Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ಸೀರೆ ಉಡೋದ್ರಿಂದಲೂ ಬರುತ್ತಿದೆ ಕ್ಯಾನ್ಸರ್..! ವೈದ್ಯರು ಹೇಳಿದ ಆಘಾತಕಾರಿ ಸತ್ಯವೇನು?
ಭಾರತದ ಸಾಂಪ್ರದಾಯಿಕ ಉಡುಗೆ ಎಂದು ಕರೆಯ್ಪಡುವ ಸೀರೆಯನ್ನು ಉಡುವುದು ಮಹಿಳೆಯರ ಇಷ್ಟದ ಬಟ್ಟೆಯಲ್ಲಿ ಒಂದಾಗಿದೆ. ಹಲವರಿಗೆ ಸೀರೆ ಬಿಟ್ಟು ಬೇರೆ ಯಾವ ವಿಧದ ಬಟ್ಟೆ ಧರಿಸಿದರು ಆರಾಮು ಎನಿಸೋದಿಲ್ಲ. ಕೆಲವರು ಸೀರೆಗೆ ಎಷ್ಟು ಹೊಂದಿಕೊಂಡಿರುತ್ತಾರೆ ಅಂದ್ರೆ ಮನೆಯಲ್ಲೂ ಸೀರೆ ಉಟ್ಟುಕೊಳ್ಳುತ್ತಾರೆ.
ಈ ರೀತಿ ಸೀರೆಗೆ ಅವಲಂಬಿತರಾಗಿರುವು ಭಾರತೀಯ ಮಹಿಳೆಯರಿಗೆ ಈಗ ಸೀರೆಯೇ ಕಂಟಕವಾಗುವ ಲಕ್ಷಣವಿದೆ. ಹೌದು ಸೀರೆ ಉಡುವುದರಿಂದ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ದೆಹಲಿಯ ಪಿಎಸ್‌ಆರ್‌ಐ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ ವಿವೇಕ್ ಗುಪ್ತಾ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಸೀರೆ ಉಡುವ ಮಹಿಳೆಯರಲ್ಲಿ ಇತ್ತೀಚಿಗೆ ಚರ್ಮದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆಯಂತೆ. ಇದಕ್ಕೆ ಕಾರಣ ಅವರು ತಮ್ಮ ಸೊಂಟಕ್ಕೆ ಲಂಗ ಮತ್ತು ಸೀರೆಯನ್ನ ಬಿಗಿಯಾಗಿ ಕಟ್ಟುವುದಾಗಿದೆ ಎಂದು ವಿವರಣೆ ನೀಡಿದ್ದಾರೆ. ಈ ರೀತಿ ಮಾಡುವುದರಿಂದ ಸೊಂಟದ ಸುತ್ತಲಿನ ಆ ಭಾಗದ ಚರ್ಮದ ಸಿಪ್ಪೆ ಸುಲಿದಂತಾಗುತ್ತದೆ ಎಂದಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ ದಕ್ಷಿಣ ಭಾರತದ ಮಹಿಳೆಯೊಬ್ಬರಿಗೆ 2020ರಲ್ಲಿ ಉಂಟಾಗಿದ್ದ ಚರ್ಮದ ಕ್ಯಾನ್ಸರ್. ಹೌದು ಆಕೆಗೆ ಸೊಂಟದಲ್ಲಿ ಚಿಕ್ಕದಾದ ಹುಣ್ಣು ಉಂಟಾಗಿ 6 ತಿಂಗಳ ನಿರಂತರ ಚಿಕಿತ್ಸೆಯ ಬಳಿಕವೂ ವಾಸಿಯಾಗಲಿಲ್ಲ. ಈ ಗಾಯ ಹೆಚ್ಚುತ್ತಾ ಸಾಗಿ ಚರ್ಮದ ಕ್ಯಾನ್ಸರ್ ಎಂದು ದೃಢಪಟ್ಟಿತ್ತು. ಇದಕ್ಕೆ ಕೇವಲ ಸೀರೆ ಉಡುವುದು ಮಾತ್ರ ಕಾರಣವೆಂದು ಅಳೆಯಲು ಸಾಧ್ಯವಿಲ್ಲ, ಇದಕ್ಕೆ ಪ್ರಾದೇಶಿಕ ನೈರ್ಮಲ್ಯ ಅಭ್ಯಾಸಗಳು ಮತ್ತು ಹವಾಮಾನ ಪರಿಸ್ಥಿತಿಗಳಿಂದ ಪ್ರೇರಿತವಾಗಿ, ಬಿಹಾರ ಮತ್ತು ಜಾರ್ಖಂಡ್‌ನಂತಹ ಕೆಲವು ಪ್ರದೇಶಗಳಲ್ಲಿ ಈ ಕ್ಯಾನ್ಸರ್ ಅಪಾಯ ತೀರ ಹೆಚ್ಚಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.
ಇನ್ನು ತಾಪಮಾನ ಅಧಿಕವಾಗಿರುವ ಕಡೆಗಳಲ್ಲಿ ಚರ್ಮದ ಕಿರಿಕಿರಿ ಹೆಚ್ಚಿಸುತ್ತದೆ, ಇದು ಸೀರೆ ಕ್ಯಾನ್ಸರ್ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲುತ್ತದೆ. ವಿಶೇಷವಾಗಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC)ಗೆ ಅನುಕೂಲಕರವಾದ ಪ್ರಕ್ರಿಯೆಗ ಕಾರಣವಾಗುತ್ತದೆ. ಭಾರತದಲ್ಲಿ ಈ ಸೀರೆಯ ಕ್ಯಾನ್ಸರ್ ಅಷ್ಟೇ ಅಲ್ಲ ಇದರ ಹೊರಯಾಗಿ ಹಲವು ಸಮಸ್ಯೆ ಈ ಬಟ್ಟೆ ಮತ್ತು ಜವಳಿ ವಲಯದ ಕೊಡುಗೆಯಾಗಿದೆ.
ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಮಹಿಳೆಯವರು ವಿವಿಧ ರೀತಿ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯ ಎನ್ನುವಂತಾಗಿದೆ. ಇನ್ನು ವೃಷಣ ಕ್ಯಾನ್ಸರ್‌ಗಳಿಗೆ ಪುರುಷರು ಧರಿಸುವ ಜೀನ್ಸ್ ಕಾರಣವಾಗಿದೆ. ಈ ಜೀನ್ಸ್‌ಗಳು ಹೆಚ್ಚು ಶಾಖವನ್ನು ಹೀರಿಕೊಳ್ಳುವ ಕಾರಣದಿಂದಾಗಿ ವೃಷಣ ಕ್ಯಾನ್ಸರ್‌ಗಳ ಪ್ರಮಾಣ ಏರಿಕೆಯಾಗಿದೆ ಎಂದು ಡಾ ವಿವೇಕ್ ಗುಪ್ತಾ ಹೇಳಿದ್ದಾರೆ.
ಕಾಶ್ಮೀರದ ಕಾಂಗ್ರಿಯಿಂದ ಕ್ಯಾನ್ಸರ್
ಕಾಶ್ಮೀರದಲ್ಲಿ ಮೈ ಕೊರೆಯುವ ಚಳಿ ಇರುವ ಕಾರಣ ಅವರು ಕಾಂಗ್ರಿ ಎಂಬ ಮಡಕೆಯಂತಹ ವಸ್ತುವಿನಲ್ಲಿ ಕೆಂಡಗಳ ತುಂಬಿಕೊಂಡಿರುತ್ತಾರೆ. ಈ ಕಾಂಗ್ರಿಗಳನ್ನು ಅವರು ಕಾಲಿನ ಮಧ್ಯದಲ್ಲಿ ಇಟ್ಟುಕೊಂಡು ಚಳಿ ಕಾಯಿಸುತ್ತಾರೆ, ಇದರಿಂದ ಹೊರಬರುವ ಶಾಖದಿಂದ ಚಳಿ ದೂರಾಗುತ್ತದೆ. ಆದರೆ ಇದೇ ಕಾಂಗ್ರಿ ಚರ್ಮದ ಕ್ಯಾನ್ಸರ್‌ಗೂ ಕಾರಣವಾಗಿದೆ. ತೊಡೆಯಲ್ಲಿ ಚರ್ಮದ ಕ್ಯಾನ್ಸರ್ ಹಾಗೂ ವೃಷಣ ಕ್ಯಾನ್ಸರ್ ಹೆಚ್ಚಲೂ ಈ ಕಾಂಗ್ರಿ ಕಾರಣ ಎಂದು ಈ ಹಿಂದೆ ಅಧ್ಯಯನ ವರದಿ ತಿಳಿಸಿತ್ತು. ಈ ಕ್ಯಾನ್ಸರ್ 15 ರಿಂದ 20 ವರ್ಷದ ಹದಿಹರೆಯದವರಲ್ಲಿ ಹಾಗೂ 25 ರಿಂದ 30 ವರ್ಷ ವಯೋಮಾನದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಚರ್ಮದ ಕ್ಯಾನ್ಸರ್ ಎಂದರೆ
ಮೆಲನೋಮ ಎಂಬ ವ್ಯಾಪಕವಾಗಿ ಕಂಡುಬರುವ ಚರ್ಮದ ಕ್ಯಾನ್ಸರ್ ಹದಿಹರೆಯದವರಲ್ಲಿ ಹೆಚ್ಚು.ಸೂರ್ಯನ ಯುವಿ ಕಿರಣಗಳಿಂದ ಆಗುವ ಹಾನಿ ಮೆಲನೋಮಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಾನಿಗೊಳಗಾದ ಜೀವಕೋಶಗಳು, ನಿರ್ದಿಷ್ಟವಾಗಿ ಬಿಸಿಲಿನಿಂದ ಉಂಟಾಗುವ ಸನ್‌ಬರ್ನ್ ಅಥವಾ ಹದಿಹರೆಯದವರು ಅಥವಾ ಯುವ ವಯಸ್ಕರಲ್ಲಿ ನಿಯಮಿತವಾದ ಟ್ಯಾನಿಂಗ್ ಬೆಡ್ ಬಳಕೆಯಿಂದ ಕ್ಯಾನ್ಸರ್ ಬೆಳೆಯುವ ಸಾಧ್ಯತೆ ಹೆಚ್ಚು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications