Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Bone Density: ಮಾತ್ರೆ ಇಲ್ಲದೇ ಸ್ಟ್ರಾಂಗ್ ಬೋನ್ಸ್! ಈ ಬೀಜಗಳೇ ನಿಮ್ಮ ಆಯುಧಗಳು
ಮಾತ್ರೆ ಇಲ್ಲದೇ ಸ್ಟ್ರಾಂಗ್ ಬೋನ್ಸ್! ಈ ಒಂದು ಕೆಲಸ ನಿಮ್ಮ ಮೂಳೆಗಳನ್ನು ಗಟ್ಟಿಮುಟ್ಟಾಗಿಸುತ್ತದೆ. ನಿತ್ಯವೂ ಸ್ವಲ್ಪ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ಸಾಕು! ಹೌದು, ನಮ್ಮ ದೇಹದ ಮೂಳೆಗಳು (Bone) ಸದಾ ಆರೋಗ್ಯದಿಂದಿರಬೇಕು ಎನ್ನುವುದು ಎಲ್ಲರ ಬಯಕೆ. ಇದಕ್ಕಾಗಿ ನೀವು ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಡಿ ಸೇರಿದಂತೆ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಆಹಾರ ಸೇವನೆ ಮಾಡಬೇಕು. ನೀವು ಸೇವಿಸುವ ಆಹಾರದಲ್ಲಿ ಕೆಲವು ಬೀಜಗಳು (Seeds) ಇರಬೇಕು. ನೈಸರ್ಗಿಕವಾಗಿ ಸಿಗುವ ಈ ಬೀಜಗಳು ಆರೋಗ್ಯದಲ್ಲಿ ಚಮತ್ಕಾರ ಮಾಡುತ್ತವೆ. ಬನ್ನಿ, ಆ ಆರೋಗ್ಯಕಾರಿ ಬೀಜಗಳು ಯಾವುದು? ಅನ್ನೋದನ್ನು ತಿಳಿಯೋಣ.
ವಯಸ್ಸಾದ ಮೇಲೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯ. ಆದರೆ, ಪ್ರಸ್ತುತ ಚಿಕ್ಕ ವಯಸ್ಸಿನ ಮಕ್ಕಳಲ್ಲಿಯೂ ಈ ಆರೋಗ್ಯ ಸಮಸ್ಯೆ ಹೆಚ್ಚು ಕಂಡು ಬರುತ್ತಿದೆ. ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಆದರೆ, ಇದು ತಪ್ಪು ಕಲ್ಪನೆ. ನೀವು ಸೇವಿಸುವ ಅನಾರೋಗ್ಯಕಾರ ಆಹಾರವೂ ಈ ಸಮಸ್ಯೆಗಳಿಗೆ ನೇರವಾದ ಕಾರಣ. ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ಇವುಗಳ ಕೊರತೆಯಿಂದಾಗಿ ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ವರದಿಯಾಗುತ್ತಿವೆ.

ಈಗ ಪ್ರಮುಖ ವಿಷಯಕ್ಕೆ ಬರೋಣ.. ನಿಮ್ಮ ದೇಹದಲ್ಲಿನ ಮೂಳೆಗಳನ್ನು ಗಟ್ಟಿಮುಟ್ಟಾಗಿ ಇಡಲು ನೀವು ಆಹಾರಪದ್ಧತಿಯಲ್ಲಿ ಬದಲಾವಣೆ ತರಬೇಕು. ಜೊತೆಗೆ ನೀವು ಅನುಸರಿಸುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಅತ್ಯವಶ್ಯಕ. ದೇಹದ ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಪದಾರ್ಥಗಳ ಸೇವನೆ ಬಹಳ ಅವಶ್ಯಕ ಎಂಬುದು ವೈದ್ಯರ ಸಲಹೆ. ಹೀಗಾಗಿ, ಮೂಳೆಗಳು ಹೆಚ್ಚು ಗಟ್ಟಿ ಆಗಿರಬೇಕು ಎಂದರೆ ನೈಸರ್ಗಿಕವಾಗಿ ಸಿಗುವ ಕೆಲವು ಬೀಜಗಳನ್ನು ನಿತ್ಯವೂ ಸೇವನೆ ಮಾಡಬೇಕು. ಅವುಗಳು ಈ ಕೆಳಗಿನಂತಿವೆ.
ಸೂರ್ಯಕಾಂತಿ ಬೀಜಗಳು
ಗಟ್ಟಿಮುಟ್ಟಾದ ಮೂಳೆಗೆ ಸೂರ್ಯಕಾಂತಿ ಬೀಜ ರಾಮಬಾಣ. ಈ ಸೂರ್ಯಕಾಂತಿ ಬೀಜಗಳಲ್ಲಿ ಮ್ಯಾಂಗ ನೀಸ್, ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಮ್ಲಗಳು ಸೇರಿದಂತೆ ಹಲವು ಬಗೆಯ ಪೋಷಕಾಂಶಗಳು ಕಂಡು ಬರುತ್ತವೆ. ದೇಹವನ್ನು ದುರ್ಬಲ ಮೂಳೆಗಳ ಸಮಸ್ಯೆಯಿಂದ ವಿಮುಕ್ತಿಗೊಳಿಸಲು, ಮಿತವಾಗಿ ಸೂರ್ಯಕಾಂತಿ ಬೀಜಗಳನ್ನು ಸೇವನೆ ಮಾಡಬೇಕು. ನಿಮ್ಮ ಆಹಾರ ಪದ್ಧತಿಯಲ್ಲಿ ಈ ಅಭ್ಯಾಸ ಅಳವಡಿಸಿಕೊಂಡರೆ ಉತ್ತಮ. ಈ ಬೀಜಗಳು ದೇಹದ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.
ಅಗಸೆ ಬೀಜಗಳು
ಅಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸೇರಿದಂತೆ ಇತ್ಯಾದಿ ಪೋಷಕಾಂಶಗಳು ಇರುತ್ತದೆ. ಇವು ದೇಹದ ಮೂಳೆ ಸಾಂದ್ರತೆಯನ್ನು ಬಲಪಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಈ ಅಗಸೆ ಬೀಜಗಳ ಪುಡಿಯನ್ನು ನಿತ್ಯ ಆಹಾರದಲ್ಲಿ ಸೇವನೆ ಮಾಡಬಹುದು. ಈ ಅಗಸೆ ಬೀಜಗಳಲ್ಲಿ ಉಷ್ಣತೆ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ, ಅಲ್ಪ ಪ್ರಮಾಣದಲ್ಲಿ (ಟೀ ಚಮಚದಷ್ಟು) ಮಾತ್ರ ಸೇವಿಸಬೇಕು. ತಿಳಿಯದೇ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯ ಹದಗೆಡುತ್ತದೆ.
ಎಳ್ಳಿನ ಬೀಜಗಳು
ಎಳ್ಳಿನ ಬೀಜಗಳಲ್ಲಿ ಮೂಳೆಗಳಿಗೆ ಸಿಗಬೇಕಾದ ಎಲ್ಲಾ ಪೋಷಕಾಂಶಗಳು ಕಂಡುಬರುತ್ತವೆ. ಈ ಪುಟ್ಟ ಬೀಜಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಲು ತಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ಸೇರಿಸಿ ಕೊಂಡರೆ ಒಳ್ಳೆಯದು. ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಡಿ ಹೆಚ್ಚು ಇರುವ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಜೊತೆಗೆ ನೀವು ಪಾನೀಯಗಳನ್ನು ಸೇವನೆ ಮಾಡಬಹುದು. ಇದು ಸಹ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಈ ನಿಟ್ಟಿನಲ್ಲಿ ಎಳ್ಳಿನ ಬೀಜಗಳು ತುಂಬಾನೇ ಸಹಕಾರಿಯಾಗುತ್ತವೆ. ವೈದ್ಯರ ಪ್ರಕಾರ, ಕಾಲು ಕಪ್ ಎಳ್ಳಿನ ಬೀಜಗಳಲ್ಲಿ, ಸುಮಾರು 350 ಮಿಲಿಗ್ರಾಂ ನಷ್ಟು ಕ್ಯಾಲ್ಸಿಯಂ ಇರುತ್ತದೆ. ಆದ್ದರಿಂದ, ನೀವು ಎಳ್ಳಿನ ಜ್ಯೂಸ್ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬಹುದು.
ಇದಲ್ಲದೆ, ಗಸಗಸೆ ಬೀಜಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಇದರಲ್ಲಿ ಮ್ಯಾಂಗನೀಸ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಪೋಷಕಾಂಶಗಳಿವೆ. ಹಾಗೆಯೇ ಚಿಯಾ ಬೀಜಗಳಲ್ಲಿಯೂ ಪೌಷ್ಟಿಕ ಸತ್ವಗಳಿವೆ. ಈ ಬೀಜಗಳಲ್ಲಿ ನಾರಿನಾಂಶ, ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ ಹಾಗೂ ಮೆಗ್ನೀಸಿ ಯಮ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಈ ಬೀಜಗಳನ್ನು ಸಹ ಸೇವನೆ ಮಾಡುವ ಅಭ್ಯಾಸ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


