ ಬೀಜಗಳು
ಸೂರ್ಯಕಾಂತಿ ಬೀಜಗಳು ದೇಹಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಲಿಗ್ನಿನ್ ಗಳು, ಸೆಲ್ಯುಲೋಸ್‌ನಂತಹ ನಾರಿನ ಅಂಶವು ಹೆಚ್ಚಾಗಿವೆ. ಇವು ಜೀರ್ಣ ವ್ಯವಸ್ಥೆಯನ್ನು ಸರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತವೆ. ಮಲಬದ್ಧತೆಯನ್ನು ಕಡಿಮೆ ಮಾಡಲು ಸೂರ್ಯಕಾಂತಿ ಬೀಜಗಳು ಸಹಾಯ ಮಾಡುತ್ತವೆ.
ಆರೋಗ್ಯವಂತ ಶರೀರಕ್ಕೆ ಆರೋಗ್ಯಕರ ಆಹಾರ ಅತ್ಯಗತ್ಯ. ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ನಾವು ಏನನ್ನು ಸೇವಿಸುತ್ತೇವೆ ಹಾಗೂ ಯಾವ ಪ್ರಮಾಣದಲ್ಲಿ ಸೇವಿಸುತ್ತೇವೆ ಎಂಬುದು ಬಹಳ ಮುಖ್ಯ. ಈ ರೀತಿ ನೀವು ಪ್ರತಿದಿನದ ಆಹಾರ ಅಥವಾ ಅಡುಗೆಯಲ್ಲಿ ಸೇರಿಸಿಕೊಳ್ಳುವ ಈ ನೈಸರ್ಗಿಕ ಪದಾರ್ಥಗಳು ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಫಾಸ್ಟ್‌ಫುಡ್ ಕಡಿಮೆ ಮಾಡಿ, ಈ ಆರೋಗ್ಯಕರ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ನಿಮ್ಮ ಜೀರ್ಣಶಕ್ತಿ ಚೆನ್ನಾಗಿರುತ್ತದೆ. ನೀವು ಸಹ ಆರೋಗ್ಯವಾಗಿರುತ್ತೀರಿ. ತಜ್ಞರು ಸಹ ಕರುಳಿನ ಆರೋಗ್ಯಕ್ಕಾಗಿ ಈ ನೈಸರ್ಗಿಕ ಪ್ರಿಬಯಾಟಿಕ್‌ಗಳ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

