Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಮ್ಮ ಸಾಕುನಾಯಿ ಪರಚಿದರೂ ಲಸಿಕೆ ಪಡೆಯಬೇಕಾ? ನಾಯಿ ಉಗುರು ತಾಗಿದರೂ ಅಪಾಯವೇ?
ನಾಯಿ ಕಚ್ಚಿದರೆ ಲಸಿಕೆ ಹಾಕಿಸುತ್ತೇವೆ, ಆದರೆ ನಾಯಿ ಪರಚಿದಾಗ ಅಥವಾ ಅದರ ಜೊತೆ ಆಟವಾಡುತ್ತಿರುವಾಗ ಅದರ ಅರಿವಿಗೆ ಬಾರದೆ ಅದರ ಹಲ್ಲು ತಾಗಿ ಸ್ವಲ್ಪ ತರುಚಿದ ಗಾಯವಾದರೆ ಬಹುತೇಕರು ಲಸಿಕೆ ಹಾಕಿಸಿಕೊಳ್ಳಲ್ಲ. ಈ ರೀತಿ ಮಾಡುವುದರಿಂದ ಏನಾದರೂ ಅಪಾಯವಿದೆಯೇ?
ನಾಯಿ ಪರಚಿದರೂ ಅಥವಾ ಚಿಕ್ಕ ಗಾಯವಾದರೂ ಲಸಿಕೆ ಹಾಕಿಸಬೇಕೆ? ಎಂದು ನೋಡುವುದಾದರೆ ನಾಯಿ ಪರಚಿದರೆ ಅಥವಾ ಅದರ ಅದರ ಹಲ್ಲು ಸ್ವಲ್ಪ ತಾಗಿದರೂ ನೀವು ನಿರ್ಲಕ್ಷ್ಯ ಮಾಡಬಾರದು, ಇಲ್ಲದಿದ್ದರೆ ಅಪಾಯಕಾರಿ, ಏಕೆ ಎಂದು ನೋಡೋಣ ಬನ್ನಿ:

ನಾಯಿಯ ಉಗುರು ತಾಗಿದಾಗ ಉಂಟಾಗುವ ಅಪಾಯ
ಮನೆಯಲ್ಲಿ ಸಾಕು ನಾಯಿಯಿದ್ದರೆ ಅದರ ಜೊತೆ ಆಟವಾಡುವ ಮಜಾನೇ ಬೇರೆ. ಅದರ ಜೊತೆಗಿನ ಒಡನಾಟ ನಮ್ಮಲ್ಲಿರುವ ಒಂಟಿತನ, ಖಿನ್ನತೆ ಇವುಗಳನ್ನು ಹೋಗಲಾಡಿಸುತ್ತದೆ. ನಾಯಿ ಜೊತೆ ಆಟ ಆಡುವ ಭರದಲ್ಲಿ ಕೆಲವೊಮ್ಮೆ ಅದರ ಉಗುರು ನಮ್ಮ ಮೈಗೆ ತಾಗಿ ತರಚಿದ ಗಾಯವಾಗುತ್ತದೆ, ಆವಾಗ ನಮ್ಮ ತ್ವಚೆಯಲ್ಲಿ ಚಿಕ್ಕ ಗಾಯವಾಗಬಹುದು. ಹೀಗಾದಾಗ ನಿರ್ಲಕ್ಷ್ಯ ಮಾಡಿದರೆ ಈ ಅಪಾಯಗಳಿವೆ
* ಅತಿಯಾದ ರಕ್ತಸ್ರಾವ
* ಸೋಂಕು
* ಟೆಟಾನಸ್
* ರೇಬಿಸ್
* ಸೆಪ್ಸಿಸ್
ನಾಯಿಯ ಉಗುರು ತಾಗಿದಾಗ ತರಚಿದ ಗಾಯವಾದರೆ ಏನು ಮಾಡಬೇಕು?
* ಮೊದಲಿಗೆ ತರಿಚಿದ ಗಾಯವಾದ ಕಡೆ ಸೋಪು ಹಚ್ಚಿ ಬಿಸಿ ನೀರಿನಲ್ಲಿ ತೊಳೆಯಿರಿ. ಕನಿಷ್ಠ 5 ನಿಮಿಷ ಸೋಪು ಹಚ್ಚಿ ತೊಳೆಯಿರಿ, ನಂತರ ಸ್ವಚ್ಛವಾದ ಟವಲ್‌ನಿಂದ ಒರೆಸಿ.
* ರಕ್ತ ಬರುತ್ತಿದ್ದರೆ ರಕ್ತಸ್ರಾವವಾಗುತ್ತಿರುವ ಭಾಗವನ್ನು ಒತ್ತಿ ಹಿಡಿಯಿರಿ, ಇದರಿಂದ ರಕ್ತಸ್ರಾವ ಕಡಿಮೆಯಾಗುವುದು
* ಆಂಟಿಬಯೋಟಿಕ್ ಆಯಿಂಟ್‌ಮೆಂಟ್ ಹಚ್ಚಿ
* ಗಾಯವನ್ನು ಸ್ಟ್ರೆರೈಲ್ ಬ್ಯಾಂಡೇಜ್‌ನಿಂದ ಸುತ್ತಿ
ತರಚಿದ ಗಾಯದಿಂದಾಗಿ ಸೋಂಕು ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು
* ಆ ಭಾಗ ಕೆಂಪಾಗುವುದು, ಊತ ಕಂಡು ಬರುವುದು
* ಜ್ವರ
* ಕೀವು ತುಂಬುವುದು
* ಸುಸ್ತು
* ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.
ಕ್ಯಾಪನೋಸೈಟೋಫಗಾ ಸೋಂಕಿನ ಲಕ್ಷಣಗಳು
ಕೆಲವೊಂದು ನಾಯಿಯ ಬಾಯಲ್ಲಿ ಕ್ಯಾಪನೋಸೈಟೋಫಗಾ ಎಂಬ ಬ್ಯಾಕ್ಟಿರಿಯಾ ಇರುತ್ತದೆ. ಆದರೆ ಈ ಬ್ಯಾಕ್ಟಿರಿಯಾ ಮನುಷ್ಯರಿಗೆ ತುಂಬಾನೇ ಕಡಿಮೆ, ಕೆಲವೊಮ್ಮೆ ಹರಡಿದರೆ ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವುದು , ದೇಹದಲ್ಲಿ ಈ ಲಕ್ಷಣಗಳು ಕಂಡು ಬರುವುದು:
* ಊತ
* ಹಲ್ಲು ತಾಗಿದ ಭಾಗದಲ್ಲಿ ಕೆಂಪಾಗುವುದು
* ತಲೆನೋವು
* ಜ್ವರ
* ಮೈಕೈ ನೋವು
* ಕಿಬ್ಬೊಟ್ಟೆ ನೋವು
* ಬೇಧಿ
* ವಾಂತಿ
ಈ ರೀತಿ ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಿರಿ.
ರೇಬಿಸ್
ರೇಬಿಸ್ ತಗುಲಿದರೆ ವ್ಯಕ್ತಿ ಬದುಕಿರುವ ಚರಿತ್ರೆಯೇ ಇಲ್ಲ. ಈ ವೈರಸ್ ಮನುಷ್ಯರ ನರದ ಮೇಲೆ ದಾಳಿ ಮಾಡುತ್ತದೆ
ನಾಯಿಗೆ ರೇಬಿಸ್ ಇದ್ದರೆ ಈ ಲಕ್ಷಣಗಳು ಕಂಡು ಬರುವುದು
* ಅದರ ವರ್ತನೆಯಲ್ಲಿ ಬದಲಾವಣೆಯಾಗುವುದು
* ಹಸಿವು ಕಡಿಮೆಯಾಗುವುದು
* ಅದರ ಧ್ವನಿ ಬದಲಾಗುವುದು
* ಒಂದಿಷ್ಟೂ ವಿಶ್ರಾಂತಿ ಪಡೆಯದೆ ಒದ್ದಾಡುತ್ತಿರುತ್ತದೆ
* ಮನುಷ್ಯರು ಅಥವಾ ಇತರ ಪ್ರಾಣಿಗಳು ಹತ್ತಿರ ಹೋದರೆ ಕಚ್ಚಲು ಬರುತ್ತದೆ
* ಪಾರ್ಶ್ವವಾಯು ತಗುಲುವುದು
ಅಪರಿಚಿತ ನಾಯಿ ಕಚ್ಚಿದರೆ ಕೂಡಲೇ ಲಸಿಕೆ ಪಡೆಯಿರಿ. ಮನುಷ್ಯರಿಗೆ ರೇಬಿಸ್ ಇರುವ ನಾಯಿ ಕಚ್ಚಿದರೆ ಅದರ ಲಕ್ಷಣಗಳು ಕಂಡು ಬರಲು ಕೆಲವು ವಾರಗಳು ಅಥವಾ ತಿಂಗಳಾಗಬಹುದು. ಮನುಷ್ಯರಲ್ಲಿ ರೇಬಿಸ್ ಲಕ್ಷಣಗಳೆಂದರೆ
* ಜ್ವರ
* ತಲೆಸುತ್ತು
* ತಲೆನೋವು'
* ಸುಸ್ತು
* ಅತಿಯಾದ ಒತ್ತಡ
* ಭ್ರಮೆ ಹಾಗೂ ನರಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು.
ಮನೆಯಲ್ಲಿ ನಾಯಿ ಸಾಕುವವರು ಈ ವಿಷಯಗಳ ಕಡೆ ಗಮನ ನೀಡಿ:
* ನಿಮ್ಮ ನಾಯಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಿ.
* ಲಸಿಕೆ ಕೊಡಿಸದ ನಾಯಿ ಜೊತೆ ನಿಮ್ಮ ನಾಯಿಯನ್ನು ಬೆರೆಯಲು ಬಿಡಬೇಡಿ, ಬೀದಿ ನಾಯಿಗಳಿಂದ ದೂರವಿಡಿ.
* ಅಲ್ಲದೆ ನಾಯಿ ಜಂಪ್ ಮಾಡುವಾಗ ನಿಮ್ಮ ಪರಚದಂತೆ, ಬಾಯಿ ಹಾಕದಂತೆ ಟ್ರೈನಿಂಗ್ ನೀಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

