Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಹೊಟ್ಟೆಯ ಬೊಜ್ಜು ಕರಗಿಸೋದು ಎಷ್ಟು ಸುಲಭ ಗೊತ್ತಾ? ನೀವು ಮಾಡಬೇಕಾದ ಕೆಲಸ ಏನು?
ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಆಗುವುದು ಸಾಮಾನ್ಯ ಸಮಸ್ಯೆಯಂತಾಗಿದೆ. ತೂಕ ಇಳಿಸಿಕೊಳ್ಳಲು ಹಲವು ರೀತಿಯ ಸಾಹಸ ಮಾಡಿದ್ದರೂ ಕೂಡ 1 ಕೆ.ಜಿ ತೂಕ ಇಳಿಸಲು ಕಷ್ಟಪಡುತ್ತಾರೆ. ಆದ್ರೆ ತೂಕ ಹೆಚ್ಚಳ ಆಗೋದು ಅಂದ್ರೆ ಈಗ ದೊಡ್ಡ ಸಮಸ್ಯೆ. ಅದರಲ್ಲೂ ಹೊಟ್ಟೆಯಲ್ಲಿ ಬೊಜ್ಜು ಶೇಖರಣೆ ಆಗುವುದು ಒಂದು ಸಮಸ್ಯೆಯಾಗಿದೆ.
ಕೆಲವರಲ್ಲಿ ವಯಸ್ಸಿಗೂ ಮೀರಿದಂತಹ ರೀತಿ ಹೊಟ್ಟೆಯಲ್ಲಿ ಬೊಜ್ಜು ಶೇಖರಣೆ ಆಗಿ ವಿಕಾರವಾಗುವುದು, ತೂಕ ಹೆಚ್ಚಳವಾಗುವುದು ನೋಡಬಹುದು. ವಯಸ್ಕರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಲೆ ಇದೆ. ಈ ರೀತಿ ಹೊಟ್ಟೆ ಬೊಜ್ಜು ಶೇಖರಣೆಯಾಗಲು ಜೀವನ ಶೈಲಿ ಆಹಾರ ಕ್ರಮ ಕಾರಣವಾಗಿರುತ್ತದೆ. ಈ ಹೊಟ್ಟೆ ಕರಗಿಸಲು ಹಲವು ಮಾರ್ಗಗಳಿವೆ, ನಾವಿಂದು ಸುಲಭವಾಗಿ ಬೊಜ್ಜು ಕರಗಲು ಏನು ಮಾಡಬೇಕು ಅನ್ನೋದನ್ನು ನೋಡೋಣ.

ನಾವು ಸೇವಿಸುವ ಆಹಾರದಲ್ಲಿರುವ ಬೊಜ್ಜು ಶೇಖರಣೆಯಾಗುವ ಮೂಲಕ ಹೊಟ್ಟೆ ಹಾಗೂ ಸೋಂಟದ ಗಾತ್ರದಲ್ಲಿ ದೊಡ್ಡದಾಗುತ್ತಾ ಸಾಗುತ್ತದೆ. ಆದ್ರೆ ಇದನ್ನು ಕರಗಿಸುವುದು ಅಷ್ಟೊಂದು ಸುಲಭವಲ್ಲ. ಹಾಗಾದ್ರೆ ಈ ಬೊಜ್ಜು ಕರಗಿಸಲು ಏನು ಮಾಡಬೇಕು? ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಸಕ್ಕರೆ ನಿಲ್ಲಿಸಿಬಿಡಿ
ಸಂಸ್ಕರಿಸಿದ ಸಕ್ಕರೆ ನಮ್ಮ ದೇಹಕ್ಕೆ ಒಳ್ಳೆಯದಲ್ಲ. ನಮ್ಮ ಆರೋಗ್ಯದಲ್ಲಿ ಏರುಪೇರಾಗಲು, ಹೃದಯ ಸಂಬಂಧಿ ಸಮಸ್ಯೆ, ಪಾರ್ಶ್ವವಾಯುವಿಗೂ ಕೂಡ ಸಕ್ಕರೆ ಕಾರಣವಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ನಿತ್ಯದ ಕ್ಯಾಲೋರಿ ಮೇಲೆ ಗಮನವಿಡಿ. ನಿಮ್ಮ ದೇಹಕ್ಕೆ ಅಗತ್ಯವಿರುಷ್ಟು ಕ್ಯಾಲೋರಿ ಅನ್ನು ಮಾತ್ರ ಸೇವಿಸಬೇಕಾಗುತ್ತದೆ. ಆದ್ರೆ ಸಕ್ಕರೆ ಹೆಚ್ಚಾದಷ್ಟು ಈ ಕ್ಯಾಲೋರಿ ನಿಮ್ಮ ದೇಹ ಸೇರುವುದು ಹೆಚ್ಚಾಗುತ್ತಾ ಸಾಗಲಿದೆ.
ಪಾಲೀಶ್ ಮಾಡಲಾದ ಅಕ್ಕಿ
ನಾವು ನಿತ್ಯ ಅನ್ನ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಆದ್ರೆ ಫುಲ್ ಪಾಲೀಶ್ ಮಾಡಲಾದ ಅಕ್ಕಿಯಲ್ಲಿ ಯಾವುದೇ ಆರೋಗ್ಯಕರ ಅಂಶ ಉಳಿದಿರುವುದಿಲ್ಲ. ಇದರಲ್ಲಿ ಫೈಬರ್, ವಿಟಮಿನ್ಸ್, ಮಿನರಲ್ಸ್ ಇರುವುದಿಲ್ಲ. ಈ ಅಕ್ಕಿಯಲ್ಲಿ ಕಾರ್ಬೀಹೈಡ್ರೇಟ್ ಮಾತ್ರ ಇರುತ್ತದೆ. ಇದು ಬಹುಬೇಗ ಜೀರ್ಣವಾಗುತ್ತದೆ, ಹಾಗೆ ಹೊಟ್ಟೆಯಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿಸಲು ಕಾರಣವಾಗುತ್ತದೆ.
ಮೈದಾ ತಿನಿಸುಗಳು
ಈಗ ಬಹುತೇಕ ಕರಿದ ತಿಂಡಿಗಳು, ಬೇಕರಿ ವಸ್ತುಗಳು ಮೈದಾದಿಂದ ಮಾಡಲ್ಪಡುತ್ತಿವೆ. ಮೈದಾದಿಂದ ಮಾಡಿದ ವಸ್ತುಗಳು ಬಹುಬೇಗ ಹಾಳಾಗುವುದಿಲ್ಲ. ಹಾಗೆ ಇದು ನಮ್ಮ ದೇಹಕ್ಕೆ ಉತ್ತಮವೂ ಅಲ್ಲ.
ಹಾಲು
ನಾವು ನಿತ್ಯ ಹಾಲನ್ನು ಕುಡಿಯುವ ಅಭ್ಯಾಸ ಮಾಡಿರುತ್ತೇವೆ. ಕೆಲವರು ಹಾಲು ಕುಡಿದು ಮಲಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ತೂಕ ಹೆಚ್ಚಿರುವವರು ಊಟದ ಬಳಿಕ ಹಾಲು ಸೇವನೆ ಮಾಡುವುದು ಒಳ್ಳೆಯದಲ್ಲ, ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಅಂಶ ನಿಮ್ಮಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಹಾಲಿನ ಬದಲು ಮೊಸರು ಸೇವನೆ ಉತ್ತಮವಾಗುತ್ತದೆ.
ಉಪ್ಪು
ಹೆಚ್ಚು ಉಪ್ಪು ಹಾಕಿರುವ ಪ್ರಮಾಣದ ಆಹಾರ ಸೇವಿಸಬಾರದು. ಉಪ್ಪು ಹೆಚ್ಚಾದರೆ ಬಿಪಿ, ನೀರು ಸೇವನೆ ಹೆಚ್ಚಾಗಿಸಲಿದೆ. ಇದು ಮೂತ್ರಪಿಂಡದ ಮೇಲೆ ಹೆಚ್ಚುವರಿ ಕೆಲಸಕ್ಕೆ ಕಾರಣವಾಗುತ್ತದೆ. ಉಪ್ಪು ಹೆಚ್ಚಾಗಿದ್ದರೆ ಬಾಯಿ ರುಚಿ ಹೆಚ್ಚಿಸಲಿದೆ. ಆಹಾರ ಪ್ರಮಾಣ ಹೆಚ್ಚಾಗಿ ಸೇವಿಸಲು ಉಪ್ಪು ಕಾರಣವಾಗುತ್ತದೆ. ಹೀಗಾಗಿ ಹೆಚ್ಚಾಗಿ ಉಪ್ಪು ಬಳಸಿರುವ ಆಹಾರ ಸೇವಿಸಬೇಡಿ.
ಹಣ್ಣಿನ ಜ್ಯೂಸ್
ಹಣ್ಣಿನ ಜ್ಯೂಸ್ ಅನ್ನು ಹಾಗೆ ನೈಸರ್ಗಿಕ ರೀತಿಯಲ್ಲಿ ಸೇವಿಸುವುದು ಬಹಳ ಉತ್ತಮ. ಆದರೆ ಈ ಜ್ಯೂಸ್‌ಗೆ ಸಕ್ಕರೆ ಹಾಕಿ ಕುಡಿಯುವುದು ಇಲ್ಲವೆ ಪ್ಯಾಕ್ ಮಾಡಲಾದ ಜ್ಯೂಸ್ ಸೇವನೆ ನಿಮ್ಮಲ್ಲಿ ಬೊಜ್ಜು ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ.
ರಾತ್ರಿ ಊಟ ಬೇಗ ಮಾಡುವುದು
ನಾವು ರಾತ್ರಿ ಹೊತ್ತು ಮಾಡುವ ಊಟದಲ್ಲಿ ಸೊಪ್ಪು ತರಕಾರಿ, ಹಣ್ಣು ಬಳಸುವುದು ಉತ್ತಮ. ನಾವು 7 ಗಂಟೆಯ ಒಳಗೆ ರಾತ್ರಿಯ ಊಟ ಮಾಡಿ ಮುಗಿಸುವುದು ಉತ್ತಮ. ನೀವು ತಡವಾಗಿ ಊಟ ಮಾಡಿ ಯಾವುದೇ ಓಡಾಟ ಇಲ್ಲದೆ, ಚಟುವಟಿಕೆ ಇಲ್ಲದೆ ಮಲಗಿದರೆ ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗುವ ಪ್ರಮಾಣ ಹೆಚ್ಚಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications