Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಶೇ. 99ರಷ್ಟು ಕಾರಿನಲ್ಲಿದೆ ಕ್ಯಾನ್ಸರ್‌ಕಾರಕ ಅಂಶ, ಅದನ್ನೇ ಉಸಿರಾಡುತ್ತಿದ್ದೇವೆ!
ಇತ್ತೀಚಿನ ವರ್ಷಗಳಲ್ಲಿ ಈ ಕ್ಯಾನ್ಸರ್ ಎಂಬ ಭಯಾನಕ ಕಾಯಿಲೆ ತುಂಬಾನೇ ಹೆಚ್ಚಾಗುತ್ತಿದೆ. ತಿನ್ನುವ ಕೆಲವೊಂದು ಆಹಾರ ವಿಷ, ಕುಡಿಯುವ ಕೆಲವೊಂದು ಪಾನೀಯ ವಿಷ, ಉಸಿರಾಡುವ ಗಾಳಿ ಕೂಡ ವಿಷ, ಹೀಗಾಗಿ ಈ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತಿದೆ. ಅದರಲ್ಲೂ ಶೇ. 99ರಷ್ಟು ಕಾರುಗಳು ಕ್ಯಾನ್ಸರ್ ಅಪಾಯ ಉಂಟು ಮಾಡುತ್ತದೆ ಎಂದು ಇದರ ಕುರಿತು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಕಾರುಗಳಿಂದ ಕ್ಯಾನ್ಸರ್ ಅಪಾಯವಿದೆಯೇ?
Environmental Science & Technology ಎಂಬ ಅಧ್ಯಯನವನ್ನು ಸಂಶೋಧಕರು ಮಾಡಿದ್ದರು. ಅದರಲ್ಲಿ 101 ಎಲೆಕ್ಟ್ರಿಕ್ , ಗ್ಯಾಸ್, ಹೈಬ್ರಿಡ್ ಕಾರುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯ್ತು. ಈ ಎಲ್ಲಾ ಕಾರುಗಳು ಹೊಸ ಮಾಡೆಲ್‌ಗಳೇ 2015ರಿಂದ 2022ರ ಒಳಗಿನ ಕಾರುಗಳೇ. ಅದರಲ್ಲಿ ಶೇ. 99ರಷ್ಟು ಕಾರುಗಳಲ್ಲಿ ಫ್ಲೇಮ್ retardantsನಿಂದ TCIPP ಎಂಬ ಕ್ಯಾನ್ಸರ್ ಕಾರಕ ಅಂಶಗಳು ಬಿಡುಗಡೆಯಾಗುವುದು ಕಂಡು ಬಂದಿದೆ. ಕೆಲವೊಂದು ಕಾರುಗಳಲ್ಲಿ ಎರಡು ಫ್ಲೇಮ್ ರೆಟ್ರಾಡಂಟ್ಸ್ ಇದ್ದು ಇದರಿಂದ ಕ್ಯಾನ್ಸರ್‌ಕಾರಕ ಕಾರ್ಸಿನೋಜೆನಿಕ್ ಬಿಡುಗಡೆಯಾಗುತ್ತಿದ್ದು ಇದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂಬುವುದು ತಿಳಿದು ಬಂದಿದೆ.
ಬೇಸಿಗೆಯಲ್ಲಿ ಹೆಚ್ಚು ರಾಸಾಯನಿಕ ಉತ್ಪತ್ತಿ ಮಾಡುತ್ತದೆ
ಬೇಸಿಗೆಯಲ್ಲಿ ಕಾರಿನಲ್ಲಿ ಬಿಸಿ ಹೆಚ್ಚಿರುತ್ತದೆ, ಇದರಿಂದ ರಾಸಾಯನಿಕ ಉತ್ಪತ್ತಿ ಹೆಚ್ಚುತ್ತದೆ. ಕ್ಯಾನ್ಸರ್ ಕಾರಕವಾದ ಅಂಶ ಸೀಟ್‌ನಲ್ಲಿ ಇರುತ್ತದೆ. ಇದರಿಂದಾಗಿ ರಾಸಾಯನಿಕ ಹೆಚ್ಚಾಗುವುದು.
ಮೆಡಿಸಿನ್ ಫಾರ್ ದಿ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಫೈರ್ ಫೈಟರ್ನ ಆರೋಗ್ಯ ನಿರ್ದೇಶಕ ಪ್ಯಾಟ್ರಿಕ್ ಮೋರಿಸನ್ ಕಾರಿನಲ್ಲಿರುವ ಫೈರ್ ಫೈಟರ್ ಕೆಮಿಕಲ್ ಇದು ಕೂಡ ಕ್ಯಾನ್ಸರ್‌ಕಾರವಾಗಿದೆ.
ಕಾರು ಬಳಸುವುದರಿಂದ ಕ್ಯಾನ್ಸರ್ ಬರುವುದೇ?
ಕಾರಿನಲ್ಲಿ ಕ್ಯಾನ್ಸರ್ ಉತ್ಪಾದಕ ಅಂಶಗಳಿವೆ, ಆದರೆ ಕಾರು ಬಳಸಿದ ಎಲ್ಲರಿಗೂ ಕ್ಯಾನ್ಸರ್ ಬರಲ್ಲ. ನಮ್ಮ ಜೀವನ ಶೈಲಿ ಹಾಗೂ ರೋಗನಿರೋಧಕ ಶಕ್ತಿ ಮುಖ್ಯವಾಗಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಬಗೆಯ ಅಂಶ ಬೇಗನೆ ಪರಿಣಾಮ ಬೀರುತ್ತದೆ. ನಾವು ಒಳ್ಳೆಯ ಜೀವಶೈಲಿ ಕಾಪಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಆರೋಗ್ಯ ಚೆನ್ನಾಗಿರುತ್ತದೆ.
ಕ್ಯಾನ್ಸರ್ ಬರುವುದನ್ನು ತಡೆಗಟ್ಟಲು ಟಿಪ್ಸ್
ಆರೋಗ್ಯಕರ ಮೈತೂಕ ಹೊಂದಿರಬೇಕು: ಆರೋಗ್ಯಕರ ಮೈ ತೂಕ ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೂ ಒಳ್ಳೆಯದು, ಇದರಿಂದ ಪ್ರೊಸ್ಟೇಟ್, ಸ್ತನ, ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಇವುಗಳನ್ನು ತಡೆಗಟ್ಟಬಹುದು. ಆದ್ದರಿಂದ ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸಿ. ಪ್ರತಿದಿನ ವ್ಯಾಯಾಮ ಮಾಡಿ.
ಯಾವ ಬಗೆಯ ಆಹಾರಕ್ರಮ ಒಳ್ಳೆಯದು
ಹಣ್ಣು, ತರಕಾರಿ ಹೆಚ್ಚಾಗಿ ತಿನ್ನಿ, ಅದರಲ್ಲೂ ಸೀಸನಲ್ ಹಣ್ಣುಗಳನ್ನು ಸೇವಿಸಿ. ಧಾನ್ಯಗಳನ್ನು ಸೇವಿಸಿ, ಸಕ್ಕರೆ ಹಾಗೂ ಕೊಬ್ಬಿನಂಶದ ಆಹಾರ ಸೇವಿಸದೆ ಇದ್ದರೆ ಒಳ್ಳೆಯದು, ಸೇವಿಸುವುದಾದರೂ ಕಡಿಮೆ ಸೇವಿಸಿ.
ಸಂಸ್ಕರಿಸಿದ ಮಾಂಸ ಸೇವಿಸಬೇಡಿ
ಸಂಸ್ಕರಿಸಿದ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎಂಬ ಸಂಸ್ಥೆ ಸಂಸ್ಕರಿಸಿದ ಮಾಂಸಾಹಾರದಿಂದ ಕ್ಯಾನ್ಸರ್ ಬರುತ್ತದೆ ಎಂದು ವಿಶ್ವ ಆರೋಗ್ಯ ಸಮಸ್ಯೆಗೆ ಹೇಳಿದೆ.
ತಂಬಾಕು ಸೇವನೆ ಮಾಡಬೇಡಿ
ಆರೋಗ್ಯಕರ ಆಹಾರಕ್ರಮ ಸೇವಿಸಿ: ಆರೋಗ್ಯಕರ ಮೈ ತೂಕ ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೂ ಒಳ್ಳೆಯದು, ಇದರಿಂದ ಪ್ರೊಸ್ಟೇಟ್, ಸ್ತನ, ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಇವುಗಳನ್ನು ತಡೆಗಟ್ಟಬಹುದು. ಆದ್ದರಿಂದ ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸಿ.
ಮದ್ಯ ಮಿತಿಯಲ್ಲಿ ಸೇವಿಸಿ
45 ವರ್ಷದ ಬಳಿಕ ನಿಯಮಿತ ಸ್ಕ್ರೀನಿಂಗ್ ಮಾಡಿಸಿ. ಈ ರೀತಿ ಆರೋಗ್ಯದ ಬಗ್ಗೆ ಗಮನಹರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
