Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಚಳಿಗಾಲದಲ್ಲಿ ಈ ಡ್ರೈ ಫ್ರೂಟ್ಸ್ ನೀಡಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
ಮಕ್ಕಳಿಗೆ ನಾವು ಕಾಲಕ್ಕೆ ತಕ್ಕಂತೆ ಕೆಲವೊಂದು ಆಹಾರಗಳನ್ನು ಸೇರಿಸಿದರೆ ತುಂಬಾ ಒಳ್ಳೆಯದು, ಅಂಥ ಆಹಾರಗಳು ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ, ಮಕ್ಕಳು ಮಾತ್ರವಲ್ಲ ದೊಡ್ಡವರಿಗೂ ಈ ಬಗೆಯ ಆಹಾರಕ್ರಮ ತುಂಬಾನೇ ಸಹಾಯ ಮಾಡುತ್ತದೆ. ಆದ್ದರಿಂದ ಚಳಿಗಾಲದ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ.

ಬಾದಾಮಿ
ಬಾದಾಮಿ ಎಲ್ಲಾ ಕಾಲಕ್ಕೂ ಒಳ್ಳೆಯದು, ಚಳಿಗಾಲದಲ್ಲಿ ತುಂಬಾನೇ ಒಳ್ಳೆಯದು, ಏಕೆಂದರೆ ಇದು ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ. ಇದನ್ನು ನೀವು ಸಿಪ್ಪೆ ತೆಗೆದು ತಿನ್ನಬೇಡಿ, ಸಿಪ್ಪೆ ಸಹಿತ ತಿನ್ನಿ, ನೆನೆ ಹಾಕಿ ಸೇವಿಸಬಹುದು, ಆದರೆ ಸಿಪ್ಪೆ ಸಹಿತ ತಿನ್ನುವುದು ಒಳ್ಳೆಯದು ಎಂದು ನ್ಯೂಟ್ರಿಷಿಯನಿಸ್ಟ್ ಕೂಡ ಹೇಳುತ್ತಾರೆ.
ಬಾದಾಮಿ
ವಾಲ್ನಟ್ ಕೂಡ ತುಂಬಾನೇ ಒಳ್ಳೆಯದು. ಇದರಲ್ಲಿ ಒಮೆಗಾ 3 ತುಂಬಾನೇ ಇದೆ, ಮಕ್ಕಳ ಮೆದುಳಿಗೆ ತುಂಬಾನೇ ಒಳ್ಳೆಯದು, ಮೆದುಳು ಚುರುಕಾಗಿಸುತ್ತದೆ. ವಾಲ್ನಟ್ ತಿನ್ನಲು ಇಷ್ಟಪಡದಿದ್ದರೆ ಇತರ ಡ್ರೈ ಫ್ರೂಟ್ಸ್ ಜೊತೆ ಪುಡಿ ಮಾಡಿ ಕೊಡಿ.
ಖರ್ಜೂರ
ಖರ್ಜೂರ ಮೈಯನ್ನು ಬೆಚ್ಚಗಿಡುತ್ತದೆ, ಅಲ್ಲದೆ ರಕ್ತ ಹೀನತೆಯಂಥ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಇದು ನೈಸರ್ಗಿಕ ಸಿಹಿಯಾಗಿದ್ದು ಸಕ್ಕರೆ ಬದಲಿಗೆ ಡೇಟ್ಸ್ ಸಿರಪ್ ಬಳಸಬಹುದು. ದಿನದಲ್ಲಿ 2 ಖರ್ಜೂರ ಸೇವಿಸಿ.
ಅಂಜೂರ
ಅಂಜೂರ ಕೂಡ ಶರೀರಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು, ಅಂಜೂರ ತಿನ್ನುವುದರಿಂದ ಶರೀರದಲ್ಲಿ ನೀರಿನಂಶ ಕಾಪಾಡುವುದನ್ನು ಸಹಕಾರಿಯಾಗಿದೆ.
ಆಪ್ರಿಕಾಟ್
ಆಪ್ರಿಕಾಟ್ ಕೂಡ ಶರೀರಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇದೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಪಿಸ್ತಾ
ಪಿಸ್ತಾ ಕೂಡ ಆರೋಗ್ಯಕ್ಕೆ ಒಳ್ಳೆಯದು. ಪಿಸ್ತಾದಲ್ಲಿರುವ ಪೋಷಕಾಂಶ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ದಿನಾ 8-10 ಪಿಸ್ತಾ ತಿನ್ನುವುದು ಶರೀರಕ್ಕೆ ತುಂಬಾನೇ ಒಳ್ಳೆಯದು. ಪಿಸ್ತಾವನ್ನು ಮಧುಮೇಹಿಗಳು ಕೂಡ ಸೇವಿಸಬಹುದು.
ಗೋಡಂಬಿ
ಚಳಿಗಾಲದಲ್ಲಿ ಗೋಡಂಬಿ ಸೇವನೆ ಕೂಡ ಒಳ್ಳೆಯದು, ಗೋಡಂಬಿ ಮೈಯನ್ನು ಬೆಚ್ಚಗಿಡುತ್ತದೆ. ಗೋಡಂಬಿ, ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಸತು, ಸೋಡಿಯಂ ಈ ಬಗೆಯ ಪೋಷಕಾಂಶಗಳಿವೆ.
ಈ ಆಹಾರಗಳನ್ನು ಪ್ರತಿನಿತ್ಯ ನೀಡಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ದಿನದಲ್ಲಿ ಎರಡು ಮೂರು ವೆರೈಟಿಯಂತೆ ನೀಡಬಹುದು ಅಥವಾ ಎಲ್ಲಾ ಸ್ವಲ್ಪ-ಸ್ವಲ್ಪ ನೀಡಬಹುದು.
ಡ್ರೈ ಫ್ರೂಟ್ಸ್ ಜೊತೆಗೆ ಚಳಿಗಾಲದಲ್ಲಿ ಈ ಆಹಾರಗಳು ಕೂಡ ಒಳ್ಳೆಯದು
ಸಿಹಿ ಗೆಣಸು: ಚಳಿಗಾಲದಲ್ಲಿ ಸಿಹಿ ಗೆಣಸು ಸೇವಿಸುವುದು ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಹಾಗೂ ನಾರಿನಂಶ ಇರುವುದರಿಂದ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು.
ಕಿತ್ತಳೆ: ಚಳಿಗಾಲದಲ್ಲಿ ಕಿತ್ತಳೆ ಸೇವನೆ ಒಳ್ಳೆಯದು, ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.
ಸಿಹಿ ಕುಂಬಳ: ಚಳಿಗಾಲದಲ್ಲಿ ಮಕ್ಕಳಿಗೆ ಸಿಹಿ ಕುಂಬಳದ ಆಹಾರ ನೀಡುವುದು ಕೂಡ ಒಳ್ಳೆಯದು. ಸಿಹಿ ಕುಂಬಳದ ಬೀಜ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
