Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅಪ್ಪಿ-ತಪ್ಪಿಯೂ ಸನ್ ಸ್ಕ್ರೀನ್ ಹಚ್ಚುವಾಗ ಈ ತಪ್ಪುಗಳನ್ನು ಮಾಡದಿರಿ
ಸೂರ್ಯನ ಬೆಳಕು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸೂರ್ಯನ ಬಿಸಿಲಿಗೆ ಮೈಯನ್ನು ಒಡ್ಡಿದರೆ ಸಮೃದ್ಧವಾದ ವಿಟಮಿನ್ ಡಿ ಅಂಶವನ್ನು ಪಡೆಯಬಹುದು. ಹಾಗಂತ ಸಿಕ್ಕಾಪಟ್ಟೆ ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡುವುದು ಕೂಡ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಚರ್ಮ ರೋಗದಂತಹ ಸಮಸ್ಯೆ ಉಂಟಾದರೂ ಅಚ್ಚರಿ ಪಡಬೇಕಾಗಿಲ್ಲ.
ಹೆಚ್ಚಿನವರು ಮನೆಯಿಂದ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹಚ್ಚಿಕೊಂಡೇ ಮನೆಯಿಂದ ಹೊರಗಡೆ ಹೋಗುತ್ತಾರೆ. ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಬೇರೆ ಬೇರೆ ವಿಧದ ಸನ್ ಸ್ಕ್ರೀನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಿಸಿಲಿಗೆ ಮೈಯೊಡ್ಡುವಾಗ ನಾವು ಎಷ್ಟು ಪ್ರಮಾಣದಲ್ಲಿ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು? ಕ್ಯಾನ್ಸರ್ ನಿಂದ ಬಚಾವ್ ಆಗಲು ಯಾವ ತರಹದ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು ಅನ್ನೋದನ್ನು ತಿಳಿಯೋಣ.

ಸರಿಯಾದ ಪ್ರಮಾಣದ ಸನ್ ಸ್ಕ್ರೀನ್ ಅಳೆಯೋದು ಹೇಗೆ?
ಬಿಸಿಲಿಗೆ ನಮ್ಮ ದೇಹವು ಒಡ್ಡಿಕೊಳ್ಳುವಾಗ ಸನ್ ಸ್ಕ್ರೀನ್ ಖಂಡಿತವಾಗಿ ಹಾಕಲೇಬೇಕು. ಆದರೆ ಇಡೀ ದೇಹಕ್ಕೆ ಸನ್ ಸ್ಕ್ರೀನ್ ಹಚ್ಚುವಾಗ ಒಂದೇ ಪ್ರಮಾಣದಲ್ಲಿ ಹಚ್ಚೋದು ಕಷ್ಟ. ಒಂದು ಕಡೆ ಹೆಚ್ಚು, ಮತ್ತೊಂದು ಕಡೆ ಕಡಿಮೆ ಹೀಗೆ ವ್ಯತ್ಯಾಸ ಉಂಟಾಗುತ್ತದೆ. ಹೀಗಾಗಿ ಎರಡು ಬೆರಳಿನ ಸೂತ್ರವನ್ನು ಅನುಸರಿಸಬಹುದು. ಬರೀ ಎರಡು ಬೆರಳಿನಲ್ಲಿ ಮುಖದಿಂದ ಹಿಡಿದು ಇಡೀ ದೇಹಕ್ಕೆ ಹಚ್ಚಿಕೊಂಡು ಬಂದರೆ ಸನ್ ಸ್ಕ್ರೀನ್ ಸಮ ಪ್ರಮಾಣದಲ್ಲಿ ಹಚ್ಚಬಹುದು.
ಎರಡು ಗಂಟೆಗೊಮ್ಮೆ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ
ಬಿಸಿಲಿಗೆ ಹೊರಗಡೆ ಹೋಗುವ 30 ನಿಮಿಷಕ್ಕೂ ಮೊದಲೇ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು. ಒಂದು ವೇಳೆ ನೀವು ನಿರಂತರವಾಗಿ ಬಿಸಿಲಿನಲ್ಲೇ ಇದ್ದರೆ ಎರಡು ಗಂಟೆಗೊಮ್ಮೆ ಸನ್ ಸ್ಕ್ರೀನ್ ಹಚ್ಚುತ್ತಿರಬೇಕು. ಇನ್ನೂ ಹೆಚ್ಚಿನ ಎಸ್ ಪಿಎಫ್ ಅಂಶ(ಸನ್ ಪ್ರೊಟೆಕ್ಷನ್ ಫ್ಯಾಕ್ಟರ್) ಇರುವ ಸನ್ ಸ್ಕ್ರೀನ್ ಧರಿಸಿದರೆ ನಿಮಗೆ ಅದು ರಕ್ಷಣೆ ನೀಡುವುದಿಲ್ಲ.
ಯಾಕಂದರೆ ಅದು ನಿಮ್ಮನ್ನು ಸುಡುವಿಕೆಯಿಂದ ರಕ್ಷಣೆ ನೀಡೋದಿಲ್ಲ. ಹೆಚ್ಚಿನ ಎಸ್ ಪಿಎಫ್ ಅಂಶ ಇರುವ ಸನ್ ಸ್ಕ್ರೀನ್ ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ ಕಿರಣಳನ್ನು ತಡೆಯುತ್ತದೆ. ಇನ್ನೂ ಯಾವುದೇ ಸನ್ ಸ್ಕ್ರೀನ್ ನಿಮಗೆ ನೂರಕ್ಕೆ ನೂರರಷ್ಟು ರಕ್ಷಣೆಯನ್ನು ಖಂಡಿತ ನೀಡೊದಿಲ್ಲ.
ಸನ್ ಸ್ಕ್ರೀನ್ ನ ಆಯ್ಕೆ ಹೇಗಿರಬೇಕು?
ನೀವು ಧರಿಸುವ ಸನ್ ಸ್ಕ್ರೀನ್ UVA ಮತ್ತು UVB ವಿಕಿರಣದಿಂದ ನಿಮ್ಮನ್ನು ರಕ್ಷಿಸುತ್ತಾ ಅನ್ನೋದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ಈಗ ಸಿಗೋ ಆಧುನಿಕ ಸನ್‌ಸ್ಕ್ರೀನ್‌ಗಳನ್ನು ಬಳಸಿರಿ. ಏಕೆಂದರೆ ಅದು ನಿಮಗೆ ಅತಿಗೆಂಪು ಕಿರಣಗಳಿಂದ ರಕ್ಷಣೆ ನೀಡುತ್ತದೆ.
ಆದರೆ ಬಿಸಿಲಿಗೆ ಹೋದಾಗ ನೀವು ಯಾವುದೇ ಸನ್ ಸ್ಕ್ರೀನ್ ಬಳಸದಿದ್ದರೆ ಅದು ನಿಧಾನವಾಗಿ ನಿಮ್ಮ ಚರ್ಮವನ್ನು ಸುಟ್ಟು ಬಿಡುತ್ತದೆ. ಸನ್ ಸ್ಕ್ರೀನ್ ನಲ್ಲಿ ಎಸ್ ಪಿಎಫ್ 50 ರಷ್ಟು ಇದ್ದರೆ ಅದು ನಿಮ್ಮ ಚರ್ಮಕ್ಕೆ ನೀವು ಯಾವುದೇ ಕ್ರೀಮ್ ಧರಿಸಿದ ಸಂದರ್ಭದಲ್ಲಿ ಆಗುವ ಹಾನಿಗಿಂತ ಸುಮಾರು ಶೇಕಡಾ 50 ರಷ್ಟು ಹೆಚ್ಚು ರಕ್ಷಣೆಯನ್ನು ನೀಡುತ್ತದೆ.
ಸನ್ ಸ್ಕ್ರೀನ್ ನಲ್ಲಿ ಎಸ್ ಪಿಎಫ್ ಪ್ರಮಾಣ ಎಷ್ಟಿರಬೇಕು?
ಸಾಮಾನ್ಯವಾಗಿ ಎಸ್ ಪಿಎಫ್ 30 ಅಂಶವಿರುವ ಸನ್ ಸ್ಕ್ರೀನ್ ಅನ್ನು ಬಳಸಿದರೆ ತುಂಬಾನೇ ಒಳ್ಳೆಯದು. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವೂ ಕೂಡ ಇದನ್ನೇ ಹೇಳುತ್ತದೆ. ಒಂದು ವೇಳೆ ಸನ್ ಸ್ಕ್ರೀನ್ ನಲ್ಲಿ ಎಸ್ ಪಿಎಫ್ 30ಕ್ಕಿಂತ ಕಡಿಮೆ ಇದ್ದರೆ ಅಂತಹ ಸನ್ ಸ್ಕ್ರೀನ್ ಹಚ್ಚಿಯೂ ಕೂಡ ಯಾವುದೇ ರೀತಿ ಪ್ರಯೋಜನವಿಲ್ಲ.
ಇನ್ನೂ ಎಸ್ ಪಿಎಫ್ 50 ಇರುವ ಸನ್ ಸ್ಕ್ರೀನ್ ಹಚ್ಚಿದರೆ ತುಂಬಾನೇ ಒಳ್ಳೆಯದು. ವೈದ್ಯರು ಕೂಡ ಇದನ್ನೇ ಬಳಸಿ ಎಂದು ಸಲಹೆ ನೀಡುತ್ತಾರೆ. ಏಕೆಂದರೆ ಎಸ್ ಪಿಎಫ್ 50 ಇರುವ ಸನ್ ಸ್ಕ್ರೀನ್ ಬಳಸಿದರೆ ಇದು ಸೂರ್ಯನಿಂದ ಬರುವ ಎಲ್ಲಾ ರೀತಿ ಹಾನಿಕಾರಕ ಕಿರಣಗಳಿಂದ ನಮಗೆ ರಕ್ಷಣೆ ನೀಡುತ್ತದೆ.
ಚರ್ಮದ ಕ್ಯಾನ್ಸರ್ ನಿಂದ ತಪ್ಪಿಸಿಕೊಳ್ಳಲು ಆಹಾರ ಕ್ರಮ ಹೇಗಿರಬೇಕು?
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ನ ಅಪಾಯಗಳು ಹೆಚ್ಚಾಗುತ್ತಿದೆ. ಅದ್ರಲ್ಲೂ ಚರ್ಮದ ಕ್ಯಾನ್ಸರ್ ನ ಪ್ರಮಾಣ ಹೆಚ್ಚಾಗ್ತಿದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಸಿ, ಇ ಮತ್ತು ಎ, ಸತು, ಸೆಲೆನಿಯಮ್, ಬೀಟಾ ಕ್ಯಾರೋಟಿನ್ , ಲೈಕೋಪೀನ್ ಮತ್ತು ಪಾಲಿಫಿನಾಲ್ ಗಳು ಸೇರಿದಂತೆ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರಬೇಕು. ಈ ಎಲ್ಲಾ ಸತ್ವಗಳು ಇರುವ ಆಹಾರಗಳನ್ನೇ ಹೆಚ್ಚಾಗಿ ಸೇವಿಸಿ. ಇದರಿಂದ ನೀವು ಚರ್ಮದ ಕ್ಯಾನ್ಸರ್ ನ ಅಪಾಯದಿಂದ ತಪ್ಪಿಸಿಕೊಳ್ಳಬಹುದು.
ಒಜೋನ್ ಪದರ ನಿಧಾನವಾಗಿ ಹಾನಿಗೊಳಗಾಗುತ್ತಿದ್ದು, ಇದರಿಂದ ಸೂರ್ಯನ ಹಾನಿಕಾರಕ ಕಿರಣಗಳು ಜೀವಿಗಳ ಮೇಲೆ ಹಾನಿಯುಂಟು ಮಾಡುತ್ತಿದೆ. ಹೀಗಾಗಿ ನಮ್ಮ ಜಾಗರೂಕತೆಯಲ್ಲಿ ನಾವಿರೋದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
