Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಿಕನ್ ತೊಳೆಯದೆ ಬೇಯಸಿದರೆ ಆರೋಗ್ಯಕ್ಕೆ ಒಳ್ಳೆಯದಂತೆ!
ಚಿಕನ್ ತಂದಾಗ ಕೆಲವರು ಒಂದು ಬಾರಿ ತೊಳೆದರೆ ಇನ್ನು ಕೆಲವರು 3-4 ಬಾರಿ ತೊಳೆಯುತ್ತಾರೆ, ಆದರೆ ಚಿಕನ್ ಕತ್ತರಿಸಿದ ಮೇಲೆ ತೊಳೆಯದೆ ಮಾಡಬೇಕು ಅಂತೇ... ಛೀ.. ಚಿಕನ್ ತೊಳೆಯದೆ ಅಡುಗೆ ಮಾಡುವುದಾ ಎಂದು ಅನುಭವಿಸಬಹುದು, ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಚಿಕನ್ ಅನ್ನು ತೊಳೆಯದೆ ಮಾಡಬೇಕು.

ಚಿಕನ್ ಏಕೆ ತೊಳೆಯಬಾರದು?
ಕೆಲವರು ಚಿಕನ್ ತೊಳಯುವುದರಿಂದ Salmonella ಎಂಬ ಅನಾರೋಗ್ಯಕಾರಕ ಅಂಶ ಇರಲ್ಲ ಎಂದು ಭಾವಿಸುತ್ತಾರೆ. ಚಿಕನ್‌ನನ್ನು ಅಧಿಕ ಉಷ್ಣಾಂಶದಲ್ಲಿ ಬೇಯಿಸಬೇಕು, ಪಾತ್ರೆಯ ಬಾಯಿ ತೆಗೆದು ಬೇಯಿಸಿ, ಕುಕ್ಕರ್‌ನಲ್ಲಿ ಬೇಯಿಸಿದರೂ ನಂತರ ಸ್ವಲ್ಪ ಹೊತ್ತು ಕುಕ್ಕರ್‌ನ ಮುಚ್ಚಳ ತೆಗೆದು ಬೇಯಿಸಿ.
ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್, ಚಿಕನ್ ಅನ್ನು ಹಾನಿಕಾರಕ ಬ್ಯಾಕ್ಟಿರಿಯಾ ಹರಡುತ್ತದೆ. ಚಿಕನ್‌ನ ಕತ್ತರಿಸುವ ಮೊದಲು ತೊಳೆಯಬೇಕು, ನಂತರ ಚಿಕನ್ ಕತ್ತರಿಸಬೇಕು, ಚಿಕನ್ ಕತ್ತರಿಸಿದ ಮೇಲೆ ತೊಳೆಯುವುದು ಸೂಕ್ತವಲ್ಲ. ಇನ್ನು ಕೆಲವರು ಚಿಕನ್‌ನನ್ನು ತೊಳೆದು-ತೊಳೆದು ಬಳಸಬೇಡಿ. ನಿಮ್ಮ ಮನಸ್ಸಿಗೆ ತೃಪ್ತಿ ಅನಿಸದಿದ್ದರೆ ಒಂದು ಬಾರಿ ತೊಳೆಯಿರಿ, ಆದರೆ 3-4 ಬಾರಿ ಮಾಂಸಾಹಾರ ತೊಳೆದರೆ ಅದರ ಪೋಷಕಾಂಶ ದೂರಾಗುವುದು.
ಜನರು ಚಿಕನ್ ತೊಳೆಯುವುದು ಏಕೆ?
ಚಿಕನ್ ಅನ್ನು ನಾವು ಹೊರಗಡೆಯಿಂದ ತರುವಾಗ ಸ್ವಚ್ಛತೆಯ ಚಿಂತೆ ಕಾಡುವುದು, ಹಾಗಾಗಿ ಚಿಕನ್ ಅನ್ನು ತೊಳೆದು ತಿನ್ನುತ್ತಾರೆ. ಇನ್ನು ಪ್ಯಾಕ್ ಆಗಿರುವ ಚಿಕನ್ ಅನ್ನು ತೊಳೆದು ಇಡಲಾಗುವುದು. ಇನ್ನು ಚಿಕನ್ ಅನ್ನು ನೀವು ಸಿಂಕ್‌ನಲ್ಲಿ ತೊಳೆಯುವುದಾದರೆ ಅದರ ಮೊದಲು ತರಕಾರಿ ತೊಳೆದು ಇಟ್ಟು ಬಿಡಿ, ಚಿಕನ್ ತೊಳೆದ ಬಳಿಕ ಸಿಂಕ್ ಅನ್ನು ಚೆನ್ನಾಗಿ ಕ್ಲೀನ್ ಮಾಡಬೇಕು.
ಚಿಕನ್ ಮಸಾಲೆ ಕಲಿಸಿಟ್ಟರೆ ಹಾಳಾಗುವಿಲ್ಲವೇ?
ಕೆಲವರು ವಿನೆಗರ್, ನಿಂಬೆರಸ, ಅರಿಶಿಣ ಹಾಕಿ ಮಿಕ್ಸ್ ಮಾಡಿಟ್ಟರೆ ಚಿಕನ್‌ನಲ್ಲಿ ಬ್ಯಾಕ್ಟಿರಿಯಾ ಉತ್ಪತ್ತಿಯಾಗಲ್ಲ ಎಂದು ಭಾವಿಸುತ್ತಾರೆ, ಆದರೆ ಈ ರೀತಿ ಮಸಾಲೆ ಮಿಕ್ಸ್ ಮಾಡಿ ಒಂದೆರಡು ಇಟ್ಟರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಫ್ರಿಡ್ಜ್‌ನಲ್ಲಿ ಮಾಂಸಾಹಾರ ಎಷ್ಟು ಸಮಯ ಇಡಬಹುದು?
ಕೆಲವರು ಮಾಂಸವನ್ನು ವಾರದವರೆಗೆ ಇಟ್ಟರೂ ತೊಂದರೆಯಿಲ್ಲ ಎಂದು ಭಾವಿಸುತ್ತಾರೆ. USDA ಪ್ರಕಾರ ಚಿಕನ್ ಅನ್ನು ಫ್ರಿಡ್ಜ್‌ನಲ್ಲಿ ಎರಡು ದಿನಕ್ಕಿಂತ ಅಧಿಕ ಸಮಯವಿಡಬಾರದು. ಬೇಯಿಸಿ ಫ್ರೀಜರ್‌ನಲ್ಲಿಟ್ಟರೆ ತೊಂದರೆಯಿಲ್ಲ.
ಫುಡ್ ಪಾಯಿಸನ್ ಆಗುವುದನ್ನು ತಡೆಗಟ್ಟುವುದು ಹೇಗೆ?
ಚಿಕನ್ ಶವರ್ಮಾ ತಿಂದು ಸಾವನ್ನಪ್ಪಿದವರು ಇದ್ದಾರೆ, ಕೆಲವೊಮ್ಮೆ ಹೋಟೆಲ್‌ನಲ್ಲಿ ಮಾಂಸಾಹಾರ ಸೇವನೆ ಮಾಡಿದ ಮೇಲೆ ಹೊಟ್ಟೆ ನೋವು ಉಂಟಾಗುವುದು, ಇವೆಲ್ಲಾ ಚಿಕನ್ ಅನ್ನು ಸರಿಯಾಗಿ ಬೇಯಿಸದೆ ಇದ್ದಾಗ ಎರಡು ದಿನಕ್ಕಿಂತ ಅಧಿಕ ಸಮಯ ಚಿಕನ್ ಅನ್ನು ಫ್ರಿಡ್ಜ್‌ನಲ್ಲಿಟ್ಟು ಬಳಸುವುದರಿಂದ ಉಂಟಾಗುವುಉದ. ಚಿಕನ್ ಒಂದೆರಡು ದಿನವಷ್ಟೇ ಫ್ರೆಷ್ ಆಗಿರುತ್ತದೆ, ನಂತರ ಹಾನಿಕಾರಕ ಬ್ಯಾಕ್ಟಿರಿಯಾ ಸೇರಿಕೊಳ್ಳುತ್ತದೆ, ಇದನ್ನು ತಿನ್ನುವುದರಿಂದ ಫುಡ್ ಪಾಯಿಸನ್ ಉಂಟಾಗುವುದು.
ಚಿಕನ್ ಚೆನ್ನಾಗಿ ಬೇಯಬೇಕು, ಚೆನ್ನಾಗಿ ಬೆಂದರೆ ಹಾನಿಕಾರಕ ಬ್ಯಾಕ್ಟಿರಿಯಾಗಳು ನಾವು ತಿನ್ನುವಾಗ ನಮ್ಮ ಹೊಟ್ಟೆಯನ್ನು ಸೇರುವುದಿಲ್ಲ.
ಫ್ರಿಡ್ಜ್‌ನಲ್ಲಿ ಚಿಕನ್ ಇಡುವಾಗ ಸರಿಯಾಗಿ ಮುಚ್ಚಿ ಇಡಿ, ಇತರ ಸಾಮಗ್ರಿ ಜೊತೆ ಇಡಬೇಡಿ
ಫ್ರಿಡ್ಜ್‌ನಲ್ಲಿ ಮಾಂಸಾಹಾರದ ಪ್ರಕಾರ ಇತರ ಆಹಾರಗಳನ್ನು ಇಡಬೇಡಿ. ಚಿಕನ್ ಬ್ಯಾಕ್ಟಿರಿಯಾಗಳು ಇತರ ಆಹಾರಗಳಿಗೆ ಹರಡಬಹುದು. ತರಕಾರಿಯಾದರೂ ಕೂಡ ಇಡಬೇಡಿ, ಮಾಂಸಾಹಾರವನ್ನು ಚೆನ್ನಾಗಿ ಸೀಲ್ ಮಾಡಿ ಇಡಿ.
ಫ್ರೋಝನ್ ಮಾಂಸಕ್ಕಿಂತ ತಾಜಾ ಮಾಂಸ ಒಳ್ಳೆಯದು
ಫ್ರೋಝನ್ ಮಾಂಸಾಹಾರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅದರ ಬದಲಿಗೆ ತಾಜಾ ಆಹಾರ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
