Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಯೌವನ ಪ್ರಾಯದವರಲ್ಲಿ ಹೆಚ್ಚಾಗುತ್ತಿದೆ STDs (ಲೈಂಗಿಕ ಸೋಂಕು), ಕಾರಣವೇನು, ತಡೆಗಟ್ಟುವುದು ಹೇಗೆ?
ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲಿ STDs(ಲೈಂಗಿಕ ಸಂಪರ್ಕದಿಂದ ಹರಡುವ ರೋಗ) ಹೆಚ್ಚಾಗಿ ಕಂಡು ಬರುತ್ತಿದೆ, ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ಇದೊಂದು ಗಂಭೀರವಾದ ಸಮಸ್ಯೆಯಾಗಿದೆ, ನಿರ್ಲಕ್ಷ್ಯ ಮಾಡಿದರೆ ವ್ಯಕ್ತಿಯ ಆರೋಗ್ಯ ಸಂಪೂರ್ಣ ಹಾಳಾಗುವುದು.
ಸಾಮಾನ್ಯವಾಗಿ ಯಾವ ಬಗೆಯ STDs (sexually transmitted diseases) ಹೆಚ್ಚಾಗಿ ಕಂಡು ಬರುತ್ತಿದೆ? ಇದರಿಂದ ನಿಮ್ಮನ್ನು ರಕ್ಷಣೆ ಮಾಡುವುದು ಹೇಗೆ ಎಂದು ನೋಡೋಣ:

15-24 ವರ್ಷದವರಲ್ಲಿ STDs ಸಮಸ್ಯೆ ಹೆಚ್ಚುತ್ತಿದೆ
ಕಳೆದ ದಶಕದಿಂದ ಹದಿಹರೆಯದವರಲ್ಲಿ, ಯುವಕರಲ್ಲಿ STDs ಸಮಸ್ಯೆ ಹೆಚ್ಚಾಗುತ್ತಿದೆ. ಕ್ಲಮೈಡಿಯ, ಗೊನೊರಿಯಾ ಮತ್ತು ಸಿಫಿಲಿಸ್ ಈ ಬಗೆಯ STDs ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ಇದರಿಂದಾಗಿ ಬಂಜೆತನ , ಪೆಲ್ವಿಕ್ ಭಾಗದಲ್ಲಿ ನೀವು, HIV ಅಪಾಯ ಹೆಚ್ಚಾಗುವುದು.
ಚಿಕ್ಕ ಪ್ರಾಯದಲ್ಲಿ STDs ಬರಲು ಕಾರಣವೇನು?
ಚಿಕ್ಕ ಪ್ರಾಯದವರಲ್ಲಿ STDs ಬರಲು ಕಾರಣವೇನು ಎಂದು ನೋಡುವುದರೆ ಲೈಂಗಿಕ ಸುರಕ್ಷತೆ ಬಗ್ಗೆ ಅರಿವು ಇಲ್ಲದಿರುವುದು. ಚಿಕ್ಕ ಪ್ರಾಯದಲ್ಲಿ ಲೈಂಗಿಕ ಚಟುವಟಿಕೆ ನಡೆದಿದ್ದರೆ ಈ ಕಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
ತಮ್ಮ ಸಮಸ್ಯೆ ಹೇಳಿಕೊಳ್ಳಲು ಅಂಜಿಕೆ
ಚಿಕ್ಕ ಪ್ರಾಯದಲ್ಲಿ ಲೈಂಗಿಕ ಕ್ರಿಯೆ ಕುರಿತು ಅಧಿಕ ಮಾಹಿತಿ ಇರುವುದಿಲ್ಲ. ಸುರಕ್ಷಿತ ಲೈಂಗಿಕ ಕ್ರಿಯೆ ಬಗೆಯೂ ಗೊತ್ತಿರುವುದಿಲ್ಲ. ಇತ್ತೀಚೆಗೆ 18 ವರ್ಷದ ಒಳಗಡೆ ಗರ್ಭವತಿಯಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು 2021, 2022ರಲ್ಲಿ ನಡೆಸಿದ ಅಧ್ಯಯನ ವರದಿ ಹೇಳಿದೆ.
ಈ ಪ್ರಾಯದಲ್ಲಿ ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಹಿಂಜರಿಕೆ ಇರುತ್ತದೆ, ಇದರಿಂದ ದೈಹಿಕ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತಿದೆ.
STDs ವಿಧಗಳಾವುವು
ಕ್ಲಮೈಡಿಯ, ಗೊನೊರಿಯಾ, ಸಿಫಿಲಿಸ್, ಹರ್ಪಿಸ್, ಹ್ಯೂಮನ್ ಪ್ಯಾಪಿಲೋಮವೈರಸ್ (HPV), ಮತ್ತು HIV/AIDS ಈ ಬಗೆಯ ಲೈಂಗಿಕ ಸೋಂಕುಗಳಿವೆ.
ಈ ವೈರಸ್, ಬ್ಯಾಕ್ಟಿರಿಯಾಗಳು ಒಬ್ಬರಿಂದ ಮತ್ತೊಬ್ಬರಿಗೆ ಲೈಂಗಿಕ ಕ್ರಿಯೆ ಮೂಲಕ ಹರಡುತ್ತದೆ.
ಹರ್ಪೀಸ್ ಕಾಯಿಲೆ
ಇದು ಲೈಂಗಿಕ ಕ್ರಿಯೆ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಇನ್ನು ಹರ್ಪೀಸ್ ಇರುವ ವ್ಯಕ್ತಿಯ ದ್ರವ ತಗುಲಿದಾಗ ಉಂಟಾಗುವುದು. ಹರ್ಪೀಸ್ ಜೀವನ ಪರ್ಯಾಂತ ಕಾಡುವ ಸಮಸ್ಯೆಯಾಗಿದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಆ್ಯಂಟಿವೈರಲ್ ಔಷಧಗಳಿಂದ ಇದನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ.
STDs ಲಕ್ಷಣಗಳು
STDs ತೀವ್ರತೆ ಯಾವ ಬಗೆ STDs ತಗುಲಿದೆಯೋ ಅದಕ್ಕೆ ತಕ್ಕಂತೆ ಇರಲಿದೆ. ಆದರೆ ಸಾಮಾನ್ಯವಾಗಿ ಈ ಲಕ್ಷಣಗಳು ಕಮಡು ಬರಲಿದೆ
* ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವುದು
* ತುರಿಕೆ ಉಂಟಾಗುವುದು
* ಬಿಳುಪು ಹೋಗುವುದು
* ಜನನೇಂದ್ರೀಯ ಬಳಿ ಊತ
* ಆ ಭಾಗದಲ್ಲಿ ಗುಳ್ಳೆಗಳು ಕಂಡು ಬರುವುದು.
ಕೆಲವೊಮ್ಮೆSTDs ಪ್ರಾರಂಭದಲ್ಲಿ ಯಾವುದೇ ಲಕ್ಷಣ ಸೂಚಿಸುವುದಿಲ್ಲ, ಆದ್ದರಿಂದ ಇದರ ಬಗ್ಗೆ ಪರೀಕ್ಷೆ ಮಾಡಿದಾಗ ಮಾತ್ರ ತಿಳಿದು ಬರುವುದು.
STDs ತಡೆಗಟ್ಟುವುದು ಹೇಗೆ?
ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಈ ಸಮಸ್ಯೆ ತಡೆಗಟ್ಟಬಹುದಾಗಿದೆ. ತುಂಬಾ ಲೈಂಗಿಕ ಸಂಗಾತಿ ಇದ್ದರೆ ಕಾಂಡೋಮ್ ಬಳಸುವುದು ಒಳ್ಳೆಯದು.
ಏನಾದರೂ STDs ಲಕ್ಷಣ ಕಂಡು ಬಂದರೆ ಅಂಜಿಕೆ ಪಟ್ಟು ಕೂರುವ ಬದಲಿಗೆ ವೈದ್ಯರಿಗೆ ತೋರಿಸಿ. ಇದರಿಂದ ನಿಮ್ಮಿಂಂದ ಲೈಂಗಿಕ ಸೋಂಕು ಹರಡುವುದು ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












