Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಮಕ್ಕಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿದರೆ ಏನಾಗುತ್ತೆ.? ಸೈಕಾಲಜಿಸ್ಟ್ ಹೇಳೋದು ಕೇಳಿ.!
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಲವು ರೀತಿಯ ಮಾನಸಿಕ ಸಮಸ್ಯೆಗಳ ಎದುರಿಸುತ್ತಿರುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ಮಕ್ಕಳು ಓದು, ಆಟ, ಮೊಬೈಲ್ ಹೀಗೆ ಒಂದಾದರು ಸಮಸ್ಯೆಗೆ ಗುರಿಯಾಗಿರುತ್ತಾರೆ. ಅವರ ಮಾನಸಿಕ ಸಮಸ್ಯೆಗಳ ಮೂಲಕ ಕಂಡುಕೊಳ್ಳುವುದೇ ಒಂದು ದೊಡ್ಡ ಪ್ರಶ್ನೆಯಾಗಿರುತ್ತದೆ. ಅದರಲ್ಲೂ 16 ವರ್ಷದ ಒಳಗಿನ ಮಕ್ಕಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಪೋಷಕರ ಒಂದು ದೂರು ಎಂದರೆ ಅದು ಮಕ್ಕಳು ಮೊಬೈಲ್ ಫೋನ್ಗೆ ಹೆಚ್ಚು ಒಗ್ಗಿಕೊಂಡಿದ್ದಾರೆ ಎನ್ನುವುದು. ಮಕ್ಕಳು ಮೊಬೈಲ್ ಬಿಟ್ಟು ಬೇರೇನು ಹಿಡಿಯುವುದಿಲ್ಲ, ಅವರಿಗೆ ಬೇರೆ ಯಾವುದರಲ್ಲೂ ಆಸಕ್ತಿ ಇಲ್ಲ ಎನ್ನುವುದು ಈಗ ಪೋಷಕರ ಬಹುದೊಡ್ಡ ದೂರು. ಇದಕ್ಕೆ ಅವರ ಮೇಲೆ ಮತ್ತಷ್ಟು ಒತ್ತಡ, ಬೈಗುಳ, ಹೊಡೆತವೂ ಬೀಳುವುದು ಮಾನಸಿಕ ಆರೋಗ್ಯದ ಮೇಲರ ಪರಿಣಾಮ ಬೀರುತ್ತಿದೆ.

ಹೀಗಾಗಿ ಮಕ್ಕಳು ಮೊಬೈಲ್ ಬಳಸದಂತೆ ಮಾಡಲು ಪೋಷಕರೇ ಒಂದಿಷ್ಟು ನಿಯಮ ಹಾಕುತ್ತಾರೆ, ಇಲ್ಲವೆ ಬೇರೆ ಏನಾದರು ಮಾರ್ಗ ಕಂಡುಕೊಳ್ಳುತ್ತಾರೆ. ಮೊಬೈಲ್ಗೆ ಲಾಕ್ ಇಡುವುದು, ಮೊಬೈಲ್ ಸಿಗದಂತೆ ದೂರದಲ್ಲಿ , ಎತ್ತರದಲ್ಲಿ ಇಡುವುದು, ಮೊಬೈಲ್ ಬಳಸದಂತೆ ಹೊಡೆಯುವುದು ಮಾಡುತ್ತಾರೆ. ಆದರೆ ನೀವು ಮೊಬೈಲ್ ಬಳಕೆಯನ್ನು ಅವರಿಂದ ಕಿತ್ತುಕೊಂಡಷ್ಟು ಅವರ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಎಂಬುದು ತಜ್ಞರ ವಾದವಾಗಿದೆ.
ಈ ಕುರಿತಂತೆ ನಾವಿಂದು ಮಕ್ಕಳಲ್ಲಿ ಮೊಬೈಲ್ ಬಳಕೆ ಬ್ಯಾನ್ ಮಾಡುವುದು ಇಲ್ಲವೆ ಅವರನ್ನು ಮೊಬೈಲ್ ಬಳಕೆಯಿಂದ ದೂರ ಇಡುವುದು ಮಾಡಿದರೆ ಯಾವ ಸಮಸ್ಯೆ ಅವರಲ್ಲಿ ಕಾಡಲಿದೆ ಎಂಬುದನ್ನು ಕ್ಲೀನಿಕಲ್ ಸೈಕಾಲಜಿಸ್ಟ್ ಆಗಿರುವ ಅರುಣ್ ಕುಮಾರ್ ಎನ್ ಆರ್ ಅವರಿಂದ ಕೇಳಿ ತಿಳಿದುಕೊಳ್ಳೋಣ.
ನೀವು ಮಕ್ಕಳಿಂದ ಮೊಬೈಲ್ ದೂರ ಮಾಡಿದಷ್ಟು ಅವರು ಅದನ್ನು ಪಡೆಯುವ ಮರ್ಗ ಕಂಡುಕೊಳ್ಳಲು ಮುಂದಾಗುತ್ತಾರೆ. ಇದರಿಂದ ಅವರಲ್ಲಿ ತಳಮಳ ಹೆಚ್ಚಾಗಬಹುದು. ಅಲ್ಲದೆ ತಮ್ಮದೇ ಸ್ವಂತ ಮೊಬೈಲ್ ಫೋನ್ ಹೊಂದುವ ಬಯಕೆ ಇಲ್ಲಿಂದಲೇ ಆರಂಭವಾಗುತ್ತದೆ. ಈಗಾಗಿ ಅವರಲ್ಲಿ ಮೊಬೈಲ್ ಫೋನ್ ಕಸಿದುಕೊಳ್ಳುವುದು, ಬಳಸದಂತೆ ತಡೆ ಹಿಡಿಯುವ ಬದಲಾಗಿ ಮೊಬೈಲ್ ಕುರಿತು ಜಾಗೃತಿ ಮೂಡಿಸಬೇಕು. ದಿನದಲ್ಲಿ ಎಷ್ಟು ಸಮಯ, ಯಾವಾಗ ಮೊಬೈಲ್ ಬಳಕೆ ಮಾಡಬೇಕು ಎಂಬುದನ್ನು ನೀವೆ ಒಂದು ದಿನಚರಿ ರೂಪಿಸಿಟ್ಟರೆ ಉತ್ತಮ ಎಂದು ಅವರು ಹೇಳಿದ್ದಾರೆ.
'ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆ ಹಾನಿ ಎಂದು ಹೇಳಲು ಆಗುವುದಿಲ್ಲ. ಈಗ ಬಹುತೇಕ ಶಾಲೆಗಳು ಮಕ್ಕಳ ಮೊಬೈಲ್ ಬಳಕೆಯತ್ತ ಅನಿವಾರ್ಯ ಸೃಷ್ಟಿಸಿವೆ. ಹೀಗಾಗಿ ಅವರು ಆನ್ಲೈನ್ ಬ್ರೌಸಿಂಗ್, ಅವರ ಬಳಕೆಯ ಸಮಯ, ಅವರ ಮೇಲೆ ನಿಗ ಇಡುವುದು ಉತ್ತಮ, ಆದರೆ ಮೊಬೈಲ್ ಬಳಸಲು ಬಿಡದಿದ್ದರೆ ದೊಡ್ಡ ತಪ್ಪಾಗಬಹುದು' ಎಂಬ ಅಭಿಪ್ರಾಯ ಪಟ್ಟಿದ್ದಾರೆ.
ಅವರ ಶೈಕ್ಷಣಿಕ ವಿಚಾರಗಳಿಗೆ ಯಾವ ಸೈಟ್, ವಿಡಿಯೋ ಸಹಾಯ ಮಾಡಲಿದೆಯೋ ಅಂತಹದ್ದನ್ನು ನೋಡಲು ಬಿಡಿ. ಅವರಿಗೆ ಮೊಬೈಲ್ ಬಳಕೆಯ ಕುರಿತಂತೆ ಜಾಗೃತಿ ಮೂಡಿಸುವುದೇ ಇದಕ್ಕೆ ಸೂಕ್ತ ಪರಿಹಾರ ಎಂದು ಅರುಣ್ ಕುಮಾರ್ ಹೇಳುತ್ತಾರೆ.
ಮಕ್ಕಳಿಗೆ ಮೊಬೈಲ್ ನೀಡದಿದ್ದರೆ ಯಾವ ಸಮಸ್ಯೆ ಕಾಡಬಹುದು?
ನಿಮ್ಮ ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಾರೆ ಎಂದಾದಾಗ ಅವರಿಂದ ಆ ಬಳಕೆಯ ಸಮಯವನ್ನು ಕಡಿಮೆಗೊಳಿಸುವುದು ಉತ್ತಮ. ಏಕೆಂದರೆ ಅವರ ಕಣ್ಣುಗಳಿಗೆ, ಓದಿಗೆ, ನಿತ್ಯದ ಚಟುವಟಿಕೆ ಮೇಲೆ ಇದು ಪ್ರಭಾವ ಬೀರುತ್ತದೆ. ಆದರೆ ನೀವು ಹಠಾತ್ ಒಂದೇ ಬಾರಿಗೆ ಅವರಿಂದ ಮೊಬೈಲ್ ಬಳಕೆ ನಿಷೇಧಿಸಿದರೆ ಹಲವು ಸಮಸ್ಯೆ ಕಾಡಬಹುದು.
ಮಂಕಾಗುವುದು
ಮಕ್ಕಳಿಗೆ ಈ ರೀತಿ ಮೊಬೈಲ್ ಬಳಕೆಯಿಂದ ದೂರ ಇಟ್ಟರೆ ಅವರು ಎಂದಿನಂತೆ ಚಟುವಟಿಕೆಯಲ್ಲಿ ತೊಡಗದೆ ಇರಬಹುದು. ಅಲ್ಲದೆ ಏನೋ ಕಳೆದುಕೊಂಡಿರುವ ಭಾವನೆಯಲ್ಲಿ ಅವರು ಮಂಕಾಗಬಹುದು.
ಓದಿನಲ್ಲಿ ಗಮನ ಇಲ್ಲದಿರುವುದು
ಮಕ್ಕಳು ಮೊಬೈಲ್ ಬಳಸುತ್ತಿದ್ದರೆ ಓದಿನತ್ತ ಗಮನಕೊಡುವುದಿಲ್ಲ ಎನ್ನಲಾಗುತ್ತದೆ. ಆದ್ರೆ ಅವರ ಮೊಬೈಲ್ ಬಳಕೆ ನಿಲ್ಲಿಸಿದರೂ ಈ ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ಅರುಣ್ ಕುಮಾರ್.
ಡಿಪ್ರೆಷನ್
ಚಿಕ್ಕ ವಯಸ್ಸಿನಲ್ಲಿಯೇ ಅವರು ಡಿಪ್ರೆಷನ್ ಹೋಗುವುದನ್ನು ನಾವು ನೋಡಿದ್ದೇವೆ. ಕೆಲವು ಪೋಷಕರು ಮಕ್ಕಳು ಕೇವಲ ಓದಿನತ್ತ ಗಮನ ಕೊಡಬೇಕು. ಟಿವಿ ಮೊಬೈಲ್ ಬಳಕೆ ಮಾಡಬಾರದು ಎಂಬ ಕಠಿಣ ನಿಯಮ ಹಾಕುತ್ತಾರೆ. ಆದ್ರೆ ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಸಮಸ್ಯೆಗೆ ಕಾರಣವಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications