Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಭವಿಷ್ಯದಲ್ಲಿ ಪುರುಷರೇ ಇರಲ್ವಾ? ಭವಿಷ್ಯ ಅಲ್ಲ, ವಿಜ್ಞಾನ ಹೇಳುತ್ತಿರುವುದು, ಪುರುಷರಿಗೆ ಬಂದಿದೆ ಈ ಕಂಟಕ
ಭವಿಷ್ಯದಲ್ಲಿ ಪುರುಷರೇ ಇಲ್ಲವಾಗುತ್ತಾರಾ? ಏಕೆಂದರೆ ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ಇಂಥದ್ದೊಂದು ಆಘಾತಕಾರಿ ಸತ್ಯಾಂಶ ಬೆಳಕಿಗೆ ಬಂದಿದೆ, Y ಕ್ರೋಮೋಸೋಮ್ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗುತ್ತಿರುವುದರಿಂದ ಗಂಡು ಮಕ್ಕಳ ಜನನ ತುಂಬಾನೇ ಕಡಿಮೆಯಾಗುತ್ತಿದೆ ಎಂದು ಈ ಅಧ್ಯಯನ ಹೇಳಿದೆ.
ಆಸ್ಟ್ರೇಲಿಯಾದ ಜೆನೆಟಿಸ್ಟ್ ಜೆನ್ನಿ ಗ್ರೇವ್ಸ್ Y ಕ್ರೋಮೋಸೋಮ್ ಸಂಖ್ಯೆ ತುಂಬಾನೇ ಕಡಿಮೆಯಾಗುತ್ತಿದೆ, ಇದರಿಂದ ಪುರುಷ ಸಂತಾನವೇ ಇಲ್ಲವಾಗಬಹುದು ಅಥವಾ ಹೊಸ ಲಿಂಗ ರೂಪಗೊಳ್ಳಬಹುದು ಎಂದು ಹೇಳಿದ್ದಾರೆ.

ಮಗು ಹಣ್ಣು ಅಥವಾ ಗಂಡು ಆಗುವುದರಲ್ಲಿ ಈ ಕ್ರೋಮೋಸೋಮ್ ಪಾತ್ರ ತುಂಬಾನೇ ಮುಖ್ಯ
ಮಹಿಳೆಯರಲ್ಲಿ ಎರಡು X ಕ್ರೋಮೋಸೋಮ್ ಇದ್ದರೆ ಪುರುಷರಲ್ಲಿ ಒಂದು X ಮತ್ತು Y ಕ್ರೋಮೋಸೋಮ್ ಇರುತ್ತದೆ. X ಕ್ರೋಮೋಸೋಮ್‌ಗೆ ಹೋಲಿಕೆ ಮಾಡಿದರೆ Y ಕ್ರೋಮೋಸೋಮ್ ತುಂಬಾ ತೆಳುವಾಗಿರುತ್ತದೆ, 45 ಜೀನ್‌ಗಳಲ್ಲಿ ಒಂದು Y ಪುರುಷ ಲಿಂಗ ರೂಪುಗೊಳ್ಳಲು ಕಾರಣವಾಗುತ್ತಿದೆ. ಮೊದಲು Yಕ್ರೋಮೋಸೋಮ್ ಎಕ್ಸ್ ಕ್ರೋಮ್‌ಸೋಮ್‌ನಷ್ಟೇ ಅಂದರೆ 900 ಜೀನ್‌ಗಳಿತ್ತು, ಆದರೆ ಈಗ ಅದು 45ರಷ್ಟು ಮಾತ್ರವಿದೆ. ಹೀಗೆ ಮುಂದುವರೆದರೆ Y ಕ್ರೋಮ್‌ಸೋಮ್ ಎಂಬುವುದು ಸಂಪೂರ್ಣ ಇಲ್ಲವಾಗಬಹುದು ಎಂದು ತಜ್ಞ ಗ್ರೇವ್ಸ್ ಹೇಳಿದ್ದಾರೆ.
Y ಕ್ರೋಮೋಸೋಮ್ ಕಡಿಮೆಯಾಗಲು ಕಾರಣವೇನು?
ಮಹಿಳೆಯರಲ್ಲಿ X ಕ್ರೋಮೋಸೋಮ್ ಗರ್ಭಕೋಶದಲ್ಲಿ ಇರುತ್ತದೆ, ಅದೇ ಪುರುಷರಲ್ಲಿ Y ಕ್ರೋಮೋಸೋಮ್ ವೃಷಣದಲ್ಲಿ ಇರುತ್ತದೆ. ಆ ಭಾಗದಲ್ಲಿ ಅನೇಕ ಮಾರ್ಪಾಡುಗಳಾಗುತ್ತಿರುತ್ತದೆ, ಹೀಗಾಗಿ Y ಕ್ರೋಮೋಸೋಮ್ ಕಡಿಮೆಯಾಗುತ್ತಿದೆ.
ಪುರುಷರ ಮುಂದಿನ ಭವಿಷ್ಯವೇನು?
ನಮ್ಮ ಪೂರ್ವಜರಲ್ಲಿ ಇದ್ದಿದ್ದಕ್ಕಿಂತ ಈಗ Y ಕ್ರೋಮೋಸೋಮ್ ತುಂಬಾನೇ ಇಳಿಮುಖವಾಗಿದೆ, ಮುಂದಿನ ಪೀಳಿಗೆಯಲ್ಲಿ ಇನ್ನೂ ಇಳಮುಖವಾಗಲಿದೆ, ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಪುರುಷರು ಇಲ್ಲವಾಗಬಹುದು.
ಮಗುವಿನ ಲಿಂಗ ನಿರ್ಧಾರವಾಗುವುದು ಹೇಗೆ?
ಹೆಣ್ಣು- ಗಂಡು ಲಿಂಗ ನಿರ್ಧಾರವಾಗುವುದು ಪುರುಷರಿಂದ. ಪುರುಷರ X ಕ್ರೋಮೋಸೋಮ್ ಮಹಿಳೆಯರ ಕ್ರೋಮೋಸೋಮ್ ಜೊತೆ ಸೇರಿದರೆ ಮಗು ಹೆಣ್ಣಾಗುವುದು, Y ಕ್ರೋಮೋಸೋಮ್ ಮೊದಲು ಮಹಿಳೆಯ ಕ್ರೋಮ್‌ಸೋಮ್ ಸೇರಿದರೆ ಮಗು ಗಂಡಾಗುವುದು. ಹಾಗಾಗಿ ಮಗುವಿನ ಲಿಂಗ ರೂಪಗೊಳ್ಳುವುದರಲ್ಲಿ ತಂದೆಯ ಪಾತ್ರ ತುಂಬಾನೇ ಮುಖ್ಯ.
ಪುರುಷರಲ್ಲಿ Y ಕ್ರೋಮೋಸೋಮ್ ಕಡಿಮೆಯಾಗುತ್ತಿರುವುದರಿಂದ ಭವಿಷ್ಯದಲ್ಲಿ ಗಂಡು ಮಕ್ಕಳೇ ಜನಿಸಲ್ವಾ?
ಪುರುಷರಲ್ಲಿ Y ಕ್ರೋಮೋಸೋಮ್ ಕಡಿಮೆಯಾಗುತ್ತಿದೆ ಆದರೆ ಪುರುಷರು ಅಪ್‌ಸೆಟ್ ಆಗ ಬೇಕಾಗಿಲ್, Y ಕ್ರೋಮೋಸೋಮ್ ಸಂಪೂರ್ಣ ಕಣ್ಮರೆಯಾಗಲು ಐದರಿಂದ 6 ಮಿಲಿಯನ್ ವರ್ಷಗಳು ಬೇಕಾಗಬಹುದು. ಮಿಲಿಯನ್‌ಗಟ್ಟಲೆ ವರ್ಷಗಳು ಕಳೆದ ಮೇಲೆ ಈ ಸಮಸ್ಯೆ ಎದುರಾಗಬಹುದು ಅಥವಾ ಆ ಸಮಯದಲ್ಲಿ ಬೇರೇನೋ ಬೆಳವಣಿಗೆ ಉಂಟಾಗಬಹುದು, ಮಂಗನಿಂದ ಮಾನವ ಬಂದ, ಅದರಂತೆ ಮಿಲಿಯನ್‌ಗ್ಟಲೆ ವರ್ಷಗಳು ಕಳೆದಾಗ ಇನ್ನು ಹಲವು ಬದಲಾವಣಯಾಗಬಹುದು ಎನ್ನುತ್ತಿದೆ ವಿಜ್ಞಾನ..
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
