Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಶದಲ್ಲಿ ಮತ್ತೆ ಕಂಡು ಬಂದಿದೆ ಹಂದಿಜ್ವರ: ಲಕ್ಷಣಗಳೇನು? ಯಾವ ಮನೆಮದ್ದು ಪರಿಣಾಮಕಾರಿ?
ಕೋವಿಡ್ ಜೊತೆಗೆ ಸ್ವೈನ್ ಫ್ಲೂ ಅಥವಾ ಹಂದಿಜ್ವರ ( H1N1)ದ ಆತಂಕ ಎದುರಾಗಿದೆ. ಡಿಸೆಂಬರ್ 31ಕ್ಕೆ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಹಂದಿಜ್ವರ ಕಾಣಿಸಿಕೊಂಡಿದ್ದು ಅವರನ್ನು ಐಸೋಲೇಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಂದಿ ಜ್ವರದ ಲಕ್ಷಣಗಳೇನು, ತಡೆಗಟ್ಟಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಲಕ್ಷಣಗಳು:
ಹಂದಿಜ್ವರದ ಲಕ್ಷಣಗಳೂ ಸಾಮಾನ್ಯ ಫ್ಲೂ ಜ್ವರದ ಲಕ್ಷಣಗಳನ್ನೇ ಬಹುತೇಕವಾಗಿ ಹೋಲುತ್ತವೆ.
*ಮೈ ಕೈ ನೋವು
*ಮೈ ನಡುಕ
*ಕೆಮ್ಮು
*ತಲೆನೋವು
*ಗಂಟಲ ಬೇನೆ
*ಜ್ವರ
*ಸುಸ್ತು ಈ ಬಗೆಯ ಲಕ್ಷಣಗಳು ಖಮಡು ಬರುವುದು, ಅಪರೂಪದಲ್ಲಿ ಕೆಲವರಲ್ಲಿ ವಾಂತಿ, ಅತಿಸಾರದ ಸಮಸ್ಯೆ ಕಂಡು ಬರುವುದು.
ಹಂದಿ ಜ್ವರ ಹೇಗೆ ಬರುತ್ತದೆ?
* ಸೋಂಕುಪೀಡಿತ ಹಂದಿಗಳೊಂದಿಗಿನ ಸಂಪರ್ಕದಿಂದ ಹರಡುವುದು, ಹಂದಿಜ್ವರ ಹರಡಲು ಇದು ಪ್ರಮುಖ ಕಾರಣವಾಗಿದೆ.
* ಸೋಂಕುಪೀಡಿತ ಹಂದಿಯ ಆರೈಕೆ ಮಾಡುವಾಗ ಜಾಗ್ರತೆವಹಿಸಿ, ಇಲ್ಲದಿದ್ದರೆ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ.
* ಮನುಷ್ಯರಿಂದ ಮನುಷ್ಯರಿಗೆ ಕೂಡ ಹರಡುವುದು. ಸೋಂಕುಪೀಡಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದು: ಈ ಬಗೆಯ ಹರಡುವಿಕೆ ಅಪರೂಪವಾಗಿದೆ, ಆದರೆ ಸೋಂಕುಪೀಡಿತ ವ್ಯಕ್ತಿಯೊಂದಿಗೆ ನಿಕಟ ಒಡನಾಟದಲ್ಲಿರುವ ವ್ಯಕ್ತಿಗಳಿಗೆ ಇದುಬೇಗನೆ ಹರಡುತ್ತದೆ.
*ಸೋಂಕುಪೀಡಿತ ವ್ಯಕ್ತಿ ಜೊತೆ ದೈಹಿಕ ಸಂಪರ್ಕದಿಂದ ಕೂಡ ಹರಡುವುದು.
ಯಾರಿಗೆ ಹೆಚ್ಚು ಅಪಾಯಕಾರಿ
* 60 ವರ್ಷ ಮೇಲ್ಪಟ್ಟವರಗೆ
* ಐದು ವರ್ಷಕ್ಕಿಂತ ಚಿಕ್ಕ ಮಕ್ಕಳು
* ಗರ್ಭಿಣಿಯರು
* ಗಂಭೀರ ಸ್ಥಿತಿಯ ಕಾಯಿಲೆ ಹೊಂದಿರುವ ವ್ಯಕ್ತಿಗಳು
* ದೀರ್ಘಾವಧಿಯ ಆಸ್ಪಿರಿನ್ ಚಿಕಿತ್ಸೆ ಪಡೆಯುತ್ತಿರುವ ಹದಿಹರೆಯದವರು
* ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು
ಹಂದಿಜ್ವರ ತಡೆಗಟ್ಟುವುದು ಹೇಗೆ:
* ಬಿಸಿ ನೀರು ಸೇವಿಸಿ
* ಅನಾರೋಗ್ಯವಿರುವ ಹಂದಿಯನ್ನು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮುಟ್ಟಬೇಡಿ.
* ಮಾಸ್ಕ್ ಧರಿಸಿ
* ಮನೆಯಲ್ಲಿ ಯಾರಿಗಾದರೂ ಎಚ್1ಎನ್1 ಸೋಂಕಿದರೆ ಇತರೆ ಸದಸ್ಯರು ಮಾಸ್ಕ್‌ಗಳನ್ನು ಧರಿಸಬೇಕು.
* ಸೋಂಕು ತಗುಲಿದವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಆರೈಕೆ ಮಾಡಬೇಕು.
* ಕೈ ತೊಳೆಯದೆ ಯಾವುದೇ ಆಹಾರ ಸೇವನೆ ಮಾಡಬಾರದು
* ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳಬೇಕು.
ಹಂದಿಜ್ವರಕ್ಕೆ ಮನೆಮದ್ದು:
* ಹಂದಿಜ್ವರಕ್ಕೆ ಅಮೃತಬಳ್ಳಿ ಪರಿಣಾಮಕಾರಿಯಾದ ಔಷಧಿಯಾಗಿದೆ. ಈ ಬಳ್ಳಿಯ ಸುಮಾರು ಒಂದು ಅಡಿ ಉದ್ದವನ್ನು ಕತ್ತರಿಸಿಕೊಂಡು ನೀರಿನಲ್ಲಿ ಬೇಯಿಸಿ. ಈ ನೀರಿಗೆ ಐದರಿಂದ ಆರು ತುಳಸಿ ಎಲೆಗಳನ್ನು ಸೇರಿಸಿ. ಸುಮಾರು ಇಪ್ಪತ್ತು ನಿಮಿಷಗಳ ಕುದಿಯುವಿಕೆಯ ಬಳಿಕ ಎಲೆ ತನ್ನ ಸಾರವನ್ನೆಲ್ಲಾ ನೀರಿನಲ್ಲಿ ಬಿಡುತ್ತದೆ. ಈ ನೀರಿಗೆ ಹಿಮಾಲಯದ ಸೇಂಧಾ ಉಪ್ಪು (ಹಿಮಾಲಯದ ಕೆಂಪು ಕಲ್ಲುಪ್ಪು), ಕೆಲವು ಕಾಳು ಕಾಳುಮೆಣಸು, ಕಪ್ಪು ಉಪ್ಪು (black salt), ಕಲ್ಲುಸಕ್ಕರೆಯ ಚಿಕ್ಕ ತುಂಡು ಹಾಕಿ ಕದಡಿ ಹಾಗೇ ಬಿಡಿ. ಸ್ವಲ್ಪ ತಣಿದ ಬಳಿಕ ಈ ನೀರನ್ನು ಸೋಸಿ ಉಗುರುಬೆಚ್ಚಗಿರುವಂತೆಯೇ ಕುಡಿಯಿರಿ.
* ಒಂದು ಚಿಕ್ಕ ಗುಳಿಗೆಯ ಗಾತ್ರದ ಕರ್ಪೂರವನ್ನು ನೀರಿನಲ್ಲಿ ಕದಡಿ ಕರಗಿದ ಬಳಿಕ ಕುಡಿಯುವುದೂ ಹಂದಿಜ್ವರಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಆದರೆ ಇದರ ಪ್ರಮಾಣ ತಿಂಗಳಿಗೆ ಒಂದು ಲೋಟ ಮಾತ್ರ.
* ಜ್ವರವಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸಿದರೆ ಒಳ್ಳೆಯದು.
ಚಿಕಿತ್ಸೆ ಹಂದಿಜ್ವರಕ್ಕೆ ಔಷಧವಿದೆಯೇ?
ಎರಡು ಪ್ರಮುಖ ಔಷಧಿಗಳೆಂದರೆ amantadineಮತ್ತು rimantadine.ಇದರ ಹೊರತಾಗಿ influenza neuraminidase protein ಎಂಬ ಜ್ವರಕ್ಕೆ ಕಾರಣವಾದ ಪ್ರೋಟೀನುಗಳನ್ನು ತಗ್ಗಿಸುವ ಔಷಧಿಗಳಾದ oseltamivir ಮತ್ತು zanamivir ಎಂಬ ಔಷಧಿಗಳನ್ನೂ ವೈದ್ಯರು ಶಿಫಾರಸ್ಸು ಮಾಡುತ್ತಾರೆ.ಸಾಮಾನ್ಯವಾಗಿ, ಹಂದಿಜ್ವರ ಪೀಡಿತ ರೋಗಿಗಳು ಹೆಚ್ಚಿನ ವೈದ್ಯಕೀಯ ಆರೈಕೆಯ ಅವಶ್ಯಕತೆ ಇಲ್ಲದೇ ಶೀಘ್ರವೇ ಗುಣಮುಖರಾಗುತ್ತಾರೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications