Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕ್ಯಾನ್ಸರ್ ಎಂಬ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಆಹಾರಕ್ರಮ ಹೀಗೆ ಬದಲಾಯಿಸಿ
ಕ್ಯಾನ್ಸರ್ ಎಂಬುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿಯೇ ಕಂಡು ಬರುತ್ತಿದೆ, ಅನೇಕ ಕಾರಣಗಳಿಂದ ಈ ಕಾಯಿಲೆ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ, ಕಲುಷಿತ ನೀರಿನಲ್ಲಿ ಬೆಳೆದ ಆಹಾರ, ಆಹಾರಕ್ಕೆ ಸಿಂಪಡಿಸುವ ಕೀಟನಾಶಕಗಳು, ಕೆಟ್ಟ ಚಟಗಳು ಹೀಗೆ ಅನೇಕ ಕಾರಣಗಳಿಂದ ಈ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ.
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ, ನೀವು ಕೂಡ ನಿಮ್ಮ ಆಹಾರಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿದರೆ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು. ಈಗೀನ ಜೀವನಶೈಲಿಗೆ ಅರೋಗ್ಯಕರ ಆಹಾರಕ್ರಮದ ಕಡೆಗೆ ಗಮನ ನೀಡುವುದು ಅವಶ್ಯಕವಾಗಿದೆ. ಕ್ಯಾನ್ಸರ್ ಎಂಬ ಮಹಾಮಾರಿ ತಡೆಗಟ್ಟಲು ಈ ಬಗೆಯ ಆಹಾರಗಳು ಪ್ರಯೋಜನಕಾರಿಯಾಗಿದೆ ನೋಡಿ:

ಪ್ಲೇಟ್‌ನಲ್ಲಿ ಆಹಾರ ಕಲರ್‌ಫುಲ್ ಆಗಿರಲಿ
ನಿಮ್ಮ ತಟ್ಟೆಯಲ್ಲಿ ಆಹಾರ ಕಲರ್‌ಫುಲ್ ಆಗಿರಲಿ ಎಂದರೆ ಕಲರ್ ಹಾಕಿದ ಆಹಾರವಲ್ಲ, ಬದಲಿಗೆ ವಿವಿಧ ಬಗೆಯ ಹಣ್ಣುಗಳು, ತರಕಾರಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಅದರಲ್ಲೂ ಸೀಸನಲ್ ಆಹಾರ ಸೇವಿಸಿ.
ಧಾನ್ಯಗಳನ್ನು ಹೆಚ್ಚಾಗಿ ಬಳಸಿ
ಕೆಂಪು ಮಾಂಸ ಮಿತಿಯಲ್ಲಿ ಸೇವಿಸಿ. ನೀವು ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ. ನೀವು ಧಾನ್ಯಗಳನ್ನು ಮೊಳಕೆ ಬರಿಸಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
ಒಮೆಗಾ 3 ಕೊಬ್ಬಿನಂಶ
ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿದೆ, ಆದ್ದರಿಂದ ಮೀನು ಆರೋಗ್ಯಕ್ಕೆ ಒಳ್ಳೆಯದು, ಒಮೆಗಾ 3 ಕೊಬ್ಬಿನಂಶ ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ಅಲ್ಲದೆ ನಟ್ಸ್‌ನಲ್ಲಿಯೂ ಒಮೆಗಾ 3 ಕೊಬ್ಬಿನಂಶವಿದೆ.
ಉಪ್ಪು ಮಿತಿಯಲ್ಲಿ ಸೇವಿಸಿ, ಸಕ್ಕರೆಯಂಶ ಬಿಡುವುದು ಒಳ್ಳೆಯದು
ಉಪ್ಪು ಆಹಾರಕ್ಕೆ ರುಚಿ ನೀಡುತ್ತದೆ, ಆದರೆ ನೀವು ಉಪ್ಪನ್ನು ಮಿತಿಯಲ್ಲಿ ಸೇವಿಸಿ. ಅಲ್ಲದೆ ಸಕ್ಕರೆ ಯಾವುದೇ ರೀತಿಯಲ್ಲೂ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದ್ದರಿಂದ ಸಕ್ಕರೆ ಬಳಕೆಯನ್ನು ಆದಷ್ಟೂ ಕಡಿಮೆಮಾಡಿ.
ಗ್ರೀನ್ ಟೀ ಸೇವಿಸಿ
ಗ್ರೀನ್ ಟೀ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ. ಆದ್ದರಿಂದ ಪ್ರತಿದಿನ ಎರಡು ಕಪ್ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಗ್ರೀನ್ ಟೀ ಸಿಹಿ ಬೇಕೆಂದರೆ ಜೇನು ಸೇರಿಸಿ, ಸಕ್ಕರೆ ಬಳಸಬೇಡಿ.
ಕೆಟ್ಟ ಚಟಗಳಿಂದ ದೂರವಿರಿ
ತಂಬಾಕು ಸೇವನೆ, ಧೂಮಪಾನ, ಅತಿಯಾದ ಮದ್ಯಪಾನ ಕ್ಯಾನ್ಸರ್‌ನ ಅಪಾಯ ಹೆಚ್ಚಿಸುತ್ತದೆ. ಆದ್ದರಿಂದ ಇಂಥ ಚಟಗಳಿಂದ ದೂರವಿರಿ.
ವ್ಯಾಯಾಮ ಮಾಡಿ
ವ್ಯಾಯಾಮ ಅನೇಕ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟುತ್ತದೆ, ಆದ್ದರಿಂದ ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
