Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಈ ರಕ್ತ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿದರೆ ಆರೋಗ್ಯ ಜೋಪಾನವಾಗಿರುತ್ತೆ
30 ವರ್ಷ ದಾಟುತ್ತಿದ್ದಂತೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ, ಏಕೆಂದರೆ ಈ ಪ್ರಾಯದ ಬಳಿಕ ಕಾಯಿಲೆಗಳ ಸಂಖ್ಯೆ ಹೆಚ್ಚಾಗುವುದು. ರಕ್ತದೊತ್ತಡ, ಥೈರಾಯ್ಡ್, ಕೊಲೆಸ್ಟ್ರಾಲ್ ಈ ಬಗೆಯ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ನಮ್ಮ ಆರೋಗ್ಯ ಕಾಪಾಡುವಲ್ಲಿ ನಿಯಮಿತ ರಕ್ತ ಪರೀಕ್ಷೆ ಮಾಸಡಿಸುವುದು ತುಂಬಾ ಒಳ್ಳೆಯದು.
ತಾವೇ ಆಸಕ್ತಿ ತೆಗೆದುಕೊಂಡು ರಕ್ತ ಪರೀಕ್ಷೆ ಮಾಡಿಸುವವರು ತುಂಬಾ ಕಡಿಮೆ. ಏನಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ವೈದ್ಯರು ಹೇಳಿದಾಗ ರಕ್ತ ಪರೀಕ್ಷೆ ಮಾಡಿಸುವವರೇ ಅಧಿಕ ಅಲ್ಲವೇ? ಕಾಯಿಲೆ ಬಂದು ಚಿಕಿತ್ಸೆ ಮಾಡುವ ಬದಲಿಗೆ ಕಾಯಿಲೆ ಬರುವ ಮುನ್ನವೇ ಮುನ್ನಚ್ಚರಿಕೆವಹಿಸುವುದು ಒಳ್ಳೆಯದು, ಈ ರಕ್ತ ಪರೀಕ್ಷೆಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ನೋಡಿ:

ಯಾವೆಲ್ಲಾ ಪರೀಕ್ಷೆ ನಿಯಮಿತವಾಗಿ ಮಾಡುವುದು ಒಳ್ಳೆಯದು?
6 ತಿಂಗಳಿಗೊಮ್ಮೆ ಈ ರಕ್ಷ ಪರೀಕ್ಷೆ ಮಾಡಿಸುವುದಿಂದ ನಿಮ್ಮ ಆರೋಗ್ಯ ಹೇಗಿದೆ ಎಂದು ತಿಳಿಯಬಹುದು. ಯಾವೆಲ್ಲಾ ಪರೀಕ್ಷೆ ಮಾಡಿಸಬೇಕು?
ಕಂಪ್ಲೀಟ್ ಬ್ಲಡ್ ಟೆಸ್ಟ್ ಅಥವಾ CBC
ಈ ಪರೀಕ್ಷೆ ಮಾಡಿಸುವುದರಿಂದ ಕೆಂಪು ರಕ್ತ ಕಣಗಳು ಎಷ್ಟಿದೆ? ಹಿಮೋಗ್ಲೋಬಿನ್ ಲೆವಲ್ ಎಷ್ಟಿದೆ ಎಂದು ತಿಳಿಯಬಹುದು. ಈ ಪರೀಕ್ಷೆ ಮಾಡುವುದರಿಂದ ಪೋಷಕಾಂಶದ ಕೊರತೆ ಇದೆಯೇ, ಕ್ಯಾನ್ಸರ್ ಕಣಗಳು ಇದೆಯೇ ಇವೆಲ್ಲಾ ತಿಳಿಯುವುದರಿಂದ ಬೇಗನೆ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಲು ಸಹಕಾರಿ.
ಬೇಸಿಕ್ ಬೆಟಾಬಾಲಿಕ್ ಪ್ಯಾನಲ್(BMP)
ಈ ಪರೀಕ್ಷೆ ಮಾಡುವುದರಿಂದ
ಕ್ಯಾಲ್ಸಿಯಂ
ಗ್ಲುಕೋಸ್
ಸೋಡಿಯಂ
ಪೊಟಾಷ್ಯಿಯಂ
ಕ್ಲೋರೈಡ್
ಬ್ಲಡ್ ಯೂರಿಯಾ ನೈಟ್ರೋಜಿನ್
ಈ ರಕ್ತ ಪರೀಕ್ಷೆ ಮಾಡುವ 8 ಗಂಟೆ ಮೊದಲು ಉಪವಾಸವಿರಬೇಕು, ಬೆಳಗ್ಗಿನ ಹೊತ್ತು ಬ್ರೇಕ್‌ಫಾಸ್ಟ್‌ಗೆ ಮೊದಲು ಮಾಡಲು ಹೇಳಲಾಗುವುದು, ಇದರಿಂದ 8 ಗಂಟೆಯ ಗ್ಯಾಪ್ ಸಿಗುವುದು. ಈ ಪರೀಕ್ಷೆ ಮಡಿಸುವುದರಿಂದ ಕಿಡ್ನಿ ಆರೋಗ್ಯದ ಬಗ್ಗೆ ತಿಳಿಯಬಹುದು. ಮಧುಮೇಹ, ಎಲೆಕ್ಟ್ರೋಲೈಟ್ಸ್ ಅಸಮತೋಲನ ಉಂಟಾಗಿದ್ದರೆ ತಿಳಿದು ಬರುವುದು.
ಲಿಪಿಡ್ ಪರೀಕ್ಷೆ
ಈ ಪರೀಕ್ಷೆ ಮಾಡುವಾಗ 8 ಗಂಟೆಯಿಂದ ಯಾವುದೇ ಆಹಾರ ಸೇವಿಸಬಾರದು. ಈ ಪರೀಕ್ಷೆ ಮಾಡುವುದರಿಂದ ಕೊಲೆಸ್ಟ್ರಾಲ್ ಬಗ್ಗೆ ತಿಳಿಯಬಹುದು. ಕೆಟ್ಟ ಕೊಲೆಸ್ಟ್ರಾಲ್‌ಎಷ್ಟಿದೆ ಎಂಬುವುದು ಈ ಪರೀಕ್ಷೆಯಿಂದ ತಿಳಿದು ಬರುವುದು.
ಥೈರಾಯ್ಡ್ ಪರೀಕ್ಷೆ
T3, T4, TSH ಪರೀಕ್ಷೆ ಮಾಡುವುದರಿಂದ ಥೈರಾಯ್ಡ್ ಹಾರ್ಮೋನ್ ಸಮತೋಲನದಲ್ಲಿ ಇದೆಯೇ ಎಂದು ತಿಳಿಯಬಹುದು.
T3 ಹಾರ್ಮೋನ್: ಈ ಹಾರ್ಮೋನ್ ಹೃದಯ ಬಡಿತ ನಿಯಂತ್ರಣದಲ್ಲಿಡುತ್ತದೆ ಹಾಗೂ ದೇಹದ ಉಷ್ಣಾಂಶ ಕಾಪಾಡಲು ಸಹಕಾರಿ.
T4: ಇದು ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ.
ಸಿ ರಿಯಾಕ್ಟಿವ್ ಪ್ರೊಟೀನ್ ಟೆಸ್ಟ್ ( C-Reactive Protien Teast)
ಈ ಪರೀಕ್ಷೆ ಮಾಡುವುದರಿಂದ ಲಿವರ್ ಆರೋಗ್ಯದ ಬಗ್ಗೆ ತಿಳಿಯಬಹುದು. ಅಲ್ಲದೆ ಹೃದಯಾಘಾತದ ಸಾಧ್ಯತೆ ಇದೆಯೇ ಎಂಬುವುದು ಕೂಡ ತಿಳಿಯುತ್ತದೆ. ಇನ್ನು ಕೆಲ ಟೊಇಮ್ಯೂನೆ ಕಾಯಿಲೆ ಇದ್ದರೆ ಕೂಡ ಈ ಪರೀಕ್ಷೆಯಿಂದ ತಿಳಿದು ಬರುವುದು.
ಲೈಂಗಿಕವಾಗಿ ಹರಡುವ ರೋಗ
ಹರ್ಪೀಸ್
ಏಡ್ಸ್
ಹೆಪಟೈಟಿಸ್ ಸಿ
ಇದು ರಕ್ತ ಪರೀಕ್ಷೆ ಮಾಡುವುದರಿಂದ ತಿಳಿದು ಬರುವುದು.
ರಕ್ತ ಪರೀಕ್ಷೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳು
ನಾವು ರಕ್ತ ಪರೀಕ್ಷೆ ಸುಮ್ಮನೆ ಮಾಡಿಸುವುದರಿಂದ ದುಡ್ಡು ವೇಸ್ಟ್ ಎಂದು ಭಾವಿಸುತ್ತೇವೆ, ಆದರೆ ವಯಸ್ಸಾಗುತ್ತಿದ್ದಂತೆ ಈ ರೀತಿಯ ರಕ್ತ ಪರೀಕ್ಷೆ ತುಂಬಾನೇ ಅವಶ್ಯ. ಈ ಬಗೆಯ ರಕ್ತ ಪರೀಕ್ಷೆ ಮಾಡಿಸುವುದರಿಂದ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಬೇಗನೆ ತಿಳಿದು ಬರುವುದು, ಚಿಕಿತ್ಸೆ ಪಡೆದು ಗುಣಮುಖರಾಗಲು ಸಹಾರವಾಗುವುದು.
ಆದರೆ ಕೆಲವೊಂದು ಆರೋಗ್ಯ ಸಮಸ್ಯೆ ಉದಾಹರಣೆಗೆ ಕ್ಯಾನ್ಸರ್ ಪ್ರಾರಂಭದಲ್ಲಿ ಗೊತ್ತಾಗುವುದಿಲ್ಲ, ಕಾಯಿಲೆ ಉಲ್ಬಣವಾದಾಗ ಮಾತ್ರ ತಿಳಿದು ಬರುತ್ತದೆ. ಅದೇ ನಿಯಮಿತ ರಕ್ತ ಪರೀಕ್ಷೆ ಮಾಡುವುದರಿಂದ ಏನಾದರೂ ಸಮಸ್ಯೆಯಿದ್ದರೆ ಬೇಗನೆ ತಿಳಿದು ಬರುವುದು, ಕಾಯಿಲೆ ಹೆಚ್ಚಾಗುವ ಮೊದಲೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
