Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐಟಿ ಕ್ಷೇತ್ರದಲ್ಲಿದ್ದರೆ ಈ ಸಮಸ್ಯೆ ತಪ್ಪಿದ್ದಲ್ಲ, ವೈದ್ಯರು ನೀಡಿರುವ ಸಲಹೆಯೇನು?
ನಿಮಗೇನು ಕಂಪ್ಯೂಟರ್ ಮುಂದೆ ಮಾಡುವ ಕೆಲಸ ಕಷ್ಟ ಇರಲ್ಲ ನಮ್ಮ ಹಾಗೆಯೇ? ನಮ್ಮ ರೀತಿ ಮೈ ಬಗ್ಗಿಸಿ ದುಡಿಯಬೇಕೆ? ಎಂದು ಇತರ ಕೆಲಸ ಮಾಡುವವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ನೋಡಿ ಕೇಳುತ್ತಾರೆ.
ಆದರೆ ಕಂಪ್ಯೂಟರ್ ಮುಂದೆ ನಿರಂತರವಾಗಿ ಕೂತು ಕೆಲಸ ಮಾಡುವವರಿಗೆ ಗೊತ್ತು ಆ ಕೆಲಸ ಎಷ್ಟು ಕಷ್ಟದ್ದು ಎಂದು. ನೋಡಿದವರಿಗೆ ಕುರ್ಚಿಯಲ್ಲಿ ಒಂದು ಕಡೆ ಕೂತು ಲ್ಯಾಪ್‌ಟಾಪ್ ಮುಂದೆ ಆರಾಮವಾಗಿ ಕೂತಿರುವವರಂತೆ ಕಾಣಬಹುದು. ಆದರೆ ಕಂಪ್ಯೂಟರ್ ಮುಂದೆ ಕೂತವರಿಗೆ ಗೊತ್ತು ಹೀಗೆ ಕೂರುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆ ಬರುತ್ತೆ ಅಂತ.

ಕುತ್ತಿಗೆ ನೋವು, ತಲೆ ನೋವು, ಕಣ್ಣುಗಳು ಡ್ರೈಯಾಗುವುದು, ಬೆನ್ನುನೋವು, ಕೈ ನೋವು ಹೀಗೆ ಒಂದಾ ಎರಡಾ ಅನೇಕ ಸಮಸ್ಯೆಗಳು ಕಂಡು ಬರುವುದು. ಕೆಲವರಿಗೆ ಈ ನೋವಿನ ಸಮಸ್ಯೆ ಸಹಿಸಲು ಸಾಧ್ಯವಾಗದೆ ಸರ್ಜರಿ, ಫಿಸಿಯೋಥೆರಪಿ ಅಂತೆಲ್ಲಾ ಚಿಕಿತ್ಸಾ ಮೊರೆ ಹೋಗುತ್ತಾರೆ. ತುಂಬಾ ಸಮಯ ಕೂತು ಕೆಲಸ ಮಾಡುವುದರಿಂದ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯೆಂದರೆ ಬೆನ್ನುನೋವು. ಈ ರೀತಿ ಬೆನ್ನುನೋವಿಗೆ ಪರಿಹಾರವೇನು? ಇದನ್ನು ಹೇಗೆ ತಡೆಗಟ್ಟಬಹುದು ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ ತಿಳಿಸಿದ್ದಾರೆ ನೋಡಿ:
ತುಂಬಾ ಹೊತ್ತು ಲ್ಯಾಪ್‌ಟಾಪ್ ಮುಂದೆ ಕೂತು ಕೆಲಸ ಮಾಡುವುದರಿಂದ ಉಂಟಾಗುವ ತೊಂದರೆಗಳು
ತುಂಬಾ ಹೊಪತ್ತು ಕೂತು ಕೆಲಸ ಮಾಡುವುದರಿಂದ ಬೆನ್ನುನೋವು, ಬೆನ್ನು ಉರಿ ಈ ಬಗೆಯ ಸಮಸ್ಯೆ ಕಂಡು ಬರುವುದು.
ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕೂರುವ ಭಂಗಿ ಸರಿಯಾಗಿ ಇಲ್ಲದಿರುವುದು
ಅಲ್ಲದೆ ಈ ರೀತಿ ಕೂತು ಕೆಲಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು
ಆದರೆ ಈಗ ಬಹುತೇಕ ಕೆಲಸಗಳು ತಂತ್ರಜ್ಞಾನ ಆಧಾರಿತವಾಗಿರುವುದರಿಂದ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದರೆ ಕೆಲಸಕ್ಕಾಗಿ ತುಂಬಾ ಹೊತ್ತು ಕಂಪ್ಯೂಟರ್ ಮುಂದೆ ಕೂತರೆ ದುಡಿದ ಹಣದಲ್ಲಿ ಬಹುತೇಕ ಪಾಲನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ, ಇದು ಐಟಿ ಕ್ಷೇತ್ರದಲ್ಲಿರು ಬಹುತೇಕರ ಪಾಡಾಗಿದೆ. ನಿರಂತರವಾಗಿ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವವರಲ್ಲಿ ಆರೋಗ್ಯ ಸಮಸ್ಯೆಯೂ ಹೆಚ್ಚಾಗುತ್ತಿದೆ.
ವೈದ್ಯರ ಪ್ರಕಾರ ಇದನ್ನು ತಡೆಯುವುದು ಹೇಗೆ?
- ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕು: ಕಂಪ್ಯೂಟರ್ ಮುಂದೆ ತುಂಬಾ ಹೊತ್ತು ಕೂರುವವರು ವ್ಯಾಯಾಮದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ದಿನದಲ್ಲಿ 30ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಬೇಕು. ನಡೆಯುವುದು, ವರ್ಕೌಟ್ ಇವುಗಳಿಂದ ದೈಹಿಕ ಚಟುವಟಿಕೆ ಹೆಚ್ಚಾಗುವುದು, ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವಾಗ ನೇರವಾಗಿ ಕೂತು ಕೆಲಸ ಮಾಡಿ, ಬೆನ್ನು ಬಾಗಿ ಇರಬಾರದು.
- ನೀವು ಕೂರುವಾಗ ಪಾದಗಳು ನೆಲಕ್ಕೆ ಮುಟ್ಟುವಂತಿರಬೇಕು
- ನಿರಂತರ ಕೂರಬೇಡಿ: ಅರ್ಧ ಗಂಟೆಗೊಮ್ಮೆ ಎದ್ದು ನಿಲ್ಲುವುದು, ಕೈ ಕಾಲುಗಳನ್ನು ಚಾಚುವುದು ಮಾಡಿ
- ಕೆಲವೊಂದು ವ್ಯಾಯಾಮ ಕುರ್ಚಿಯಲ್ಲಿ ಕೂತು ಮಾಡಬಹುದು, ಅವುಗಳನ್ನು ಮಾಡಿ.
- ಫೋನ್‌ನಲ್ಲಿ ಮಾತನಾಡುವಾಗ ಓಡಾಡಿಕೊಂಡು ಮಾತನಾಡಿ, ಕೆಲಸದ ನಡುವೆ ಚಿಕ್ಕ ಬ್ರೇಕ್ ತೆಗೆಯಿರಿ, ಇವೆಲ್ಲಾ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
- ಕೆಲಸದ ನಡುವೆ 30 ನಿಮಿಷಗಳಿಗೊಮ್ಮೆ ನಿಲ್ಲುವುದು, ಕೈಗಳನ್ನು ಚಾಚುವುದು ಮತ್ತು ಒಂದೆರಡು ಹೆಜ್ಜೆ ನಡೆಯುವ ಅಭ್ಯಾಸ ಒಳ್ಳೆಯದು, ಇದರಿಂದ ಬೆನ್ನುನೋವು, ಕುತ್ತಿಗೆ ನೋವು ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.
- ದೈಹಿಕ ಒತ್ತಡದ ಜೊತೆಗೆ ಮಾನಸಿಕ ಒತ್ತಡವೂ ಅಧಿಕವಿರುತ್ತದೆ
- ಒಂದು ದೈಹಿಕ ಸಮಸ್ಯೆ ಕಂಡು ಬರುವುದು, ಇದರ ಜೊತೆ ಟಾರ್ಗೆಟ್ ಅಂತ ಮಾನಸಿಕ ಒತ್ತಡ ಕೂಡ ಹೆಚ್ಚಿರಲಿದೆ. ಇದರಿಂದ ಕೂಡ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು. ಇದರಿಂದ ತಲೆನೋವಿನ ಸಮಸ್ಯೆ ಉಂಟಾಗುವುದು.
- ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ
- ಯೋಗ, ಧ್ಯಾನ ಇವೆಲ್ಲಾ ಆರೋಗ್ಯ ಸಮಸ್ಯೆ ವೃದ್ಧಿಸಲು ಸಹಕಾರಿಯಾಗಿದೆ
- ಹೆಚ್ಚು ನೀರು ಸೇವಿಸಿ
- ಕುರ್ಚಿಯಲ್ಲಿ ಕೂರುವ ಭಂಗಿ ಸರಿಯಾಗಿರಬೇಕು, ಈ ಬಗ್ಗೆ ಗಮನಹರಿಸಿ
- ತಲೆನೋವು ಕಡಿಮೆಯಾಗಲು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ
ಇಷ್ಟೆಲ್ಲಾ ಮಾಡಿಯೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಸೂಕ್ತ ತಜ್ಞರನ್ನು ಭೇಟಿಯಾಗಿ ಎಂದು ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ ಸಲಹೆ ನೀಡಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications