Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಧೂಮಪಾನಿಯಾದ ತಂದೆ ಮಗನಿಗೆ ಧೂಮಪಾನ ಮಾಡಬೇಡ ಎಂದರೆ ಹೇಗಿರುತ್ತೆ ಪರಿಣಾಮ?
ಬಹಳ ಹಿಂದಿನಿಂದಲೂ ಒಂದು ಮಾತಿದೆ. ಮಕ್ಕಳು ನಾವು ಹೇಳಿದ್ದನ್ನು ಕೇಳಿ ಕಲಿಯುವುದಿಲ್ಲ ನಾವು ಮಾಡಿದ್ದನ್ನು ನೋಡಿ ಕಲಿಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾತಿಗೆ ಅರ್ಥವೇ ಇಲ್ಲ ಎಂಬಂತಾಗಿದೆ. ಕೇವಲ ನಾವು ಮಕ್ಕಳಿಗೆ ಹೀಗೆ ಇರಬೇಕು ಹಾಗೆ ಇರಬೇಕು ಎಂದು ಉಪದೇಶ ಮಾಡುತ್ತೇವೆಯೇ ಹೊರತು ನಿಜವಾಗಿ ನಾವು ಹಾಗೆ ವರ್ತಿಸಿ ನಂತರ ಮಕ್ಕಳಿಗೆ ಅದನ್ನು ಪಾಠ ಮಾಡುವುದಿಲ್ಲ ಇದು ಮಕ್ಕಳ ಮೇಲೆ ನಿಜವಾಗಿ ಪರಿಣಾಮ ಬೀರುತ್ತದೆಯೇ?

ಒಬ್ಬ ವ್ಯಕ್ತಿ ತನ್ನ ಮಗು ಸಿಕ್ಕಾಪಟ್ಟೆ ಬೆಲ್ಲ ತಿನ್ನುತ್ತೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಇದನ್ನ ಹೇಗಾದರೂ ಮಾಡಿ ಬಿಡಿಸಬೇಕು. ಅದಕ್ಕೆ ಏನಾದರೂ ಪರಿಹಾರ ಕೊಡಿ ಎಂದು ಒಬ್ಬ ಗುರುವಿನ ಬಳಿ ಕೇಳುತ್ತಾನೆ. ಆಗ ಗುರು 15 ದಿನ ಬಿಟ್ಟು ಬರುವಂತೆ ಹೇಳುತ್ತಾರೆ. ಅದೇ ರೀತಿ 15 ದಿನ ಬಿಟ್ಟು ಆ ವ್ಯಕ್ತಿ ಮಗುವನ್ನು ಕರೆದುಕೊಂಡು ಗುರುವಿನ ಬಳಿ ಬಂದಾಗ ಗುರು ಆ ಮಗುವಿಗೆ ಬುದ್ಧಿ ಹೇಳಿ ಮತ್ತೆಂದೂ ಬೆಲ್ಲವನ್ನು ಅಧಿಕವಾಗಿ ಸೇವನೆ ಮಾಡದಂತೆ ಹೇಳುತ್ತಾರೆ, ಅದೇ ರೀತಿ ಮಗು ನಡೆದುಕೊಳ್ಳುತ್ತದೆ. ಆಗ ಆ ವ್ಯಕ್ತಿ ಗುರುವನ್ನು ಪ್ರಶ್ನೆ ಮಾಡುತ್ತಾನೆ.
ಇದೇ ಕೆಲಸವನ್ನು ಹದಿನೈದು ದಿನಗಳ ಹಿಂದೆಯೇ ಮಾಡಬಹುದಿತ್ತು ಅಲ್ಲವೇ ಎಂದು ಗುರುವನ್ನು ಪ್ರಶ್ನೆ ಮಾಡಿದಾಗ ಗುರು ನಗುತ್ತಲೇ ಉತ್ತರಿಸುತ್ತಾರೆ. ನನಗೂ ಸಿಕ್ಕಾಪಟ್ಟೆ ಬೆಲ್ಲ ತಿನ್ನುವ ಅಭ್ಯಾಸ ಇತ್ತು ನಾನೇ ಅದನ್ನು ಮಾಡುತ್ತಿರುವಾಗ ಅದನ್ನ ಬಿಡದೆ ಮಗುವಿಗೆ ನೀನು ಮಾತ್ರ ಬೆಲ್ಲ ಸೇವಿಸಬೇಡ ಎಂದು ಹೇಗೆ ಹೇಳುವುದು ಎಷ್ಟು ಸರಿ. 15 ದಿನಗಳಲ್ಲಿ ನಾನು ಬೆಲ್ಲ ಸೇವನೆಯನ್ನು ಬಿಟ್ಟಿದ್ದೇನೆ. ಈಗ ನಿನ್ನ ಮಗುವಿಗೆ ಅದನ್ನೇ ತಿಳಿಸಿ ಹೇಳಿದ್ದೇನೆ ಹಾಗಾಗಿ ಮಗು ಇನ್ನು ಮುಂದೆ ಬೆಲ್ಲ ಸೇವನೆ ಅತಿಯಾಗಿ ಮಾಡುವುದಿಲ್ಲ ಎಂದು ಹೇಳುತ್ತಾರೆ.
ಈ ಕಥೆ ನಮಗೆ ತಿಳಿಸಿಕೊಡುವುದು ಏನೆಂದರೆ ನಾವು ಮಕ್ಕಳಿಗೆ ಹೀಗೆ ಇರಬೇಕು, ಇದನ್ನೇ ಮಾಡಬೇಕು ಎಂದು ಬಾಯಿ ಮಾತಲ್ಲಿ ಹೇಳುವುದಲ್ಲ. ನಾವು ಮೊದಲು ಆ ರೀತಿ ನಡೆದುಕೊಂಡು ತೋರಿಸಬೇಕು ನಂತರವಷ್ಟೇ ನಮ್ಮನ್ನು ನೋಡಿ ಮಗುವು ಕೂಡ ಅದನ್ನು ಕಲಿಯುತ್ತದೆ.
ಉದಾಹರಣೆಗೆ ನಾವು ಹಿರಿಯರಿಗೆ ಗೌರವ ಕೊಟ್ಟರೆ, ನಾವು ಮನೆಯಲ್ಲಿ ದಿನವೂ ದೇವರಿಗೆ ನಮಸ್ಕಾರ ಮಾಡಿದರೆ ಮಗು ಕೂಡ ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತದೆ. ಅದರ ಬದಲು ನಾವು ಕೈಯಲ್ಲಿ ಮೊಬೈಲ್ ಹಿಡಿದು ಕುಳಿತು ಹೋಗು ದೇವರಿಗೆ ನಮಸ್ಕಾರ ಮಾಡು ಎಂದು ಹೇಳಿದ್ರೆ ಯಾವ ಮಗುವೂ ಕೂಡ ಅದನ್ನು ಮಾಡುವುದಿಲ್ಲ.
ಒಂದು ಮಗುವಿಗೆ ಸಂಸ್ಕಾರ ಕಲಿಸುವುದಿರಲಿ ಅಥವಾ ಮಗುವಿಗೆ ಸಮಾಜದಲ್ಲಿ ಹೇಗೆ ಇರಬೇಕು ಎನ್ನುವುದನ್ನು ತಿಳಿಸುವುದೇ ಆಗಿರಲಿ, ಮೊದಲು ನಾವು ಅದನ್ನು ನಮ್ಮಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು. ನಂತರ ಮಗುವಿಗೆ ನಾನು ಇರುವ ಹಾಗೆ ನೀನು ಇರಬೇಕು ಎಂದು ತಿಳಿಸಿದಾಗ ಮಗು ಅದನ್ನ ಫಾಲೋ ಮಾಡುತ್ತೆ.
ಒಂದು ಮಗುವಿಗೆ ತನ್ನ ತಂದೆ ತಾಯಿ ರೋಲ್ ಮಾಡೆಲ್ ಆಗಿರುತ್ತಾರೆ. ತನ್ನ ತಂದೆ ತಾಯಿ ಏನೇ ಮಾಡಿದರು ಸರಿ ಎನ್ನುವ ಭಾವನೆ ಮಕ್ಕಳಲ್ಲಿ ಇರುತ್ತದೆ. ಹಾಗಾಗಿ ನಾವು ತಪ್ಪು ಹೆಜ್ಜೆ ಇಟ್ಟರೆ ಅದು ಮಕ್ಕಳಲ್ಲಿಯೂ ಕೂಡ ಅಭ್ಯಾಸವಾಗುತ್ತದೆ. ಅದೇ ನಾವು ಸರಿಯಾದ ರೀತಿಯಲ್ಲಿ ನಡೆದುಕೊಂಡರೆ ಮಕ್ಕಳು ತಕ್ಷಣ ಅದನ್ನೇ ಕಲಿಯುತ್ತಾರೆ ಅದೇ ರೀತಿ ನಡೆದುಕೊಳ್ಳುತ್ತಾರೆ.
ಮೊಟ್ಟ ಮೊದಲನೇದಾಗಿ ನಾವು ಮಕ್ಕಳಿಗೆ ನೀನು ಮಾಡುತ್ತಿರುವುದು ತಪ್ಪು ಎಂಬುದನ್ನು ಹೇಳುವುದಕ್ಕೂ ಮೊದಲು ಆ ತಪ್ಪು ಮಾಡುವುದನ್ನು ಮಗು ಎಲ್ಲಿಂದ ಕಲಿತಿದೆ ಎಂಬುದನ್ನು . ಉದಾಹರಣೆಗೆ ನಾವು ಏನಾದರೂ ತಪ್ಪು ಕೆಲಸ ಮಾಡಿದರೆ ಮಗು ಅದನ್ನ ನೋಡಿದ್ದರೆ ಅದೇ ರೀತಿ ನಡೆದುಕೊಳ್ಳುತ್ತದೆ ಅದಕ್ಕೆ ಅದು ಸರಿ ಅಥವಾ ತಪ್ಪು ಎನ್ನುವ ಕಲ್ಪನೆ ಇರುವುದಿಲ್ಲ.
ಮಕ್ಕಳನ್ನ ಬೆಳೆಸುವುದು ಎಂದರೆ ಕತ್ತಿಯ ಅರಿಯ ಮೇಲೆ ನಡೆದಂತೆ. ನಾವು ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಅಪಾಯ ಆಗುವುದು ಗ್ಯಾರಂಟಿ. ಮಗು ಬೆಳೆದು ದೊಡ್ಡವನಾದ ಮೇಲೆ ಸಮಾಜಕ್ಕೆ ಉತ್ತಮ ಪ್ರಜೆ ಆಗಬೇಕು ಎಂದರೆ ಮಗುವನ್ನು ಗಿಡವಾಗಿದ್ದಾಗಲೇ ಬಗ್ಗಿಸುವುದು ಬಹಳ ಮುಖ್ಯ. ಇದು ತಂದೆ ತಾಯಿಗಳ ದೊಡ್ಡ ಜವಾಬ್ದಾರಿಯು ಹೌದು.
ಹಾಗಾಗಿ ಇನ್ನು ಮುಂದೆ ಮಕ್ಕಳಿಗೆ ಏನಾದರೂ ಒಂದು ಕೆಲಸ ಮಾಡಿ ಎಂದು ಹೇಳುವುದಕ್ಕೂ ಮೊದಲು ನಾವು ಹಾಗೆಯೇ ನಡೆದುಕೊಳ್ಳುತ್ತಿದ್ದೇವೆಯೇ ಎಂಬುದನ್ನ ಗಮನಿಸಬೇಕು. ನಾವು ಸರಿ ದಾರಿಯಲ್ಲಿ ನಡೆಯುತ್ತಿದ್ದರೆ ಮಗು ನೀವು ಹೇಳಿಕೊಡದೆ ಇದ್ದರೂ ಕೂಡ ನಿಮ್ಮನ್ನೇ ನೋಡಿ ಅದೇ ರೀತಿ ಸರಿದಾರಿಯಲ್ಲಿ ನಡೆಯುವುದನ್ನು ಕಲಿಯುತ್ತದೆ. ಜೀವನದ ಪಾಠಗಳನ್ನು ಮಗುವಿಗೆ ಕಲಿಸುವುದಕ್ಕೂ ಮೊದಲು ನಿಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡು ನೋಡಿ. ಆಗ ಮಾತ್ರ ಮಕ್ಕಳ ಮನಸ್ಸಿನ ಮೇಲೆ ನೀವು ಹೇಳಿರುವುದು ಆಳವಾಗಿ ಬೇರೂರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
