Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಬೆಳಗ್ಗೆ ಖಾಲಿ ಹೊಟ್ಟೆಗೆ ತುಳಸಿ ನೀರು ಕುಡಿದು ನೋಡಿ.! ಎಷ್ಟು ಪ್ರಯೋಜನವಿದೆ ಗೊತ್ತಾ?
ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಲವು ರೀತಿಯ ಅಭ್ಯಾಸಗಳನ್ನು ನೀವು ಪಾಲಿಸುತ್ತಿರಬಹುದು. ಅದರಲ್ಲೂ ಚಿಕಿತ್ಸೆ ಒಡೆಯುವುದಕ್ಕಿಂತ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಬಹಳ ಮುಖ್ಯ. ಅದರಲ್ಲೂ ಸುಲಭವಾಗಿ ನಾವು ಅನಾರೋಗ್ಯಕ್ಕೆ ಬೀಳುವ ಸಂದರ್ಭದಲ್ಲಿ ಆದಷ್ಟು ಎಚ್ಚರಿಕೆ ವಹಿಸುತ್ತೇವೆ. ಹಾಗೆ ನಾವು ನಿತ್ಯ ಒಂದಿಷ್ಟು ಕೆಲಸಗಳು ಮಾಡಿದ್ರೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ಅದರಲ್ಲೂ ಆಯೂರ್ವೇದದಲ್ಲೂ ಹೇಳಿರುವಂತೆ ತುಳಸಿ ಗಿಡ ಎಷ್ಟೊಂದು ಪ್ರಯೋಜನಕಾರಿ ಅಂಶಗಳ ಹೊಂದಿದೆ ಎಂಬುದನ್ನು ನೀವು ಕೂಡ ತಿಳಿದಿರಬಹುದು. ಅದರಲ್ಲೂ ತುಳಸಿ ನೀರು ಬಹಳ ಶ್ರೇಷ್ಟವಾಗಿರುತ್ತದೆ. ಹಾಗಾದ್ರೆ ಬೆಳಗ್ಗೆ ಎದ್ದ ತಕ್ಷಣ ಈ ತುಳಸಿ ನೀರು ಕುಡಿಯುವುದರಿಂದಾಗಿ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪ್ರತಿದಿನ ನಿಯಮಿತವಾಗಿ 5-7 ತುಳಸಿ ಎಲೆಗಳನ್ನು ಸೇವಿಸುವುದರಿಂದ ಅದ್ಭುತ ಆರೋಗ್ಯ ಪ್ರಯೋಜನಗಳ ಪಡೆಯಬಹುದು. ಹಾಗೆ ಈ ತುಳಸಿ ನೀರು ಕೂಡ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳ ಹೊಂದಿದೆ. ಹಾಗಾದ್ರೆ ಬೆಳಗ್ಗೆ ಎದ್ದ ತಕ್ಷಣ ತುಳಸಿ ನೀರು ಕುಡಿಯುವುದರಿಂದಾಗುವ ಕೆಲವೊಂದು ಪ್ರಯೋಗಳನ್ನು ನಾವಿಲ್ಲಿ ಹೇಳಿದ್ದೇವೆ ನೋಡಿ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರು ಸೇವನೆ ಅದ್ಭುತಗಳ ಸೃಷ್ಟಿಸಲಿದೆ.
ಜೀರ್ಣಕ್ರಿಯೆ ಉತ್ತೇಜಿಸಲಿದೆ
ನೀವು ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊ ಟ್ಟೆಯಲ್ಲಿ ಈ ತುಳಸಿ ನೀರು ಸೇವಿಸಿದರೆ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸಲಿದೆ. ಹಾಗೆ ಇದು ಹೊಟ್ಟೆ ಉಬ್ಬುವುದನ್ನು ನಿಯಂತ್ರಣದಲ್ಲಿಡಲಿದೆ. ಹಾಗೆ ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಆಮ್ಲೀಯತೆ ಕಡಿಮೆ ಮಾಡುವ ಗುಣ ಇದರಲ್ಲಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ
ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಎಂಬ ವಿಶೇಷ ಅಂಶಗಳು ತುಳಸಿ ಎಲೆಯಲ್ಲಿವೆ, ಇದು ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗಲಿದೆ. ದೇಹಕ್ಕೆ ಉಂಟಾಗುವ ಸಣ್ಣಪುಟ್ಟ ಸೋಂಕುಗಳನ್ನು ಇದು ತಡೆಯಬಹುದಾದ ಶಕ್ತಿ ಹೊಂದಿರಲಿದೆ. ನಿಮ್ಮ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಕೂಡ ಸಹಕಾರಿ ಹಾಗೆ ಉರಿಯೂತವನ್ನು ಕೂಡ ಇದು ನಿಯಂತ್ರಣದಲ್ಲಿಡಲಿದೆ.
ಒತ್ತಡ ಹಾಗೂ ಆತಂಕ ಕಡಿಮೆ ಮಾಡುವ ಗುಣ ಹೊಂದಿದೆ.
ತುಳಸಿಯಲ್ಲಿ ಅಡಾಪ್ಟೋಜೆನಿಕ್ ಗುಣಗಳನ್ನು ಹೊಂದಿದೆ, ಅಂದರೆ ಇದು ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ದೇಹವು ಒತ್ತಡಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಗ್ಗೆ ತುಳಸಿ ನೀರನ್ನು ಸೇವಿಸುವುದರಿಂದ ವಿಶ್ರಾಂತಿಯ ಉತ್ತೇಜಿಸಲಿದೆ. ನಿಮ್ಮ ನಿತ್ಯದ ಒತ್ತಡದ ಸಮಯ ಹಾಗೂ ಆಯಾಸವನ್ನು ನಿಯಂತ್ರಣದಲ್ಲಿಡಲಿದೆ.
ಚರ್ಮದ ಆರೋಗ್ಯಕ್ಕೂ ಉತ್ತಮ
ತುಳಸಿ ನೀರನ್ನು ಖಾಲಿ ಹೊಟ್ಟೆಗೆ ಸೇವಿಸುವುದು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಯಾವುದಾದರು ಅಲರ್ಜಿ, ತುರಿಕೆ, ಮೊಡವೆಗಳ ವಿರುದ್ಧ ಹೋರಾಡಲಿದೆ. ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿದ್ದು ರಕ್ತ ಶುದ್ಧೀಕರಣದಂತಹ ಕೆಲಸದಕ್ಕೂ ಇದು ಸಹಕಾರಿಯಾಗಲಿದೆ. ಇದು ಮೊಡವೆ, ಕಲೆಗಳ ನಿವಾರಣೆಗೆ ಸಹಕಾರಿಯಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲಿದೆ
ತುಳಸಿ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸಲಿದೆ. ಈ ಮೂಲಕ ಗ್ಲೂಕೋಸ್ ಮಟ್ಟ ನಿಯಂತ್ರಣದಲ್ಲಿಡಲು ಹಾಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಲಿದೆ. ಹಾಗೆ ಇದು ಹೃದಯದ ಆರೋಗ್ಯಕ್ಕೂ ಬಹಳ ಉತ್ತಮವಾಗಿದ್ದು, ರಕ್ತನಾಳಗಳ ಸಮಸ್ಯೆಯ ಅಪಾಯ ಕಡಿಮೆ ಮಾಡಲಿದೆ.
ಉಸಿರಾಟ ಪ್ರಕ್ರಿಯೆಗೆ ಸಹಕಾರಿ
ತುಳಸಿ ನೀರನ್ನು ನಿತ್ಯವು ಖಾಲಿ ಹೊಟ್ಟೆಗೆ ಸೇವಿಸುತ್ತಾ ಬಂದರೆ ಇದರಿಂದ ನಿಮ್ಮ ಉಸಿರಾಟ ಪ್ರಕ್ರಿಯೆ ಸುಲಭವಾಗಲಿದೆ. ಇದು ನೈಸರ್ಗಿಕ ಕಫ ನಿರ್ಮೂಲಕದಂತೆ ಕೆಲಸ ಮಾಡಲಿದೆ. ಹೀಗಾಗಿ ನಿಮ್ಮ ಉಸಿರಾಟಕ್ಕೆ ಅನುಕೂಲವಾಗುಂತಹ ಕೆಲಸ ಮಾಡಲಿದೆ. ಶ್ವಾಸಕೋಶದ ಕಾರ್ಯಕ್ಕೆ ಇದು ಬೆಂಬಲವಾಗಿ ನಿಲ್ಲಲಿದೆ. ಶ್ವಾಸನಾಳದ ಲೋಳೆಯಂತಹ ರಚನೆಯನ್ನು ತಡೆಯಲು ಕೂಡ ಇದು ಸಹಕಾರಿಯಾಗಿದೆ.
(ಹಕ್ಕುತ್ಯಾಗ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications