Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿಯುವುದು ಒಳ್ಳೆಯದಲ್ಲ ಏಕೆ ಗೊತ್ತಾ?
ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸ ಹಲವರಲ್ಲಿದೆ. ಕಾಫಿ ಕುಡಿಯುವುದು ತುಂಬಾ ಒಳ್ಳೆಯ ಅಭ್ಯಾಸನೇ ಆದರೆ ಹಾಲು ಹಾಕಿದ ಕಾಫಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಷ್ಟು ಸರಿಯಲ್ಲ. ಬ್ಲ್ಯಾಕ್ ಕಾಫಿ ಆರೋಗ್ಯ ವೃದ್ಧಿಸುತ್ತದೆ, ಆದರೆ ಹಾಲು ಹಾಕಿದ ಕಾಫಿ ಕುಡಿಯುವುದು ಒಳ್ಳೆಯದಲ್ಲ, ಹಾಲು ಹಾಕಿ ಮಾಡಿದ ಕಾಫಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು ಎಂದು ನೋಡೋಣ ಬನ್ನಿ:

ಹಾಲು ಹಾಕಿದ ಕಾಫಿ ಕುಡಿದರೆ ಏನಾಗುತ್ತೆ?
ಜೀರ್ಣಕ್ರಿಯೆಗೆ ಒಳ್ಳೆಯದಲ್ಲ
ಹಾಲು ಹಾಕಿದ ಕಾಪಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು. ಇದರಿಂದ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿಯುವುದರಿಂದ ಎದೆಯುರಿ, ಬೇಧಿ ಈ ಬಗೆಯ ಸಮಸ್ಯೆ ಉಂಟಾಗುವುದು.
ಉದ್ವೇಗ ಹೆಚ್ಚಾಗುವುದು
ನೀವು ಹಾಲು ಹಾಕಿದ ಕಾಫಿ ಬೆಳಗ್ಗೆ ಹೊತ್ತಿನಲ್ಲಿ ಕುಡಿಯುವುದರಿಂದ ಒಂಥರಾ ಉದ್ವೇಗ, ಕಿರಿಕಿರಿ ಅನುಭವಿಸುವುರಿ. ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ನಿಮ್ಮ ಮೂಡ್ ಹಾಳಾಗುವುದು.
ವಿಪರೀತ ತಲೆನೋವು ಉಂಟಾಗುವುದು
ಖಾಲಿಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಇದರಿಂದ ತಲೆನೋವು ಹೆಚ್ಚಾಗುವುದು.
ದೇಹವು ಪೋಷಕಾಂಶ ಸರಿಯಾಗಿ ಹೀರಿಕೊಳ್ಳುವುದಿಲ್ಲ
ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿದು ನಂತರ ಆಹಾರ ಸೇವಿಸಿದರೆ ನಾವು ಸೇವಿಸಿದ ಆಹಾರದಲ್ಲಿನ ಪೋಷಕಾಂಶಗಳನ್ನು ನಮ್ಮ ದೇಹವು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಇದರ ಕುರಿತು ಇನ್ನಷ್ಟು ಅಧ್ಯಯನ ನಡೆಯುತ್ತಿದೆ.
ನಿದ್ದೆಸರಿಯಾಗಿ ಬರಲ್ಲ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುವುದು ಎಂದು ಹೇಳಲಾಗುವುದು.
ಬ್ಲ್ಯಾಕ್ ಕಾಫಿ VS ಮಿಲ್ಕ್ ಕಾಫಿ
* ಹಾಲು ಹಾಕಿದ ಕಾಫಿ ಬದಲಿಗೆ ಬ್ಲ್ಯಾಕ್ ಕಾಫಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ಲ್ಯಾಕ್ ಕಾಫಿ ತೂಕ ಇಳಿಕೆಗೆ ತುಂಬಾನೇ ಒಳ್ಳೆಯದು.
* ಹಾಲು ಹಾಕಿದ ಕಾಫಿ ಕುಡಿಯುವುದರಿಂದ ರಾತ್ರಿ ನಿದ್ದೆಗೆ ಭಂಗ ಉಂಟಾಗುವುದು, ಬೇಗ ನಿದ್ದೆನೇ ಬರಲ್ಲ, ಅದೇ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಕಣ್ಣಿಗೆ ಚೆನ್ನಾಗಿ ನಿದ್ದೆ ಬರುವುದು.
* ಬ್ಲ್ಯಾಕ್ ಕಾಫಿ ಕುಡಿದರೆ ಅಸಿಡಿಟಿ ಉಂಟಾಗಲ್ಲ, ಅದೇ ಹಾಲು ಹಾಕಿದ ಕಾಫಿ ಕುಡಿದರೆ ಅಸಿಡಿಟಿ ಸಮಸ್ಯೆ ಉಂಟಾಗುವುದು.
ಬ್ಲ್ಯಾಕ್ ಕಾಫಿ ಪ್ರಯೋಜನಗಳು
* ಬ್ಲ್ಯಾಕ್ ಕಾಫಿ ಮೈ ತೂಕ ನಿಯಂತ್ರಣಕ್ಕೆ ತುಂಬಾನೇ ಒಳ್ಳೆಯದು. ಸಕ್ಕರೆ ಕಾಫಿ ದೂರವಿಡಿ, ಬದಲಿಗೆ ಬೆಲ್ಲ ಕಾಫಿ ಬಳಸಿ
* ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ
ಬ್ಲ್ಯಾಕ್ ಕಾಫಿ ಕುಡಿಯುವವರಲ್ಲಿ ಮಧುಮೇಹದ ಅಪಾಯ ಕಡಿಮೆ ಎಂಬುವುದು ಅಧ್ಯಯನದಿಂದ ಸಾಬೀತಾಗಿದೆ. ಕಾಫಿ ಇನ್ಸುಲಿನ್ ಉತ್ಪತ್ತಿಗೆ ಸಹಾಯ ಮಾಡುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ.
* ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು
ಬ್ಲ್ಯಾಕ್ ಕಾಫಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ.
* ನರಗಳ ಆರೋಗ್ಯಕ್ಕೆ ಒಳ್ಳೆಯದು
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನರಗಳ ಆರೋಗ್ಯಕ್ಕೂ ಒಳ್ಳೆಯದು. ವ್ಯಾಯಾಮಕ್ಕೆ ಮೊದಲು ಒಂದು ಲೋಟ ಕಾಫಿ ಕುಡಿದರೆ ಹೆಚ್ಚು ಹೊತ್ತು ವ್ಯಾಯಾಮ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
