Latest Updates
-
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ!
ಡ್ರ್ಯಾಗನ್ ಹಣ್ಣು ತಿಂದ್ರೆ ದೊರೆಯುವ ಟಾಪ್ 10 ಪ್ರಯೋಜನಗಳು
ಡ್ರ್ಯಾಗನ್ ಫ್ರೂಟ್ ಬೆಲೆ ಸ್ವಲ್ಪ ದುಬಾರಿ ಅನಿಸಿದರೂ ಆರೋಗ್ಯಕ್ಜೆ ತುಂಬಾನೇ ಒಳ್ಳೆಯದು. ಇದರ ರುಚಿ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ, ಆದರೆ ಇದರಲ್ಲಿ ಅದ್ಭುತ ಗುಣಗಳಿರುವುದರಿಂದ ನೀವು ಇಷ್ಟವಿಲ್ಲದಿದ್ದರೂ ತಿನ್ನಿ. ಬನ್ನಿ ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ:

ಡ್ರ್ಯಾಗನ್ ಫ್ರೂಟ್‌ನಲ್ಲಿರುವ ಪೋಷಕಾಂಶಗಳು
ಪ್ರೊಟೀನ್: 3 ಗ್ರಾಂ
ಕ್ಯಾಲೋರಿ: 136
ಕಬ್ಬಿಣದಂಶ: ಶೇ. 8
ಕಬ್ಬಿಣದಂಶ: 7 ಗ್ರಾಂ
ವಿಮಟಿನ್ ಸಿ
ವಿಟಮಿನ್ ಇ
ಮೆಗ್ನಿಷ್ಯಿಯಂ
ಕ್ಯಾಲ್ಸಿಯಂ
ಡ್ರ್ಯಾಗನ್ ಫ್ರೂಟ್‌ನ ಪ್ರಯೋಜನಗಳು
ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಇದರಲ್ಲಿ ನಾರಿನಂಶ ಇರುವುದರಿಂದ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು, ಇದನ್ನು ಮಧುಮೇಹಿಗಳು ತಿಂದರೆ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ಪ್ರತಿದಿನ ತಿನ್ನುವುದು ಕೂಡ ತುಂಬಾನೇ ಒಳ್ಳೆಯದು.
ಕ್ಯಾನ್ಸರ್ ಅಪಾಯಗಳು ಕಡಿಮೆಯಾಗುವುದು
ಇದು ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ ಅಧಿಕವಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಪಾರ್ಕಿಸನ್ಸ್, ಕ್ಯಾನ್ಸರ್, ಅಲ್ಜೈಮರ್ಸ್ ಈ ಬಗೆಯ ಕಾಯಿಲೆಗಳನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಈ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ತುಂಬಾನೇಒಳ್ಳೆಯದು.ಇದರಲ್ಲಿ ಅತ್ಯಧಿಕ ನಾರಿನಂಶವಿದೆ, ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ತೂಕ ನಿಯಂತ್ರಣಕ್ಕೆ ಇದು ಸಹಕಾರಿಯಾಗಿದೆ.
ಒಮೆಗಾ 3 ಕೊಬ್ಬಿನಂಶವಿದೆ
ಒಮೆಗಾ 3 ಕೊಬ್ಬಿನಂಶ ಮೀನಿನಲ್ಲಿರುತ್ತದೆ, ಮೀನು ತಿನ್ನದವರು ಈ ಹಣ್ಣು ತಿನ್ನುವ ಮೂಲಕ ಒಮೆಗಾ 3 ಕೊಬ್ಬಿನಂಶ ಪಡೆಯಬಹುದು. ಒಮೆಗಾ 3 ಕೊಬ್ಬಿನಂಶ ಹೃದಯ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಪ್ರತಿನಿತ್ಯ ಸೇವಿಸಿದರೆ ಹೃದಯ ಸಂಬಂಧಿ ಕಾಯಿಲೆ ಕಡಿಮೆಯಾಗುವುದು.
ತ್ವಚೆ ಸೌಂದರ್ಯ ವೃದ್ಧಿಸುತ್ತದೆ
ಡ್ರ್ಯಾಗನ್ ಫ್ರೂಟ್‌ನಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ತ್ವಚೆಯ ಆರೋಗ್ಯ ವೃದ್ಧಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮುಖ ಕಾಂತಿಯನ್ನು ಹೆಚ್ಚಿಸುತ್ತದೆ. ತ್ವಚೆ ಸೌಂದರ್ಯಕ್ಕಾಗಿ ನೀವು ಪ್ರತಿದಿನ ಡ್ರ್ಯಾಗನ್ ಫ್ರೂಟ್ ಜ್ಯೂಸ್ ಕುಡಿದರೆ ಒಳ್ಳೆಯದು.
ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
ಕೂದಲಿನ ಆರೋಗ್ಯಕ್ಕೆ ಬಾಹ್ಯ ಆರೈಕೆ ಮಾತ್ರ ಸಾಲದು, ಆಂತರಿಕ ಆರೈಕೆ ಕೂಡ ಅವಶ್ಯಕ. ಅದಕ್ಕಾಗಿ ಪೋಷಕಾಂಶವಿರುವ ಆಹಾರ ಸೇವಿಸಬೇಕು. ಡ್ರ್ಯಾಗನ್ ಫ್ರೂಟ್ ಕೂಡ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಡ್ರ್ಯಾಗನ್ ಫ್ರೂಟ್ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಡ್ರ್ಯಾಗನ್ ಫ್ರೂಟ್‌ನಲ್ಲಿ ಶೇ. 18ರಷ್ಟು ಮೆಗ್ನಿಷ್ಯಿಯಂ ಇದ್ದು ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಂಧಿವಾತದ ಸಮಸ್ಯೆ ಇರುವವರು ಈ ಹಣ್ಣನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಈ ಹಣ್ಣಿನಲ್ಲಿ ಬೀಟಾ ಕೆರೋಟಿನ್ ಇರುವುದರಿಂದ ಕಣ್ಣಿನ ಅಕ್ಷಿಪಟಲದ ಆರೋಗ್ಯಕ್ಕೆ ಒಳ್ಳೆಯದು.
ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದು ಒಳ್ಳೆಯದು
ಈ ಹಣ್ಣಿನಲ್ಲಿ ವಿಟಮಿನ್ ಬಿ, ಫೋಲೆಟ್, ಕಬ್ಬಿಣದಂಶ ಇರುವುದರಿಂದ ಗರ್ಭಿಣಿಯರು ಇದನ್ನು ತಿನ್ನುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ಮೆಗ್ನಿಷ್ಯಿಯಂ ಹೆರಿಗೆಯ ನಂತರ ಕಾಡುವ ಖಿನ್ನತೆ ತಡೆಗಟ್ಟಲು ಕೂಡ ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
