Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹೊಟ್ಟೆಯ ಕೊಬ್ಬು ಕಡಿಮೆ ಮಾಡೋಕೆ ಇದೊಂದು ಪುಡಿ ಸಾಕು! ಬಿಸಿ ನೀರಲ್ಲಿ ನಿತ್ಯ ಸೇವಿಸಿ!
ದೇಹದ ಬೊಜ್ಜು ಅದ್ರಲ್ಲೂ ಹೊಟ್ಟೆಯ ಬೊಜ್ಜು ಸಮಸ್ಯೆ ಇತ್ತೀಚಿನ ದಿನದಲ್ಲಿ ಯುವ ಸಮುದಾಯವೂ ಸೇರಿ ಹಲವರಿಗೆ ಕಾಡುತ್ತಿರುವ ಸಮಸ್ಯೆ. ಇದು ಜಡ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ದೀರ್ಘ ಸಮಯ ಕುಳಿತು ಕೆಲಸ ಮಾಡುವ ಅಭ್ಯಾಸವೂ ಹೊಟ್ಟೆ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತಿದೆ.
ಈ ಸಮಸ್ಯೆಯಿಂದ ಹೊರಬರಲು ಹಲವರು ಜಿಮ್‌ಗೆ ಹೋಗುವುದು, ಕಠಿಣ ಡಯಟ್ ಅನುಸರಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಕಟ್ಟುಪಾಡಿನ ಆಹಾರ ಕ್ರಮ ಪಾಲಿಸುವುದು ಸಾಧ್ಯವಾಗುವುದಿಲ್ಲ. ಆದರೆ ಈ ಹೊಟ್ಟೆಯ ಮೇಲಿನ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಬಹಳ ಸುಲಭದ ಉಪಾಯವಿದೆ.

ಅದ್ರಲ್ಲೂ ಈ ಒಂದು ಪುಡಿಯನ್ನು ನೀವು ನೀರಿನೊಂದಿಗೆ ಸೇವಿಸುತ್ತಾ ಹೋದರೆ ನಿಮ್ಮ ಹೊಟ್ಟೆಯ ಬೊಜ್ಜು ಖಂಡಿತ ಕಡಿಮೆಯಾಗತ್ತದೆ ಎಂದು ಹೇಳಲಾಗಿದೆ. ಅದ್ರಲ್ಲೂ ಈ ಅಗಸೆ ಬೀಜದ ಪುಡಿ ಆರೋಗ್ಯದ ದೃಷ್ಟಿಯಿಂದ ಹಾಗೆ ತೂಕ ಇಳಿಸಿಕೊಳ್ಳಲು ಸಹ ಇದು ಬಹಳ ಮುಖ್ಯವಾಗುತ್ತದೆ. ಹಾಗಾದ್ರೆ ಈ ಅಗಸೆ ಬೀಜದ ಪುಡಿಯಿಂದ ಹೇಗೆ ಹೊಟೆಟಯ ಬೊಜ್ಜು ಇಳಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಅಗಸೆ ಬೀಗದ ಪುಡಿ ಮಾಡಿಕೊಳ್ಳಲು ಬೇಕಾಗುವ ವಸ್ತುಗಳು
- ಅಗಸೆ ಬೀಜ - 1 ಚಮಚ
- ಮೆಂತ್ಯ - 1 ಚಮಚ
- ಜೀರಿಗೆ - 1 ಚಮಚ
- ದಾಲ್ಚಿನ್ನಿ (ತೊಗಟೆ) - 1 ತುಂಡು
ಈ ಪುಡಿ ತಯಾರಿಸುವ ವಿಧಾನ?
ಮೊದಲು ಬಾಣಲೆಗೆ ಅಗಸೆ ಬೀಜಗಳ ಹಾಕಿ ಚೆನ್ನಾಗಿ ಹುರಿದು ಒಂದು ತಟ್ಟೆಗೆ ಹಾಕಿಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಮೆಂತ್ಯ,, ಜೀರಿಗೆ ಹಾಗೂ ದಾಲ್ಚಿನ್ನಿ ಹಾಕಿ ಹುರಿದು ತಣ್ಣಗಾಗಲು ಬಿಡಿ. ನಂತರ ಎಲ್ಲಾ ಪದಾರ್ಥಗಳನ್ನು ಮಿಕ್ಸರ್‌ನಲ್ಲಿ ಹಾಕಿ ಸಣ್ಣ ಪುಡಿಯಾಗುವಂತೆ ರುಬ್ಬಿಕೊಂಡು ಇಟ್ಟುಕೊಳ್ಳಿ. ಇಷ್ಟಾದರೆ ಅಗಸೆ ಬೀಜದ ಪುಡಿ ಸಿದ್ದವಾಗುತ್ತೆ.
ಈ ಪುಡಿಯನ್ನು ಸೇವಿಸುವುದು ಹೇಗೆ?
ಮೊದಲಿಗೆ 1 ಚಮಚ ಅಗಸೆ ಬೀಜದ ಪುಡಿಯನ್ನು ತೆಗೆದುಕೊಂಡು ಒಂದು ಗ್ಲಾಸ್‌ಗೆ ಹಾಕಿ ಅದಕ್ಕೆ ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಹಾಲು ಅಥವಾ ಬಿಸಿ ನೀರು ಹಾಕಿಕೊಳ್ಳಬೇಕು. ಇದನ್ನು ಈ ಎರಡು ಪದಾರ್ಥ ಬಳಸಿ ಕುಡಿಯಬಹುದು. ಹಾಗೆ ಇದರ ಜೊತೆಯಲ್ಲಿ ಮೊಸರು ಅಥವಾ ಯಾವುದಾದರು ಜ್ಯೂಸ್‌ಗಳು ಅಂದರೆ ಬಾದಾಮಿ ಹಾಲು, ಪಾನಕಗಳೊಂದಿಗೂ ಸೇರಿಸಿ ಕುಡಿಯಬಹುದು. ಅದ್ರಲ್ಲೂ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಬಹಳ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ.
ಅಗಸೆ ಬೀಜದ ಪುಡಿ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು?
ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿರಲು ಸಹಾಯ ಮಾಡಲಿದೆ. ದೇಹದ ಉರಿಯೂತ ಕಡಿಮೆಯಾಗುವುದು ಹಾಗೆ ಹೃದಯದ ಆರೋಗ್ಯ ಸುಧಾರಿಸಲಿದೆ.
ಚಯಾಪಚಯ ಕ್ರಿಯೆ ಚುರುಕುಗೊಳ್ಳುವುದು, ಜೀರ್ಣಕ್ರಿಯೆ ಉತ್ತಮವಾಗುವುದು, ಹಸಿವು ನಿಯಂತ್ರಣಕ್ಕೆ ಬರುವುದು ಸೇರಿ ಹಲವು ಪ್ರಯೋಜನಗಳ ಹೊಂದಿದೆ. ಹಾಗೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದು. ಇಷ್ಟು ಪ್ರಯೋಜನಗಳ ಹೊಂದಿರುವ ಈ ಅಗಸೆ ಬೀಜದ ಪುಡಿಯನ್ನು ನಿತ್ಯ ಸೇವಿಸುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ಅಭ್ಯಾಸ ಆಗಿರಲಿದೆ.



Click it and Unblock the Notifications
