Latest Updates
-
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ!
ಹೆಡ್‌ಫೋನ್ ಸ್ಫೋಟದಿಂದ ವ್ಯಕ್ತಿಗೆ ಗಂಭೀರ ಗಾಯ: ಅತಿಯಾಗಿ ಹೆಡ್‌ಫೋನ್, ಇಯರ್‌ಫೋನ್ ಬಳಸುತ್ತಿದ್ದೀರಾ ಜಾಗ್ರತೆ
ಯಾರ ಕಿವಿಯಲ್ಲಿ ಅಥವಾ ಕತ್ತಲ್ಲಿ ನೊಡಲಿ ಹೆಡ್‌ಫೋನ್, ಇಯರ್‌ಫೋನ್ ಇರುತ್ತದೆ. ಎಲ್ಲರ ಕೈಯಲ್ಲಿಯೂ ಸ್ಮಾರ್ಟ್ಫೋನ್‌ಗಳಿರುವ ಈ ಕಾಲದಲ್ಲಿ ಕರೆ, ಮ್ಯೂಸಿಕ್ ಕೇಳಲು ಟ್ರಾವಲ್ ಮಾಡುವಾಗ ಅಥವಾ ಏನಾದರೂ ಕೆಲಸ ಮಾಡುವಾಗ ನಮಗೆ ಇಷ್ಟ ಬಂದ ಕಾರ್ಯಕ್ರಮ ಕೇಳಲು, ನೋಡಲು ನಾವು ಈ ಇಯರ್‌ಫೋನ್ ಬಳಸುತ್ತೇವೆ, ಆದರೆ ತಮಿಳುನಾಡಿನ ವ್ಯಕ್ತಿಯೊಬ್ಬರು ಹೆಡ್‌ಫೋನ್ ಬಳಸುತ್ತಿದ್ದಾಗಲೇ ಹೆಡ್‌ಫೋನ್ ಸ್ಫೋಟವಾಗಿ ಗಂಭೀರ ಗಾಯವಾಗಿದೆ. ಅವರನ್ನು ತಮಿಳು ನಾಡಿನ ಶಿವಗಂಗೆಯ 55 ವರ್ಷದ ಪನ್ನೀರ್‌ಸೆಲ್ವಂ ಎಂದು ಗುರುತಿಸಲಾಗಿದೆ.

ಮೊಬೈಲ್ ಬ್ಲಾಸ್ಟ್ ಕೇಳಿದ್ದೆವು ಆದರೆ ಹೆಡ್‌ಫೋನ್ ಬ್ಲಾಸ್ಟ್ ಈ ರೀತಿಯಾಗಿದ್ದು ಕೇಳಿರಲಿಲ್ಲ
ಮೊಬೈಲ್ ಸ್ಫೋಟಗೊಂಡಿರುವ ಘಟನೆಗಳನ್ನು ಕೇಳಿದ್ದೆವು, ಆದರೆ ಹೆಡ್‌ಫೋನ್ ಬ್ಲಾಸ್ಟ್ ಆಗಿರುವುದರಿಂದ ನಾವು ಯಾವುದೇ ಈ ಬಗೆಯ ಸಾಧನಗಳ ಬಗ್ಗೆ ಎಚ್ಚರಿಕೆವಹಿಸುವುದು ಒಳ್ಳೆಯದು. ಪನ್ನೀರ್ ಸೆಲ್ವಂ ಪ್ರತಿ ನಿತ್ಯ ಹೆಡ್‌ಫೋನ್ ಬಳಸಿ ಹಾಡು ಕೇಳುತ್ತಿದ್ದರು, ಇದು ಅವರಿಗೆ ಅಭ್ಯಾಸವಾಗಿತ್ತು, ಆದರೆ ರಾತ್ರಿ ಮಲಗಿರುವಾಗ ಹಾಡು ಕೇಳುತ್ತಿದ್ದ ಪನ್ನೀರ್ ಸೆಲ್ವಂ ಹೆಡ್‌ಫೋನ್ ಸ್ಪೋಟದಿಂದ ಗಾಯಗೊಂಡು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ.
ಎಡ ಕಿವಿಯಲ್ಲಿಟ್ಟದ ಬಡ್ಸ್ ಸ್ಫೋಟಗೊಂಡಿದೆ. ಇದರಿಂದಾಗಿ ಅವರ ಎಡ ಕಿವಿಗೆ ಗಂಭೀರ ಗಾಯವಾಗಿದೆ. ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಹೆಡ್‌ಫೋನ್ ಸ್ಫೋಟಕ್ಕೆ ಕಾರಣವೇನು?
ಹೆಡ್‌ಫೋನ್, ಇಯರ್ ಬಡ್ಸ್ ಸ್ಫೋಟಗೊಂಡಿರುವುದು ತುಂಬಾನೇ ವಿರಳ, ಅದರೆ ನಿರ್ಲಕ್ಷ್ಯ ಬೇಡ, ಅದು ತುಂಬಾ ಬಿಸಿಯಾಗುತ್ತಿದೆ ಅಥವಾ ನಿಮಗೆ ಒಂಥರಾ ಕಿರಿಕಿರಿ ಅನಿಸುತ್ತಿದೆ ಎಂದಾದರೆ ಬಳಸಲು ಹೋಗಬೇಡಿ, ಕಾರಣ ಬ್ಲೂಟೂತ್ ಹೆಡ್‌ಫೋನ್, ಇಯರ್ ಬಡ್ಸ್‌ಗಳಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಬಳಸಿರುತ್ತಾರೆ. ಅತೀಯಾದ ಬಳಕೆಯಿಂದ ಹೆಡ್‌ಫೋನ್ ಬಿಸಿಯಾಗಿ ಸ್ಫೋಟವಾಗಬಹುದು. ದಿನದಲ್ಲಿ ಹೆಚ್ಚು ಹೊತ್ತು ಹೆಡ್‌ಫೋನ್, ಇಯರ್‌ಪೋನ್ ಬಳಸುವವರು ಜಾಗ್ರತೆವಹಿಸಿ.
ಅತಿಯಾದ ಹೆಡ್‌ಫೋನ್ ಬಳಕೆ ಕಿವಿಯ ಆರೋಗ್ಯಕ್ಕೂ ಒಳ್ಳೆಯದಲ್ಲ
ಕೆಲವರು ತುಂಬಾನೇ ಅತಿಯಾಗಿ ಹೆಡ್‌ಫೋನ್ ಬಳಸುತ್ತಾರೆ, ಈ ರೀತಿ ಅತಿಯಾದ ಹೆಡ್‌ಫೋನ್ ಬಳಕೆ ಕಿವಿಯ ಆರೋಗ್ಯಕ್ಕೂ ಒಳ್ಳೆಯದಲ್ಲ, ಇದರಿಂದ ಕಿವಿ ತಮಟೆಗೆ ಹಾನಿಯುಂಟಾಗುವುದು. 200 ರುಪಾಯಿಯ ಹೆಡ್‌ಫೋನ್ ಕೂಡ ಸಿಗುತ್ತೆ, ಆದ್ದರಿಂದ ಕಳಪೆ ಗುಣಮಟ್ಟದ ಹೆಡ್‌ಫೋನ್ ಖರೀದಿಸಿ ಕಿವಿಗೆ ಹಾನಿಯುಂಟು ಮಾಡದಿರಿ.
ಕಂಪನಿ ಹೆಡ್‌ಫೋನ್, ಇಯರ್ ಪೋನ್ ಆದರೂ ಅತಿಯಾದ ಬಳಕೆ ಒಳ್ಳೆಯದಲ್ಲ
ಅತಿಯಾದ ಹೆಡ್‌ಫೋನ್ ಅಥವಾ ಇಯರ್ ಫೋನ್ ಬಳಕೆ ಮಾಡುವವರಿಗೆ ತಲೆನೋವು, ಕಿವಿನೋವು ಈ ಬಗೆಯ ಸಮಸ್ಯೆ ಕಂಡು ಬರುವುದು, ಆದ್ದರಿಂದ ಇವುಗಳನ್ನು ಮಿತಿಯಲ್ಲಿ ಬಳಸಿ, ಕಿವಿಗೆ ಗಾಳಿಯಾಡಲು ಅವಕಾಶ ಮಾಡಿಕೊಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications