Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಬಾಯಿ ಕ್ಯಾನ್ಸರ್‍ನ ಲಕ್ಷಣಗಳೇನು ಗೊತ್ತಾ.? ಈ ರೀತಿ ಆದರೆ ನಿರ್ಲಕ್ಷಿಸಬೇಡಿ
ಕ್ಯಾನ್ಸರ್ ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಮಾರಣಾಂತಿಕ ಕಾಯಿಲೆಯಾಗಿದೆ. ಕ್ಯಾನ್ಸರ್‌ನ ಹಲವು ವಿಧಗಳು ಜನರನ್ನು ಕಾಡುತ್ತಿವೆ. ಅದರಲ್ಲೂ ಅಮೆರಿಕ ಹಾಗೂ ಭಾರತ ಸೇರಿ ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ ಈ ಕ್ಯಾನ್ಸರ್ ಮಹಾಮಾರಿ ಹೆಮ್ಮರವಾಗಿ ಹಬ್ಬಿದೆ.
ಇತ್ತೀಚಿಗೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಳು ಹಾಗೂ ಚುಚ್ಚು ಮದ್ದಿನ ಕುರಿತು ಅಧ್ಯಯನ ನಡೆಯುತ್ತಿದ್ದು, ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ಗೆ ಚಿಕಿತ್ಸೆ ನೆರವೇರಿಸಬಹುದಾಗಿದೆ. ಹೀಗಿದ್ದೂ ಕೆಲವೊಂದು ಮಾದರಿಯ ಕ್ಯಾನ್ಸರ್ ಆರೋಗ್ಯವಂತ ವ್ಯಕ್ತಿಗಳಲ್ಲೂ ಕಂಡುಬರುತ್ತಿದೆ. ಅಂದರೆ ಯಾವ ವ್ಯಕ್ತಿ ಯಾವುದೇ ದುಷ್ಚಟ ಬೆಳೆಸಿಕೊಳ್ಳದಿದ್ದರೂ ಉತ್ತಮ ಆರೋಗ್ಯ ಹೊಂದಿದ್ದರೂ ಕ್ಯಾನ್ಸರ್ ಕಂಡುಬರುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಹಲವು ರೀತಿಯ ಕ್ಯಾನ್ಸರ್‌ಗಳ ನಡುವೆ ಬಾಯಿಯ ಕ್ಯಾನ್ಸರ್ ಸಹ ಅತ್ಯಂತ ಭಯಾನಕ ಮಾದರಿಯ ಕ್ಯಾನ್ಸರ್ ಆಗಿದೆ. ಇದು ತಂಬಾಕು ಅಗಿಯುವುದು, ಮದ್ಯಪಾನ ಮಾಡುವುದು ಅಥವಾ ಸಿಗರೇಟ್ ಸೇದುವುದು ಸೇರಿದಂತೆ ಕೆಟ್ಟ ಅಭ್ಯಾಸಗಳ ಹೊಂದಿರುವವರಲ್ಲಿ ಹೆಚ್ಚಾಗಿರುತ್ತದೆ. ಹಾಗಂತ ಇದ್ಯಾವುದೂ ಇಲ್ಲದಿರುವ ವ್ಯಕ್ತಿಯಲ್ಲಿ ಬಾಯಿಯ ಕ್ಯಾನ್ಸರ್ ಆಗಬಾರದು ಎಂದೇನಿಲ್ಲ.
ಬಾಯಿಯ ಕ್ಯಾನ್ಸರ್ ಎಂದು ಕರೆಯಲ್ಪಡುವ ಇದು ಬಾಯಿಯ ಕುಳಿಯಲ್ಲಿ ರೂಪುಗೊಳ್ಳುತ್ತದೆ, ಇದು ನಿಮ್ಮ ಬಾಯಿಯ ಎಲ್ಲಾ ಭಾಗಗಳನ್ನು ಒಳಗೊಂಡಿರುತ್ತದೆ ಅದು ತುಟಿಗಳು, ಒಸಡುಗಳು, ನಾಲಿಗೆ, ಕೆನ್ನೆಗಳು ಮತ್ತು ಬಾಯಿಯ ಛಾವಣಿಯೂ ಕ್ಯಾನ್ಸರ್‍ಗೆ ಒಳಗಾಗಬಹುದು. ಹಾಗಾದರೆ ಬಾಯಿಯ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ ಇದರ ಲಕ್ಷಣವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಲ್ಲು ಮತ್ತು ಒಸಡುಗಳ ಸುತ್ತ ಊದಿಕೊಂಡ ಅನುಭವ
ಬಾಯಿಯ ಕ್ಯಾನ್ಸರ್ ಆರಂಭದಲ್ಲಿ ಗುರುತಿಸುವುದು ಬಹಳ ಕಷ್ಟಕರವಾಗಿರುತ್ತದೆ. ಬಾಯಿಯ ಕ್ಯಾನ್ಸರ್‍ನಲ್ಲಿ ಮೊದಲು ಹಲ್ಲಿನ ಒಸಡುಗಳು ಮತ್ತು ಹಲ್ಲಿನ ಸುತ್ತಲೂ ಊದಿಕೊಂಡ ಅನುಭವವಾಗುತ್ತದೆ. ಹಲ್ಲುಗಳು ಸಡಿಗಲವಾಗಲು ಆರಂಭವಾಗುತ್ತದೆ. ದವಡೆಯನ್ನು ಸುತ್ತುವರೆದಿರುವ ಹುಣ್ಣು, ಊದಿಕೊಂಡ ಒಸಡುಗಳು, ದವಡೆಯ ಊತ, ಅಥವಾ ಸಾಂದರ್ಭಿಕವಾಗಿ ದೂರವಾಗದ ಅಸಹನೀಯ ನೋವಿನಿಂದ ಪ್ರಭಾವಿತವಾಗಬಹುದು.
ಧ್ವನಿಯಲ್ಲಿನ ಬದಲಾವಣೆಗಳು
ಬಾಯಿಯ ಕ್ಯಾನ್ಸರ್ ಆರಂಭದಲ್ಲಿ ಗುರುತಿಸುವುದು ಕಷ್ಟವಾದರು ಬರಬರುತ್ತ ನಿಮಗೆ ಅದರ ಲಕ್ಷಣಗಳ ಗೋಚರವಾಗುತ್ತವೆ. ಧ್ವನಿಯ ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳು ಅಥವಾ ದೀರ್ಘಾವಧಿಯವರೆಗೆ ಒರಟಾಗಿರುವುದು ಮೂಗು, ನಾಸೊಫಾರ್ಂಜಿಯಲ್, ಲಾರಿಂಜಿಯಲ್ ಅಥವಾ ಧ್ವನಿ ಪೆಟ್ಟಿಯಲ್ಲಿ ನೋವು ಕಾಣಿಸಿಕೊಳ್ಳುವುದು ಕ್ಯಾನ್ಸರ್ ಅನ್ನು ಸೂಚಿಸುತ್ತದೆ.
ನುಂಗಲು ತೊಂದರೆ (ಡಿಸ್ಫೇಜಿಯಾ)
ನುಂಗುವಾಗ ತೊಂದರೆ ಅಥವಾ ನೋವು, ಅಂದರೆ ನೀವು ಆಹಾರ ಇಲ್ಲವೆ ನೀರು ಕುಡಿಯುವಾಗಲು ಗಂಟಲು ವಿಪರೀತ ನೋವು ಕಾಣಿಸಿಕೊಂಡರೆ ಇದು ಗಂಟಲು ಅಥವಾ ಅನ್ನನಾಳದ ಕ್ಯಾನ್ಸರ್ ಅನ್ನು ಸೂಚಿಸುತ್ತದೆ.
ಬಾಯಿ ಹುಣ್ಣು ಮತ್ತು ನೀರು ಬರುವುದು
ಕುತ್ತಿಗೆ, ಗಂಟಲು ಅಥವಾ ಬಾಯಿಯಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುವುದು, ಇಲ್ಲವೆ ಗಂಟಲು ಭಾಗ ಬಾಯಿಯ ಒಳಗೆ ಗಂಟುಗಳಂತಹ ರಚನೆ ಕಂಡುಬರುವುದು ಇದು ಕ್ಯಾನ್ಸರ್ ಬೆಳವಣಿಗೆಯನ್ನು ಸೂಚಿಸುತ್ತವೆ. ಇದರ ಜೊತೆ ನಿತ್ಯ ನೀವು ಬಾಯಿ ಸ್ವಚ್ಛಗೊಳಿಸಿದ ಬಳಿಕವೂ ದುರ್‍ವಾಸನೆ ಬರುತ್ತಿದ್ದರೆ ಇದು ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗುತ್ತಿರುವ ಲಕ್ಷಣವಾಗಿದೆ.
ನಾಲಗೆ ಮೇಲೆ ಹುಣ್ಣುಗಳಾಗುವುದು
ಬಾಯಿ ಕ್ಯಾನ್ಸರ್ ಆರಂಭದಲ್ಲಿ ಬಾಯಿಯ ಒಳಭಾಗ ಅಥವಾ ಮೇಲ್ಭಾಗದಲ್ಲಿ ಹುಣ್ಣುಗಳು ಕಂಡುಬರುತ್ತದೆ. ಇದರ ಜೊತೆ ನಾಲಗೆಯ ಮೇಲೆ ಬಿಳಿ ಮಚ್ಚೆ ಆಕಾರದಲ್ಲಿ ಹುಣ್ಣುಗಳಾಗುವುದನ್ನು ಕಾಣಬಹುದು. ಇದು ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗುತ್ತಿರುವ ಲಕ್ಷಣವಾಗಿದೆ.
ಬಾಯಿ ಕ್ಯಾನ್ಸರ್‍ನ ಇತರೆ ಲಕ್ಷಣಗಳು
ಹಲ್ಲಿನ ಬದಲಾವಣೆಗಳು, ಸ್ವಾಭಾವಿಕವಾಗಿ ಹಲ್ಲುಗಳು ಉದುರುವುದು, ಸಡಿಲವಾದ ಹಲ್ಲುಗಳು ಅಥವಾ ಸರಿಯಾಗಿ ಹೊಂದಿಕೊಳ್ಳದ ದಂತಗಳು ದವಡೆಯ ಕ್ಯಾನ್ಸರ್‍ನ ಸೂಚಕಗಳಾಗಿರಬಹುದು. ಇದರ ಜೊಗೆ ಖಾರದ ಊಟ ಮಾಡಲು ಆಗದಿರಬಹುದು. ಹೆಚ್ಚು ಆಹಾರ ಸೇವಿಸುವಾಗ ಇಲ್ಲವೆ ಬಾಯಿ ತುಂಬಿಕೊಂಡಾಗ ಅಗಿಯಲು ಆಗದಿರುವುದು, ಗಲ್ಲದ ಕೆಳಭಾಗದಲ್ಲಿ ವಿಪರೀತ ನೀವು ಕಾಣಿಸಿಕೊಳ್ಳುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











