Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೃತಕ ಸಿಹಿಕಾರಕಗಳನ್ನು ಸೇವಿಸುತ್ತಿದ್ದೀರಾ? ಹಾಗಾದ್ರೆ ಈ ವಿಚಾರ ಗೊತ್ತಿರಲಿ!
ಸಕ್ಕರೆಗೆ ಅಲ್ಟ್ರನೇಟಿವ್ ಅಥವಾ ಪರ್ಯಾಯವಾಗಿ ಕಡಿಮೆ ಕ್ಯಾಲೋರಿ ಬಳಸಲಾಗುತ್ತದೆ ಇದೇ ಕಾರಣಕ್ಕೆ ಕೃತಕ ಸಿಹಿಕಾರಕಗಳು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿವೆ. ಸ್ಯಾಕ್ರರಿನ್, ಆಸ್ಪರ್ಟೇಮ್, ಅಸೆಸಲ್ಫೇಮ್ ಪೊಟ್ಯಾಸಿಯಂ, ಸುಕ್ರಲೋಸ್, ನಿಯೋಟೇಮ್ ಮತ್ತು ಅಡ್ವಾಂಟೇಮ್ ಸಂಯೋಜಕ ಸಕ್ಕರೆಗೆ ಬದಲಿ ಕೃತಕ ಸಿಹಿಕಾರಕಗಳಾಗಿವೆ. ಡಯಾಬಿಟಿಸ್ ಇರುವವರು ಅಥವಾ ತೂಕ ಇಳಿಸಿಕೊಳ್ಳಲು ಇಷ್ಟಪಡುವವರು ಕಡಿಮೆ ಕ್ಯಾಲೋರಿ ಸಿಹಿಕಾರಕಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಸಕ್ಕರೆ ದೇಹಕ್ಕೆ ಹಾನಿಕಾರಕ ಎಂದು ಕಡಿಮೆ ಕ್ಯಾಲೋರಿ ಇರುವ ಸಿಹಿಕಾರಕಗಳನ್ನ ಬಳಸಿದ್ರೆ ಅದು ದೇಹದ ಮೇಲೆ ಎಂತಹ ದೊಡ್ಡ ಪರಿಣಾಮ ಬೀರಬಹುದು ಗೊತ್ತೇ? ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ರಕ್ತನಾಳದ ನರಗಳ ಸಮಸ್ಯೆಗಳು ಕೂಡ ಈ ಸಿಹಿಕಾರಕಗಳಿಂದ ಉಂಟಾಗಬಹುದು. ಕೃತಕ ಸಿಹಿಕಾರಕಗಳು ಮಾನಸಿಕವಾಗಿಯೂ ದೈಹಿಕವಾಗಿಯೂ ಸಮಸ್ಯೆ ಉಂಟುಮಾಡಬಹುದು ಮೈಗ್ರೇನ್ ನಂತಹ ತಲೆ ನೋವಿಗೆ ಈ ಕೃತಕ ಸಿಹಿಕಾರಕಗಳು ಕೂಡ ಒಂದು ಕಾರಣ.

ಸಕ್ಕರೆಯ ರುಚಿ ಹಾಗೂ ಪರಿಮಳವನ್ನು ಈ ಕೃತಕ ಸಿಹಿಕಾರಕಗಳಲ್ಲಿ ರಾಸಾಯನಿಕಗಳನ್ನು ಬಳಸಿ ನೀಡಲಾಗುತ್ತದೆ. ಪೌಷ್ಟಿಕ ತಜ್ಞರ ಪ್ರಕಾರ ಈ ಕೃತಕ ಸಿಹಿಕಾರಕಗಳು ಮನುಷ್ಯನ ದೇಹದ ಮೇಲೆ ಅಡ್ಡ ಪರಿಣಾಮ ಬೀರಬಹುದು ಹಾಗಾದರೆ ಈ ಸಿಹಿಕಾರಕಗಳನ್ನ ಬಳಸಿದ್ರೆ ಏನೆಲ್ಲಾ ಸಮಸ್ಯೆಗಳು ಆಗುತ್ತೆ ಗೊತ್ತಾ?
ಅತಿಯಾದ ತೂಕ:
ಕಡಿಮೆ ಕ್ಯಾಲೋರಿ ಬೇಕು ಎನ್ನುವ ಕಾರಣಕ್ಕೆ ಅಥವಾ ಕ್ಯಾಲೋರಿ ಸೇವನೆ ಕಡಿಮೆ ಮಾಡುವ ಸಲುವಾಗಿ ಕೃತಕ ಸಿಹಿಕಾರಕಗಳನ್ನು ಸೇವಿಸುತ್ತಾ ಬಂದರೆ ತೂಕ ಕಡಿಮೆ ಆಗುವುದರ ಬದಲಾಗಿ ತೂಕ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಕ್ಯಾಲೋರಿ ಸೇವನೆಯನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು ಹಾಗಾಗಿ ಕೃತಕ ಸಿಹಿಕಾರಕಗಳು ತೂಕ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.
ಮಾನಸಿಕ ಅಸ್ವಸ್ಥತೆ:
ಕೃತಕ ಸಿಹಿಕಾರಕಗಳು ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮನಸ್ಥಿತಿ ಹಾಗೂ ನಡವಳಿಕೆ ಬದಲಾವಣೆಯಾಗುತ್ತದೆ. ಮೆದುಳಿನಲ್ಲಿ ಸಿರೋಟೋನಿನ್ ಎನ್ನುವ ಅಂಶ ಇದ್ದು ಅದರ ಮಟ್ಟ ಕಡಿಮೆ ಆಗುತ್ತದೆ ಇದರಿಂದಾಗಿ ಮನಸ್ಥಿತಿಯಲ್ಲಿನ ಬದಲಾವಣೆ ಹಾಗೂ ಆತಂಕ ಹೆಚ್ಚಾಗುತ್ತದೆ.
ಯಕೃತ್ತಿಗೂ ಹಾನಿ:
ಕೃತಕ ಸಿಹಿಕಾರಕಗಳನ್ನು ಸೇವಿಸುತ್ತಾ ಬಂದರೆ ಯಕೃತ್ತಿನ ಹಾನಿ ಸಂಭವಿಸುತ್ತದೆ. ಆಲ್ಕೋಹಾಲಿಕ್ ಅಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಆಕ್ರಮಿಸಿಕೊಳ್ಳಬಹುದು. ಆಸ್ಪರ್ಟೇಮ್ ಸೇರಿದಂತೆ ಕೆಲವು ಸಿಹಿಕಾರಕಗಳು ಯಕೃತ್ತಿನಲ್ಲಿ ಸಂಗ್ರಹಗೊಂಡು ಲಿವರ್ ಸಮಸ್ಯೆಯನ್ನು ಉಂಟು ಮಾಡಬಹುದು.
ಕರುಳಿನ ಆರೋಗ್ಯಕ್ಕೂ ಒಳ್ಳೆಯದಲ್ಲ:
ಹೊಟ್ಟೆಯಲ್ಲಿರುವ ಪ್ರಯೋಜನಕಾರಿ ಸೂಕ್ಷ್ಮಾಣು ಜೀವಿಗಳನ್ನು ಹಾನಿ ಒಳಪಡಿಸುವ ಸಾಮರ್ಥ್ಯ ಕೃತಕ ಸಿಹಿಕಾರಕಗಳಲ್ಲಿ ಇವೆ. ಹಾಗಾಗಿ ಪ್ರಯೋಜನಕಾರಿ ಹಾಗೂ ಹಾನಿಕಾರಕ ಸೂಕ್ಷ್ಮಾಣು ಜೀವಿಗಳ ಅನುಪಾತವನ್ನು ಇವು ಬದಲಾಯಿಸಬಹುದು. ಇದು ಕರುಳಿನ ಮೈಕ್ರೋಬಯೋಟಾವನ್ನು ಬದಲಾಯಿಸಿ ಚಯಾಪಚಯ ಕ್ರಿಯೆಗೆ ಸಮಸ್ಯೆ ಉಂಟುಮಾಡುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುವುದು, ಹೊಟ್ಟೆ ಉಬ್ಬರಿಸುವುದು, ಅತಿಸಾರ ಮೊದಲಾದ ಸಮಸ್ಯೆಗಳು ಉದ್ಭವಿಸುತ್ತವೆ.
ದೇಹದಲ್ಲಿ ಹುಟ್ಟಿಕೊಳ್ಳಬಹುದು ಮತ್ತಷ್ಟು ರೋಗ;
ಟೈಪ್ 2 ಡಯಾಬಿಟೀಸ್, ಹೃದಯ ಸಂಬಂಧಿ ಕಾಯಿಲೆಗಳು, ಮೆಟೊಬಾಲಿಕ್ ಸಿಂಡ್ರೋಮ್ ಮೊದಲಾದ ಸಮಸ್ಯೆಗಳನ್ನು ಕೃತಕ ಸಿಹಿಕಾರಕಗಳ ಸೇವನೆ ಉಂಟುಮಾಡಬಲ್ಲದು. ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುವ ಸಿಹಿಕಾರಕಗಳು ಉರಿಯುತವನ್ನು ಕೂಡ ದೇಹದಲ್ಲಿ ಉಲ್ಬಣಗೊಳಿಸುತ್ತವೆ. ಜೊತೆಗೆ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗಬಹುದು.
ತಲೆನೋವಿಗೂ ಕಾರಣ:
ರಸಾಯನಶಾಸ್ತ್ರ ಹಾಗೂ ನರವೈಜ್ಞಾನಿಕ ವಿಷಯಕ್ಕೆ ಸಂಬಂಧಪಟ್ಟಹಾಗೆ ನಡೆಸಿದ ಅಧ್ಯಯನದ ಪ್ರಕಾರ ಕೃತಕ ಸಿಹಿಕಾರಕಗಳು ತಲೆನೋವು ಮೈಗ್ರೇನ್ ನೋವು ಹೆಚ್ಚಾಗುವುದಕ್ಕೂ ಒಂದು ಕಾರಣವಾಗಿದೆ. ಮೆದುಳಿನ ನ್ಯುರೋಟ್ ಟ್ರಾನ್ಸ್ಮಿಟರ್ (ನರಪೇಕ್ಷಕ ಮಟ್ಟ) ಮಟ್ಟವನ್ನು ಹಾಗೂ ರಕ್ತದ ಅರಿವು ಅಸಮತೋಲನವನ್ನು ಉಂಟು ಮಾಡಿ ತಲೆ ನೋವಿಗೆ ಕಾರಣವಾಗುತ್ತದೆ.
ಹಾಗಾಗಿ ಸಕ್ಕರೆಗಿಂತಲೂ ಕೃತಕ ಸಿಹಿಕಾರಕಗಳು ಒಳ್ಳೆಯದು ಎಂದು ಭಾವಿಸಿ ಅವುಗಳನ್ನು ಅತಿಯಾಗಿ ಸೇವಿಸಲು ಆರಂಭಿಸಿದರೆ ಅದರಿಂದ ಇನ್ನಷ್ಟು ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ ಎಚ್ಚರ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












