Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಎಸಿ ಹಾಕಿ ಮಲಗುತ್ತಿದ್ದೀರಾ? ಹಾಗಾದರೆ ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ
ತುಂಬಾ ಜನ ಎಸಿಗೆ ಎಸ್ಟೊಂದು ಅಡಿಕ್ಟ್ ಆಗಿದ್ದಾರೆ ಎಂದು ರಾತ್ರಿ ಎಸಿ ಹಾಕಿದರೆ ಮಾತ್ರ ನಿದ್ದೆ ಬರುವುದು, ಆಫೀಸ್‌ನಲ್ಲಿ ಎಸಿ, ಕಾರಿನಲ್ಲಿ ಎಸಿ, ಮಲಗುವಾಗಲೂ ಎಸಿ ಹೀಗೆ ದಿನದ ಬಹುತೇಕ ಸಮಯವನ್ನು ಎಸಿಯಲ್ಲೇ ಕಳೆಯುತ್ತಿದ್ದಾರೆ.
ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನದಲ್ಲಿಯೂ ಕೆಲ ಬದಲಾವಣೆಯಾಗಿದೆ, ಬೇಸಿಗೆ ಶುರುವಾಗುವ ಮೊದಲೇ ಸೆಕೆ ಶುರುವಾಗುವುದು, ಇನ್ನು ಬೇಸಿಗೆಯಲ್ಲಿ ಹಲವು ಕಡೆ ಹೀಟ್ ವೇವ್ ಇರುತ್ತದೆ. ಬಹುತೇಕ ಕಡೆಗಳಲ್ಲಿ ಉಷ್ಣಾಂಶ 38 ಡಿಗ್ರಿ c ದಾಟಿರುತ್ತದೆ, ಆವಾಗ ಈ ಎಸಿ ಎಂಬುವುದು ಅನಿವಾರ್ಯವಾಗುತ್ತಿದೆ.

ನಾವು ಎಸಿಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದೇವೆ ಎಂದರೆ ಎಸಿ ಬಳಕೆ ಕಡಿಮೆ ಮಾಡುವುದು ಒಳ್ಳೆಯದು, ಏಕೆಂದರೆ ಎಸಿ ಬಳಸುವುದರಿಂದ ಕ್ರಮೇಣ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡುವುದು ನೋಡಿ:
ಕಣ್ಣುಗಳು ಡ್ರೈಯಾಗುವುದು:
ತುಂಬಾ ಹೊತ್ತು ಎಸಿಯಲ್ಲಿ ಕಳೆಯುವುದರಿಂದ ಕಣ್ಣುಗಳು ಡ್ರೈಯಾಗುವುದು, ಅಲ್ಲದೆ ಕಣ್ಣು ಕೆಂಪಾಗುವುದು, ಕಣ್ಣುಗಳಲ್ಲಿ ತುರಿಕೆ ಈ ಬಗೆಯ ಸಮಸ್ಯೆ ಕಂಡು ಬರುವುದು. ಕಣ್ಣುಗಳು ಡ್ರೈಯಾಗಿ ತುಂಬಾ ಕಿರಿಕಿರಿಯಾಗುವುದು ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಿ.
ತಲೆನೋವು ಉಂಟಾಗುವುದು
ಎಸಿಯಲ್ಲಿ ಮಲಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವುದು ಕಷ್ಟವಾಗುವುದು, ಮೆದುಳಿಗೆ ಒಳ್ಳೆಯ ರೀತಿಯಲ್ಲಿ ರಕ್ತ ಸಂಚಾರವಾಗುವುದಿಲ್ಲ, ಇದರಿಂದ ತಲೆನೋವಿನಂಥ ಸಮಸ್ಯೆ ಕಂಡು ಬರುವುದು. ಅಲ್ಲದೆ ಬೆಳಗ್ಗೆ ಏಳುವಾಗ ಯಾವುದೇ ಚೈತನ್ಯವಿರುವುದಿಲ್ಲ, ಆಲಸ್ಯ ಹೆಚ್ಚಾಗುವುದು. ಎಸಿ ತಂಪಿನಿಂದ ಹೊರಗಡೆ ವಾತಾವರಣಕ್ಕೆ ಹೊಂದಿಕೊಳ್ಳುವುದು ಕೂಡ ಕಷ್ಟವಾಗುವುದು.
ನಿಮಗೆ ಇತ್ತೀಚೆಗೆ ತುಂಬಾನೇ ತಲೆನೋವು ಉಂಟಾಗುತ್ತಿದೆ, ಮಲಗುವಾಗ ಕೂಡ ಎಎಸಿ ಬಳಸುತ್ತಿದ್ದೀರಿ ಎಂದಾದರೆ ನೀವು ಎಷ್ಣಾಂಶ ಸರಿಯಾದ ರೀತಿಯಲ್ಲಿ ಅಡ್ಜೆಸ್ಟ್ ಮಾಡಿ, ಇದರಿಂದ ಈ ಬಗೆಯ ಸಮಸ್ಯೆಯನ್ನು ತಡೆಗಟ್ಟಬಹುದು.
ಉಸಿರಾಟದ ಸಮಸ್ಯೆ ಹೆಚ್ಚಾಗುವುದು
ಎಸಿ ರೂಂನಲ್ಲಿ ಮಲಗುವುದರಿಂದ ಉಸಿರಾಟದ ಸಮಸ್ಯೆ ಕಂಡು ಬರುವುದು. ಒಣ ಹಬೆ ಜೊತೆಗೆ ದೂಳು ಇವೆಲ್ಲಾ ಅಸ್ತಮಾ ರೀತಿಯ ಸಮಸ್ಯೆಗೆ ಕಾರಣವಾಗುವುದು. ಅಲ್ಲದೆ ಎಸಿ ಬಳಸುವಾಗ ಅಲ್ಲಿ ಶುದ್ಧ ಗಾಳಿ ಇರುವುದಿಲ್ಲ, ಇದರಿಂದಾಗಿ ಉಸಿರಾಟದ ಸಮಸ್ಯೆ ಇರಲ್ಲ.
ಅಸ್ತಮಾ ಸಮಸ್ಯೆ ಇರುವವರಿಗೆ ತುಂಬಾನೇ ಅಪಾಯಕಾರಿ
ಎಸಿ ಬಳಸುವುದರಿಂದ ಅಸ್ತಮಾ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು, ಅಸ್ತಮಾ ಇರುವವರಿಗೆ ಶುದ್ಧ ಗಾಳಿ ಸಿಗದೆ ಉಸಿರಾಟದ ಸಮಸ್ಯೆ ಹೆಚ್ಚಾಗುವುದು, ಅಲರ್ಜಿ ಉಂಟಾಗುವುದು.
ಎಎಸಿ ಬಳಸುವ ಕೋಣೆಯ ಗಾಳಿ ಶುದ್ಧವಾಗಿರಲ್ಲ
ಹೌದು ಅದೇ ಗಾಳಿ ಒಳಗಡೆ ಸರ್ಕ್ಯೂಲೇಟ್ ಅಗ್ತಾ ಇರುತ್ತದೆ, ಹೀಗಾಗಿ ಶುದ್ಧ ಗಾಳಿ ಸಿಗಲ್ಲ, ಇನ್ನು ಎಸಿ ಆಗಾಗ ಸ್ವಚ್ಛಗೊಳಿಸದಿದ್ದರೆ ಅರೋಗ್ಯಕ್ಕೆ ಇನ್ನಷ್ಟು ಅಪಾಯಕಾರಿ.
ಎಸಿ ಕ್ಲೀನಿಂಗ್ ತುಂಬಾನೇ ಮುಖ್ಯವಾಗಿದೆ
ಎಸಿ ಕ್ಲೀನಿಂಗ್ ಮಾಡುವುದರಿಂದ ಬ್ಯಾಕ್ಟಿರಿಯಾ, ಸೂಕ್ಷ್ಮಾಣುಗಳು ಹರಡುವುದನ್ನು ತಡೆಗಟ್ಟಬಹುದು. ಅಲರ್ಜಿ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಇದರಿಂದ ಅಸ್ತಮಾ ಇರುವವರಿಗೆ, ಮಕ್ಕಳಿಗೆ ಉಸಿರಾಟದ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು
ಒಳ್ಳೆಯ ಗಾಳಿಯಲ್ಲಿ ನಿದ್ರಿಸುವುದು ಮಾನಸಿಕ ಆರೋಗ್ಯದ ದೃಷ್ಟಿಯಿಮದ ತುಂಬಾನೇ ಮುಖ್ಯವಾಗಿದೆ. ನಾವು ಶಯದ್ಧ ಗಾಳಿ ಉಸಿರಾಟದರೆ ಅದು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ, ಅದೇ ದೂಳು ಉಸಿರಾಡಿದರೆ ನಮ್ಮಲ್ಲಿ ಮಾನಸಿಕ ಒತ್ತಡ ಹೆಚ್ಚಿಸುತ್ತದೆ, ಅಸ್ವಸ್ಥತೆ ಹೆಚ್ಚಿಸುತ್ತದೆ ಇವೆಲ್ಲಾ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವುದು.
ಎಸಿಯನ್ನು ಎಷ್ಟು ಸಮಯಕ್ಕೆ ಸರ್ವೀಸ್ ಮಾಡಬೇಕು
ಎಸಿಯನ್ನು ವರ್ಷಕ್ಕೊಮ್ಮೆ ಮಾಡಿಸಬೇಕು, ಪ್ರತಿದಿನ ಬಳಸುತ್ತಿದ್ದರೆ 6 ತಿಂಗಳಿಗೊಮ್ಮೆ ಸರ್ವೀಸ್ ಮಾಡಿಸಬೇಕು, ಇನ್ನು ದೂಳು ಹೆಚ್ಚಿರುವ ಕಡೆಯಾದರೂ 6 ತಿಂಗಳಿಗೊಮ್ಮೆ ಸರ್ವೀಸ್ ಮಾಡಿಸಬೇಕು.
ಏರ್ ಫಿಲ್ಟರ್ ಬಳಸಿ
ಎಸಿ ಹೆಚ್ಚಾಗಿ ಬಳಸುತ್ತಿದ್ದರೆ ಗಾಳಿಯನ್ನು ಶುದ್ಧಗೊಳಿಸಲು ಏರ್‌ಫಿಲ್ಟರ್ ಬಳಸಿ. ಇನ್ನು ಮನೆಯೊಳಗಡೆ ಕೆಲವೊಂದು ನೈಸರ್ಗಿಕ ಗಿಡಗಳನ್ನು ಇಡಬಹುದು, ಇದು ಕೂಡ ಮನೆಯಲ್ಲಿ ಶುದ್ಧ ಗಶಾಳಿ ಹಚ್ಚಿಸುತ್ತದೆ.
ಒಂದು ಒಳ್ಳೆಯ ಪರಿಸರದಲ್ಲಿ ವಾಸಿಸುತ್ತಿದ್ದರೆ ನಿಮ್ಮ ಸುತ್ತ ಮುತ್ತ ಗಿಡ ಹೆಚ್ಚಿದ್ದರೆ ದೊಡ್ಡ ಕಿಟಕಿಗಳನ್ನು ಇಟ್ಟು ನೈಸರ್ಗಿಕವಾದ ಗಾಳಿ ಬೆಳಕು ಮನೆಯೊಳಗಡೆ ಬೀಳುವಂತೆ ಮಾಡುವುದು ಒಳ್ಳೆಯದು. ಇದರಿಂದ ಶುದ್ಧಗಾಳಿಯನ್ನು ಉಸಿರಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications