Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹರಡುತ್ತಿದೆ 'ಹಬ್ಬದ ಜ್ವರ': ಕ್ರಿಸ್‌ಮಸ್ ಮುನ್ನವೇ ಲಸಿಕೆ ಪಡೆಯಲು ಸೂಚನೆ..!!
ದಿನಗಳು ಉರುಳಿದಂತೆ ಹೊಸ ಹೊಸ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸಿವೆ. ವಿಧ ವಿಧ ಹೊಸ ಹೊಸ ವೈರಸ್‌ಗಳು ಎಲ್ಲರನ್ನು ಕಾಡುತ್ತಿವೆ. ಕೆಲವೊಂದು ವೈರಸ್‌ಗಳು ಹೇಗೆ ಹರಡುತ್ತಿವೆ ಹಾಗೆ ಯಾವುದರಿಂದ ಹರಡುತ್ತಿದೆ ಎನ್ನೋದೆ ವಿಚಿತ್ರ ಎನಿಸುತ್ತದೆ. ಹಾಗೆ ಹೊಸ ವೈರಸ್‌ಗಳು ಪ್ರಾಣಕ್ಕೆ ಆಪತ್ತು ತರುವಷ್ಟು ಅಪಾಯಕಾರಿಯಾಗಿ ಹೊರಹೊಮ್ಮುವುದು ಈಗ ಸಾಮಾನ್ಯ ಎನ್ನುವಂತಾಗಿದೆ.
ಈಗ ಹೊಸದೊಂದು ವೈರಸ್ ಎಲ್ಲರ ಆತಂಕ ಹೆಚ್ಚಿಸಿದೆ. ಇಂಗ್ಲೆಂಡ್‌ನಲ್ಲಿ ಹರಡುತ್ತಿರುವ ಈ ವೈರಸ್ ಸಂಬಂಧ ಕ್ರಿಸ್‌ಮಸ್‌ಗೂ ಮೊದಲು ಎಲ್ಲರು ವ್ಯಾಕ್ಸಿನ್ ಪಡೆಯುವಂತೆ ಸೂಚಿಸಲಾಗಿದೆ. ಹಬ್ಬದ ಜ್ವರ ಎಂದು ಈ ವೈರಸ್ ಅನ್ನು ಕರೆಯಲಾಗಿದ್ದು, ಏಕಾಏಕಿ ಹಾಸಿಗೆ ಹಿಡಿದು ಮಲಗುವಂತೆ ಮಾಡಿದೆ.

ಹಬ್ಬದ ಜ್ವರ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ನ್ಯಾಷನಲ್ ಹೆಲ್ತ್ ಸರ್ವೀಸ್ ಕ್ರಿಸ್‌ಮಸ್‌ಗೂ ಮುನ್ನ ಎಲ್ಲರು ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ನೀಡಿದೆ. ಯುಕೆ ಜ್ವರ, ನೊರೊವೈರಸ್ ಮತ್ತು ಆರ್‌ಎಸ್‌ವಿ (ಶೀತ ಮತ್ತು ಕೆಮ್ಮು ತರಹದ ರೋಗಲಕ್ಷಣಗಳನ್ನು ಉಂಟುಮಾಡುವ ವೈರಸ್) ತೀವ್ರ ಹೆಚ್ಚಳವನ್ನು ಕಂಡಿದೆ.
ಕಳೆದ ವಾರ ಪ್ರತಿದಿನ ಸರಾಸರಿ 1,861 ಜ್ವರದ ಪ್ರಕರಣಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂದಿನ ವಾರ 1,099 ಮತ್ತು ಕಳೆದ ವರ್ಷ ಇದೇ ಅವಧಿಯಲ್ಲಿ 402 ಪ್ರಕರಣಗಳು ವರದಿಯಾಗಿದ್ದವು. ಹಬ್ಬದ ಸೀಸನ್‌ಗೆ ಮುಂಚಿತವಾಗಿ ಅನಾರೋಗ್ಯಗಳು ಹೆಚ್ಚಾಗುತ್ತಿರುವುದರಿಂದ, ಆರೋಗ್ಯ ಅಧಿಕಾರಿಗಳು ಸಂಭಾವ್ಯ "ಕ್ವಾಡ್-ಡೆಮಿಕ್" ಎಂದು ಇದನ್ನು ಕರೆಯಲಾಗಿದೆ. ಇದು ಹೆಚ್ಚಾಗುವ ಸಂಭವ ಇರುವುದರಿಂದ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ.
ಫೆಸ್ಟಿವಲ್ ಫ್ಲೂ ಅಥವಾ ಹಬ್ಬದ ಜ್ವರ ಎಂದರೇನು?
ಅಮೇರಿಕನ್ ಲಂಗ್ ಅಸೋಸಿಯೇಷನ್‌ನ ಪ್ರಕಾರ, 'ಫೆಸ್ಟಿವಲ್ ಫ್ಲೂ' ಅಥವಾ ಹಬ್ಬದ ಜ್ವರ ಎನ್ನುವುದು ಸ್ಥಳೀಯ ಅರ್ಥ ಬರುವಂತೆ ಹೆಸರಿಸಲಾಗಿದೆ. ಶೀತ, ಜ್ವರ ಮತ್ತು ಹೆಚ್ಚು ಗಂಭೀರವಾದ ಸಮಸ್ಯೆಗಳು ಈ ಸೋಂಕಿನಿಂದ ಹರಡುತ್ತಿದೆ. ಅಂತೆಯೇ ಹಬ್ಬದ ಜ್ವರದ ಸಾಮಾನ್ಯ ಲಕ್ಷಣಗಳೆಂದರೆ ಕೆಮ್ಮು, ಗಂಟಲು ನೋವು, ಸೀನು, ಮೂಗು ಸೋರುವಿಕೆ, ಕಣ್ಣುಗಳಲ್ಲಿ ನೀರು ಬರುವುದು, ಜ್ವರ ಮತ್ತು ದೇಹ ತುಂಬೆಲ್ಲಾ ನೋವು ಕಾಣಿಸಿಕೊಳ್ಳುವುದು.
ಇದು ಸಾಮಾನ್ಯವಾಗಿ ನಿದ್ರೆಯ ಕೊರತೆ, ಪೌಷ್ಟಿಕಾಂಶದ ಕೊರತೆ, ಕಿರುಚಾಟ, ಕೂಗು ಮತ್ತು ನಿರ್ಜಲೀಕರಣ ಕೂಡ ಇದಕ್ಕೆ ಸೇರಿಸಿಕೊಂಡಿದೆ ಎಂದು ಪಲ್ಮನರಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ವೈದ್ಯರು ಹೇಳಿದ್ದಾರೆ.
ಫೆಸ್ಟಿವಲ್ ಫ್ಲೂಗೆ ಚಿಕಿತ್ಸೆ ಏನು?
ಹಬ್ಬದ ಜ್ವರಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಸಾಕಷ್ಟು ನೀರು ಕುಡಿಯುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ರೋಗಲಕ್ಷಣಗಳನ್ನು ನಿವಾರಿಸಲು ಪ್ರತ್ಯಕ್ಷವಾದ ಔಷಧಿಗಳನ್ನು ತೆಗೆದುಕೊಳ್ಳುವುದು ಹಾಗೆ ಸಾಮಾನ್ಯ ಜ್ವರಕ್ಕೆ ತೆಗೆದುಕೊಳ್ಳುವಂತಹ ಲಸಿಕೆ ಪಡೆಯುವುದು ಇದಕ್ಕೆ ನೀಡಲಾಗುವ ಚಿಕಿತ್ಸೆಯಾಗಿದೆ.
ಈ ವೈರಸ್‌ನಿಂದ ಇಂಗ್ಲೆಂಡ್‌ನಲ್ಲಿ ಈಗ ಆತಂಕ ಹೆಚ್ಚಾಗುವಂತೆ ಮಾಡಿದೆ. ಕ್ರಿಸ್‌ಮಸ್ ಹಬ್ಬದ ಸೀಸನ್ ಆಗಿರುವುದರಿಂದಾಗಿ ಎಲ್ಲರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಜ್ವರದ ಲಕ್ಷಣ ಇರುವವರು ಲಸಿಕೆ ಪಡೆದು ಯಾವ ಸಂಪರ್ಕಕ್ಕೂ ಬಾರದಂತೆ ಐಸೋಲೆಟ್ ಆಗಲು ಸೂಚಿಸಲಾಗಿದೆ. ಹಬ್ಬದಲ್ಲಿ ಈ ವೈರಸ್ ಮತ್ತಷ್ಟು ಜನರಿಗೆ ಹರಡುವ ಅಪಾಯವಿದೆ ಎಂಬ ಎಚ್ಚರಿಕೆ ನೀಡಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications