Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಒಂದೇ ಕಡೆ ತುಂಬಾ ಹೊತ್ತು ಕೂರುತ್ತೀರಾ? ಹಾಗಾದರೆ ಆರೋಗ್ಯ ಉಳಿಸಲು ಹೀಗೆ ಮಾಡಿ
ನೀವು ಒಂದೇ ಜಾಗದಲ್ಲಿ ಟೇಬಲ್ ಕುರ್ಚಿಯಲ್ಲಿ ಕುಳಿತು ಹೆಚ್ಚು ಸಮಯ ಕೆಲಸ ಮಾಡುತ್ತೀರಾ ಅಥವಾ ಎರಡು ಮೂರು ಗಂಟೆ ನಿರಂತರವಾಗಿ ಕುಳಿತು ಅಧ್ಯಯನ ಮಾಡುತ್ತೀರಾ? ಅಥವಾ ಕುಳಿತಲ್ಲೇ ಕುಳಿತು ದಿನವನ್ನೆಲ್ಲ ಕಳೆಯುತ್ತೀರಾ? ಹಾಗಾದ್ರೆ ಎಚ್ಚರ, ನೀವು ನೀವಾಗಿಯೇ ಕೆಲವು ಅನಾರೋಗ್ಯ ಸಮಸ್ಯೆಗಳನ್ನು ದೇಹಕ್ಕೆ ತಂದುಕೊಳ್ಳುತ್ತಿದ್ದೀರಿ!

ಸಿಟ್ಟಿಂಗ್ ಡಿಸೀಸ್:
ಕುಳಿತುಕೊಳ್ಳುವ ಜೀವನ ಶೈಲಿ ಅಥವಾ ಇದನ್ನ ಜೀವನಶೈಲಿ ಸಿಂಡ್ರೋಮ್ ಎಂದು ಕರೆಯಬಹುದು ಈ ಬಗ್ಗೆಗಾಜಿಯಾಬಾದ್‌ನ ಹೀಲಿಂಗ್ ಟ್ರೀ ಆಸ್ಪತ್ರೆಯ ಎಚ್‌ಒಡಿ ಫಿಸಿಯೋ ವಿಭಾಗದ ವೈದ್ಯರ ತಂಡ ಅಧ್ಯಯನ ಮಾಡಿತ್ತು. ಈ ಸಿಂಡ್ರೋಮ್ ನಿಂದಾಗಿ ದೈಹಿಕ ಚಟುವಟಿಕೆ ಸಮಸ್ಯೆ, ಸ್ಥೂಲಕಾಯತೆ, ಟೈಪ್ 2 ಮಧುಮೇಹ ಹಾಗೂ ಹೃದ್ರೋಗ ಮೊದಲಾದ ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಕುಳಿತುಕೊಳ್ಳುವ ಸಿಂಡ್ರೋಮ್ ನಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಟಿಪ್ಸ್ ಸಹಾಯವಾಗಬಹುದು:
ದೈಹಿಕ ಚಟುವಟಿಕೆ ಅಥವಾ ದೇಹದ ಚಲನೆ ಇಲ್ಲದೆ ಇದ್ದರೆ ಅನಾರೋಗ್ಯ ಸಮಸ್ಯೆ ಉಂಟಾಗುವುದು ಸಹಜ. ಸಾಕಷ್ಟು ಬಾರಿ ಕುಳಿತುಕೊಳ್ಳುವ ಕಾಯಿಲೆಗೆ ಇದು ಕಾರಣವಾಗುತ್ತದೆ. ಹಾಗಾದ್ರೆ ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಇಲ್ಲಿದೆ ಉತ್ತರ.
ವಿರಾಮ ತೆಗೆದುಕೊಳ್ಳುವುದು:
ಕುಳಿತುಕೊಳ್ಳುವ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿಯಾದ ಮಾರ್ಗ ಇದು. ಸಾಕಷ್ಟು ಜನ ಒಂದೇ ಸ್ಥಳದಲ್ಲಿ ಕುಳಿತಲೇ ಕುಳಿತಿರುತ್ತಾರೆ. ಹೆಚ್ಚು ಸಮಯ ಈ ರೀತಿ ಮಾಡಿದರೆ ಸಾಕಷ್ಟು ಅನಾರೋಗ್ಯ ಸಮಸ್ಯೆ ಕಾಡಬಹುದು. ಇದಕ್ಕಾಗಿ ಆಗಾಗ ಎದ್ದು ನಿಲ್ಲುವುದು, ಆಗಾಗ ಕೈಕಾಲು ಅಡಿಸುವಂತಹ ಲಘು ವ್ಯಾಯಾಮ ಮಾಡಬೇಕು ಪ್ರತಿ ಗಂಟೆಗೆ ಐದು ನಿಮಿಷವಾದರೂ ವಿರಾಮ ತೆಗೆದುಕೊಳ್ಳಲು ನೆನಪಿರಬೇಕು. ಇದರಿಂದ ಕಾಲು ನೋವು, ಸೊಂಟ ನೋವು ಕೂಡ ಉಂಟಾಗುವುದಿಲ್ಲ.
ಸ್ಟ್ರೆಚ್ಚಿಂಗ್ ವ್ಯಾಯಾಮ:
ನೀವು ಹೆವಿ ಆಗಿರುವಂತಹ ವ್ಯಾಯಾಮ ಮಾಡಬೇಕೆಂದಿಲ್ಲ ಆದರೆ ಕೆಲಸ ಮಾಡುವಾಗ ಅಥವಾ ಒಂದು ಸ್ಥಳದಲ್ಲಿ ಜಾಸ್ತಿ ಸಮಯ ಕುಳಿತುಕೊಳ್ಳುವ ಸಂದರ್ಭ ಇರುವಾಗ ಆಗಾಗ ಬ್ರೇಕ್ ತೆಗೆದುಕೊಂಡು ಕೈಕಾಲು ಸ್ಟ್ರೆಚ್ ಮಾಡುವಂತಹ ಲಘು ವ್ಯಾಯಾಮವನ್ನು ಮಾಡಿ ಇದರಿಂದ ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ ಕೈಕಾಲುಗಳ ನೋವುಗಳು ಕೂಡ ನಿವಾರಣೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ಕೂಡ ಬರುವುದಿಲ್ಲ.
ಎಲಿವೇಟರ್ ಬದಲಿಗೆ ಮೆಟ್ಟಿಲು:
ಸಾಮಾನ್ಯವಾಗಿ ಯಾವುದೇ ಅಪಾರ್ಟ್ಮೆಂಟ್ ಅಥವಾ ಆಫೀಸಿಗೆ ಹೋಗುವಾಗ ಮಾಲ್ ಗಳಲ್ಲಿ ಎಲಿವೇಟರ್ ಇದ್ದೇ ಇರುತ್ತದೆ. ನೀವು ಈಗೆ ಆಚೆ ಹೋದಗಲೂ ಎಲಿವೇಟರ್ ಬದಲು ಮೆಟ್ಟಿಲುಗಳ ಮೂಲಕ ಹತ್ತುವುದು ಅಥವಾ ಇಳಿಯುವುದು ಒಳ್ಳೆಯದು. ಇದರಿಂದ ಹೃದಯ ರಕ್ತನಾಳದ ಆರೋಗ್ಯ ಸುಧಾರಿಸುತ್ತದೆ.
ದೈಹಿಕ ಚಟುವಟಿಕೆ:
ಊಟ ಮಾಡಿ ನಂತರ ಮತ್ತೆ ಕೆಲಸಕ್ಕೆತಕ್ಶ್ಃಅಣವೇ ಕುಳಿತುಕೊಳ್ಳುವ ಬದಲು ಸ್ವಲ್ಪ ಚುರುಕಾದ ನಡಿಗೆ ಮಾಡುವುದು ಒಳ್ಳೆಯದು ಇನ್ನು ಟಿವಿ ನೋಡುವಾಗ ಕುಳಿತುಕೊಂಡು ಸುಮ್ಮನೆ ಕಾಲ ಕಳೆಯುವುದಕ್ಕಿಂತ ಲಘು ವ್ಯಾಯಾಮ ಮಾಡಬಹುದು ನೃತ್ಯ ಅಥವಾ ದೈಹಿಕ ಚಟುವಟಿಕೆಯನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು ನಿಮ್ಮ ದೈನಂದಿನ ದಿನಾಚರಣೆಯಲ್ಲಿ ದೈಹಿಕ ವ್ಯಾಯಾಮ ಇರಲಿ. ಈಜು ಕಲಿತರೆ ಇನ್ನೂ ಒಳ್ಳೆಯದು. ಮನೆಯಲ್ಲಿ ಮಕ್ಕಳಿದ್ದರೆ ಅವರ ಜೊತೆಗೆ ಸ್ವಲ್ಪ ಸಮಯ ಕಳೆದರೂ ಅದೂ ಕೂದ ಲಘು ವ್ಯಾವಾಮವಾಗುತ್ತದೆ.
ಆಗಾಗ ಎದ್ದು ನಿಲ್ಲುವುದು:
ಒಂದೇ ಕಡೆ ಕುಳಿತು ಕೆಲಸ ಮಾಡುವಾಗ ತಪ್ಪದೇ ಆಗಾಗ ಚೇರ್ ನಿಂದ ಎದ್ದು ನಿಲ್ಲುವುದನ್ನ ಅಭ್ಯಾಸ ಮಾಡಿಕೊಳ್ಳಿ. ಕಂಪ್ಯೂಟರ್ ಜಾಸ್ತಿ ಹೊತ್ತು ನೋಡಿದರೆ ಕಣ್ಣಿಗೂ ಕೂಡ ಅಪಾಯ. ಹಾಗಾಗಿ ನೀವು ಆಗಾಗ ಎದ್ದು ನಿಂತು ಕಣ್ಣಿನ ದೃಷ್ಟಿಯನ್ನು ಬೇರೆ ಕಡೆಗೆ ನೆಟ್ಟರೆ ಕಣ್ಣು ಉರಿ ಬರುವುದು ಅಥವಾ ಕಣ್ಣಿನ ಇದರ ಸಮಸ್ಯೆಗಳು ಬಾರದಂತೆ ಎಚ್ಚರ ವಹಿಸಬಹುದು.
ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು:
ನೀವು ಕುರ್ಚಿ ಹಾಗೂ ಟೇಬಲ್ ಬಳಸಿ ಕೆಲಸ ಮಾಡುವುದಾದರೆ ಬೆನ್ನು ಮತ್ತು ಕತ್ತಿನ ಸ್ನಾಯುಗಳ ಮೇಲೆ ಒತ್ತಡ ಬೀಳುವುದು ಸಹಜ. ಆದ್ದರಿಂದ ಸರಿಯಾದ ಭಂಗಿಯಲ್ಲಿ ಕುಳಿತು ಕೆಲಸ ಮಾಡಬೇಕು. ಬೆನ್ನು ನೇರವಾಗಿರಬೇಕು. ಬಾಗಿದ ಸ್ಥಿತಿಯಲ್ಲಿ ಜಾಸ್ತಿ ಹೊತ್ತು ಕುಳಿತುಕೊಳ್ಳಬೇಡಿ. ಕುರ್ಚಿ ಹಾಗೂ ಮೇಜಿನ ಎತ್ತರ ಸರಿ ಇರಬೇಕು. ನೇರವಾಗಿ ಕಂಪ್ಯೂಟರ್ ಪರದೆ ನೋಡುವಂತೆ ಇರಬೇಕು ಬೆನ್ನಿನ ಹುರಿ ಬಾಗಿಸಿಕೊಂಡು ಕುಳಿತುಕೊಳ್ಳಬೇಡಿ. ನೀವು ಸೊಂಟಕ್ಕೆ ಅಥವಾ ಬೆನ್ನಿಗೆ ಅನುಕೂಲವಾಗುವಂತೆ ಕುಶನ್, ಮೆತ್ತನೆಯ ದಿಂಬು ಅಥವಾ ಟವೆಲ್ ಬಳಸಿಕೊಂಡು ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಇನ್ನು ಈ ಅಭ್ಯಾಸಗಳ ಜೊತೆಗೆ ಸರಿಯಾದ ಆಹಾರ ಕ್ರಮ ಕೂಡ ಬಹಳ ಅಗತ್ಯ. ಹೆಚ್ಚು ಕುಳಿತು ಕೊಂಡು ಕೆಲಸ ಮಾಡುವವರು ಅಥವಾ ಅಧ್ಯಯನ ಮಾಡುವವರು ಜೊತೆಗೆ ಜಂಕ್ ಫುಡ್ ಗಳನ್ನು ಕೂಡ ಸೇವಿಸಿದರೆ ಅದರಿಂದ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಆರೋಗ್ಯಕರವಾದಂತಹ ಆಹಾರ ಕೂಡ ಸೇವಿಸುವುದು ಬಹಳ ಮುಖ್ಯ. ಈ ಕೆಲವು ಅಭ್ಯಾಸಗಳಿಂದ ಕುಳಿತುಕೊಳ್ಳುವ ಕಾಯಿಲೆ ಅಥವಾ ಸಿಂಡ್ರೋಮ್ ಗಳಿಂದ ತಪ್ಪಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications