Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಒಬ್ಬರ ತಲೆ ಮತ್ತೊಬ್ಬರಿಗೆ ಜೋಡಣೆ..! ರೋಬೋಟಿಕ್ ಕಸಿಗೆ ಶಾಕ್ ಆದ ಜನ..!
ವೈದ್ಯಕೀಯ ಕ್ಷೇತ್ರ ಎಷ್ಟು ಬೆಳವಣಿಗೆ ಹೊಂದಿದೆ ಅಂದ್ರೆ ಅಲ್ಲಿ ಯಾವುದು ಅಸಾಧ್ಯವೆಂಬುದಿಲ್ಲ. ಮಾನವನ ಬುದ್ದಿವಂತಿಕೆಗೆ ಸಾಧಿಸಲು ಇನ್ಯಾವುದು ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ ಹೊಂದಿದೆ. ಪ್ರತಿಯೊಂದು ಕಾಯಿಲೆ, ಚಿಕಿತ್ಸೆ ಹೀಗೆ ಎಲ್ಲದಕ್ಕೂ ಇಲ್ಲಿ ಹೊಸ ಅಧ್ಯಯನ ನಡೆಯುತ್ತದೆ.
ಇದರ ಜೊತೆ ಈಗ ವೈದ್ಯಕೀಯ ಕ್ಷೇತ್ರ ಆಧುನೀಕರಣಕ್ಕೆ ತೆರೆದುಕೊಂಡಿದೆ. ಅಲ್ಲಿ ವಿವಿಧ ಯಂತ್ರೋಪಕರಣಗಳು, ರೋಬೋಟಿಗ್ ಟೆಕ್ನಾಲಿಜಿ ಈಗ ಬಂದಿದೆ. ಶಸ್ತ್ರ ಚಿಕಿತ್ಸೆಗಳಿಂದ ಹಿಡಿದು ಎಲ್ಲವೂ ರೋಬೋಟಿಕ್ ಮೆಷಿನ್‌ಗಳೇ ಮಾಡಿ ಮುಗಿಸುತ್ತವೆ. ಅದರಲ್ಲೂ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಗಳಿಂದು ರೋಬೋಟಿಕ್ ಯಂತ್ರಗಳು ಮಾಡುತ್ತಿವೆ.

ವೈದ್ಯಕೀಯ ಲೋಕದಲ್ಲಿ ಇತ್ತೀಚಿನ ಸಾಧನೆಗಳಲ್ಲಿ ಅಂಗಾಂಗ ಕಸಿ ಸಹ ಒಂದಾಗಿದೆ. ನಮ್ಮ ದೇಹದ ಪ್ರತಿಯೊಂದು ಅಂಗವನ್ನೂ ಸಹ ಕಸಿ ವಿಧಾನದ ಮೂಲಕ ಬೇರೊಂದು ಅಂಗ ಜೋಡಿಸಬಹುದು. ಜೊತೆಗೆ ಪ್ರಾಣಿಗಳ ಅಂಗಗಳನ್ನು ಮಾನವ ದೇಹಕ್ಕೆ ಕಸಿ ಮಾಡಿದ್ದ ಉದಾಹರಣೆಗಳು ಸಹ ನಮ್ಮ ನಡುವೆ ಇದೆ.
ಆದ್ರೆ ಈಗ ವೈರಲ್ ಆಗುತ್ತಿರುವ ವಿಡಿಯೋ ಒಂದರಲ್ಲಿ ಮಾನವನ ಅಂಗ ಮಾತ್ರವಲ್ಲ ಇಡೀ ತಲೆಯನ್ನೇ ಕಸಿ ಮಾಡಲಾಗಿದೆ. ಹೌದು ನಿಮಗೆ ಈ ವಿಡಿಯೋ ನೋಡಿದರೆ ಶಾಕ್ ಜೊತೆಗೆ ಅಚ್ಚರಿ ಕಾಡಬಹುದು. ಮುಂದಿನ ದಿನಗಳಲ್ಲಿ ಇದು ನಮ್ಮ ಕಣ್ಣೆದುರು ಸಾಧ್ಯವಾಗಲಿದೆ. ಒಬ್ಬ ಮಾನವ ದೇಹದ ತಲೆಯನ್ನು ಮತ್ತೊಂದು ದೇಹಕ್ಕೆ ಕಸಿ ಮಾಡಲಾಗುತ್ತದೆ. ಇದು ವೈದ್ಯಕೀಯ ಲೋಕದ ಅಚ್ಚರಿಗೆ ಕಾರಣವಾಗಲಿದೆ.
ಎಂಟು ನಿಮಿಷಗಳ ಅವಧಿಯ ಅನಿಮೇಟೆಡ್ ವೀಡಿಯೊದಲ್ಲಿ, ಎರಡು ಸ್ವಾಯತ್ತ ಶಸ್ತ್ರಚಿಕಿತ್ಸಾ ರೋಬೋಟ್‌ಗಳು ಏಕಕಾಲದಲ್ಲಿ ಎರಡು ದೇಹಗಳ ತಲೆಯನ್ನು ಬೇರ್ಪಡಿಸುವ ಶಸ್ತ್ರ ಚಿಕಿತ್ಸೆ ನೆರವೇರಿಸುತ್ತಿವೆ. ಒಂದು ಮೆದುಳು ನಿಷ್ಕ್ರಿಯ ವ್ಯಕ್ತಿಯ ದೇಹಕ್ಕೆ ಮತ್ತೊಂದು ಆರೋಗ್ಯವಂತ ತಲೆಯನ್ನು ಜೋಡಿಸುವ ಕಾರ್ಯ ಇದಾಗಿದೆ. ಎಐ ತಂತ್ರಜ್ಞಾನವನ್ನು ಬಳಸಿ ಈ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಹೇಳಲಾಗಿದೆ. ಇದು ಭವಿಷ್ಯ ಭರವಸೆಗಳಲ್ಲಿ ಒಂದಾಗಿದೆ ಎಂದು ವಿವರಿಸಲಾಗಿದೆ.
ಬ್ರೈನ್‌ಬ್ರಿಡ್ಜ್ ಯುಎಸ್‌ನಲ್ಲಿನ ನ್ಯೂರೋಸೈನ್ಸ್ ಮತ್ತು ಬಯೋಮೆಡಿಕಲ್ ಇಂಜಿನಿಯರಿಂಗ್ ಸ್ಟಾರ್ಟಪ್ ಆಗಿದ್ದು, ಮೆದುಳು ಸತ್ತ ದಾನಿ ದೇಹಕ್ಕೆ ರೋಗಿಯ ತಲೆಯನ್ನು ಕಸಿ ಮಾಡಲು ಅನುಮತಿಸುವ ನವೀನ ಪರಿಕಲ್ಪನೆಯನ್ನು ಅನಾವರಣಗೊಳಿಸಿದೆ. ಕ್ಯಾನ್ಸರ್, ಪಾರ್ಶ್ವವಾಯು, ಆಲ್ಝೈಮರ್ಸ್ ಮತ್ತು ಪಾರ್ಕಿನ್ಸನ್‌ನಂತಹ ಚಿಕಿತ್ಸೆ ನೀಡಲಾಗದ ಕಾಯಿಲೆಗಳಿಗೆ ತುತ್ತಾದ ಮನುಷ್ಯರಿಗೆ ಹೊಸದಾಗಿ ತಲೆಯನ್ನು ಕಸಿ ಮಾಡುವ ಉದ್ದೇಶ ಹೊಂದಲಾಗಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 4.2 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಇದು ಸಾಧ್ಯವಾದರೆ ಮುಂದೆ ಬ್ರೈನ್ ಡೆಡ್, ರೋಗಿಗಳು ಹೊಸ ತಲೆಯನ್ನು ಪಡೆಯಬಹುದು. ಆದರೆ ಇದರಲ್ಲೂ ಹಲವು ನಕಾರಾತ್ಮಕ ಅಂಶಗಳು ಬೆಳಕಿಗೆ ಬರುತ್ತಿವೆ.
ಏಕೆಂದರೆ ತಲೆಯನ್ನೇ ಕಸಿ ಮಾಡುವಂತಹ ಶಸ್ತ್ರ ಚಿಕಿತ್ಸೆ ಇಂದಿಗೂ ಯಶಸ್ವಿಯಾಗಿಲ್ಲ, ಇದೆಲ್ಲಾ ನಾವು ಅನಿಮಿನೇಟೆಡ್ ವಿಡಿಯೋ ಮೂಲಕ ಮಾತ್ರ ಮಾಡಿ ತೋರಿಸಲು ಸಾಧ್ಯ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಇದು ನಮ್ಮ ಭಾರತದಲ್ಲಿ ಯುಗ ಯುಗಗಳ ಹಿಂದೆಯೇ ನಡೆದಿದೆ. ಈಶ್ವರ ತಮ್ಮ ಪುತ್ರ ಗಣೇಶನಿಗೆ ಆನೆಯ ತಲೆ ಜೋಡಿಸಿರುವುದು ನಿಮಗೆ ನೆನಪಿಲ್ಲವೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಆದರೆ ಈ ವಿಡಿಯೋ ನೋಡಿದ ಮಂದಿಯ ತಲೆಯಲ್ಲಿ ನೂರಾರು ಪ್ರಶ್ನೆಗಳಂತು ಹುಟ್ಟಿಕೊಂಡಿದೆ. ಒಬ್ಬನ ದೇಹಕ್ಕೆ ಮತ್ತೊಬ್ಬನ ತಲೆ ಜೋಡಿಸಿದರೆ ಆತ ಗುರುತು ಸಹ ಬದಲಾಗಲಿದೆ. ಆತ ಹೊಸ ವ್ಯಕ್ತಿಯಾಗಲು ಸಾಧ್ಯವಿಲ್ಲ ಜೊತೆಗೆ ಆತನಿಗೆ ಹಳೆಯ ನೆನಪುಗಳು ಸಹ ಮರುಕಳಿಸುತ್ತವೆ. ಇದೆಲ್ಲಾ ಹೇಗೆ ಸಾಧ್ಯವಾಗುತ್ತದೆ. ವೈದ್ಯಕೀಯ ಲೋಕದಲ್ಲಿ ಇದೊಂದು ಸಾಧನೆಯಾದರೆ ಇದಕ್ಕೆ ಇನ್ನೂ ಹತ್ತ ಹಲವು ವರ್ಷಗಳ ಅಧ್ಯಯನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
