ಥೈರಾಯ್ಡ್ ಕ್ಯಾನ್ಸರ್ ಯಾರಿಗೆ ಬರುವ ಸಾಧ್ಯತೆ ಹೆಚ್ಚು? ಇದರ ಲಕ್ಷಣಗಳೇನು?

ಹಲವು ಬಗೆಯ ಕ್ಯಾನ್ಸರ್‌ಗಳಿವೆ, ಜನರನ್ನು ಅತ ಹೆಚ್ಚು ಕಾಡುತ್ತಿರುವ ಕ್ಯಾನ್ಸರ್‌ಗಳಲ್ಲಿ 10ನೇ ಸ್ಥಾನ ಥೈರಾಯ್ಡ್ ಕ್ಯಾನ್ಸರ್‌ಗಿದೆ. ಥೈರಾಯ್ಡ್‌ ಕ್ಯಾನ್ಸರ್‌ ಥೈರಾಯ್ಡ್ ಗ್ರಂಥಿಯಲ್ಲಿ ಉಂಟಾಗುವ ಕ್ಯಾನ್ಸರ್ ಆಗಿದ್ದು ಕುತ್ತಿಗೆ ಭಾಗದಲ್ಲಿ ಕಂಡು ಬರುತ್ತದೆ.

ಥೈರಾಯ್ಡ್ ಎಂಬುವುದು ದೇಹದ ಅತಿಮುಖ್ಯವಾದ ಅಂಗವಾಗಿದೆ. ದೇಹದಲ್ಲಿ ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ಥೈರಾಯ್ಡ್‌ ಹಾರ್ಮೋನ್‌ಗಳು ಅವಶ್ಯಕ. ಹೃದಯ ಬಡಿತ ಸರಿಯಾಗಿರಲು, ರಕ್ತದೊತ್ತಡ ನಿಯಂತ್ರಣದಲ್ಲಿರಲು, ದೇಹದಲ್ಲಿ ಉಷ್ಣಾಂಶ ಸಮತೋಲನದಲ್ಲಿರಲು ಥೈರಾಯ್ಡ್ ಹಾರ್ಮೋನ್ ತುಂಬಾನೇ ಅವಶ್ಯಕವಾಗಿದೆ.

Thyroid Cancer

ಥೈರಾಯ್ಡ್‌ ಕ್ಯಾನ್ಸರ್ ಎಂದರೇನು?
ಥೈರಾಯ್ಡ್ ಗ್ರಂಥಿಗಳಲ್ಲಿ ಕಂಡು ಬರುವ ಕ್ಯಾನ್ಸರ್ ಇದಾಗಿದೆ. ಥೈರಾಯ್ಡ್ ಎಂಬುವುದು ಚಿಟ್ಟೆಯಾಕಾರದ ಗ್ರಂಥಿಯಾಗಿದೆ, ಥೈರಾಯ್ಡ್ ಗ್ರಂಥಿಯಲ್ಲಿ ಕ್ಯಾನ್ಸರ್ ಉಂಟಾದರೆ ಗ್ರಂಥಿಯಲ್ಲಿ ಊತ ಉಂಟಾಗುವುದು. ಈ ಕ್ಯಾನ್ಸರ್ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಕಂಡು ಬರುವುದು. ಆದರೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣವೇನು?
ಥೈರಾಯ್ಡ್ ಕ್ಯಾನ್ಸರ್‌ಗೆ ಇಂಥದ್ದೇ ನಿರ್ದಿಷ್ಟ ಕಾರಣವೆಂಬುವುದು ಇಲ್ಲ, ಅನೇಕ ಕಾರಣಗಳಿಂದ ಥೈರಾಯ್ಡ್ ಕ್ಯಾನ್ಸರ್ ಉಂಟಾಗುತ್ತದೆ. ವಂಶವಾಹಿಯಾಗಿ ಬರಬಹುದು, ರೇಡಿಯೇಷನ್ ಕೊರತೆಯಿಂದ ಬರಬಹುದು, ತುಂಬಾ ಸಮಯದಿಂದ ದೇಹದಲ್ಲಿ ಅಯೋಡಿಯನ್ ಕೊರತೆ ಉಂಟಾಗಿ ಇದರಿಂದಲೂ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗಬಹುದು.

ಥೈರಾಯ್ಡ್‌ ಕ್ಯಾನ್ಸರ್‌ ಲಕ್ಷಣಗಳೇನು?
ಗಂಟಲಿನಲ್ಲಿ ಗಡ್ಡೆ ಬರುವುದು
ಗಂಟಲಿನಲ್ಲಿ ಊತ
ಆಹಾರ ನುಂಗಲು ಕಷ್ಟವಾಗುವುದು
ನಿರಂತರವಾಗಿ ಕುತ್ತಿಗೆ ನೋವು ಬರುವುದು
ಉಸಿರಾಟದಲ್ಲಿ ತೊಂದರೆ
ಉಸಿರಾಟದಲ್ಲಿ ತೊಂದರೆ
ಇದ್ದಕ್ಕಿದ್ದಂತೆ ತೂಕ ಇಳಿಕೆ, ತೂಕ ಹೆಚ್ಚಾಗುವುದು
ಸ್ವರದಲ್ಲಿ ಬದಲಾವಣೆ
ಕುತ್ತಿಗೆ ಬಿಗಿಯಾದ ಅನುಭವ

ಥೈರಾಯ್ಡ್ ಕ್ಯಾನ್ಸರ್ ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ?
20-55 ವರ್ಷದೊಳಗಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ
ವಂಶವಾಹಿಯಾಗಿಯೂ ಬರಬಹುದು
ಅತಿ ಹೆಚ್ಚಿನ ರೇಡಿಯೇಷನ್ ಮೈ ಮೇಲೆ ಬೀಳುವುದರಿಂದಲೂ ಕ್ಯಾನ್ಸರ್ ಅಪಾಯವಿದೆ
ಅತ್ಯಧಿಕ ಮೈ ತೂಕ ಹೊಂದಿರುವವರಲ್ಲಿ ಕಂಡು ಬರುವುದು
ಗಳಗಂಡ ರೋಗವಿದ್ದರೂ ಥೈರಾಯ್ಡ್ ಕ್ಯಾನ್ಸರ್ ಅಪಾಯವಿದೆ

ಥೈರಾಯ್ಡ್‌ ಕ್ಯಾನ್ಸರ್ ಅನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿದರೆ ಗುಣಮುಖರಾಗುವುದು ಸುಲಭ, ಸಿಟಿ ಸ್ಕ್ಯಾನ್‌, MRI ಈ ಕ್ಯಾನ್ಸರ್ ಪತ್ತೆಗೆ ಸಹಕಾರಿಯಾಗಿದೆ.

ಥೈರಾಯ್ಡ್ ಕ್ಯಾನ್ಸರ್ ಹರಡುವುದೇ?
ಥೈರಾಯ್ಡ್ ಕ್ಯಾನ್ಸರ್ ಕೆಲವೊಮ್ಮೆ ದುಗ್ಧರಸ ಗ್ರಂಥಿಗೆ ಹರಡುವುದು ನಂತರ ದೇಹದ ಇತರ ಭಾಗಕ್ಕೂ ಹರಡಬಹುದು, ಆದರೆ ಈ ಕ್ಯಾನ್ಸರ್ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ ಈ ರೀತಿ ಕ್ಯಾನ್ಸರ್ ಹರಡುವುದನ್ನು ತಡೆಗಟ್ಟಬಹುದು.
ಥೈರಾಯ್ಡ್ ಕ್ಯಾನ್ಸರ್ ಪ್ರಾರಂಭದಲ್ಲಿಯೇ ಗುರುತಿಸದೆ ಹೋದರೆ ಈ ಭಾಗಗಳಿಗೂ ಹರಡಬಹುದು
ಕುತ್ತಿಗೆ ಭಾಗಕ್ಕೆ
ಶ್ವಾಸಕೋಶಕ್ಕೆ
ಮೂಳೆಗಳಿಗೆ
ಮೆದುಳಿಗೆ
ಲಿವರ್‌
ತ್ವಚೆಗೆ

ಥೈರಾಯ್ಡ್ ಕ್ಯಾನ್ಸರ್ ಅನ್ನು ಹೇಗೆ ಗುಣಪಡಿಸಬಹುದು:
ಸರ್ಜರಿ: ಥೈರಾಯ್ಡೋಕ್ಟಮಿ (ಥೈರಾಯ್ಡ್ ಗ್ರಂಥಿಯನ್ನು) ತೆಗೆಯಲಾಗುವುದು, ಕೆಲವೊಂದು ಸರ್ಜರಿಯಲ್ಲಿ lobectomy ಅಂದರೆ ಥೈರಾಯ್ಡ್ ಗ್ರಂಥಿಯ ಒಂದು ಭಾಗ ತೆಗೆಯುವುದು, ಇದರಲ್ಲಿ ಥೈರಾಯ್ಡ್‌ ಹಾರ್ಮೋನ್‌ ದೇಹದಲ್ಲಿ ಉತ್ಪತ್ತಿಯಾಗುವುದರಿಂದ ಥೈರಾಯ್ಡ್ ಹಾರ್ಮೋನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ರೇಡಿಯೇಷನ್
ಎಕ್ಸಟ್ರನಲ್‌ ರೇಡಿಯೇಷನ್ ಥೆರಪಿ: ರೇಡಿಯೇಷನ್‌ ಮಾಡಿ ಕ್ಯಾನ್ಸರ್‌ ಕಣಗಳನ್ನು ಕೊಲ್ಲಲಾಗುವುದು.
ರೇಡಿಯೋಆಕ್ಟಿವ್ ಅಯೋಡಿಯನ್ (RAI) ಥೆರಪಿ: ಇದರಲ್ಲಿ ರೇಡಿಯೋ ಆಕ್ಟಿವ್‌ ಅಯೋಡಿನ್ ಅನ್ನು ಶಾಟ್‌ ರೀತಿ ನೀಡಲಾಗುವುದು.

ಕೀಮೋಥೆರಪಿ: ಕ್ಯಾನ್ಸರ್ ಕಣಗಳನ್ನು ಕೊಲ್ಲಲು ಇಂಜೆಕ್ಷನ್ ಅಥವಾ ಶಾಟ್‌ ಅಥವಾ ಮಾತ್ರೆ ನೀಡುವ ಮೂಲಕ ಚಿಕಿತ್ಸೆ ನೀಡಲಾಗುವುದು.

ಥೈರಾಯ್ಡ್ ಕ್ಯಾನ್ಸರ್‌ಗೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಶ್ವಾಸಕೋಶ, ಅನ್ನನಾಳ ಇವುಗಳಿಗೆ ಕ್ಯಾನ್ಸರ್ ಹರಡುವುದು. ಕ್ಯಾನ್ಸರ್ ಕಣಗಳು ಮೂಳೆ, ಶ್ವಾಸಕೋಶ ಇವುಗಳಿಗೆ ಕ್ಯಾನ್ಸರ್‌ ಹರಡುವುದು. ಹಾಗಾಗಿ ಥೈರಾಯ್ಡ್ ಕ್ಯಾನ್ಸರ್ ಅನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದು ಅವಶ್ಯಕವಾಗಿದೆ.

ನಿಮ್ಮ ಗಂಟಲಿನಲ್ಲಿ ಏನಾದರು ವ್ಯತ್ಯಾಸ ಕಂಡು ಬಂದರೆ ನೀವು ತಜ್ಞರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Thyroid Cancer: Reasons, Symptoms And Treatment In Kannada

Thyroid Cancer: What are the symptoms of Thyroid cancer, how to treat it?
X
Desktop Bottom Promotion