Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ವಿಷವಾಗಲಿದೆ ತಂಪು ಪಾನೀಯ..! ಹೊಸ ಅಧ್ಯಯನದಲ್ಲಿ ಹೊರಬಿತ್ತು ಭಯಾನಕ ಸತ್ಯ..!
ಇಂದು ಜಗತ್ತಿನ ಆಹಾರ ಪದ್ಧತಿಯೇ ಬದಲಾಗಿ ಬಿಟ್ಟಿದೆ. ಪ್ರಾಚೀನ ಆಹಾರ ಪದ್ಧತಿಗಳಿ ಅಲ್ಲಲ್ಲಿ ಉಳಿದಿದ್ದರೂ ಆಧುನಿಕತೆ ಅದನ್ನು ಹಿಂದೆ ತಳ್ಳಿ ವಿಭಿನ್ನ ಆಹಾರ ಪದ್ಧತಿ ಈ ಜಾಗ ಆಕ್ರಮಿಸಿದೆ. ಇತ್ತೀಚಿನ ದಿನದಲ್ಲಿ ಈ ರೀತಿ ಆಹಾರ ಪದ್ಧತಿ ಹೆಚ್ಚು ಅನುಸರಿಸಲಾಗುತ್ತಿದೆ. ರಸ್ತೆ ಬದಿ ಸಿಗುವ ತಿನಿಸುಗಳಿಂದ ಹಿಡಿದು, ಪಿಜ್ಜಾ, ಬರ್ಗರ್, ರೋಲ್, ಚಾಟ್ಸ್ ಹೀಗೆ ಇವು ಯುವ ಸಮುದಾಯದ ನೆಚ್ಚಿನ ಆಹಾರವಾಗಿದೆ.
ಈ ಆಹಾರಗಳ ಜೊತೆಗೆ ಇತ್ರೀಚಿಗೆ ತಂಪು ಪಾನೀಯಗಳು ಸೇರಿಕೊಂಡಿವೆ. ಜನ ಊಟ, ತಿಂಡಿ ಸೇವಿಸುವುದನ್ನು ಮರೆತರು ಈ ತಂಪು ಪಾನೀಯ ಸೇವಿಸುವುದಕ್ಕೆ ಬಿಡದಷ್ಟು ಅಂಟಿಕೊಂಡಿದ್ದಾರೆ. ನೀರು, ಟೀ, ಕಾಫಿಯ ಬದಲು ತಂಪು ಪಾನೀಯವನ್ನೇ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಆದ್ರೆ ನಿಮಗೆ ಗೊತ್ತೆ ಈ ತಂಪು ಪಾನೀಯಗಳು ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ ಎಂದು?

ನಮಗೆ ಸಿಗುತ್ತಿರುವ ಆಹಾರ ಮೊದಲೇ ಕಳಪೆಯಾಗಿದೆ. ಅದರ ಜೊತೆ ಈ ತಂಪು ಪಾನೀಯಗಳು ಸಹ ನಮ್ಮ ಆರೋಗ್ಯವನ್ನು ಮತ್ತಷ್ಟು ಕಸಿಯುತ್ತಿವೆ. ಅದರಲ್ಲೂ ಯುವ ಪೀಳಿಗೆ ಈ ಪಾನೀಯಗಳ ದಾಸರಾಗಿದ್ದಾರೆ. ಹೀಗಾಗಿಯೇ ಭಾರತೀಯ ಮಾರುಕಟ್ಟೆಯಲ್ಲಿ ಸಾವಿರಾರು ತಂಪು ಪಾನೀಯ ಕಂಪನಿಗಳು ದಾಳಿ ಇಟ್ಟಿವೆ.
ಹೆಚ್ಚಿನ ಸಮಯ ಯುವ ಸಮುದಾಯ ಕಾರ್ಬೊನೇಟೆಡ್ ಪಾನೀಯಗಳು ಅಥವಾ ಕೆಫೀನ್ ಪಾನೀಯಗಳನ್ನು ಕುಡಿಯುತ್ತಾರೆ. ಯುವಕರು ಇದು ಅವರಿಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ನಂಬಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ನಿಜವಾದರೂ ದೀರ್ಘಾವಧಿಯಲ್ಲಿ ಪ್ರಯೋಜನವಾಗುವುದಿಲ್ಲ. ಮತ್ತು ಇದರಿಂದ ದೇಹಕ್ಕೆ ಹಾನಿಯೇ ಹೆಚ್ಚಾಗುತ್ತದೆ.
ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಇತ್ತೀಚಿನ ಅಧ್ಯಯನದ ಫಲಿತಾಂಶಗಳು ಆಘಾತಕಾರಿಯಾಗಿದೆ.
ಹೆಚ್ಚು ಕೆಫೀನ್ ಹೊಂದಿರುವ ಪಾನೀಯವನ್ನು ಸೇವಿಸುವ ಪರಿಣಾಮಗಳು ನಿಮಿಷಗಳಲ್ಲಿ ಪ್ರಾರಂಭವಾಗಬಹುದು ಮತ್ತು ದಿನಗಳವರೆಗೆ ಇರುತ್ತದೆ. ಸರಾಸರಿ 500 ಮಿಲಿ ಸಾಫ್ಟ್ ಡ್ರಿಂಕ್ 160-200 ಮಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಇದು ನಾವು ಕುಡಿಯುವ ಒಂದು ಕಪ್ ಕಾಫಿಗಿಂತ ಹೆಚ್ಚು.
ಈ ಪಾನೀಯ ಕುಡಿದ 10 ನಿಮಿಷಗಳಲ್ಲಿ ಈ ಕೆಫೀನ್ ನಮ್ಮ ರಕ್ತನಾಳಗಳಿಗೆ ಸೇರಿಕೊಳ್ಳುತ್ತದೆ. ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಕುಡಿದ ನಂತರ 15 ರಿಂದ 45 ನಿಮಿಷಗಳಲ್ಲಿ ಕೆಫೀನ್ ಮಟ್ಟವು ರಕ್ತನಾಳಗಳಲ್ಲಿ ಉತ್ತುಂಗಕ್ಕೇರುತ್ತದೆ. ಇಂತಹ ವಾತಾವರಣದಲ್ಲಿ ನಮ್ಮ ಜಾಗರೂಕತೆ ಮತ್ತು ಆಲೋಚನಾ ಸಾಮರ್ಥ್ಯ ಹೆಚ್ಚುತ್ತದೆ. ಅಲ್ಲದೆ ಎನರ್ಜಿ ಬಿಡುಗಡೆಯಾಗಿ ಆಯಾಸವೇ ಆಗದ ಅನುಭವ ನೀಡುತ್ತದೆ.
ಪಾನೀಯ ಕುಡಿದ 30 ರಿಂದ 50 ನಿಮಿಷಗಳ ನಂತರ ನಮ್ಮ ರಕ್ತನಾಳಗಳಿಂದ ಕೆಫೀನ್ ಸಂಪೂರ್ಣವಾಗಿ ಹೀರಲ್ಪಡುತ್ತದೆ. ಆದ್ದರಿಂದ ನಮ್ಮ ರಕ್ತನಾಳಗಳಲ್ಲಿ ಹೆಚ್ಚುವರಿ ಸಕ್ಕರೆ ಇರುತ್ತದೆ. ಸುಮಾರು ಒಂದು ಗಂಟೆಯ ನಂತರ ಕೆಫೀನ್ ಮಟ್ಟ ಕಡಿಮೆಯಾದರೂ, ಸಂಭಾವ್ಯ ಪರಿಣಾಮಗಳು ದೂರವಾಗುವುದಿಲ್ಲ.
ಕೆಫೀನ್ ಪಾನೀಯವನ್ನು ಸೇವಿಸಿದ ಸುಮಾರು 5 ರಿಂದ 6 ಗಂಟೆಗಳ ನಂತರ, ನಮ್ಮ ದೇಹವು ಅದರಲ್ಲಿ ಅರ್ಧದಷ್ಟು ಮಾತ್ರ ಹೊರಹಾಕುತ್ತದೆ. ಆದಾಗ್ಯೂ, ಇದು ನಮ್ಮ ವಯಸ್ಸು ಮತ್ತು ಆರೋಗ್ಯದ ಆಧಾರದ ಮೇಲೆ ಬದಲಾಗುತ್ತದೆ. ಅಂತಿಮವಾಗಿ 12 ಗಂಟೆಗಳ ಕೊನೆಯಲ್ಲಿ ಕೆಫೀನ್ ಪಾತ್ರವು ದೇಹದಿಂದ ಸಂಪೂರ್ಣವಾಗಿ ಹೊರಹಾಕಲ್ಪಡುತ್ತದೆ.
ಕೆಫೀನ್ ಸೇವಿಸಿದ 12 ರಿಂದ 24 ಗಂಟೆಗಳ ಒಳಗೆ, ನೀವು ತಲೆನೋವು, ಕಿರಿಕಿರಿ ಮತ್ತು ಮಲಬದ್ಧತೆಯನ್ನು ಅನುಭವಿಸಬಹುದು. ಕೆಫೀನ್‌ನ ಪರಿಣಾಮಗಳು ಸಂಪೂರ್ಣವಾಗಿ ಕಣ್ಮರೆಯಾಗಲು ಸುಮಾರು 7 ರಿಂದ 12 ದಿನಗಳು ತೆಗೆದುಕೊಳ್ಳಬಹುದು. ಆದ್ದರಿಂದ, ಮುಂದಿನ ಬಾರಿ ನೀವು ಕೆಫೀನ್ ಹೊಂದಿರುವ ಪಾನೀಯವನ್ನು ಕುಡಿಯಲು ಬಯಸಿದಾಗ, ಎರಡು ಬಾರಿ ಯೋಚಿಸಿ.
ಹಾಗಾದರೆ ಕೆಫೀನ್ ಆರೋಗ್ಯಕ್ಕೆ ಒಳ್ಳೆಯದಲ್ಲವೇ..?
ಕೆಫೀನ್ ಒಂದು ರೀತಿ ಡ್ರಗ್ಸ್‌ನಂತೆ ದೇಹದ ಮೇಲೆ ಪರಿಣಾಮ ಬೀರುತ್ತದೆ. ನೀವು ನಿತ್ಯ ಕೆಫೀನ್‌ಯುಕ್ತ ತಂಪು ಪಾನೀಯ ಸೇವಿಸುತ್ತಾ ಹೋದಂತೆ ನಿಮ್ಮ ದೇಹವು ಸಹ ಇದಕ್ಕೆ ಹೊಂದಿಕೊಳ್ಳುತ್ತದೆ. ದಿನ ಕಳೆದಂತೆ ನಿಮ್ಮ ದೇಹ ಈ ಪಾನೀಯ ಇಲ್ಲದೆ ಕೆಲಸ ಮಾಡದಷ್ಟು ಹಾನಿಗೆ ಒಳಗಾಗುತ್ತದೆ.
ಇದರ ಪರಿಣಾಮ ಹೇಗಿರುತ್ತೆ ಅಂದರೆ ನೀವು ಒಮ್ಮೆಲೆ ಈ ಪಾನೀಯ ತ್ಯಜಿಸಿದರೆ ನಿಮ್ಮ ದೇಹ ಮತ್ತೆ ಮೊದಲಿನಂತಾಗಲು ಸಮಯ ತೆಗೆದುಕೊಳ್ಳುತ್ತದೆ. ಆಯಾಸ, ಸುಸ್ತು ಕಾಣಿಸಿಕೊಳ್ಳುತ್ತದೆ. ಹತ್ತಾರು ರೀತಿಯ ಅನಾರೋಗ್ಯ ಸಮಸ್ಯೆ ತಲೆದೂರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications