Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾಯಿ ನಮ್ಮ ಮುಖವನ್ನು ನೆಕ್ಕಿದರೆ ಏನಾದರೂ ತೊಂದರೆಯಾಗುವುದೇ? ನಾಯಿ ಮುಖವನ್ನು ನೆಕ್ಕುವುದೇಕೆ?
ಎಷ್ಟೋ ಜನರಿಗೆ ಅವರ ಜೀವನದ ತುಂಬಾ ಹತ್ತಿರದ ಜೀವವೆಂದರೆ ಅದು ನಾಯಿಯಾಗಿರುತ್ತದೆ, ತಮ್ಮ ಮನೆಯ ಸದಸ್ಯರಿಗಿಂತ ಹೆಚ್ಚಾಗಿ ನಾಯಿಯನ್ನು ಪ್ರೀತಿಸುವ ಶ್ವಾನ ಪ್ರೇಮಿಗಳಿದ್ದಾರೆ. ನಾಯಿ ಹಾಗೂ ಮನುಷ್ಯ ಬಾಂಧವ್ಯ ತುಂಬಾ ಗಟ್ಟಿಯಾದ ಬಾಂಧವ್ಯ, ನಾಯಿಗಳ ನಿಶ್ವಾರ್ಥ ಪ್ರೀತಿಯೇ ಮನುಷ್ಯರು ಅದನ್ನು ತುಂಬಾ ಹಚ್ಚಿಕೊಳ್ಳುವಂತೆ ಮಾಡುವುದು.
ಕೆಲವರು ತಾವು ಎಲ್ಲಿಯೇ ಹೋಗಲಿ ಜೊತೆಗೆ ಕರೆದುಕೊಂಡು ಹೋಗುತ್ತಾರೆ, ಅದನ್ನು ಜೊತೆಯಲ್ಲಿಯೇ ಮಲಗಿಸಿಕೊಳ್ಳುತ್ತಾರೆ. ತನ್ನ ಸಾಕಿದವರು ಮನೆಗೆ ಬಂದಾಗ ನಾಯಿಗಳು ಅವರನ್ನು ಖುಷಿಯಿಂದ ನೆಕ್ಕುತ್ತವೆ, ಮುಖಕ್ಕೆಲ್ಲಾ ನೆಕ್ಕುತ್ತವೆ, ನಾಯಿಗಳು ಮುಖಕ್ಕೆ ನೆಕ್ಕುವುದರಿಂದ ಏನಾದರೂ ಅಪಾಯವಿದೆಯೇ ಎಂದು ನೋಡೋಣ ಬನ್ನಿ:

ನಾಯಿಗಳು ನೆಕ್ಕುವುದು ಏಕೆ?
ನಾಯಿಗಳು ತಾನು ಸಾಕುತ್ತಿರುವವರ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸಲು ಅವರನ್ನು ನೆಕ್ಕುತ್ತದೆ, ನಾಯಿಗಳು ಮನುಷ್ಯನನ್ನು ನೆಕ್ಕಿದರೆ ಅವುಗಳ ಗುಣಗಳು ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು. ನಾಯಿಗಳು ಮುತ್ತಿಕ್ಕುವುದು, ನೆಕ್ಕುವುದು ಮಾಡಿದರೆ ಅವುಗಳಿಂದ ನಮಗೆ ಯಾವುದೇ ತೊಂದರೆಯಿಲ್ಲ ಎಂಬುವುದನ್ನು ತೋರಿಸುತ್ತದೆ, ನಾಯಿಯ ಈ ವರ್ತನೆ ಅದನ್ನು ಸಾಕುವವರ ಹಾಗೂ ನಾಯಿಯ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿ ಮಾಡುತ್ತದೆ.
ನಾಯಿಗಳು ಮನುಷ್ಯ ಮುಖವನ್ನು ನೆಕ್ಕುವುದು ಏಕೆ?
ನಮ್ಮ ಮುಖ ಬೆವರಿ ಉಪ್ಪಿನಂಶವಿರುತ್ತದೆ, ಅಲ್ಲದೆ ನಮ್ಮ ಬಾಯಿಯಲ್ಲಿ ನಾವು ತಿಂದ ಆಹಾರದ ವಾಸನೆ ಇರುತ್ತದೆ, ನಾವು ಮೌತ್ ಫ್ರೆಷನರ್ ಬಳಸಿದರೂ ನಾಯಿಗಳಿಗೆ ಅದರ ವಾಸನೆ ಬರುತ್ತದೆ, ಇವು ನಾಯಿಗಳಿಗೆ ಇಷ್ಟವಾಗಿ ಮುಖ, ಬಾಯಿಯನ್ನು ನೆಕ್ಕುವುದು. ಇನ್ನು ಅವುಗಳಿಗೆ ಏನಾದರೂ ಆಹಾರ ಬೇಕಿದ್ದಾಗ ಕೂಡ ಈ ರೀತಿ ಮುಖವನ್ನು ನೆಕ್ಕುವುದು.
ನಾಯಿ ಮುಖವನ್ನು ನೆಕ್ಕಿದರೆ ಸುರಕ್ಷಿತವೇ?
ನಾಯಿ ಬಾಯಲ್ಲಿ Capnocytophaga ಎಂಬ ಬ್ಯಾಕ್ಟಿರಿಯಾ ಇರುತ್ತದೆ, ಇದು ನಮ್ಮ ಬಾಯಲ್ಲಿಯೂ ಕಂಡು ಬರುವುದು, ಆದ್ದರಿಂದ ನಾಯಿ ಮುಖವನ್ನು ನೆಕ್ಕಿದಾಗ ಸಾಮಾನ್ಯವಾಗಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮುಖದಲ್ಲಿ ಗಾಯ ಅಥವಾ ಮೊಡವೆ ಇದ್ದರೆ ನೆಕ್ಕಲು ಬಿಡಬೇಡಿ, ಏಕೆಂದರೆ ಇದರಿಂದ ಅಲರ್ಜಿಯಾಗುವ ಸಾಧ್ಯತೆ ಇದೆ.
ನಾಯಿ ಮುಖ ನೆಕ್ಕದಿರಲು ಏನು ಮಾಡಬೇಕು?
ನಾಯಿಯನ್ನು ನೆಕ್ಕಲು ಬಿಡಬೇಡಿ, ನಾಯಿ ನೆಕ್ಕಲು ಬಂದಾಗ ನಿಮ್ಮ ಕೈಯನ್ನು ನೀಡಿ, ಮುಖಕ್ಕೆ ನೆಕ್ಕಲು ಬಿಡಬೇಡಿ. ಅವುಗಳಿಗೆ ಏನಾದರೂ ವಸ್ತುಗಳನ್ನು ನೀಡಿ, ಹೀಗೆ ಮಾಡುವುದರಿಂದ ನಾಯಿ ಮುಖವನ್ನು ನೆಕ್ಕುವುದನ್ನು ತಪ್ಪಿಸಬಹುದು.
ಯಾವಾಗ ನಾಯಿ ನೆಕ್ಕಿದಾಗ ನಿರ್ಲಕ್ಷ್ಯ ಮಾಡಬಾರದು?
ಅದರ ಸ್ವಭಾವ ಏಕೋ ಸ್ವಲ್ಪ ಭಿನ್ನವಾಗಿದೆ ಎಂದನಿಸಿದಾಗ ನೀವು ನಾಯಿಯನ್ನು ನೆಕ್ಕಲು ಬಿಡಬೇಡಿ. ಅವುಗಳಿಗೆ ನೋವುಬ ಆಗುತ್ತಿದ್ದರೆ ಅತವಾ ಏನಾದರೂ ಅಲರ್ಜಿ ಆಗಿದ್ದರೆ ಅಥವಾ ತುಂಬಾ ಒತ್ತಡದಲ್ಲಿದ್ದಾಗ ಈ ರೀತಿ ಮಾಡುವುದು ಇದರ ಬಗ್ಗೆ ಗಮನಹರಿಸಬೇಕು.
ಅದನ್ನು ಹೊರತುಪಡಿಸಿ ನಿಮ್ಮ ನಾಯಿ ನಿಮ್ಮನ್ನು ನೆಕ್ಕಿದರೆ ಏನೂ ತೊಂದರೆಯಿಲ್ಲ, ಅದರಿಂದ ಯಾವುದೇ ಸಮಸ್ಯೆಯಿಲ್ಲ. ನಾಯಿ ನಿಮ್ಮನ್ನು ನೆಕ್ಕುವುದರಿಂದ ನಿಮ್ಮ ಹಾಗೂ ನಾಯಿ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು.
ನಾಯಿ ಪ್ರೀತಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ?
ನಾಯಿ ಪ್ರೀತಿಯಿಂದ ನೆಕ್ಕಿದಾಗ ನಮ್ಮ ಮನಸ್ಸಿಗೂ ತುಂಬಾನೇ ಖುಷಿಯಾಗುವುದು, ಅವುಗಳು ತೋರಿಸುವ ಪ್ರೀತಿ ಮುಂದೆ ನಾವು ನಮ್ಮ ಮಾನಸಿಕ ಒತ್ತಡ ಮರೆತು ಹೋಗುತ್ತೇವೆ, ಅಲ್ಲದೆ ನಾಯಿಗಳು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತದೆ. ನಾವು ಬೇಸರದಲ್ಲಿ ಇದ್ದಾಗ ನಮ್ಮನ್ನು ನೆಕ್ಕುವ ಮೂಲಕ ಸಂತೈಸುತ್ತದೆ.ಹೀಗಾಗಿ ಅವುಗಳೆಂದರೆ ತುಂಬಾನೇ ಇಷ್ಟವಾಗುವುದು. ಅವುಗಳ ನಿಸ್ವಾರ್ಥ ಪ್ರೀತಿ, ನಿಯತ್ತು ಅವುಗಳ ಮೇಲಿನ ಪ್ರೀತಿ ಹೆಚ್ಚಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
