Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ದೇಹದಲ್ಲಿ ಈ 7 ಭಾಗದಲ್ಲಿ ಊತ ಉಂಟಾದರೆ ಅದು ಫ್ಯಾಟಿ ಲಿವರ್‌ನ ಲಕ್ಷಣವಾಗಿದೆ, ನಿರ್ಲಕ್ಷ್ಯ ಮಾಡಬೇಡಿ
ನಮ್ಮ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುವಲ್ಲಿ ಲಿವರ್‌ನ ಮಾತ್ರ ತುಂಬಾ ಮುಖ್ಯವಾದದ್ದು. ರಕ್ತ ಶುದ್ಧೀಕರಿಸಲು, ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಈ ಲಿವರ್ ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ತಮ. ಆದರೆ ಫ್ಯಾಟಿ ಲಿವರ್‌ನ ಸಮಸ್ಯೆ ಉಂಟಾರೆ ಅದು ಲಿವರ್‌ನ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಈ ಫ್ಯಾಟಿ ಲಿವರ್ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಈ ಸಮಸ್ಯೆ ಬಂದರೆ ಅದು ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ, . ಈ ಫ್ಯಾಟಿ ಲಿವರ್ ಸಮಸ್ಯೆ ಒಬೆಸಿಟಿ ಇರುವವರಲ್ಲಿ, ಮದ್ಯಪಾನಿಗಳಲ್ಲಿ, ಕೊಲೆಸ್ಟ್ರಾಲ್ ಹೆಚ್ಚಿರುವವರಲ್ಲಿ ಕಂಡು ಬರುತ್ತದೆ. ಈ ಫ್ಯಾಟಿ ಲಿವರ್ ಸಮಸ್ಯೆ ಉಂಟಾದರೆ ಈ ರೀತಿಯ ಲಕ್ಷಣಗಳು ಕಂಡು ಬರುವುದು:

ಈ ಫ್ಯಾಟಿ ಲಿವರ್ ಎಂದರೇನು?
ಲಿವರ್‌ಗೆ ಹಾನಿಯಾದರೆ ಲಿವರ್ ಸಮಸ್ಯೆ ಉಂಟಾಗುವುದು. ಲಿವರ್‌ನ ಗಾತ್ರ ಹೆಚ್ಚಾಗುವುದಕ್ಕೆ ಫ್ಯಾಟಿ ಲಿವರ್ ಎಂದು ಕರೆಯಲಾಗುವುದು. ಈ ರೀತಿ ಫ್ಯಾಟಿ ಲಿವರ್ ಸಮಸ್ಯೆ ಉಂಟಾದಾಗ ದೇಹದ ಅಂಗಾಂಗಗಳ ಮೇಲೆ ಪರಿಣಾಮ ಬೀರುವುದು. ಈ ರೀತಿ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗಿದ್ದರೆ ಒಳ್ಳೆಯ ಚಿಕಿತ್ಸೆ ಪಡೆಯಬೇಕು, ಇಲ್ಲದಿದ್ದರೆ ಪ್ರಾಣಕ್ಕೆ ಕೂಡ ಕಂಟಕವಾಗಬಹುದು.
ಫ್ಯಾಟಿ ಲಿವರ್ ಸಮಸ್ಯೆ ಉಂಟಾದರೆ ಈ ಲಕ್ಷಣಗಳು ಕಂಡು ಬರುವುದು:
ಕಣ್ಣುಗಳು ಊದಿಕೊಳ್ಳುವುದು
ಲಿವರ್‌ನ ಸಮಸ್ಯೆ ಉಂಟಾದರೆ ಕಣ್ಣುಗಳು ಹಳದಿಯಾಗುವುದು, ಹಣ್ಣುಗಳಲ್ಲಿ ಊತ ಈ ರೀತಿಯ ಸಮಸ್ಯೆ ಕಂಡು ಬರುವುದು. ಫ್ಯಾಟಿ ಲಿವರ್ ಸಮಸ್ಯೆ ಉಂಟಾದರೆ ಕಣ್ಣುಗಳನ್ನು ನೋಡಿದಾಗ ತೊಂದರೆಯಾಗುವುದು.
ಕಿಬ್ಬೊಟ್ಟೆ ನೋವು
ಇದ್ದಕ್ಕಿದ್ದಂತೆ ಕಿಬ್ಬೊಟ್ಟೆ ನೋವು ಕಂಡು ಬರುವುದು. ಈ ರೀತಿಯ ಸಮಸ್ಯೆ ಕಂಡು ಬಂದರೆ ಇದು ಫ್ಯಾಟಿ ಲಿವರ್‌ನ ಪ್ರಾರಂಭದ ಲಕ್ಷಣವಾಗಿದೆ. Ascitesನಿಂದಾಗಿ ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು, ಇದರಿಂದಾಗಿ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಂಡು ಬರುವುದು.
ಕಾಲುಗಳಲ್ಲಿ ಊತ ಕಂಡು ಬರುವುದು
ಕಾಲುಗಳಲ್ಲಿ, ಪಾದಗಳಲ್ಲಿ ಊತ ಕಂಡು ಬರುವುದು. ಲಿವರ್ ಸಮಸ್ಯೆ ಉಂಟಾದಾಗ ಕಾಲುಗಳಲ್ಲಿ ಊತ ಕಂಡು ಬರುವುದು. ಈ ರೀತಿಯಾದಾಗ ಕಾಲುಗಳಲ್ಲಿ ನೋವು ಕಂಡು ಬರುವುದು, ಈ ರೀತಿಯಾದಾಗ ವೈದ್ಯರಿಗೆ ತೋರಿಸಿ.
ಕೈಗಳಲ್ಲಿ ಊತ ಕಂಡು ಬರುವುದು
ನಿಮ್ಮ ಕೈಗಳಲ್ಲಿ ಊತ ಕಂಡು ಬಂದರೆ ನೀವು ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದು ಲಿವರ್ ಹಾನಿಯಾಗಿದೆ ಎಂಬುವುದರ ಸೂಚನೆಯಾಗಿದೆ. ಫ್ಯಾಟಿ ಲಿವರ್ ಸಮಸ್ಯೆಯಾದಾಗ ಮೈಯಲ್ಲಿ ನೀರು ತುಂಬಿಕೊಳ್ಳುವುದು, ಇದರಿಂದ ಕೈ-ಕಾಲುಗಳಲ್ಲಿ ನೀರು ತುಂಬಿಕೊಳ್ಳುವುದು.
ಎದೆ ಭಾರ, ಉರಿಯೂತದ ಸಮಸ್ಯೆ ಉಂಟಾಗುವುದು
ಫ್ಯಾಟಿ ಲಿವರ್ ಸಮಸ್ಯೆ ಉಂಟಾದರೆ, ಎದೆಯುರಿ, ಎದೆಭಾರ ಈ ಬಗೆಯ ಸಮಸ್ಯೆ ಉಂಟಾಗುವುದು. ಲಿವರ್ ಹಾನಿಯಾದಾಗ ಉಸಿರಾಟದ ಸಮಸ್ಯೆ ಉಂಟಾಗುವುದು. ಈ ರೀತಿಯಾದಾಗ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು, ನೀವು ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು, ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಮುಖದಲ್ಲಿ ಊತ ಕಂಡು ಬರುವುದು
ಕಣ್ಣುಗಳಲ್ಲಿ ಮಾತ್ರ ಮುಖದಲ್ಲಿಯೂ ಊತ ಕಂಡು ಬರುವುದು. ಲಿವರ್ ಸಮಸ್ಯೆ ಉಂಟಾದಾಗ ಮುಖದ ಭಾಗದಲ್ಲಿ ಊತ ಕಂಡು ಬರುವುದು.
ಪಾದಗಳಲ್ಲಿ ಊತ
ಪಾದಗಳಲ್ಲಿ ಊತ ಕಂಡು ಬಂದರೆ ಲಿವರ್ ಸಮಸ್ಯೆವಿರಬಹುದು. ನಡೆದಾಡುವಾಗ ನೋವು ಕಂಡು ಬರುವುದು, ತುಂಬಾ ಹೊತ್ತು ನಿಲ್ಲುವುದು ಕೂಡ ಕಷ್ಟವಾಗುವುದು. ಸ್ವಲ್ಪ ದೂರ ನಡೆದಾಗ ತುಂಬಾ ಸುಸ್ತು ಅನಿಸುವುದು, ಕಾಲುಗಳನ್ನು ಎಳೆದುಕೊಮಡು ನಡೆಯಬೇಕಾಗುತ್ತದೆ, ಸರಿಯಾಗಿ ಹೆಜ್ಜೆ ಹಾಕಲು ಸಾಧ್ಯವಾಗಲ್ಲ, ಇನ್ನು ಕೆಲವರು ನಡೆಯುವಾಗ ಸ್ವಾದೀನ ತಪ್ಪಿ ಬೀಳಬಹುದು.
ಫ್ಯಾಟಿ ಲಿವರ್ ನಿರ್ಲಕ್ಷ್ಯ ಮಾಡಬಾರದು ಏಕೆ?
ಫ್ಯಾಟಿ ಲಿವರ್ ಅನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು, ಆದರೆ ಇದನ್ನು ನಿರ್ಲಕ್ಷ್ಯ ಮಾಡಬಹುದು ಲಿವರ್‌ಗೆ ಹಾನಿಯಾಗುವುದು, ಇದರಿಂದ ಪ್ರಾಣಕ್ಕೆ ಅಪಾಯ ಉಂಟಾಗುವುದು.
ಫ್ಯಾಟಿ ಲಿವರ್ ಆರೋಗ್ಯ ಸಮಸ್ಯೆ ಇರುವವರಿಗೆ ಈ ಬಗೆಯ ಆಹಾರ ಒಳ್ಳೆಯದು:
ಕಫಿ, ಬೆಳ್ಳುಳ್ಳಿ, ಗ್ರೀನ್ ಟೀ, ಹಣ್ಣುಗಳು, ತರಕಾರಿ, ವಿಟಮಿನ್ ಇ, ಸೂರ್ಯಕಾಂತಿ ಬೀಜ, ಬಾದಾಮಿ, ಆಲೀವ್ ಎಣ್ಣೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications