Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಕಣ್ಣುಗಳಿಂದ ಹೃದಯಾಘಾತವನ್ನು ತಿಂಗಳ ಮೊದಲೇ ಪತ್ತೆ ಮಾಡಬಹುದು..!
ವಿಶ್ವದಾದ್ಯಂತ ಹೃದಯಾಘಾತದಂತಹ ಪ್ರಕರಣಗಳು ಹೆಚ್ಚುತ್ತಿರುವುದು ನಾವು ನೋಡಬಹುದು. ಅದರಲ್ಲೂ ಯುವ ಪೀಳಿಗೆಯಲ್ಲೂ ಹೃದಯಾಘಾತದಂತಹ ಸಮಸ್ಯೆ ಹೆಚ್ಚಾಗಿದೆ. ಪ್ರಪಂಚದಾದ್ಯಂತ ನಿತ್ಯ ಲಕ್ಷಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗುತ್ತಾರೆ. ಹೆಚ್ಚಿನವರಲ್ಲಿ ಇದು ಮೊದಲ ಬಾರಿಗೆ ಸಂಭವಿಸುತ್ತಿರಬಹುದು. ಹಾಗೆ ಅವರಲ್ಲಿ ಹೃದಯಾಘಾತದ ಲಕ್ಷಣಗಳು ಒಂದು ತಿಂಗಳ ಮುನ್ನವೇ ಗೋಚರವಾಗಬಹುದು.
ಹೃದಯಾಘಾತಕ್ಕೆ ಕಾರಣವಾಗುವ ದಿನಗಳು ಅಥವಾ ತಿಂಗಳುಗಳ ಮುಂಚೆ ಹಲವರು ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ, ಇದನ್ನು ಪ್ರೋಡ್ರೊಮಲ್ ಲಕ್ಷಣಗಳು ಎಂದೂ ಕರೆಯುತ್ತಾರೆ. ಅಧ್ಯಯನಗಳ ಪ್ರಕಾರ ಹೃದಯಾಘಾತಕ್ಕೆ ಚಿಕಿತ್ಸೆ ನೀಡುವ ಹೆಚ್ಚಿನ ಜನರು ಹೆಚ್ಚಾಗಿ ಪ್ರೋಡ್ರೊಮಲ್ ರೋಗಲಕ್ಷಣಗಳನ್ನು ಹೊಂದಿರುತ್ತಾರೆ.

ಹಾಗಾದ್ರೆ ಯಾವೆಲ್ಲಾ ಲಕ್ಷಣಗಳು ಹೃದಯಾಘಾತಕ್ಕೆ ಕಾರಣವಾಗುವ ಅಂಶವಾಗಿರಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎದೆ ನೋವು
ಎದೆಯ ಭಾರವಾಗಿರುವುದು
ಹೃದಯ ಬಡಿತದಲ್ಲಿ ಏರುಪೇರು
ಉಸಿರಾಟದ ತೊಂದರೆ
ಎದೆಯಲ್ಲಿ ಉರಿಯುವ ಭಾವನೆ
ಅಸಾಮಾನ್ಯ ಆಯಾಸ
ನಿದ್ರಾಹೀನತೆ
ಈ ಮೇಲಿನ ಲಕ್ಷಣಗಳಲ್ಲಿ ಶೇ.70ರಷ್ಟು ಪ್ರಕರಣದಲ್ಲಿ ಎದೆನೋವು ಕಾಣಿಸಿಕೊಳ್ಳುವುದು ನೋಡಬಹುದು. ಭಾಗಶಃ ಅಡಚಣೆಯಿಂದ ಹೃದಯಾಘಾತಕ್ಕೆ ಒಳಗಾದವರು ಹೃದಯಾಘಾತದ ಹಿಂದಿನ ವಾರದಲ್ಲಿ ರೋಗಲಕ್ಷಣಗಳನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಆದರೆ ಕೆಲವು ಪ್ರಕರಣದಲ್ಲಿ ವ್ಯಕ್ತಿಯೋರ್ವರ ಕಣ್ಣುಗಳಿಂದಲೂ ಕೂಡ ಹೃದಯಾಘಾತದ ಲಕ್ಷಣಗಳನ್ನು ನೋಡಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಕಣ್ಣುಗಳಲ್ಲಿ ಹಳದಿ ಬಣ್ಣದ ಛಾಯೆ
ಹೃದಯಾಘಾತದ ಮೊದಲ ಲಕ್ಷಣಗಳಲ್ಲಿ ಕಣ್ಣಿನ ಬಣ್ಣ ಬದಲಾಗುವುದು ಕೂಡ ಒಂದಾಗಿದೆ. ಕಣ್ಣುಗಳಲ್ಲಿ ಹಳದಿ ಬಣ್ಣದ ಛಾಯೆಯ ರಚನೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ, ಇದು ಹೆಚ್ಚಿನ ಮಟ್ಟದ ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸೂಚಿಸುತ್ತದೆ. ಇದು ಕೂಡ ಹೃದಯಾಘಾತಕ್ಕೆ ಕಾರಣವಾಗುವ ಅಂಶವನ್ನು ಪ್ರತಿನಿಧಿಸುತ್ತದೆ.
ಕಣ್ಣುಗಳು ಕೆಂಪಾಗುವುದು
ಅನೇಕ ಬಾರಿ ಕಣ್ಣುಗಳ ರಕ್ತವು ಕೇವಲ ತೀವ್ರ ಆಯಾಸ, ನಿದ್ರೆಯ ಕೊರತೆ ಎಂದು ನಾವು ಭಾವಿಸುತ್ತೇವೆ. ಆದರೆ ನಿಮ್ಮ ರಕ್ತದೊತ್ತಡವು ಅಧಿಕವಾಗಿರಬಹುದು ಎಂಬ ಸೂಚನೆಯೂ ಇದೆ. ನಿಮ್ಮ ಕಣ್ಣುಗಳಲ್ಲಿನ ರಕ್ತನಾಳಗಳು ಹಿಗ್ಗಿದಾಗ, ನಿಮ್ಮ ದೇಹದಲ್ಲಿ ಒತ್ತಡ ಹೆಚ್ಚಿದೆ ಎಂಬ ಸೂಚನೆಯೂ ಇರಬಹುದು.
ಕಣ್ಣುಗಳ ಸುತ್ತಲೂ ಊತ
ನಿಮ್ಮ ಕಣ್ಣುಗಳ ಸುತ್ತ ಅಸಾಮಾನ್ಯ ಪಫಿನೆಸ್ ಅಥವಾ ಊತ ಉಂಟಾಗುವುದು. ಇದು ನಿಮ್ಮ ದೇಹದಲ್ಲಿ ಹೆಚ್ಚು ದ್ರವದ ಧಾರಣದ ಹೆಚ್ಚಳವಾಗಿರುವ ಸೂಚನೆಯಾಗಿರಲಿದೆ. ಇದು ಹೃದಯ ಸಂಬಂಧಿ ಸಮಸ್ಯೆಗಳ ಸಂಕೇತವಾಗಿದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ಕಣ್ಣುಗಳ ನೋವು
ಕಣ್ಣುಗಳಲ್ಲಿ ವಿವರಿಸಲಾಗದ ನೋವು ಗಂಭೀರ ಹೃದಯ ಸಂಬಂಧಿ ಕಾಯಿಲೆಯ ಸಂಕೇತವಾಗಿರಬಹುದು ಮತ್ತು ರಕ್ತನಾಳಗಳಲ್ಲಿ ಅಸಮರ್ಪಕ ರಕ್ತದ ಹರಿವಿನಿಂದಾಗಿ ಹೃದಯಾಘಾತದ ಲಕ್ಷಣವೂ ಇರಬಹುದು.
ತೀವ್ರ ಸ್ವರೂಪದ ತಲೆನೋವು
ತಲೆನೋವು ಹೃದಯರಕ್ತನಾಳದ ಸಮಸ್ಯೆಗಳ ಸಂಕೇತವಾಗಿರಬಹುದು. ಇದು ನರಗಳಲ್ಲಿ ಊತ ಉಂಟು ಮಾಡುವುದರಿಂದಾಗಿ ತೀವ್ರ ರೀತಿಯ ತಲೆ ನೋವು ಕಾಡಬಹುದು. ಅದರಲ್ಲೂ ರಾತ್ರಿ ಹೊತ್ತು ಏಕಾಏಕಿ ನಿಮಗೆ ತಲೆ ನೋವು ಕಾಡಬಹುದು.
ಪುರುಷರು ಮತ್ತು ಮಹಿಳೆಯರ ನಡುವೆ ಈ ಲಕ್ಷಣಗಳಲ್ಲಿ ವ್ಯತ್ಯಾಸವೇನು?
ಅಧ್ಯಯನಗಳ ಪ್ರಕಾರ ಸುಮಾರು ಶೇ,70ರಷ್ಟು ಹೃದಯಾಘಾತಗಳು ಪುರುಷರಲ್ಲಿ ಸಂಭವಿಸುತ್ತವೆ, ಆದರೆ ಮಹಿಳೆಯರು ಹೃದಯಾಘಾತವನ್ನು ಅನುಭವಿಸಿದ ಒಂದು ವರ್ಷದೊಳಗೆ ಮರಣ ಹೊಂದುವ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ. ಹೃದಯಾಘಾತ ಸಂಭವಿಸಿದ ಮಹಿಳೆಯರು ಅದಾದ ಬಳಿಕ ಕಡಿಮೆ ಪ್ರಮಾಣದ ರೋಗಲಕ್ಷಣಗಳ ಅಭಿವೃದ್ಧಿ ಪಡಿಸುತ್ತಾರೆ, ಆದರೆ ಈ ಪ್ರಮಾಣ ಪುರುಷರಲ್ಲಿ ಅಧಿಕವಾಗಿದೆ. ಶೇ.50 ಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಹೃದಯಾಘಾತದ ನಾಲ್ಕು ವಾರಗಳಲ್ಲಿ ನಿದ್ರೆಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಆದರೆ ಕೇವಲ ಶೇ.32 ರಷ್ಟು ಪುರುಷರು ಮಾತ್ರ ಈ ರೀತಿಯ ಸಮಸ್ಯೆ ಎದುರಿಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications