Latest Updates
-
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ!
ಬೆಳಗ್ಗೆ ದಾಳಿಂಬೆ ಜ್ಯೂಸ್ ಕುಡಿದರೆ ಎಷ್ಟು ಪ್ರಯೋಜನವಿದೆ ಗೊತ್ತಾ?
ದಾಳಿಂಬೆ ಹಣ್ಣು ಎಷ್ಟು ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ನೀವು ಕೂಡ ತಿಳಿದಿರುತ್ತೀರಿ. ಹಿಮೋಗ್ಲೋಬಿನ್ ಮಟ್ಟವು ಹೆಚ್ಛಳವಾಗುವುದಲ್ಲದೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಮತ್ತು ಪ್ರೋಟೀನ್ ಸಿಗಲಿದೆ ಎಂಬುದು ತಿಳಿದಿರುವ ವಿಚಾರವಾಗಿದೆ. ದಾಳಿಂಬೆಯಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳು ಸಮೃದ್ವಾಗಿವೆ. ಹಾಗೆ ಇದು ಕಡಿಮೆ ಕ್ಯಾಲೋರಿ ತುಂಬಿದೆ. ಹಾಗೆ ಇದು ಚರ್ಮದ ಆರೋಗ್ಯಕ್ಕೂ ಕೂಡ ಬಹಳ ಉತ್ತಮ ಹಣ್ಣು ಎಂಬುದನ್ನು ತಿಳಿದಿರುತ್ತೀರಿ.
ಹಾಗೆ ಬೇಸಿಗೆ ಬಂತೆಂದರೆ ಈ ದಾಳಿಂಬೆ ಹಣ್ಣುಗಳ ಬೆಲೆ ಗಗನಕ್ಕೇರುತ್ತದೆ. ಹಾಗೆ ದಾಳಿಂಬೆ ಜ್ಯೂಸ್ ಗೂ ಕೂಡ ಬಹಳ ಬೇಡಿಕೆ ಇರಲಿದೆ. ಇನ್ನು ಈ ದಾಳಿಂಬೆ ಜ್ಯೂಸ್ ಸೇವಿಸುವುದರಿಂದಾಗುವ ಪ್ರಯೋಜನವೇನು? ಯಾವಾಗ ಸೇವಿಸಬೇಕು ಎಂಬುದನ್ನು ಕೂಡ ತಿಳಿದಿರಬೇಕು. ಹಾಗೆ ನೀವು ನಿತ್ಯ ಬೆಳಗ್ಗೆ ದಾಳಿಂಬೆ ಜ್ಯೂಸ್ ಸೇವಿಸುವುದರಿಂದಾಗುವ ಲಾಭದ ಕುರಿತು ತಿಳಿದುಕೊಳ್ಳೋಣ.

ಹೃದಯದ ಆರೋಗ್ಯ ಕಪಾಡಲಿದೆ
ಹೃದಯ ಕಾಯಿಲೆ, ಟೈಪ್ 2 ಮಧುಮೇಹ ಮ ತು ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ಪರಿಸ್ಥಿತಿಗಳಿಗೆ ಕಾರಣವಾಗುವ ದೀರ್ಘಕಾಲದ ಉರಿಯೂತದ ಸಮಸ್ಯೆ ಬಗೆಹರಿಸಲು ಇದು ಸಹಕಾರಿಯಾಗಲಿದೆ. ದಾಳಿಂಬೆಯಲ್ಲಿ ಪುನಿಕಲಾಗಿನ ಎಂದು ಕರೆಯಲಾಗುವ ಸಂಯುಕ್ತವಿದ್ದು, ಹೆಚ್ಚಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಪಾಲಿಫಿನಾಲಿಕ್ ಸಂಯುಕ್ತಗಳಿಂದ ಸಮೃದ್ಧವಾಗಿರುವುದರಿಂದ, ಇದರ ಜ್ಯೂಸ್ ಸೇವನೆಯು ರಕ್ತ ಶುದ್ಧೀಕರಣ ಹಾಗೆ ಹೃದಯ ಸಮಸ್ಯೆಗೆ ಪರಿಹಾರ ನೀಡಲಿದೆ.
ಕಿಡ್ನಿ ಆರೋಗ್ಯಕ್ಕೆ ಬಹಳ ಉತ್ತಮ
ದಾಳಿಂಬೆ ಜ್ಯೂಸ್ ಮೂತ್ರಪಿಂಡದ ಕಲ್ಲುಗಳ ರಚನೆಯ ಅಪಾಯವನ್ನು ಕಡಿಮೆ ಮಾಡಲಿದೆ. ದಾಳಿಂಬೆ ಸಾರವು ಪುನರಾವರ್ತಿತ ಮೂತ್ರಪಿಂಡದ ಕಲ್ಲುಗಳಿರುವವರಲ್ಲಿ ಕಲ್ಲಿನ ರಚನೆಗೆ ಸಂಬಂಧಿಸಿದ ಕಾರ್ಯವಿಧಾನವನ್ನು ಪ್ರತಿಬಂಧಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ದಾಳಿಂಬೆ ರಸದಲ್ಲಿರುವ ಆಕ್ಸಲೇಟ್ಗಳು, ಕ್ಯಾಲ್ಸಿಯಂ ಮತ್ತು ಫಾಸ್ಪೇಟ್ಗಳ ನಿಯಂತ್ರಣದಲ್ಲಿಡಲಿದೆ.
ನೆನಪಿನ ಶಕ್ತಿ ವೃದ್ಧಿಗೆ ಇದು ಸಹಕಾರಿ
ನೀವು ಬೆಳಗ್ಗೆ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ನಿಮ್ಮ ನೆನಪಿನ ಶಕ್ತಿ ವೃದ್ಧಿಸಲಿದೆ. ದಾಳಿಂಬೆಗಳು ಎಲಾಜಿಟಾನಿನ್ಗಳು ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕಗಳಿಂದ ತುಂಬಿವೆ, ಇದು ನಿಮ್ಮ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡುವ ಮೂಲಕ ಮೆದುಳಿನ ಕೋಶಗಳ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಹಾಗೆ ಇದು ಆಲ್ಜೈಮರ್ ಹಾಗೆ ಪಾರ್ಕಿಸನ್ ಅಪಾಯಗಳ ಕಡಿಮೆ ಮಾಡಬಹುದಾಗಿದೆ. ಎಲ್ಲಜಿಟಾನಿನ್ಗಳು ಕರುಳಿನಲ್ಲಿ ಯುರೊಲಿಥಿನ್ ಎ ಎಂದು ಕರೆಯಲ್ಪಡುವ ಸಂಯುಕ್ತವನ್ನು ಉತ್ಪಾದಿಸುತ್ತವೆ, ಇದನ್ನು ಮೆದುಳಿನಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಮತ್ತು ಅರಿವಿನ ಕಾಯಿಲೆಗಳ ಅಪಾಯ ಕಡಿಮೆ ಮಾಡಲಿವೆ.
ಜೀರ್ಣಕ್ರಿಯೆಗೆ ಬಹಳ ಉತ್ತಮ
ಬೆಳಗ್ಗೆಯ ಸಮಯದಲ್ಲಿ ದಾಳಿಂಬೆ ಜ್ಯೂಸ್ ಕುಡಿಯುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ. ಇದರಿಂದ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಾಗವಾಗಿಸಲು ಸಹಾಯ ಮಾಡಲಿದೆ. ಕರುಳಿನ ಆರೋಗ್ಯ ವೃದ್ಧಿಸುವ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲಿವೆ. ಇದು ಪ್ರಿಬಯಾಟಿಕ್ ಅಂಶ ಹೆಚ್ಚಾಗಲು ಕಾರಣವಾಗಲಿದೆ. ಈ ಪ್ರಿಬಯಾಟಿಕ್ ಅಂಶವು ಕರುಳಿನ ಆರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಲಿದೆ. ಹೀಗಾಗಿ ಬೆಳಗಿನ ವೇಳೆ ದಾಳಿಂಬೆ ಜ್ಯೂಸ್ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ.
ತೂಕ ಇಳಿಸಲು ವ್ಯಾಯಾಮಕ್ಕೂ ಮುನ್ನ ಕುಡಿಯುವುದು ಉತ್ತಮ
ದಾಳಿಂಬೆಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಹೀಗಾಗಿ ನೀವು ತೂಕ ಇಳಿಸಲು ಇಚ್ಛಿಸುತ್ತಿದ್ದರೆ ಬೆಳಗ್ಗೆ ದಾಳಿಂಬೆ ಜ್ಯೂಸ್ ಕುಡಿಯುವುದು ಬಹಳ ಉತ್ತಮ. ಹಾಗೆ ನೀವು ಬೆಳಗ್ಗೆ ವ್ಯಾಯಾಮ ಮಾಡುವವರಾಗಿದ್ದರೆ ಈ ಜ್ಯೂಸ್ ಕುಡಿದು ವ್ಯಾಯಾಮ ಆರಂಭಿಸುವುದು ಬಹಳ ಉತ್ತಮವಂತೆ. ಇದರಿಂದ ನಿಮ್ಮ ದೇಹಕ್ಕೆ ಶಕ್ತಿ ಸಿಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
