Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಟಿಪ್ಸ್..! ಸರಳ ಪರಿಹಾರವೇನು ಗೊತ್ತಾ?
ಇತ್ತೀಚಿನ ಯುವ ಜನತೆಯ ಬಹುದೊಡ್ಡ ಸಮಸ್ಯೆ ಆಗಿರುವುದು ಅವರ ವಯಸ್ಸಿಗಿಂತ ಹೆಚ್ಚಾಗಿ ಹೊಟ್ಟೆ ಮುಂದೆ ಬರುವುದು. ಯುವ ಪೀಳಿಗೆ ಈ ಸಮಸ್ಯೆಯಿಂದ ಈಗ ಜಿಮ್‌ಗೆ ಹೋಗುವುದು, ಹಲವು ರೀತಿಯ ಕಸರತ್ತು, ಈಜು, ಓಟ, ಯೋಗ ಹೀಗೆ ಹತ್ತಾರು ರೀತಿಯ ಕಸರತ್ತುಗಳ ಮಾಡಿ ಹೊಟ್ಟೆಯ ಈ ಬೊಜ್ಜು ಕರಗುವಂತೆ ಮಾಡಲು ಮುಂದಾಗುತ್ತಾರೆ.
ಆದ್ರೆ ಹೊಟ್ಟೆಯ ಬೊಜ್ಜು ಕರಗಿಸುವುದು ಅಂದರೆ ದೊಡ್ಡ ಹರಸಾಹಸವೇ ಸರಿ. ಯುವ ಸಮೂಹ ಈ ಸಮಸ್ಯೆಯಿಂದ ದೊಡ್ಡ ತಲೆನೋವು. ಆದ್ರೆ ಕೆಲವರು ಹೊಟ್ಟೆ ಬೊಜ್ಜು ಕರಗಿಸಲು ಊಟ ಬಿಡುವುದು, ವಿಪರೀತ ಕಸರತ್ತು ಮಾಡುವುದು, ಅನಾರೋಗ್ಯಕರ ಡಯೆಟ್ ಮಾಡಲು ಮುಂದಾಗುತ್ತಾರೆ. ಆದ್ರೆ ನಾವಿಂದು ಈ ಬೊಜ್ಜು ಕರಗಿಸಲು ನಾವು ಸುಲಭವಾದ ಮಾರ್ಗವನ್ನ ನಾವು ನೋಡೋಣ.

ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಗೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಆಹಾರ, ನಮ್ಮ ಜೀವನ ಶೈಲಿ ಕಾರಣವಾಗಿರುತ್ತದೆ. ನಾವು ಸೇವಿಸುವ ಜಂಕ್ ಫುಡ್ ಮುಖ್ಯ ಕಾರಣ, ಹಾಗೆ ಸಕ್ಕರೆ ಭರಿಸ ಸಂಸ್ಕರಿತ ಆಹಾರಗಳು ಹೊಟ್ಟೆಯಲ್ಲಿ ಅನಗತ್ಯ ಬೊಜ್ಜು ಉಂಟಾಗಲು ಕಾರಣವಾಗುತ್ತದೆ. ಆದರೆ ಈ ಬೊಜ್ಜು ಕರಗಿಸಲು ನಾವು ಮನೆಯಲ್ಲಿ ಹೇಗೆ ತಯಾರಿ ಮಾಡಿಕೊಳ್ಳಬೇಕು ಗೊತ್ತಾ?
ಹೆಚ್ಚು ನೀರು ಮತ್ತು ಆಹಾರ ಸೇವಿಸಿ
ಕೆಲವರು ತೂಕ ಹೆಚ್ಚಳ ಆಗುತ್ತೆ ಎಂಬ ಕಾರಣಕ್ಕೆ ಆಹಾರ ಸೇವನೆಯನ್ನೇ ಬಿಡುತ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ತೂಕ ಇಳಿಕೆಯ ಜೊತೆಗೆ ವಿಟಮಿನ್ ಕೊರತೆಯೂ ನಿಮಗೆ ಕಾಡಬಹುದು. ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಹಾಗೆ ಹೆಚ್ಚು ಹೆಚ್ಚು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಚಿಯಾ ಬೀಜದ ನೀರು
ಚೀಯಾ ಬೀಜ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾದ ಪಾನಿಯವಾಗಿದೆ. ಇದನ್ನ ನೀರಿನೊಂದಿಗೆ ಬೆರೆಸಿ ಕುಡಿದರೆ ಬಹಳ ಉತ್ತಮ. ಚಿಯಾ ಬೀಜಗಳು ಥರ್ಮೊಜೀನೀಸ್ ಪ್ರಕಿಯೆಗೆ ಕಾರಣವಾಗುತ್ತವೆ, ಇದರಿಂದ ದೇಹದ ತೂಕ ಇಳಿಸಲು ಸಹ ಕಾರಣವಾಗುತ್ತದೆ. ಈ ಪಾನಿಯ ಸೇವನೆಯು ನಿಮ್ಮಲ್ಲಿ ಹಸಿವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಲಿದೆ. ಹಾಗೆ ಈ ನೀರಿಗೆ ಒಂದು ಚಿಟಿಕೆಯಷ್ಟು ಶುಂಠಿ ಪುಡಿ, ಅಥವಾ ಶುಂಠಿಯನ್ನು ಹಾಕಿ ಸವಿದರೆ ಮತ್ತಷ್ಟು ಉತ್ತಮವಾಗಿರುತ್ತೆ.
ಬ್ರೊಕೊಲಿ ಅಥವಾ ಕೋಸು
ಬ್ರೊಕೊಲಿಯನ್ನು ಹಸಿಯಾಗಿಯೂ ಸೇವಿಸಬಹುದು. ಇದು ನಮ್ಮ ದೇಹಕ್ಕೆ ಅತ್ಯಂತ ಶ್ರೇಷ್ಟ ತರಕಾರಿ ಎನ್ನಬಹುದು. ಇದರಲ್ಲಿ ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಸಿ ಅಂಶ ಇರುವುದರಿಂದ ತೂಕ ಕಡಿಮೆ ಮಾಡಲು ಅದರಲ್ಲೂ ಹೊಟ್ಟೆಯ ಅನಗತ್ಯ ಕೊಬ್ಬು ಕರಗಿಸಲು ಇದು ಸಹಕಾರಿಯಾಗಿದೆ.
ಮುಳ್ಳುಸೌತೆಕಾಯಿ
ನೀವು ಮುಳ್ಳುಸೌತೆ ನೋಡಿರಬಹುದು. ಹಾಗೆ ಹಸಿಯಾಗಿ ಸವಿಯಬಹುದಾದ ಒಂದು ತರಕಾರಿಯಾಗಿದೆ. ಮುಳ್ಳು ಸೌತೆಯಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಅತೀ ಹೆಚ್ಚು ಫೈಬರ್ ಹೊಂದಿರಲಿದೆ. ಇದು ನಿಮ್ಮ ಜೀರ್ಣಕ್ರಿಯೆಗೆ ಬಹಳ ಉತ್ತಮ. ಅಲ್ಲದೆ ಹಸಿವು ನಿಯಂತ್ರಣಕ್ಕೂ ಇದು ಸಹಕಾರಿಯಾಗಿದೆ. ನೀರಿನಾಂಶ ಹೊಂದಿರುವ ಕಾರಣ ನಿಮ್ಮ ಹಸಿವು ನಿಯಂತ್ರಣದಲ್ಲಿ ಇಡಲಿದೆ.
ಗ್ರೀನ್ ಟೀ ಅಥವಾ ಲೆಮನ್ ಟೀ
ಗ್ರೀನ್ ಟೀ ಹಾಗೂ ಲೆಮನ್ ಟೀ ನಿಯಮಿತವಾಗಿ ಕುಡಿಯುವುದು ನಿಮ್ಮ ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಅನಗತ್ಯ ಕೊಬ್ಬು ಕರಗಿಸಲು ನೆರವಾಗುತ್ತದೆ. ಇದಲ್ಲದೆ ಉಗುರು ಬೆಚ್ಚಗಿನ ನೀರಿಗೆ ಒಂದು ನಿಂಬೆ ಹಿಂಡಿಕೊಂಡು ಕುಡಿಯುವುದು ಕೂಡ ನಿಯಮಿತವಾಗಿ ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಲಿದೆ.
ಜೀರಿಗೆ ನೀರು
ಜೀರಿಗೆಯನ್ನು ನೀರಿಗೆ ಹಾಕಿ ಕೆಲ ಕಾಲ ಬಿಟ್ಟು ಆ ನೀರು ಕುಡಿಯುವುದು ಕೂಡ ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಲಿದೆ. ಅಲ್ಲದೆ ಹೊಟ್ಟೆಯಲ್ಲಿನ ಬೊಜ್ಜು ಕರಗಲು ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications