Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾವರ್ಜನಿಕ ಸ್ಥಳಗಳಿಂದ ಸೋಂಕು ಹರಡುವುದನ್ನು ತಡೆಗಟ್ಟುವುದು ಹೇಗೆ? ವೈದ್ಯರ ಸಲಹೆಯೇನು?
ಇತ್ತೀಚೆಗೆ ಸೋಂಕು ರೋಗಗಳು ಹೆಚ್ಚಾಗಿ ಕಂಡು ಬರುತ್ತಿದೆ. ಈ ಸೋಂಕು ರೋಗವೆಂದರೆ ಅದು ಜ್ವರವಿರಬಹುದು, ಕೋವಿಡ್ 19 ಇರಬಹುದು, ಝೀಕಾವಿರಬಹುದು. ಸೋಂಕು ರೋಗವೆಂದರೆ ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವ ಕಾಯಿಲೆ ಆಗಿದೆ. ಈ ಪ್ರಪಂಚದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಅತಿ ಹೆಚ್ಚಿನವರು ಸೋಂಕು ರೋಗದಿಂದಾಗಿ ಸಾವನ್ನಪ್ಪುತ್ತಾರೆ.

ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ, ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಈ ರೋಗ ಹರಡುವುದು ಜಾಸ್ತಿ. ಈ ಸೋಂಕು ರೋಗಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಅಥವಾ ಕೆಲವೊಂದು ವಾಹಕಗಳ ಮೂಲಕ ಹರಡುವುದು, ಉದಾಹರಣೆಗೆ ಸೋಂಕು ಇರುವ ವ್ಯಕ್ತಿಯನ್ನು ಸೊಳ್ಳೆ ಕಚ್ಚಿ ಅದೇ ಸೊಳ್ಳೆ ಬೇರೆಯವರನ್ನು ಕಚ್ಚಿದಾಗ ಸೊಂಕು ಹರಡುವುದು.
ಸೊಂಕು ರೋಗವನ್ನು ತಡೆಗಟ್ಟಲು ಸ್ಯಾನಿಟೈಸರ್ ಬಳಸುವುದು, ಆಗಾಗ ಸೋಪು ಹಚ್ಚಿ ಕೈ ತೊಳೆಯುವುದು ಮಾಡಿದರೆ ಒಳ್ಳೆಯದು. ಆದರೂ ಕೆಲವೊಂದು ಸಂದರ್ಭದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ತುಂಬಾನೇ ಗಮನ ಸೆಳೆದ್ದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು, ಏರ್ ಪೋರ್ಟ್‌ನಲ್ಲಿ ಸೆಕ್ಯೂರಿಟಿ ಚೆಕ್ ಮಾಡುವಾಗ ನಮ್ಮ ವಸ್ತುಗಳನ್ನು ಟ್ರೇಯಲ್ಲಿ ಹಾಕಲಾಗುವುದು, ಬೇರೆಯವರು ಸೂ ಇಟ್ಟ ಟ್ರೇಯಲ್ಲಿ ನಮ್ಮ ಪರ್ಸ್ ಇಡಬಹುದು, ಇದೆಷ್ಟು ಸುರಕ್ಷಿತ, ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆಯಲ್ಲವೇ ಎಂದು ಜನರು ಕಮೆಂಟ್ ಹಾಕಿದರು.
ಇದು ಬರಿ ಏರ್‌ಪೋರ್ಟ್‌ನಲ್ಲಿ ಮಾತ್ರವಲ್ಲ ಹಲವು ಕಡೆ ಸೆಕ್ಯೂರಿಟಿ ಚೆಕ್ಕಿಂಗ್ ಮಾಡುವಾಗ ನಡೆಯುತ್ತೆ. ಉದಾಹರಣೆಗೆ ಮೆಟ್ರೋದಲ್ಲಿ ಹೋಗುವಾಗ ನಮ್ಮ ವಸ್ತುಗಳ ಜೊತೆ ಇತರರ ವಸ್ತುಗಳು ಕೂಡ ಸೆಕ್ಯೂರಿಟಿ ಚೆಕ್ ಆಗಿ ಹೊರಬರುತ್ತದೆ, ಅವಾಗ ಕೂಡ ಒಂದು ಸೋಂಕು ಇರುವ ವ್ಯಕ್ತಿ ಹಿಡಿದಿರುವ ಬ್ಯಾಗ್ ನಮ್ಮ ಬ್ಯಾಗ್‌ಗಳಿಗೆ ತಾಗಿದಾಗ ಸೋಂಕು ಹರಡುವುದಿಲ್ಲವೇ ಎಂಬ ಪ್ರಶ್ನೆಯು ಮೂಡುತ್ತದೆ. ಹೀಗೆ ನೋಡಿದರೆ ನಾವು ಯಾವ ವಸ್ತುಗಳನ್ನು ಮುಟ್ಟಲು ಆಗಲ್ಲ, ಹೊರಗಡೆ ಒಡಾಡಲು ಸಾಧ್ಯವಾಗಲ್ಲ.
ಹಾಗಾದರೆ ಈ ಸೋಂಕು ಹರಡದಂತೆ ತಡೆಗಟ್ಟುವುದು ಹೇಗೆ?
ಸೋಂಕು ಹರಡುತ್ತದೆ ಎಂದು ಹೊರಗಡೆ ಓಡಾಡದೆ ಇರಲು ಸಾಧ್ಯವಿಲ್ಲ, ಪ್ರಾಕ್ಟಿಕಲ್ ಆಗಿ ನೋಡಿದರೆ ಅದು ಸಾಧ್ಯವೆ ಇಲ್ಲ, ಸೋಂಕು ಹರಡದಂತೆ ಎಚ್ಚರಿಕೆವಹಿಸಬೇಕು.
ಸೋಂಕು ಹರಡುವುದನ್ನು ತಡೆಗಟ್ಟುವುದು ಹೇಗೆ?
ಹೊರಗಡೆ ಹೋದಾಗ ಕೈಗಳಿಗೆ ಸ್ಯಾನಿಟಯಸರ್ ಬಳಸಿ
ಮನೆಗೆ ಬಂದ ತಕ್ಷಣ ಸೋಪು ಹಚ್ಚಿ ತೊಳೆಯಿರಿ
ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿ ಓಡಾಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಸಾವರ್ಜನಿಕ ಸ್ಥಳದಲ್ಲಿ ಅಂದ್ರೆ ಏರ್‌ಪೋರ್ಟ್‌ನಂಥ ಸ್ಥಳಗಳಲ್ಲಿ ಇತರರ ವಸ್ತುಗಳಿಟ್ಟ ಟ್ರೇಯಲ್ಲಿಯೇ ನಮ್ಮ ವಸ್ತು ಇಟ್ಟರೆ ಸೋಂಕು ಹರಡುವುದೇ ಎಂದು ನಾವು ವೈದ್ಯರಾದ ಡಾ. ಪ್ರಮೋದ್ ವಿ ಸತ್ಯ(Consultant - Internal Medicine, Manipal Hospital Millers Road) ಅವರನ್ನು ಸಂಪರ್ಕಿಸಿದಾಗ ಅವರು ತುಂಬಾ ಒಳ್ಳೆಯ ಮಾಹಿತಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ನೋಡಿ:
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications