Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸೈಲೆಂಟ್ ಮೈಗ್ರೇನ್‌ನಲ್ಲಿ ತಲೆನೋವು ಇರಲ್ಲ, ಈ ಸೈಲೆಂಟ್ ಕಿಲ್ಲರ್ ಲಕ್ಷಣಗಳೇನು?
ಮೈಗ್ರೇನ್ ಅಂದ್ರೆ ಸಹಿಸಲು ಅಸಾಧ್ಯವಾದ ತಲೆನೋವುಂಟಾಗುತ್ತದೆ ಎಂದು ನಮಗೆಲ್ಲಾ ಗೊತ್ತು. ಆದರೆ ತಲೆನೋವೇ ಉಂಟಾಗದೆ ಮೈಗ್ರೇನ್ ಉಂಟಾಗುತ್ತದೆ, ಇದು ತುಂಬಾನೇ ಅಪಾಯಕಾರಿ, ಇದೊಂದು ರೀತಿ ಸೈಲೆಂಟ್ ಕಿಲ್ಲರ್ ಎಂಬುವುದು ಗೊತ್ತೇ?
ಮೈಗ್ರೇನ್ VS ತಲೆನೋವು
ತುಂಬಾ ಜನ ಮೈಗ್ರೇನ್, ತಲೆನೋವು ನಡುವಿನ ವ್ಯತ್ಯಾಸ ಅರಿಯದೆ ಎರಡು ಒಂದೇ ಒಂದು ಭಾವಿಸುತ್ತಾರೆ. ಎಲ್ಲಾ ತಲೆನೋವು ಮೈಗ್ರೇನ್ ಅಲ್ಲ, ಹಾಗೆಯೇ ಮೈಗ್ರೇನ್ ಅಂದ್ರೆ ತಲೆನೋವು ಇರಲೇಬೇಕು ಎಂದೇನೂ ಇಲ್ಲ, ತಲೆನೋವು ಇಲ್ಲದೆ ಕೂಡ ಮೈಗ್ರೇನ್ ಇರಬಹುದು. ಸಾಮಾನ್ಯವಾಗಿ ಕಾಡುವ ತಲೆನೋವಲ್ಲ, ಆದರೆ ಮೈಗ್ರೇನ್‌ಗೆ ಚಿಕಿತ್ಸೆ ಪಡೆಯದಿದ್ದರೆ ತುಂಬಾನೇ ಅಪಾಯಕಾರಿ.

ಮೈಗ್ರೇನ್ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ
ಮೈಗ್ರೇನ್ ಎಂಬುವುದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಮೈಗ್ರೇನ್ ಬಂದರೆ ಯಾವುದೇ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಪುರುಷರಿಗೆ ಹೋಲಿಸಿದರೆ ಮೂರು ಪಟ್ಟು ಅಧಿಕ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಈ ಮೈಗ್ರೇನ್‌ನಲ್ಲಿ ಸೈಲೆಂಟ್ ಮೈಗ್ರೇನ್ ಅಥವಾ Acephalgic ಮೈಗ್ರೇನ್‌ನಲ್ಲಿ ತಲೆನೋವು ಇರಲ್ಲ, ಇದು ತುಂಬಾ ಅಪಾಯಕಾರಿಯಾದ ಮೈಗ್ರೇನ್ ಆಗಿದೆ. ಈ ಸೈಲೆಂಟ್ ಮೈಗ್ರೇನ್ ಲಕ್ಷಣಗಳೇನು? ಏಕೆ ಇದು ಅಪಾಯಕಾರಿ ಎಂದು ನೋಡೋಣ ಬನ್ನಿ:
ಸೈಲೆಂಟ್ ಮೈಗ್ರೇನ್‌ನಲ್ಲಿ ತಲೆನೋವು ಇರಲ್ಲ, ಆದರೆ ಇತರ ಲಕ್ಷಣಗಳು ಕಂಡು ಬರುವುದು, ಅವುಗಳನ್ನು ಈ ರೀತಿ ವಿಂಗಡಿಸಲಾಗಿದೆ
* ಪ್ರೊಡ್ರೋಮೆ ಹಂತ
ಮೈಗ್ರೇನ್ ಶುರುವಾದ ಆರಂಭದ ಹಂತದಲ್ಲಿ ಈ ಲಕ್ಷಣಗಳು ಕಂಡು ಬರುವುದು
* ಖಿನ್ನತೆ
* ಏಕಾಗ್ರತೆಗೆ ತೊಂದರೆ ಉಂಟಾಗುವುದು
* ಮಾತನಾಡಲು, ಓದಲು ತೊಂದರೆ
* ತಲೆಸುತ್ತು, ಆಗಾಗ ಬಾಯಿ ಆಕಳಿಕೆ
* ವಿಪರೀತ ಹಸಿವು
* ಒಂದು ರೀತಿ ಕಿರಿಕಿರ
* ಸ್ನಾಯು ಬಿಗಿಯಾಗುವುದು
* ವಾಂತಿ
* ಬೆಳಕು, ಶಬ್ದ ಸಹಿಸಲು ಸಾಧ್ಯವಾಗದಿರುವುದು
* ನಿದ್ದೆಗೆ ತೊಂದರೆಯಾಗುವುದು
* ಆಗಾಗ ಮೂತ್ರ ವಿಸರ್ಜನೆಗೆ ಹೀಗಬೇಕೆನಿಸುವುದು
ಔರಾ ಹಂತ (The aura phase)
ಮೈಗ್ರೇನ್ ಇರುವ ಶೇ. 25ಷ್ಟು ಜನರಲ್ಲಿ ಈ ಹಂತ ಕಂಡು ಬರುವುದು ಇದರ ಲಕ್ಷಣಗಳೆಂದರೆ
* ದೇಹದ ಭಾಗಗಳು ಮರಗಟ್ಟಿದಂತೆ ಅನಿಸುವುದು
* ತಾತ್ಕಾಲಿಕವಾಗಿ ಕಣ್ಣಿನ ದೃಷ್ಟಿ ಮಂಜಾಗುವುದು
* ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರುವುದು, ಕಣ್ಣಿನಲ್ಲಿ ಬ್ಲೈಂಡ್ ಸ್ಪಾಟ್ ಕಂಡು ಬರುವುದು
ತಲೆನೋವಿನ ಹಂತ
ಈ ಹಂತದಲ್ಲಿ ತುಂಬಾನೇ ತಲೆನೋವು ಕಂಡು ಬರುವುದು. ತಲೆನೋವು ಬಂದರೆ ಕಡಿಮೆಯೆಂದರೂ 4 ಗಂಟೆ ಇರುತ್ತದೆ, ಕೆಲವರಿಗೆ 72 ಗಂಟೆ ಕಳೆದರೂ ನೋವು ಕಡಿಮೆಯಾಗುವುದಿಲ್ಲ, ಈ ಹಂತದಲ್ಲಿ ಈ ಲಕ್ಷಣಗಳು ಕಂಡು ಬರುವುದು
* ಒತ್ತಡ, ಖಿನ್ನತೆ
* ತಲೆಸುತ್ತುವುದು
* ನಿದ್ದೆ ಮಾಡಲು ಸಾಧ್ಯವಾಗದಿರುವುದು
* ಮೂಗು ಕಟ್ಟುವುದು
* ಕುತ್ತಿಗೆ ನೋವು, ಕುತ್ತಿಗೆ ಬಿಗಿಯಾಗುವುದು
* ಲೈಟ್, ಸೌಂಡ್, ಕೆಲಸವೊಂದು ವಾಸನೆ ಸಹಿಸಲು ಸಾಧ್ಯವಾಗದಿರುವುದು
* ವಾಂತಿ
ಪೋಸ್ಟ್‌ಡ್ರೋಮ್ ಹಂತ
ಇದು ಮೈಗ್ರೇನ್‌ನ ಕೊನೆಯ ಹಂತ, ಇದನ್ನು ಮೈಗ್ರೇನ್ ಹ್ಯಾಂಗೋವರ್ ಎಂದು ಕರೆಯಲಾಗುವುದು. ಈ ಹಂತದಲ್ಲಿ ಈ ಲಕ್ಷಣಗಳು ಕಂಡು ಬರುವುದು
* ಮೈಕೈ ನೋವು
* ಏಕಾಗ್ರತೆ ಮಾಡಲು ಸಾಧ್ಯವಾಗದಿರುವುದು
* ತಲೆಸುತ್ತು
* ಖಿನ್ನತೆ
* ತಲೆಸುತ್ತು
ಮೈಗ್ರೇನ್‌ಗೆ ಕಾರಣಗಳೇನು?
ಹಲವಾರು ಕಾರಣಗಳಿಂದ ಮೈಗ್ರೇನ್ ಉಂಟಾಗುವುದು:
* ಕೆಲವೊಂದು ಬಗೆಯ ಆಹಾರ
* ಮದ್ಯಪಾನ, ಕೆಫೀನ್
* ನಿದ್ದೆಯಲ್ಲಿ ಬದಲಾವಣೆಯಾದರೆ
* ಹವಾಮಾನದಲ್ಲಿ ಬದಲಾವಣೆಯಾದರೆ
* ಮಹಿಳೆಯರಲ್ಲಿ ಈಸ್ಟ್ರೋಜಿನ್‌ನಲ್ಲಿ ಅಸಮತೋಲನ
* ತುಂಬಾ ಲೈಟ್, ಸೌಂಡ್ಸ್, ಸ್ಟ್ರಾಂಗ್ ವಾಸನೆ
* ಅತ್ಯಧಿಕ ಮಾನಸಿಕ ಒತ್ತಡ
* ಗರ್ಭನಿರೋಧಕಗಳ ಸೇವನೆ
ಸೈಲೆಂಟ್ ಮೈಗ್ರೇನ್ ನಿರ್ಲಕ್ಷ್ಯ ಮಾಡಬಾರದು ಏಕೆ?
ಈ ಮೊದಲು ಮೈಗ್ರೇನ್ ಸಮಸ್ಯೆ ಇರುವವರಿಗೆ ಈ ಬಗೆಯ ಸೈಲೆಂಟ್ ಮೈಗ್ರೇನ್ ಲಕ್ಷಣಗಳು ಕಂಡು ಬರುವುದು. ಈ ಸೈಲೆಂಟ್ ಮೈಗ್ರೇನ್ ಕಂಡ ಬಂದರೆ ನಿರ್ಲಕ್ಷ್ಯ ಮಾಡಬಾರದು, ಇಲ್ಲದಿದ್ದರೆ ಪಾರ್ಶ್ವವಾಯು, ಮೂರ್ಛೆರೋಗ ಈ ಬಗೆಯ ಗಂಭೀರ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಸೈಲೆಂಟ್ ಮೈಗ್ರೇನ್ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
