Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಥೈರಾಯ್ಡ್ ಸಮಸ್ಯೆಯಿದೆ ಎಂದು ಸೂಚಿಸುವ 10 ಲಕ್ಷಣಗಳಿವು, ನಿರ್ಲಕ್ಷ್ಯ ಬೇಡ
ಥೈರಾಯ್ಡ್ ಸಮಸ್ಯೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ, ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಅದರಲ್ಲೂ ಯೌವನ ಪ್ರಾದಲ್ಲಿಯೇ ಸಮಸ್ಯೆ ಕಂಡು ಬಂದರೆ ಇದರಿಂದ ಗರ್ಭಧಾರಣೆಗೆ ತೊಂದರೆಯಾಗುವುದು.ಅಲ್ಲದೆ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಅಪಾಯ ಕೂಡ ಇದೆ ಆದ್ದರಿಂದ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಾಗ ಕೂಡಲೇ ಚಿಕಿತ್ಸೆ ಪಡೆಯುವುದು ಒಳ್ಳೆಯದು:
ಥೈರಾಯ್ಡ್‌ನ ಈ 10 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ

ಬೇಗನೆ ತಲೆಸುತ್ತುವುದು
ಮೈಕೈ ನೋವು
ಕಣ್ಣುಗಳು ಡ್ರೈಯಾಗುವುದು
ಗಳಗಂಡ ರೋಗ
ತೂಕ ಹೆಚ್ಚಾಗುವುದು ಅಥವಾ ಅತಿಯಾಗಿ ತೂಕ ಕಡಿಮೆಯಾಗುವುದು
ಹಸಿವು ಇಲ್ಲದಿರುವುದು ಅಥವಾ ಹಸಿವು ಹೆಚ್ಚಾಗುವುದು
ಕೆಂಪು ರಕ್ತಕಣಗಳು ಕಡಿಮೆಯಾಗುವುದು
ಅಸಹಜ ಹೃದಯ ಬಡಿತ
ಖಿನ್ನತೆ
ಎದೆನೋವು
ಥೈರಾಯ್ಡ್ ನಿಂದ ಉಂಟಾಗುವ ತೊಂದರೆಗಳು
ಥೈರಾಯ್ಡ್ ಹಾರ್ಮೋನ್‌ಗಳು ನಿಯಂತ್ರಣದಲ್ಲಿ ಇರದಿದ್ದರೆ ಮೂಳೆಗಳಲ್ಲಿ ನೋವು, ಹೃದಯಾಘಾತ, ಮರೆವು, ಸ್ನಾಯುಗಳು ಬಲಹೀನವಾಗುವುದು, ರಕ್ತಹೀನತೆ, ಬಂಜೆತ, ಗರ್ಭಪಾತ ಈ ಬಗೆಯ ಅಪಾಯಗಳಿವೆ.
ಥೈರಾಯ್ಡ್ ದೇಹದ ಯಾವುದೇ ಭಾಗಕ್ಕೆ ಹಾನಿಯುಂಟು ಮಾಡಬಹುದು
ಉದಾಹರಣೆಗೆ ಹೈಪೋಥೈರಾಯ್ಡ್ ಸಮಸ್ಯೆಯಿದ್ದರೆ ಹೃದಯಾಘಾತ ಉಂಟಾಗಬಹುದು, ಹೈಪರ್ ಥೈರಾಯ್ಡ್ ಇದ್ದರೆ ರಕ್ತಹೀನತೆ ಸಮಸ್ಯೆ ಉಂಟಾಗುವುದು ಅಲ್ಲದೆ ಮೂಳೆಗಳಲ್ಲಿ ನೋವು, ಸ್ನಾಯುಗಳು ಬಲಹೀನವಾಗುವುದು ಹೀಗೆ ಅನೇಕ ಬಗೆಯ ಸಮಸ್ಯೆಗಳು ಕಂಡು ಬರುವುದು, ಈ ರೀತಿ ಆಗುವುದನ್ನು ತಡೆಗಟ್ಟಲು ಸೂಕ್ತ ಚಿಕತ್ಸೆ ಪಡೆಯಬೇಕು.
ಥೈರಾಯ್ಡ್ ಪರೀಕ್ಷೆ
ಥೈರಾಯ್ಡ್ ಹಾರ್ಮೋನ್ ಪರೀಕ್ಷೆಗೆ S. TSH, S. T4, S. T3 ಪರೀಕ್ಷೆ ಮಾಡಿಸಬೇಕು, ಅದರಲ್ಲಿಯೂ ಗರ್ಭಧಾರಣೆಗೆ ಪ್ಲ್ಯಾನ್ ಮಾಡುವಾಗ ಈ ಪರೀಕ್ಷೆ ಮಾಡು ಮಾಡುವುದು ಒಳ್ಳೆಯದು. ಥೈರಾಯ್ಡ್ ಸಮಸ್ಯೆಯಿದ್ದರೆ ಗರ್ಭಧಾರಣೆಯಾದರೆ ಮಗುವಿನ ಬೆಳವಣಿಗೆಗೆ ತೊಂದರೆಯಾಗಬಹುದು ಅಥವಾ ಗರ್ಭಪಾತವಾಗಬಹುದು, ಆದ್ದರಿಂದ ಗರ್ಭಧಾರಣೆಗೆ ಪ್ಲ್ಯಾನ್ ಮಾಡುವ ಮುನ್ನ ಥೈರಾಯ್ಡ್ ಪರೀಕ್ಷೆ ಮಾಡಿಸಬೇಕು. ತುಂಬಾ ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸಿ ಗರ್ಭಿಣಿಯಾಗದಿದ್ದರೆ ನೀವು ಥೈರಾಯ್ಡ್ ಪರೀಕ್ಷೆ ಮಾಡಿಸಿ.
ಜೀವನಶೈಲಿ ಬದಲಾವಣೆ
ಅನೇಕ ಸಮಸ್ಯೆಗಳಿಗೆ ಪ್ರಮುಖ ಕಾರಣ ನಮ್ಮಅನಾರೋಗ್ಯಕರ ಜೀವನಶೈಲಿ. ಆರೋಗ್ಯಕರ ಜೀವನಶೈಲಿಯಿಂದ ನಾವು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಹೈಪೋಥೈರಾಯ್ಡ್ ಹಾಗೂ ಹೈಪರ್‌ಥೈರಾಯ್ಡ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ವ್ಯಾಯಾಮ ಮಾಡಿ, ಅಯೋಡಿಯನ್‌ಯುಕ್ತ ಆಹಾರ ಸೇವಿಸಿ.
ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಆಹಾರಗಳು
* ಮೀನು: ಥೈರಾಯ್ಡ್ ಸಮಸ್ಯೆ ಇರುವವರಿಗೆ ಮೀನಿನ ಆಹಾರ ಒಳ್ಳೆಯದು, ಇದರಲ್ಲಿ ವಿಟಮಿನ್ ಬಿ 12 ಹಾಗೂ ಒಮೆಗಾ 3 ಕೊಬ್ಬಿನಂಶವಿದೆ.
* ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು. ನೀವು ಮೊಟ್ಟೆಯನ್ನು ಅದರ ಹಳದಿ ಸಹಿತ ಸೇವಿಸಿ.
* ನೀವು ಅಡುಗೆಗೆ ಅಯೋಡಿಯನ್‌ಯುಕ್ತ ಉಪ್ಪು ಮಾತ್ರ ಬಳಸಿ. ಅಯೋಡಿಯನ್ ಇರುವ ಕಲ್ಲುಪ್ಪು ಅಥವಾ ಪುಡಿ ಉಪ್ಪು ಬಳಸಿ.
* ಇನ್ನು ಹೈಪೋಥೈರಾಯ್ಡ್ ಸನಸ್ಯೆ ಇರುವವರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ, ಪ್ರೂನ್ಸ್ ಮಲಬದ್ಧತೆ ತಡೆಗಟ್ಟುವಲ್ಲಿ ಸಹಕಾರಿ.
* ಲಿವರ್ ತಿನ್ನುವುದು ಕೂಡ ಒಳ್ಳೆಯದು. ಲಿವರ್‌ನಲ್ಲಿ ವಿಟಮಿನ್ ಬಿ, ಬಿ12, ಫೋಲೆಟ್, ಖನಿಜಾಂಶಗಳು, ಕಬ್ಬಿಣದಂಶ,ಸತು ಇವುಗಳು ಅಧಿಕವಿರುತ್ತದೆ.
ಬೆಣ್ಣೆ ಹಣ್ಣು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು.
ಬಾಳೆಹಣ್ಣು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ಒಳ್ಳೆಯ ಆಹಾರವಾಗಿದೆ.
ಯಾವ ಆಹಾರಗಳು ಒಳ್ಳೆಯದಲ್ಲ
* ಸಂಸ್ಕರಿಸಿದ ಆಹಾರ ಪದಾರ್ಥಗಳು ಥೈರಾಯ್ಡ್‌ಗೆ ಒಳ್ಳೆಯದಲ್ಲ
* ಸೋಯಾ ಗೋಧಿ ಈ ಬಗೆಯ ಆಹಾರ ಒಳ್ಳೆಯದಲ್ಲ
* ಸಕ್ಕರೆ ಪದಾರ್ಥ ದೂರವಿಡಿ
* ಜಂಕ್ ಆಹಾರ ಸೇವಿಸಬೇಡಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications